ಯೆಹೋವನ ಸಾಕ್ಷಿಗಳ 2005ರ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನ
1 ನಮ್ಮ ಮಹಾನ್ ಬೋಧಕನಾದ ಯೆಹೋವ ದೇವರು, ತನ್ನ ಮಾರ್ಗಗಳ ಕುರಿತು ನಮಗೆ ಬೋಧಿಸಲಿಕ್ಕಾಗಿ ನಮ್ಮನ್ನು ಒಟ್ಟುಗೂಡಿಸಲು ಏರ್ಪಾಡು ಮಾಡುತ್ತಾನೆ. (ಯೆಶಾ. 30:20, 21; 54:13) ಆತನು ಇದನ್ನು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ ಮಾಡುತ್ತಾನೆ, ಮತ್ತು ಈ ಆಳು ವರ್ಗವು ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನಗಳಂತಹ ಕೂಟಗಳನ್ನು ಏರ್ಪಡಿಸುತ್ತದೆ. (ಮತ್ತಾ. 24:45-47) ನಮ್ಮ ಭಾವನೆಗಳು ಕೀರ್ತನೆಗಾರನಾದ ದಾವೀದನ ಭಾವನೆಗಳಂತಿವೆ. ಅವನು ಹಾಡಿದ್ದು: “ಕೂಡಿದ ಸಭೆಗಳಲ್ಲಿ ಯೆಹೋವನನ್ನು ಕೊಂಡಾಡುವೆನು.” (ಕೀರ್ತ. 26:12) ಯೆಹೋವನಿಂದ ಬೋಧಿಸಲ್ಪಡುವುದರ ಮೌಲ್ಯವನ್ನು ದಾವೀದನು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದನು, ಮತ್ತು ಆತನ ಜನರು ಕೂಡಿಬಂದಾಗೆಲ್ಲಾ ಅವರ ಮಧ್ಯೆ ಇರುವ ದೃಢನಿರ್ಧಾರವನ್ನು ಮಾಡಿದ್ದನು.
2 ಈ ವರ್ಷದ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲಿರುವ “ಕೂಡಿದ ಸಭೆಗಳ” ಮಧ್ಯೆ ನೀವಿರುವಿರೋ? ಹೌದಾದರೆ, ಹಾಜರಾಗಲು ನೀವು ಮಾಡುವ ಏರ್ಪಾಡುಗಳ ವಿಷಯದಲ್ಲಿ ಈ ಮುಂದಿನ ಮಾಹಿತಿಯು ನಿಮಗೆ ಸಹಾಯಕಾರಿಯಾಗಿರುವುದು.
3 ಪ್ರತಿ ದಿನ ಹಾಜರಿರಲಿಕ್ಕಾಗಿ ಈಗಲೇ ಯೋಜಿಸಿರಿ: “ಶ್ರದ್ಧೆಯುಳ್ಳವನ ಯೋಜನೆಗಳು ಖಂಡಿತವಾಗಿಯೂ ಲಾಭವನ್ನು ತರುವವು.” (ಜ್ಞಾನೋ. 21:5, NW) ಈ ಮಾತುಗಳು, ತಡಮಾಡದೆ ಅಧಿವೇಶನಕ್ಕಾಗಿ ಯೋಜನೆಗಳನ್ನು ಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುವುದಿಲ್ಲವೇ? ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸಲಿರುವ ಕಾರ್ಯಕ್ರಮದ ಯಾವುದೇ ಭಾಗವನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ಮೂರೂ ದಿನಗಳಿಗೆ ಹಾಜರಿರಲಿಕ್ಕಾಗಿ ನೀವು ಯಾವೆಲ್ಲಾ ಏರ್ಪಾಡುಗಳನ್ನು ಮಾಡಲಿಕ್ಕಿದೆಯೋ ಅದನ್ನು ವಿವೇಕಪೂರ್ಣವಾಗಿ ಈಗಲೇ ಆರಂಭಿಸಿರಿ. ಜನರಿಗೆ ಸಾಮಾನ್ಯವಾಗಿ ಬೇರೆ ಬೇರೆ ಸಮಯಗಳಲ್ಲಿ ರಜೆ ಸಿಗುವುದರಿಂದ ಮತ್ತು ಶಾಲಾ ಪರೀಕ್ಷೆಯ ಶೆಡ್ಯೂಲ್ಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುವುದರಿಂದ, ಎಲ್ಲರಿಗೂ ಅನುಕೂಲವಾಗಿರುವ ಒಂದು ಸಮಯದಲ್ಲಿ ಅಧಿವೇಶನಕ್ಕಾಗಿ ಏರ್ಪಾಡು ಮಾಡುವುದು ಅಸಾಧ್ಯವಾಗಿ ಕಂಡುಬಂದಿದೆ. ಇದನ್ನು ಮನಸ್ಸಿನಲ್ಲಿಡುತ್ತಾ, ಈ ವರ್ಷದಿಂದ ಆರಂಭಿಸಿ, ಅಧಿವೇಶನಗಳು ಸ್ವಲ್ಪ ಮುಂಚಿತವಾಗಿಯೇ ನಡೆಸಲ್ಪಡುವ ಯೋಜನೆಯನ್ನು ಮಾಡಲಾಗಿದೆ. ಆ ಕಾಲಾವಧಿಯು ಮಳೆಗಾಲವಾದ್ದರಿಂದ, ಪ್ರಯಾಣ ವ್ಯವಸ್ಥೆಗಳು, ವಸತಿಸೌಕರ್ಯ ಮತ್ತು ಸಭಾಂಗಣ ಸೌಕರ್ಯಗಳು ಹೆಚ್ಚು ಸುಲಭದಲ್ಲಿ ಸಿಗುವವು. ಇದರಿಂದಾಗಿ ನಾವು ಹೆಚ್ಚಿನ ಯೋಜನೆಯನ್ನು ಮಾಡಬೇಕಾಗುತ್ತದೆ ಎಂಬುದು ನಿಜವೇ. ನೀವು ನಿಮ್ಮ ಧಣಿಯ ಬಳಿ ರಜೆಯನ್ನು ಕೇಳಲಿಕ್ಕಿರುವುದಾದರೆ, ಅದನ್ನು ಈಗಲೇ ಮಾಡಿರಿ. ನಿಮ್ಮ ಅವಿಶ್ವಾಸಿ ಸಂಗಾತಿಯೊಂದಿಗೆ ನಿಮ್ಮ ಯೋಜನೆಗಳ ಕುರಿತು ಚರ್ಚಿಸಲಿಕ್ಕಿರುವುದಾದರೆ, ಅದನ್ನು ಕೊನೆಯ ಗಳಿಗೆಯ ವರೆಗೆ ಮುಂದೂಡಬೇಡಿರಿ. ನೀವು ಯಾವುದೇ ಪಂಥಾಹ್ವಾನಗಳನ್ನು ಎದುರಿಸುವುದಾದರೂ, ಅವುಗಳ ಬಗ್ಗೆ ಪ್ರಾರ್ಥನೆಯಲ್ಲಿ ಯೆಹೋವನಿಗೆ ತಿಳಿಸುತ್ತಾ, ಆತನ ಸಹಾಯದೊಂದಿಗೆ “[ನಿಮ್ಮ] ಉದ್ದೇಶಗಳು ಸಫಲವಾಗುವವು” ಎಂಬ ಭರವಸೆಯುಳ್ಳವರಾಗಿರ್ರಿ. (ಜ್ಞಾನೋ. 16:3) ಮಾತ್ರವಲ್ಲದೆ, ಪ್ರತಿ ಸೆಷನ್ಗೆ ಹಾಜರಿರಲು ನಿಮ್ಮ ಬೈಬಲ್ ವಿದ್ಯಾರ್ಥಿಗಳು ಮಾಡುವ ಏರ್ಪಾಡುಗಳ ವಿಷಯದಲ್ಲಿ ನೀವು ಅವರಿಗೆ ನೆರವನ್ನು ನೀಡುವುದು ಉತ್ತಮವಾಗಿರುವುದು.
