ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆ—ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಒಂದು ಬದಲಿ ನೀಡುವಿಕೆಯಾಗಿ, ಬೈಬಲ್ ಕಥೆಗಳ ನನ್ನ ಪುಸ್ತಕ, ಅಥವಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕಗಳನ್ನು ಉಪಯೋಗಿಸಬಹುದು. ಜನವರಿ: ಸಭೆಯ ಸ್ಟಾಕ್‌ನಲ್ಲಿರುವ 1988ಕ್ಕೆ ಮುಂಚೆ ಪ್ರಕಾಶಿಸಲ್ಪಟ್ಟ ಯಾವುದೇ ಪುಸ್ತಕವನ್ನು ನೀಡಬಹುದು. ಇವುಗಳಲ್ಲಿ ಯಾವುದೇ ಪುಸ್ತಕವು ನಿಮ್ಮ ಸ್ಟಾಕ್‌ನಲ್ಲಿಲ್ಲವಾದರೆ, ಹತ್ತಿರದ ಸಭೆಗಳಲ್ಲಿ ನೀವು ಉಪಯೋಗಿಸಬಹುದಾದ ಹಳೆಯ ಪ್ರಕಾಶನಗಳು ಅವರ ಸ್ವಂತ ಉಪಯೋಗಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆಯೋ ಎಂದು ದಯವಿಟ್ಟು ವಿಚಾರಿಸಿರಿ. ಹಳೆಯ ಪುಸ್ತಕಗಳನ್ನು ಹೊಂದಿರದ ಸಭೆಗಳು ಕುಟುಂಬ ಸಂತೋಷದ ರಹಸ್ಯ, ಅಥವಾ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಪುಸ್ತಕಗಳನ್ನು ನೀಡಬಹುದು. ಫೆಬ್ರವರಿ: ಯೆಹೋವನ ಸಮೀಪಕ್ಕೆ ಬನ್ನಿರಿ.a ಈ ಪ್ರಕಾಶನವು ಲಭ್ಯವಿಲ್ಲವಾದರೆ, ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ?b ಅಥವಾ ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕಗಳನ್ನು ನೀವು ಉಪಯೋಗಿಸಬಹುದು. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಬೈಬಲ್ ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ಒಂದು ವಿಶೇಷ ಪ್ರಯತ್ನವು ಮಾಡಲ್ಪಡುವುದು. ಜನರ ಬಳಿ ಈಗಾಗಲೇ ಈ ಪುಸ್ತಕವು ಇರುವುದಾದರೆ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕವನ್ನು ನೀಡಬಹುದು.
◼ ಸಭೆಯ ಅಕೌಂಟ್ಸನ್ನು ನಿರ್ವಹಿಸುವ ಸಹೋದರರಿಗೆ ಒಂದು ಮರುಜ್ಞಾಪನದೋಪಾದಿ, ಲೋಕವ್ಯಾಪಕ ಕೆಲಸಕ್ಕಾಗಿ ಮತ್ತು ರಾಜ್ಯ ಸಭಾಗೃಹ ನಿಧಿಗಾಗಿರುವ ಪೆಟ್ಟಿಗೆಗಳಲ್ಲಿ ಹಾಕಲ್ಪಡುವ ದಾನಗಳನ್ನು ಪ್ರತಿ ತಿಂಗಳು ಕಳುಹಿಸಿ ಕೊಡಬೇಕು, ಮತ್ತು ರಾಜ್ಯ ಸಭಾಗೃಹ ಸೌಕರ್ಯದ ಸಾಲವನ್ನು ಕಟ್ಟಲಿಕ್ಕಾಗಿ ಅಥವಾ ಬೇರೆ ಯಾವುದೇ ಸಭಾ ಖರ್ಚಿಗಾಗಿ ಇದನ್ನು ಉಪಯೋಗಿಸಬಾರದು.
