ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಸೆಪ್ಟೆಂಬರ್: ಸಂತೃಪ್ತಿಕರವಾದ ಜೀವನ ಬ್ರೋಷರ್. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬಿಡಿ ಪ್ರತಿಗಳನ್ನು ನೀಡಿರಿ. ಆಸಕ್ತಿಯು ಕಂಡುಬಂದಲ್ಲಿ, ಅಪೇಕ್ಷಿಸು ಬ್ರೋಷರನ್ನು ದಯವಿಟ್ಟು ಪರಿಚಯಿಸಿರಿ, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಗುರಿಯೊಂದಿಗೆ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಿರಿ. ನವೆಂಬರ್: ಸಂತೃಪ್ತಿಕರವಾದ ಜೀವನ ಬ್ರೋಷರ್. ಈ ಬ್ರೋಷರ್ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿರುವಲ್ಲಿ, ಬೈಬಲ್ ಕಥೆಗಳ ನನ್ನ ಪುಸ್ತಕ ಇಲ್ಲವೆ ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಡಿಸೆಂಬರ್: ಮಹಾನ್ ಪುರುಷ ಪುಸ್ತಕವನ್ನು ನೀಡಿರಿ. ಅಥವಾ ಬದಲಿ ನೀಡುವಿಕೆಯಾಗಿ ಬೈಬಲ್ ಕಥೆಗಳ ನನ್ನ ಪುಸ್ತಕ, ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಸೇರಿಸಿ ಯಾವುದೇ ಇತರ ಪುಸ್ತಕವನ್ನು ನೀಡಿರಿ.
◼ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ಎಂಬ ವಿಡಿಯೋವನ್ನು ಡಿಸೆಂಬರ್ ತಿಂಗಳಿನ ಒಂದು ಸೇವಾಕೂಟದಲ್ಲಿ ಪರಿಗಣಿಸಲಿದ್ದೇವೆ. ಇದು ಈಗ, ರಕ್ತಪೂರಣ ಬದಲಿಗಳು—ಡಾಕ್ಯುಮೆಂಟರಿ ಸರಮಾಲೆಗಳು ಎಂಬ ವಿಸಿಡಿಯ ಭಾಗಗಳಲ್ಲಿ ಲಭ್ಯವಿದೆ. ಇದು ಮೂರು ವಿಸಿಡಿಗಳ ಒಂದು ಸೆಟ್‌ನಲ್ಲಿ ದೊರಕುತ್ತದೆ. ಅವುಗಳು: ರಕ್ತಪೂರಣ-ಬದಲಿ ಉಪಾಯಗಳು—ಸರಳ, ಸುರಕ್ಷಿತ, ಕಾರ್ಯಸಾಧಕ; ರಕ್ತಪೂರಣ-ಬದಲಿ ಆರೋಗ್ಯಪಾಲನೆ—ರೋಗಿಗಳ ಆವಶ್ಯಕತೆ ಮತ್ತು ಹಕ್ಕುಗಳನ್ನು ಪೂರೈಸುವುದು; ಮತ್ತು ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ. ಇದು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ. ಅಗತ್ಯವಿದ್ದಲ್ಲಿ, ಸಭೆಯ ಮೂಲಕ ಆದಷ್ಟು ಬೇಗನೆ ಈ ವಿಸಿಡಿಗಳ ಪ್ರತಿಗಳನ್ನು ವಿನಂತಿಸಿಕೊಳ್ಳಬೇಕು.
◼ ಇಸವಿ 2005ಕ್ಕಾಗಿರುವ ಜ್ಞಾಪಕಾಚರಣೆಯ ಸಮಯಾವಧಿಯ ವಿಶೇಷ ಬಹಿರಂಗ ಭಾಷಣವು ಏಪ್ರಿಲ್ 10ರ ಭಾನುವಾರದಂದು ಕೊಡಲ್ಪಡುವುದು. ಭಾಷಣದ ವಿಷಯವಸ್ತು ಮುಂದೆ ತಿಳಿಸಲ್ಪಡುವುದು. ಆ ವಾರಾಂತ್ಯದಲ್ಲಿ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನ ಅಥವಾ ಒಂದು ಸಮ್ಮೇಳನವನ್ನು ಹೊಂದಿರುವಂಥ ಸಭೆಗಳಲ್ಲಿ, ಅದರ ಮುಂದಿನ ವಾರ ಈ ವಿಶೇಷ ಭಾಷಣವು ನೀಡಲ್ಪಡುವುದು. ಯಾವ ಸಭೆಯಲ್ಲಿಯೂ 2005, ಏಪ್ರಿಲ್ 10ರ ಭಾನುವಾರಕ್ಕೆ ಮುಂಚೆ ವಿಶೇಷ ಭಾಷಣವು ನೀಡಲ್ಪಡಬಾರದು.