4 ವಸತಿಸೌಕರ್ಯ: ನಿಮ್ಮ ಅನುಕೂಲಕ್ಕಾಗಿ, ಪ್ರತಿ ಅಧಿವೇಶನದ ಪಟ್ಟಣದಲ್ಲಿ ರೂಮಿಂಗ್ ಏರ್ಪಾಡುಗಳು ಈಗಾಗಲೇ ಮಾಡಲ್ಪಟ್ಟಿವೆ. ಲಭ್ಯವಿರುವ ಹೋಟೆಲುಗಳ ‘ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್’ ಲಭ್ಯವಾದೊಡನೆಯೇ ಅದನ್ನು ಮಾಹಿತಿ ಫಲಕದ ಮೇಲೆ ಹಾಕಲಾಗುವುದು. ಅನೇಕ ಹೋಟೆಲ್ಗಳಲ್ಲಿ ಸಹೋದರರು ನಮ್ಮ ಪ್ರತಿನಿಧಿಗಳಿಗಾಗಿ ಕಡಿಮೆ ದರದಲ್ಲಿ ರೂಮ್ಗಳು ಕೊಡಲ್ಪಡುವಂತೆ ಮಾತುಕತೆಯನ್ನು ನಡೆಸಿದ್ದಾರೆ. ಆದುದರಿಂದ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಹೋಟೆಲ್ ಅಥವಾ ಲಾಡ್ಜ್ನ್ನು ಸಂಪರ್ಕಿಸುವಾಗ, ನೀವು ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂಬುದನ್ನು ತಿಳಿಸಿರಿ ಮತ್ತು ಸಹೋದರರು ಸೂಚಿಸಿರುವ ದರಗಳನ್ನು ಮಾತ್ರ ಕೊಡಲು ಒಪ್ಪಿಕೊಳ್ಳಿರಿ. ಹೋಟೆಲಿನ ಮಾಲೀಕನು ನಿಗದಿತ ದರದಲ್ಲಿ ರೂಮನ್ನು ಕೊಡಲು ನಿರಾಕರಿಸುವುದಾದರೆ, ನಿಮ್ಮ ಸಭೆಯ ಕಾರ್ಯದರ್ಶಿಯ ಮೂಲಕ ರೂಮಿಂಗ್ ಇಲಾಖೆಗೆ ಇದನ್ನು ತಿಳಿಸಿರಿ. ನಿಮ್ಮ ಸಹಕಾರದೊಂದಿಗೆ ಬ್ರಾಂಚ್ ಆಫೀಸು ಉತ್ತಮ ಗುಣಮಟ್ಟದ ಹೋಟೆಲುಗಳನ್ನು ಕಡಿಮೆ ದರದಲ್ಲಿ ಪಡೆದುಕೊಳ್ಳಲು ಏರ್ಪಾಡು ಮಾಡುವುದನ್ನು ಮುಂದುವರಿಸಲು ಸಾಧ್ಯವಾಗುವುದು. ಮತ್ತು ಉತ್ತಮ ಗುಣಮಟ್ಟದ ಹೋಟೆಲುಗಳು ಅಧಿವೇಶನದ ಸೌಕರ್ಯದ ಹತ್ತಿರವಿರಲಿಕ್ಕಿಲ್ಲ ಎಂಬುದನ್ನು ಮನಸ್ಸಿನಲ್ಲಿಡಬೇಕು. ರೂಮನ್ನು ಕಾದಿರಿಸಲು ನೀವು ಕರೆಮಾಡುವ ಮೊದಲು, “ರೂಮಿಂಗ್ ಏರ್ಪಾಡುಗಳಿಗೆ ನೀವು ಸಹಕಾರ ನೀಡಬಹುದಾದ ವಿಧ” ಎಂಬ ಚೌಕದಲ್ಲಿರುವ ಅಂಶಗಳನ್ನು ಪುನರ್ವಿಮರ್ಶಿಸಿರಿ. ಮತ್ತು ನೀವು ಕರೆಮಾಡುವಾಗ, “ಒಂದು ಹೋಟೆಲ್ ರೂಮನ್ನು ಕಾದಿರಿಸುವ ಅತ್ಯುತ್ತಮ ವಿಧಾನ ಯಾವುದು?” ಎಂಬ ಚೌಕದಲ್ಲಿ ಕೊಡಲ್ಪಟ್ಟಿರುವ ಅನುಕ್ರಮವನ್ನು ಹಿಂಬಾಲಿಸಿರಿ.