◼ ಇಸವಿ 2005ಕ್ಕಾಗಿರುವ ಜ್ಞಾಪಕಾಚರಣೆಯು, ಗುರುವಾರ, ಮಾರ್ಚ್ 24ರಂದು ಸೂರ್ಯಾಸ್ತಮಾನದ ನಂತರ ನಡೆಯಲಿರುವುದೆಂಬುದನ್ನು ದಯವಿಟ್ಟು ಗಮನಿಸಿರಿ. ಈ ಮುಂಗಡ ಸೂಚನೆಯು ಕೊಡಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿದ್ದು, ಬೇರೆ ಸಭಾಂಗಣದ ವ್ಯವಸ್ಥೆ ಮಾಡಬೇಕಾಗಿರುವಲ್ಲಿ ಸಹೋದರರು ಲಭ್ಯವಿರುವ ಹಾಲ್‌ಗಳಿಗಾಗಿ ಮಾಡಬೇಕಾದ ಕಾಯ್ದಿರಿಸುವಿಕೆ ಇಲ್ಲವೆ ಕಾಂಟ್ರ್ಯಾಕ್ಟ್ ಅನ್ನು ಮುಂಚಿತವಾಗಿ ಮಾಡಬಹುದಾಗಿದೆ. ಜ್ಞಾಪಕಾಚರಣೆಯು ಶಾಂತಿಯಿಂದ ಮತ್ತು ಕ್ರಮಬದ್ಧವಾಗಿ ನಡೆಯಲು, ಕಟ್ಟಡದಲ್ಲಿ ಬೇರೆ ಯಾವುದೇ ರೀತಿಯ ಚಟುವಟಿಕೆಯ ಗೊಂದಲವು ಇರದಂತೆ ನೋಡಿಕೊಳ್ಳಲು, ಸಭಾಂಗಣದ ನಿರ್ವಾಹಕ ಮಂಡಲಿಯೊಂದಿಗೆ ಹಿರಿಯರು ಒಪ್ಪಂದವನ್ನು ಮಾಡಿಕೊಳ್ಳಬೇಕು. ಈ ಸಂದರ್ಭವು ತುಂಬ ಪ್ರಾಮುಖ್ಯವಾಗಿರುವುದರಿಂದ, ಜ್ಞಾಪಕಾಚರಣೆಯ ಭಾಷಣಕರ್ತನನ್ನು ನೇಮಿಸುವಾಗ, ಹಿರಿಯರ ಮಂಡಲಿಯು ತಮ್ಮೊಳಗೆ ಸರದಿಗನುಸಾರ ಭಾಷಣವನ್ನು ಕೊಡುವ ಅಥವಾ ಕೇವಲ ಒಬ್ಬ ಸಹೋದರನನ್ನೇ ಪ್ರತಿ ವರ್ಷ ಆಯ್ಕೆಮಾಡುವ ಬದಲು, ಹೆಚ್ಚು ಅರ್ಹರಾದ ಒಬ್ಬ ಹಿರಿಯನನ್ನು ಆಯ್ಕೆಮಾಡಬೇಕು. ಅರ್ಹ ಹಿರಿಯರಲ್ಲಿ ಭಾಷಣ ನೀಡಲು ಸಾಧ್ಯವಿರುವ ಅಭಿಷಿಕ್ತ ಸಹೋದರರೊಬ್ಬರು ಇರುವುದಾದರೆ ಅವರನ್ನು ಆಯ್ಕೆಮಾಡತಕ್ಕದ್ದು.
◼ ರೀಸನಿಂಗ್ ಪುಸ್ತಕವು ಇಂಗ್ಲಿಷ್, ತಮಿಳು, ಮತ್ತು ಮಲೆಯಾಳಂ ಭಾಷೆಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಈ ಪ್ರಕಾಶನವನ್ನು ಉಪಯೋಗಿಸಲು ಸಾಧ್ಯವಿರುವ ಎಲ್ಲಾ ಸಭೆಗಳು ಅದನ್ನು “2004ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ”ಯಲ್ಲಿ ಉಪಯೋಗಿಸುವಂತೆ ಪ್ರೋತ್ಸಾಹಿಸಲಾಗಿದೆ. ತಮ್ಮ ಭಾಷೆಗಳಲ್ಲಿ ರೀಸನಿಂಗ್ ಪುಸ್ತಕವನ್ನು ಉಪಯೋಗಿಸಲು ಸಾಧ್ಯವಿಲ್ಲದ ಸಭೆಗಳು ಚರ್ಚೆಗಾಗಿ ಬೈಬಲ್ ವಿಷಯಗಳು [td-KA] ಪುಸ್ತಿಕೆಯನ್ನು “2004ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ”ಯಲ್ಲಿ ಉಪಯೋಗಿಸುವಂತೆ ಪ್ರೋತ್ಸಾಹಿಸಲಾಗಿದೆ. ಅಂತಹ ಸಭೆಗಳ ಪ್ರಯೋಜನಕ್ಕಾಗಿ, ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ ಒಂದು ಪುರವಣಿಯು ಸೇರಿಸಲ್ಪಟ್ಟಿದೆ. “2004ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ”ಯಲ್ಲಿ ತಮ್ಮ ಸಭೆಗಳು ಇವುಗಳಲ್ಲಿ ಯಾವ ಪ್ರಕಾಶನವನ್ನು ಉಪಯೋಗಿಸುವವು ಎಂಬುದನ್ನು ಸ್ಥಳಿಕ ಸಭೆಗಳಲ್ಲಿರುವ ಹಿರಿಯರ ಮಂಡಲಿಗಳು ನಿರ್ಣಯಿಸತಕ್ಕದ್ದು.
◼ ಮಾರ್ಚ್ 15, 2004ರಿಂದ ಮೇ 16, 2005ರ ವರೆಗೆ, ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕವು ಸಭಾ ಪುಸ್ತಕ ಅಧ್ಯಯನದಲ್ಲಿ ಪರಿಗಣಿಸಲ್ಪಡುವುದು.
◼ ಪುನಃ ಲಭ್ಯವಿರುವ ಪ್ರಕಾಶನ:
ಕುಟುಂಬ ಜೀವನವನ್ನು ಆನಂದಿಸಿರಿ (ಟ್ರ್ಯಾಕ್ಟ್ ನಂ. 21) —ಪಂಜಾಬಿ
[ಅಧ್ಯಯನ ಪ್ರಶ್ನೆಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.