ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/05 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2005 ನಮ್ಮ ರಾಜ್ಯದ ಸೇವೆ
2005 ನಮ್ಮ ರಾಜ್ಯದ ಸೇವೆ
km 3/05 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ​—⁠ಮಾರ್ಚ್‌: ಮನೆ ಬೈಬಲ್‌ ಅಧ್ಯಯನವನ್ನು ಆರಂಭಿಸುವ ಉದ್ದೇಶದಿಂದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ನೀಡಿರಿ. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಜ್ಞಾಪಕಾಚರಣೆಗೆ ಮತ್ತು/ಅಥವಾ ಇತರ ದೇವಪ್ರಭುತ್ವಾತ್ಮಕ ಕಾರ್ಯಕ್ರಮಗಳಿಗೆ ಹಾಜರಾದ, ಆದರೆ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದಿರುವವರನ್ನು ಸೇರಿಸಿ ಎಲ್ಲಾ ಆಸಕ್ತ ಜನರನ್ನು ಪುನರ್ಭೇಟಿಮಾಡುವಾಗ ದೇವರನ್ನು ಆರಾಧಿಸಿರಿ ಪುಸ್ತಕವನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಒಂದು ಮನೆ ಬೈಬಲ್‌ ಅಧ್ಯಯನವನ್ನು ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು, ವಿಶೇಷವಾಗಿ ಈಗಾಗಲೇ ಜ್ಞಾನ ಪುಸ್ತಕ ಮತ್ತು ಅಪೇಕ್ಷಿಸು ಬ್ರೋಷರನ್ನು ಅಧ್ಯಯನ ಮಾಡಿರುವವರಿಗೆ ಇದು ಅನ್ವಯಿಸುತ್ತದೆ. ಜೂನ್‌: ಮಹಾ ಬೋಧಕನಿಂದ ಕಲಿಯಿರಿa ಪುಸ್ತಕವನ್ನು ನೀಡಿರಿ. ಇದನ್ನು ನೀಡಿದಾಗ ತಮಗೆ ಮಕ್ಕಳಿಲ್ಲವೆಂದು ಮನೆಯವರು ಹೇಳುವುದಾದರೆ ಅಪೇಕ್ಷಿಸು ಬ್ರೋಷರನ್ನು ನೀಡಿರಿ. ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಪ್ರಯತ್ನಿಸಿರಿ.

◼ ಸಭೆಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸಂಚಿಕೆಗಳನ್ನು ಪಡೆದುಕೊಂಡ ಕೂಡಲೆ ಅವನ್ನು ಸಭೆಗೆ ಲಭ್ಯಗೊಳಿಸಬೇಕು. ಹೀಗೆ ಮಾಡುವಾಗ, ಪ್ರಚಾರಕರು ಅವನ್ನು ಕ್ಷೇತ್ರ ಸೇವೆಯಲ್ಲಿ ನೀಡುವ ಮುಂಚೆಯೇ ಅದರಲ್ಲಿ ಅಡಕವಾಗಿರುವ ಮಾಹಿತಿಯೊಂದಿಗೆ ಪರಿಚಿತರಾಗಿರಲು ಸಾಧ್ಯವಾಗುವುದು. ನಮ್ಮ ರಾಜ್ಯದ ಸೇವೆಯನ್ನು ಸಹ ದೊರೆತೊಡನೇ ಪ್ರಚಾರಕರಿಗೆ ಲಭ್ಯಗೊಳಿಸಬೇಕು. ಇದನ್ನು ಸಭಾ ಪುಸ್ತಕ ಅಧ್ಯಯನದ ಸ್ಥಳದಲ್ಲಿಯೂ ವಿತರಿಸಬಹುದು.

◼ ನೀವು ವೈಯಕ್ತಿಕ ಪ್ರಯಾಣದ ಯೋಜನೆಗಳನ್ನು ಮಾಡುವಾಗ, ಅದರಲ್ಲಿ ಮತ್ತೊಂದು ದೇಶದಲ್ಲಿನ ಸಭಾ ಕೂಟಗಳಿಗೆ, ಒಂದು ಸಮ್ಮೇಳನಕ್ಕೆ, ಅಥವಾ ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವುದು ಸೇರಿರುವುದಾದರೆ, ಅದರ ತಾರೀಖುಗಳು, ಸಮಯಗಳು, ಮತ್ತು ನಿವೇಶನಗಳ ಕುರಿತಾದ ಮಾಹಿತಿಗಾಗಿರುವ ನಿಮ್ಮ ವಿನಂತಿಯನ್ನು ಆ ದೇಶದಲ್ಲಿ ನಡೆಯುವ ಕೆಲಸವನ್ನು ನಿರ್ವಹಿಸುತ್ತಿರುವ ಬ್ರಾಂಚ್‌ ಆಫೀಸಿಗೆ ಕಳುಹಿಸತಕ್ಕದ್ದು. ಬ್ರಾಂಚ್‌ ಆಫೀಸುಗಳ ವಿಳಾಸಗಳು ಸದ್ಯದ ವರ್ಷಪುಸ್ತಕ (ಇಂಗ್ಲಿಷ್‌)ದ ಕೊನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿವೆ.