5 ವಿಶೇಷ ಅಗತ್ಯಗಳು: ಅಪೊಸ್ತಲ ಪೌಲನು ಕೆಲವು ಸಹೋದರರನ್ನು, ಅವರು ತನಗೆ “ಬಲವರ್ಧಕ ಸಹಾಯಕ”ವಾಗಿದ್ದರು (NW) ಎಂದು ವರ್ಣಿಸಿದನು. (ಕೊಲೊ. 4:7-11) ಅವರು ಮಾಡಿದ ಸಹಾಯಗಳಲ್ಲಿ ಒಂದು, ಪೌಲನ ವೈಯಕ್ತಿಕ ಅಗತ್ಯಗಳನ್ನು ಪೂರೈಸಿದ್ದಾಗಿತ್ತು. ಅಧಿವೇಶನದ ಸಂಬಂಧದಲ್ಲಿ ನೀವು ಹೇಗೆ ಇತರರಿಗೆ “ಬಲವರ್ಧಕ ಸಹಾಯಕ”ವಾಗಿರಬಲ್ಲಿರಿ? ವೃದ್ಧ ಪ್ರಚಾರಕರು, ಅಸ್ವಸ್ಥರು, ಪೂರ್ಣ ಸಮಯದ ಸೇವೆಯಲ್ಲಿರುವವರು ಮತ್ತು ಇತರರಿಗೆ ಸಾರಿಗೆ ಅಥವಾ ವಸತಿಸೌಕರ್ಯದ ವಿಷಯದಲ್ಲಿ ಪ್ರಾಯೋಗಿಕ ನೆರವು ಬೇಕಾದೀತು. ಪ್ರಧಾನವಾಗಿ ಸಂಬಂಧಿಕರಿಗೆ ಇಂಥವರ ಆರೈಕೆಮಾಡುವ ಜವಾಬ್ದಾರಿ ಇರುತ್ತದೆ. (1 ತಿಮೊ. 5:3) ಆದರೆ ಅವರಿಗೆ ಇದನ್ನು ಮಾಡಲು ಸಾಧ್ಯವಿಲ್ಲದಿರುವಲ್ಲಿ, ಅವರ ಸ್ಥಳಿಕ ಸಭೆಯಲ್ಲಿರುವ ಜೊತೆ ವಿಶ್ವಾಸಿಗಳು ಸಹಾಯ ನೀಡಲು ಶಕ್ತರಾಗಿರಬಹುದು. (ಯಾಕೋ. 1:27) ಪುಸ್ತಕ ಅಧ್ಯಯನ ಮೇಲ್ವಿಚಾರಕರು ತಮ್ಮ ಗುಂಪಿನಲ್ಲಿ ಯಾರಿಗೆ ವಿಶೇಷ ಅಗತ್ಯಗಳಿವೆಯೋ ಅವರ ಯೋಜನೆಗಳು ಅಧಿವೇಶನಕ್ಕೆ ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ಮಾಡಲ್ಪಟ್ಟಿವೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕು.
6 ಯಾರ ವಸತಿಸೌಕರ್ಯದ ಅಗತ್ಯಗಳು ಅವರ ಕುಟುಂಬದ ಸದಸ್ಯರಿಂದ ಅಥವಾ ಅವರ ಸಭೆಯಿಂದ ಪೂರೈಸಲ್ಪಡಲು ಸಾಧ್ಯವಿಲ್ಲವೋ ಅಂತಹ ಪ್ರಚಾರಕರಿಗೆ ಮಾತ್ರ, ಸ್ಪೆಶಲ್ ನೀಡ್ಸ್ ರೂಮ್ ರಿಕ್ವೆಸ್ಟ್ ಫಾರ್ಮ್ಗಳು ಲಭ್ಯ ಇವೆ. ಸಭಾ ಸೇವಾ ಕಮಿಟಿಯು, ಫಾರ್ಮ್ನಲ್ಲಿ ಮತ್ತು ಎಲ್ಲಾ ಹಿರಿಯರ ಮಂಡಲಿಗಳಿಗೆ ಸಂಬೋಧಿಸಲ್ಪಟ್ಟ ಡಿಸೆಂಬರ್ 14, 2004ರ ತಾರೀಖಿನ ಪತ್ರದಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶಕ ಸೂಚನೆಗಳನ್ನು ಉಪಯೋಗಿಸುತ್ತಾ ಆ ಪ್ರಚಾರಕರು ಈ ಸೇವೆಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೋ ಎಂದು ಪರಿಶೀಲಿಸಬೇಕು. ಈ ಒದಗಿಸುವಿಕೆಯು ಒಳ್ಳೆಯ ನಿಲುವಿನಲ್ಲಿರುವ ಮತ್ತು ಸಭ್ಯ ನಡತೆಯುಳ್ಳ ಮಕ್ಕಳನ್ನು ಹೊಂದಿರುವ ಪ್ರಚಾರಕರಿಗೆ ಮಾತ್ರ ಲಭ್ಯ.