◼ ರೆಗ್ಯುಲರ್ ಪಯನೀಯರ್ ನೇಮಕ ಪತ್ರದ ಹಿಂಭಾಗದಲ್ಲಿರುವ, “ನಿಲ್ಲಿಸಿಬಿಡುವುದು,” “ಸಭೆಯ ಬದಲಾವಣೆ” ಮತ್ತು “ಹೆಸರಿನ ಬದಲಾವಣೆ” ಎಂಬ ಶಿರೋನಾಮಗಳ ಕೆಳಗೆ, ಈ ಸನ್ನಿವೇಶಗಳಲ್ಲಿ ಏನು ಮಾಡಬೇಕೆಂದು ನಿರ್ದಿಷ್ಟ ಸಲಹೆಗಳು ನೀಡಲ್ಪಟ್ಟಿವೆ. ಸೆಕ್ರಿಟರಿಯು, ಪ್ರತಿ ಸಲ ಈ ವಿಷಯಗಳನ್ನು ನಿರ್ವಹಿಸುವಾಗಲೂ ಈ ಎಲ್ಲಾ ಸಲಹೆಗಳನ್ನು ಅನುಸರಿಸಬೇಕು.
◼ ಭೇಟಿನೀಡಲ್ಪಡಬೇಕಾಗಿರುವ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, 1991 ಏಪ್ರಿಲ್ 15ರ ಕಾವಲಿನಬುರುಜು ಪತ್ರಿಕೆಯ 21-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗುತ್ತದೆ.
◼ ಕಾವಲಿನಬುರುಜು ಮತ್ತು ಎಚ್ಚರ!ದ ಪ್ರಚಲಿತ ಸಂಚಿಕೆಗಳನ್ನು ಪಡೆದುಕೊಂಡ ಕೂಡಲೆ ಅವುಗಳನ್ನು ಸಭೆಗಳು ಇತರರಿಗೆ ನೀಡಬೇಕು. ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಆ ಪತ್ರಿಕೆಗಳನ್ನು ನೀಡುವ ಮೊದಲು ಅವುಗಳಲ್ಲಿರುವ ವಿಷಯಗಳೊಂದಿಗೆ ಚಿರಪರಿಚಿತರಾಗಲು ಇದು ಸಹಾಯಮಾಡುವುದು.
◼ ಅಕ್ಟೋಬರ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವ ಕಾರಣ, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.
◼ ಹೊಸ ಸೇವಾ ವರ್ಷದಲ್ಲಿ ಉಪಯೋಗಿಸಲಿಕ್ಕಾಗಿ ಸಾಕಷ್ಟು ವಾರ್ಷಿಕ ಸರ್ವಿಸ್ ಫಾರ್ಮ್‌ಗಳನ್ನು ಪ್ರತಿಯೊಂದು ಸಭೆಗೆ ಕಳುಹಿಸಲಾಗಿದೆ. ಶೇಖರಿಸಲ್ಪಟ್ಟಿರುವ ಮೊತ್ತವು ಮುಂದಿನ ಸೇವಾ ವರ್ಷಕ್ಕೆ ಸಾಕಾಗುವುದೋ ಎಂಬುದನ್ನು ಸೆಕ್ರಿಟರಿಗಳು ಖಚಿತಪಡಿಸಿಕೊಳ್ಳಬೇಕು. ಈ ಫಾರ್ಮ್‌ಗಳಲ್ಲಿ ಯಾವುದೇ ಒಂದರ ಹೆಚ್ಚಿನ ಸರಬರಾಯಿಯ ಅಗತ್ಯವಿದ್ದಲ್ಲಿ, ಸೆಪ್ಟೆಂಬರ್‌ಗಾಗಿನ ನಿಮ್ಮ ಲಿಟ್‌ರೇಚರ್ ರಿಕ್ವೆಸ್ಟ್‌ನೊಂದಿಗೆ ಅದನ್ನು ಕೂಡಲೆ ವಿನಂತಿಸಿರಿ.
◼ ಸಾಹಿತ್ಯ ಮತ್ತು ಪತ್ರಿಕೆಗಳ ವಿನಂತಿಯನ್ನು ಬೇಗನೆ ಪೂರೈಸಲು ಬ್ರಾಂಚ್ ಆಫೀಸ್ ಈಗ ಶಕ್ತವಾಗಿರುವ ಕಾರಣ, ನೀವು ನಿಮ್ಮ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಮತ್ತು ಕಾಂಗ್ರಿಗೇಷನ್ ರಿಕ್ವೆಸ್ಟ್ಸ್ (M-202) ಅನ್ನು ತಿಂಗಳಿನ ಮೊದಲ ವಾರದೊಳಗಾಗಿ ಕಳುಹಿಸಿರಿ. ಇದು, ಸಾಹಿತ್ಯ ಮತ್ತು ಪತ್ರಿಕೆಗಳ ವಿತರಣಾ ಕೆಲಸವನ್ನು ನಿಮಗೆ ಸುಲಭಗೊಳಿಸುತ್ತದೆ.
◼ ಲಭ್ಯವಿರುವ ಹೊಸ ಪ್ರಕಾಶನ:
ನಿಮ್ಮ ಮಾತನಾಡುವ ಮತ್ತು ಕಲಿಸುವ ಸಾಮರ್ಥ್ಯವನ್ನು ಉತ್ತಮಗೊಳಿಸುವ ವಿಧ —ನೇಪಾಲಿ
◼ ಪುನಃ ಲಭ್ಯವಿರುವ ಪ್ರಕಾಶನಗಳು:
ಚರ್ಚೆಗಾಗಿ ಬೈಬಲ್ ವಿಷಯಗಳು —ಅಸ್ಸಾಮಿಸ್, ಗುಜರಾಥಿ, ಪಂಜಾಬಿ
ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ —ಬಂಗಾಲಿ
ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ಮಲೆಯಾಳಂ