◼ ರೆಗ್ಯುಲರ್‌ ಪಯನೀಯರ್‌ ಸೇವೆಗಾಗಿರುವ ಅರ್ಜಿ (S-205) ಹಾಗೂ ಆಕ್ಸಿಲಿಯರಿ ಪಯನೀಯರ್‌ ಸೇವೆಗಾಗಿರುವ ಅರ್ಜಿ (S-205b) ಎಂಬ ಫಾರ್ಮ್‌ಗಳ ಸಾಕಷ್ಟು ಸರಬರಾಯಿಯನ್ನು ಹೊಂದಿರುವಂತೆ ಸಭೆಯ ಕಾರ್ಯದರ್ಶಿಗಳು ನೋಡಿಕೊಳ್ಳಬೇಕು. ಸಾಹಿತ್ಯ ವಿನಂತಿ ಫಾರ್ಮ್‌ನಲ್ಲಿ (S-14) ಇವುಗಳಿಗಾಗಿ ಆರ್ಡರ್‌ ಮಾಡಸಾಧ್ಯವಿದೆ. ಕಡಿಮೆಪಕ್ಷ ಒಂದು ವರ್ಷಕ್ಕೆ ಬೇಕಾಗುವಷ್ಟು ಅರ್ಜಿಗಳನ್ನು ಇಟ್ಟುಕೊಳ್ಳಿರಿ.

◼ ಇಸವಿ 2005ರ ಮಾರ್ಚ್‌ 24, ಗುರುವಾರದಂದು ಜ್ಞಾಪಕಾಚರಣೆಯು ನಡೆಸಲ್ಪಡುವುದು. ಸಾಮಾನ್ಯವಾಗಿ ನಿಮ್ಮ ಸಭೆಯ ಕೂಟಗಳು ಗುರುವಾರದಂದು ನಡೆಸಲ್ಪಡುವುದಾದರೆ, ಇದನ್ನು ವಾರದ ಮತ್ತೊಂದು ದಿನದಲ್ಲಿ ನಡೆಸಲು ಏರ್ಪಾಡು ಮಾಡಬೇಕು. ಒಂದುವೇಳೆ ಬೇರೆ ದಿನ ರಾಜ್ಯ ಸಭಾಗೃಹವು ಲಭ್ಯವಿಲ್ಲದಿರುವುದಾದರೆ ಮತ್ತು ನಿಮ್ಮ ಸೇವಾ ಕೂಟವು ಇದರಿಂದಾಗಿ ಬಾಧಿಸಲ್ಪಡುವುದಾದರೆ, ನಿಮ್ಮ ಸಭೆಗೆ ನಿರ್ದಿಷ್ಟವಾಗಿ ಅನ್ವಯಿಸುವಂಥ ಭಾಗಗಳನ್ನು ಮತ್ತೊಂದು ಸೇವಾ ಕೂಟದೊಂದಿಗೆ ಸೇರಿಸಬಹುದು.

◼ ಅನೇಕ ಪ್ರಚಾರಕರು ಬ್ರಾಂಚ್‌ ಆಫೀಸಿಗೆ ಕರೆಮಾಡಿ, ಇತ್ತೀಚೆಗೆ ಯೆಹೋವನ ಸಾಕ್ಷಿಗಳ ಮಧ್ಯೆ ವಿತರಿಸಲ್ಪಡುತ್ತಿರುವ ಜನಪ್ರಿಯ ಶೈಲಿಯಲ್ಲಿ ಹಾಡಲ್ಪಟ್ಟಿರುವ ರಾಜ್ಯ ಗೀತೆಗಳ ಕೆಲವೊಂದು ರೆಕಾರ್ಡಿಂಗ್‌ಗಳ ಕುರಿತು ವಿಚಾರಿಸಿದ್ದಾರೆ. ಈ ರೆಕಾರ್ಡಿಂಗ್‌ಗಳಿಗೆ ಸಂಘಟನೆಯ ಒಪ್ಪಿಗೆ ಇದೆಯೋ ಎಂಬುದನ್ನು ಅವರು ಕೇಳಬಯಸುತ್ತಾರೆ. ನಮಗೆ ಈ ರೆಕಾರ್ಡಿಂಗ್‌ಗಳ ಕುರಿತು ತಿಳಿದುಬಂದಿದೆ ಮತ್ತು ಅವುಗಳಿಗೆ ನಮ್ಮ ಒಪ್ಪಿಗೆ ಇಲ್ಲ ಎಂಬುದನ್ನು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇವೆ. ದಯವಿಟ್ಟು ಈ ರೆಕಾರ್ಡಿಂಗ್‌ಗಳನ್ನು ವಿತರಿಸಲೋ ಇಂಟರ್‌ನೆಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲೋ ಹೋಗಬೇಡಿ. ಈ ಪ್ರಕಟನೆಯು ವಿಷಯವನ್ನು ಸ್ಪಷ್ಟೀಕರಿಸುತ್ತದೆಂದು ನಾವು ನಂಬುತ್ತೇವೆ.

[ಪಾದಟಿಪ್ಪಣಿ]

a ಕನ್ನಡದಲ್ಲಿ ಲಭ್ಯವಿಲ್ಲ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