7 ಮತ್ತೊಂದು ಅಧಿವೇಶನಕ್ಕೆ ಹಾಜರಾಗುವುದು: ಈ ವರ್ಷ ಇಂಗ್ಲಿಷ್ನಲ್ಲಿ ಹಲವಾರು ಅಧಿವೇಶನಗಳು ಏರ್ಪಾಡು ಮಾಡಲ್ಪಟ್ಟಿವೆ. ಒಂದೇ ಕ್ಷೇತ್ರದಲ್ಲಿ ದೇಶೀಯ ಭಾಷೆಯಲ್ಲಿ ನಡೆಸಲ್ಪಡಲಿರುವ ಅಧಿವೇಶನಗಳಿಗೆ ಹಾಜರಾಗಲಿರುವವರ ಸಂಖ್ಯೆಯನ್ನು ಕಡಿಮೆಗೊಳಿಸಲಿಕ್ಕಾಗಿ, ಸಾಧ್ಯವಿರುವಲ್ಲೆಲ್ಲಾ ಇಂಗ್ಲಿಷ್ ಭಾಷೆಯನ್ನು ಅರ್ಥಮಾಡಿಕೊಂಡು ಸರಾಗವಾಗಿ ಮಾತನಾಡಬಲ್ಲವರು, ಅವರ ಸಭೆಯು ದೇಶೀಯ ಭಾಷೆಯ ಅಧಿವೇಶನಕ್ಕೆ ನೇಮಿಸಲ್ಪಟ್ಟಿರುವುದಾದರೂ ಇಂಗ್ಲಿಷ್ನಲ್ಲಿ ನಡೆಸಲ್ಪಡುವ ಅಧಿವೇಶನಕ್ಕೆ ಹಾಜರಾಗುವಂತೆ ನಾವು ಪ್ರೋತ್ಸಾಹಿಸುತ್ತಿದ್ದೇವೆ. ಇದು ಸಾಕಷ್ಟು ಆಸನ ವ್ಯವಸ್ಥೆ, ಸಾಹಿತ್ಯ, ರೂಮಿಂಗ್ ಏರ್ಪಾಡುಗಳು ಲಭ್ಯ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯಮಾಡುವುದು. ನೀವು ಇಂಗ್ಲಿಷ್ನಲ್ಲಿ ನಡೆಸಲ್ಪಡುವ ಅಧಿವೇಶನಕ್ಕೆ ಹಾಜರಾಗಲು ಶಕ್ತರಿರುವುದಾದರೆ, ಭಾರತದಲ್ಲಿ ಯೋಜಿಸಲ್ಪಟ್ಟಿರುವ ಎಲ್ಲಾ ಅಧಿವೇಶನಗಳ ಅಂಚೆ ವಿಳಾಸಗಳಿಗಾಗಿ ದಯವಿಟ್ಟು ನಮ್ಮ ರಾಜ್ಯದ ಸೇವೆಯ, 2005ರ ಏಪ್ರಿಲ್ ಸಂಚಿಕೆಯನ್ನು ನೋಡಿರಿ. ನೀವು ‘ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್’ಗಾಗಿ ಅಥವಾ ಯಾವುದೇ ಹೆಚ್ಚಿನ ಮಾಹಿತಿಗಾಗಿ ವಿನಂತಿಸಿಕೊಳ್ಳುವುದಾದರೆ, ಆ ವಿನಂತಿಯೊಂದಿಗೆ ಸ್ವ-ವಿಳಾಸವಿರುವ ಮತ್ತು ಅಂಚೆಚೀಟಿ ಅಂಟಿಸಲ್ಪಟ್ಟಿರುವ ಲಕೋಟೆಯನ್ನು ಕಳುಹಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಒಂದುವೇಳೆ ಒಂದು ನಗರದಲ್ಲಿ ಒಂದಕ್ಕಿಂತ ಹೆಚ್ಚು ಅಧಿವೇಶನಗಳು ನಡೆಸಲ್ಪಡಲಿರುವುದಾದರೆ, ನೀವು ಹಾಜರಾಗಲು ಯೋಜಿಸುತ್ತಿರುವ ಅಧಿವೇಶನದ ತಾರೀಖುಗಳನ್ನು ಸೂಚಿಸಿರಿ.
8 ಸ್ವಯಂ-ಸೇವಕರ ಅಗತ್ಯವಿದೆ: ಇತರರ ಅಗತ್ಯಗಳ ಕಡೆಗೆ ದೀನತೆಯಿಂದ ಗಮನಕೊಡುವ ವಿಷಯದಲ್ಲಿ ಯೇಸು ಒಂದು ಉತ್ತಮ ಮಾದರಿಯನ್ನಿಟ್ಟನು. (ಲೂಕ 9:12-17; ಯೋಹಾ. 13:5, 14-16) ಅಧಿವೇಶನಗಳಲ್ಲಿ ಸ್ವಯಂ-ಸೇವೆಮಾಡಲು ಮುಂದೆ ಬರುವವರು ಸಹ ತದ್ರೀತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತಾರೆ. ಅಧಿವೇಶನ ಇಲಾಖೆಗಳ ಅಗತ್ಯಗಳನ್ನು ಪೂರೈಸಲಿಕ್ಕಾಗಿ, ಸ್ಥಳಿಕ ಅಧಿವೇಶನ ಕಮಿಟಿಗಳು ತಮ್ಮೊಂದಿಗೆ ಕೆಲಸಮಾಡುವಂತೆ ಇತರರನ್ನು ಶೀಘ್ರವೇ ಆಮಂತ್ರಿಸುವವು. ವಿಶೇಷವಾಗಿ ಹಿರಿಯರು ಮುಂದೆ ಬಂದು ನೇಮಕಗಳನ್ನು ಸ್ವೀಕರಿಸುವ ಅಗತ್ಯವಿದೆ. ಅವರು ತೋರಿಸುವ ಸಿದ್ಧಮನಸ್ಸು ಸಭೆಯಲ್ಲಿರುವ ಎಲ್ಲರಿಗೂ ಒಂದು ಉತ್ತಮ ಮಾದರಿಯನ್ನು ಒದಗಿಸುತ್ತದೆ.—1 ಪೇತ್ರ 5:2, 3.
9 ಇತರರು ಗಮನಿಸುವಂಥದ್ದು: ಒಂದು ಹೋಟೆಲಿನ ಸೇಲ್ಸ್ ಮ್ಯಾನೇಜರ್ ಹೇಳಿದ್ದು: “ನಿಮ್ಮ ಜನರು ನಮ್ಮ ಅಚ್ಚುಮೆಚ್ಚಿನ ಗುಂಪಾಗಿದ್ದಾರೆ. ಬೇರಾವುದೇ ಗುಂಪಿಗೆ ಹೋಲಿಸುವಾಗ, ನಿಮ್ಮ ನಡತೆ ಅತ್ಯುತ್ತಮವಾಗಿದೆ. ತಮ್ಮೊಂದಿಗೆ ಎಷ್ಟು ಚೆನ್ನಾಗಿ ವ್ಯವಹರಿಸಲಾಗುತ್ತದೆ ಹಾಗೂ ತಮಗೆ ಹೇಗೆ ಟಿಪ್ಸ್ ಅನ್ನು ಕೊಡಲಾಗುತ್ತದೆ ಎಂಬುದರ ಕುರಿತು ಹೌಸ್ಕೀಪರ್ಗಳೆಲ್ಲರೂ ಮಾತನಾಡುತ್ತಿರುತ್ತಾರೆ. ನಿಜ ಹೇಳಬೇಕಾದರೆ, ನೀವು ಇಲ್ಲಿ ಉಳಿದಿರುವ ವಾರಾಂತ್ಯದಲ್ಲಿ ಎಲ್ಲರೂ ಕೆಲಸಮಾಡಲು ಬಯಸುತ್ತಾರೆ!” ಮತ್ತೊಂದು ಹೋಟೆಲಿನ ಪ್ರತಿನಿಧಿಯು ಹೇಳಿದ್ದು: “ಬೇರಾರಿಗಿಂತಲೂ ಯೆಹೋವನ ಸಾಕ್ಷಿಗಳ ಗುಂಪಿನೊಂದಿಗೆ ಕೆಲಸಮಾಡುವುದು ತುಂಬ ಸುಲಭ.” ಪ್ರಾಯಶಃ ನಿಮ್ಮ ಆದರ್ಶಪ್ರಾಯ ನಡತೆ ಕೂಡ ಈ ಹೇಳಿಕೆಗಳನ್ನು ಮಾಡುವಂತೆ ಜನರನ್ನು ಪ್ರೇರೇಪಿಸಿರಬಹುದು. ಇಂತಹ ಸ್ತುತಿಯನ್ನು ತರುವಂಥ ರೀತಿಯಲ್ಲಿ ನಾವು ವರ್ತಿಸುತ್ತಿರುವುದನ್ನು ನೋಡಿ ಯೆಹೋವನು ಎಷ್ಟು ಸಂತೋಷಪಡುತ್ತಿರಬಹುದು ಎಂಬುದರ ಕುರಿತು ತುಸು ಯೋಚಿಸಿ!—1 ಪೇತ್ರ 2:12.
10 ತನ್ನ ಜನರು ಈ ವರ್ಷ ಆಧ್ಯಾತ್ಮಿಕ ಉಪದೇಶವನ್ನು ಪಡೆದುಕೊಳ್ಳಲು ಕೂಡಿಬರುವಂತೆ ಯೆಹೋವ ದೇವರು ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕ ಏರ್ಪಾಡು ಮಾಡಿದ್ದಾನೆ. (ಲೂಕ 12:42) ಮೂರೂ ದಿನಗಳಿಗೆ ಹಾಜರಾಗಲು ಏರ್ಪಾಡುಗಳನ್ನು ಮಾಡುವುದು ಹೆಚ್ಚಿನ ಪ್ರಯತ್ನವನ್ನು ಅಗತ್ಯಪಡಿಸುವುದು ನಿಜ, ಆದರೆ ಅದು ಸಾರ್ಥಕವಾಗಿರುವುದು. ಯೆಹೋವನನ್ನು ಇಂದು ಮತ್ತು ಎಂದೆಂದಿಗೂ ಸೇವಿಸುವೆವು ಎಂಬ ನಮ್ಮ ದೃಢಸಂಕಲ್ಪವನ್ನು ಈ ವರ್ಷದ “ದೈವಿಕ ವಿಧೇಯತೆ” ಜಿಲ್ಲಾ ಅಧಿವೇಶನವು ಇನ್ನಷ್ಟು ಬಲಪಡಿಸುವುದು ಎಂಬುದರಲ್ಲಿ ಸಂದೇಹವಿಲ್ಲ. ನಾವು ಕೀರ್ತನೆಗಾರನ ಈ ಬುದ್ಧಿಮಾತನ್ನು ಪಾಲಿಸುವ ದೃಢನಿರ್ಧಾರವನ್ನು ಮಾಡೋಣ: “ಸಮ್ಮೇಳವಾಗಿ ದೇವನಾದ ಕರ್ತನನ್ನು ಕೊಂಡಾಡಿರಿ.”—ಕೀರ್ತ. 68:26.
[ಪುಟ 3ರಲ್ಲಿರುವಚೌಕ]
ಕಾರ್ಯಕ್ರಮದ ಸಮಯಗಳು
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:30 - ಸಾಯಂಕಾಲ 5:05
ಭಾನುವಾರ
ಬೆಳಿಗ್ಗೆ 9:30 - ಸಾಯಂಕಾಲ 4:10
[ಪುಟ 4ರಲ್ಲಿರುವಚೌಕ]
ರೂಮಿಂಗ್ ಏರ್ಪಾಡುಗಳಿಗೆ ನೀವು ಸಹಕಾರ ನೀಡಬಹುದಾದ ವಿಧ
◼ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಹೋಟೆಲುಗಳನ್ನು ಫೋನಿನ ಮೂಲಕ ಅಥವಾ ಸಾಧ್ಯವಿರುವುದಾದರೆ ಒಂದು ವೈಯಕ್ತಿಕ ಭೇಟಿಯ ಮೂಲಕ ಸಂಪರ್ಕಿಸಲು ನಿಮ್ಮ ಸ್ವಂತ ಏರ್ಪಾಡುಗಳನ್ನು ಮಾಡಿಕೊಳ್ಳಿರಿ.
◼ ನಿಮ್ಮ ಆವಶ್ಯಕತೆಗಳು ಏನು ಎಂಬುದನ್ನು ಹೋಟೆಲ್ ನಿರ್ವಾಹಕರಿಗೆ ಸ್ಪಷ್ಟವಾಗಿ ತಿಳಿಸಿರಿ; ನೀವು ಒಂದೇ ರೂಮ್ನಲ್ಲಿ ಹೆಚ್ಚಿನ ವ್ಯಕ್ತಿಗಳನ್ನು, ಅಂದರೆ ಮಕ್ಕಳನ್ನೊ ಅಥವಾ ವಯಸ್ಕರನ್ನೊ ಇರಿಸಿಕೊಳ್ಳಲು ಯೋಜಿಸುವುದಾದರೆ ಅದನ್ನೂ ವಿವರಿಸಿರಿ.
◼ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಹೋಟೆಲುಗಳನ್ನು ಸಂಪರ್ಕಿಸಿದರೂ ರೂಮ್ಗಳು ಲಭ್ಯವಿಲ್ಲದಿರುವುದಾದರೆ ಅಥವಾ ಒಂದು ಹೋಟೆಲಿನ ವಿಷಯದಲ್ಲಿ ನಿಮಗೆ ಯಾವುದಾದರೂ ಸಮಸ್ಯೆ ಏಳುವುದಾದರೆ, ನಿಮ್ಮ ಸಭಾ ಕಾರ್ಯದರ್ಶಿಗೆ ಇದರ ಕುರಿತು ತಿಳಿಸಿರಿ. ಅವರು ಲಿಸ್ಟ್ನ ಮೇಲ್ಭಾಗದಲ್ಲಿ ಕೊಡಲ್ಪಟ್ಟಿರುವ ಮಾಹಿತಿಯನ್ನು ಉಪಯೋಗಿಸುತ್ತಾ ನಿಮ್ಮ ಅಧಿವೇಶನದ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸಬೇಕು ಮತ್ತು ಹೆಚ್ಚಿನ ಹೋಟೆಲುಗಳ ಲಿಸ್ಟ್ ನಿಮಗೆ ಒದಗಿಸಲ್ಪಡುವುದು.
◼ ನೀವು ಖಂಡಿತವಾಗಿಯೂ ಉಪಯೋಗಿಸಲಿಕ್ಕಿರುವ ರೂಮ್ಗಳನ್ನು ಮಾತ್ರ ಕಾದಿರಿಸಿ.
◼ ನಿಮ್ಮ ಕಾದಿರಿಸುವಿಕೆಯನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ನೀವು ಕಾದಿರಿಸುವ ಪ್ರತಿ ರೂಮ್ಗೆ ಮುಂಗಡ ಹಣವನ್ನು ಕೊಡಬೇಕು. ಇಲ್ಲವಾದರೆ, ನಿಮ್ಮ ರೂಮನ್ನು ಬೇರೆ ಯಾರಿಗಾದರೂ ಕೊಟ್ಟುಬಿಡುವ ಸಾಧ್ಯತೆಯಿದೆ.
◼ ಕೊಟ್ಟ ಮಾತಿಗೆ ತಕ್ಕ ಹಾಗೆ ನೀವು ಕಾದಿರಿಸುವ ರೂಮ್ಗಳನ್ನೇ ಉಪಯೋಗಿಸಿರಿ. ನಿಮಗೆ ಹೆಚ್ಚು ಉತ್ತಮವಾದ ರೂಮ್ಗಳು ಸಿಗುತ್ತಿವೆ ಎಂಬ ಕಾರಣಮಾತ್ರಕ್ಕೆ ಹೋಟೆಲುಗಳನ್ನು ಬದಲಾಯಿಸಲು ಪ್ರಯತ್ನಿಸದಿರಿ.
[ಪುಟ 4ರಲ್ಲಿರುವಚೌಕ]
ಒಂದು ಹೋಟೆಲ್ ರೂಮನ್ನು ಕಾದಿರಿಸುವ ಅತ್ಯುತ್ತಮ ವಿಧಾನ ಯಾವುದು?
1. ‘ಶಿಫಾರಸ್ಸುಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್’ನಲ್ಲಿ ಕೊಡಲ್ಪಟ್ಟಿರುವ ದೂರವಾಣಿ ಸಂಖ್ಯೆಗಳನ್ನು ಉಪಯೋಗಿಸುತ್ತಾ ಸಾಮಾನ್ಯವಾದ ಕೆಲಸದ ವೇಳೆಯಲ್ಲಿ ಹೋಟೆಲುಗಳನ್ನು ಸಂಪರ್ಕಿಸಿರಿ.
2. ನೀವು ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುತ್ತಿದ್ದೀರಿ ಎಂದು ಹೋಟೆಲಿನವರಿಗೆ ತಿಳಿಸಿರಿ.
3. ನೀವು ಯಾವ ತಾರೀಖಿನಂದು ರೂಮನ್ನು ಬಾಡಿಗೆಗೆ ತೆಗೆದುಕೊಳ್ಳುವಿರಿ ಮತ್ತು ಯಾವಾಗ ಖಾಲಿಮಾಡುವಿರಿ ಎಂಬುದನ್ನು ತಿಳಿಸಿ.
4. ಯಾವುದೇ ರೂಮ್ಗಳು ಲಭ್ಯವಿಲ್ಲದಿರುವುದಾದರೆ, ಲಿಸ್ಟ್ನಲ್ಲಿರುವ ಮತ್ತೊಂದು ಹೋಟೆಲಿಗೆ ಕರೆಮಾಡಿ.
5. ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ದರಕ್ಕಿಂತ ಹೆಚ್ಚಿನ ದರವು ಕೇಳಲ್ಪಡುವುದಾದರೆ ಅದಕ್ಕೆ ಒಪ್ಪಿಕೊಳ್ಳಬೇಡಿ.
6. ನಿಮ್ಮ ಕಾದಿರಿಸುವಿಕೆಯನ್ನು ಮಾಡಿ, ಹತ್ತು ದಿನಗಳೊಳಗೆ ಡಿಮಾಂಡ್ ಡ್ರಾಫ್ಟ್, ಅಥವಾ ಮನಿ ಆರ್ಡರ್ ಅನ್ನು ಕಳುಹಿಸಿರಿ. ನೇರವಾಗಿ ಹಣವನ್ನು ಕಳುಹಿಸಲೇಬೇಡಿ.
7. ನಿಮ್ಮ ಕಾದಿರಿಸುವಿಕೆಗಾಗಿರುವ ರಸೀದಿಯನ್ನು ಮತ್ತು ಲಿಖಿತ ಮಂಜೂರಾತಿಯನ್ನು ನೀಡುವಂತೆ ಕೇಳಿಕೊಳ್ಳಿ.