ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2003ರ ಆಗಸ್ಟ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2003ರ ಜುಲೈ 7ರಿಂದ ಆಗಸ್ಟ್ 25ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಶುಶ್ರೂಷೆಯಲ್ಲಿ ಭಾಗವಹಿಸುವಾಗ ದೃಷ್ಟಿ ಸಂಪರ್ಕವನ್ನು ಇಟ್ಟುಕೊಳ್ಳುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ? [be-KA ಪು. 125 ಪ್ಯಾರ. 1-2; ಪು. 125 ಚೌಕ]
2. ಶುಶ್ರೂಷೆಯಲ್ಲಿ ಭಾಗವಹಿಸುವ ಮುನ್ನ ನಿಮಗೆ ಹೆದರಿಕೆಯಾಗುವಲ್ಲಿ ಯಾವುದು ನಿಮಗೆ ಸಹಾಯಮಾಡಬಲ್ಲದು? [be-KA ಪು. 128 ಪ್ಯಾರ. 4-5]
3. ವೇದಿಕೆಯಿಂದ ಭಾಷಣವನ್ನು ನೀಡುವಾಗ, ಸ್ವಾಭಾವಿಕವಾದ ಮತ್ತು ಸಂಭಾಷಣಾತ್ಮಕ ಶೈಲಿಯಲ್ಲಿ ಮಾತಾಡುವಂತೆ ನಿಮಗೆ ಯಾವುದು ಸಹಾಯಮಾಡುವುದು? [be-KA ಪು. 129 ಪ್ಯಾರ. 2; ಪು. 129 ಚೌಕ]
4. ಯಾಜಕಕಾಂಡ 16:4, 24, 26, 28; ಯೋಹಾನ 13:10; ಮತ್ತು ಪ್ರಕಟನೆ 19:8ರಲ್ಲಿ ಕಂಡುಬರುವ ಮೂಲತತ್ತ್ವಗಳು ನಮ್ಮ ವೈಯಕ್ತಿಕ ತೋರಿಕೆಯ ಮೇಲೆ ಯಾವ ಪ್ರಭಾವವನ್ನು ಬೀರಬೇಕು, ಮತ್ತು ಇದು ಏಕೆ ಪ್ರಾಮುಖ್ಯವಾಗಿದೆ? [be-KA ಪು. 131 ಪ್ಯಾರ. 3; ಪು. 131 ಚೌಕ]
5. ನಿರಾಡಂಬರನೂ “ಸ್ವಸ್ಥಮನಸ್ಸುಳ್ಳವನೂ” ಆಗಿರುವ ಒಬ್ಬ ವ್ಯಕ್ತಿಯನ್ನು ವರ್ಣಿಸಿರಿ. (1 ತಿಮೋ. 2:9, 10, NW) [be-KA ಪು. 132 ಪ್ಯಾರ. 1]
ನೇಮಕ ನಂಬರ್ 1
6. ಕ್ರೈಸ್ತರು ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಬೇಕಾದರೂ, ಅವರ ಮಧ್ಯೆ ಯಾವುದು ಸೈರಿಸಲ್ಪಡುವುದಿಲ್ಲ? (ಕೊಲೊ. 3:13) [w-KA01 7/15 ಪು. 22 ಪ್ಯಾರ. 7-8]
7. ಸರಿಯೋ ತಪ್ಪೋ: ಒಂದು ಕ್ರಮಸೂಚಕ ಸಂಖ್ಯೆಯು ಸಂಪೂರ್ಣ ಸಂಖ್ಯೆಯಾಗಿದೆ. ವಿವರಿಸಿ. [si ಪು. 282 ಪ್ಯಾರ. 24-5]
8. ದೇವರ ವಾಕ್ಯವನ್ನು ಓದಲು ನಮಗೆ ಯಾವ ಅತ್ಯಂತ ನಿರ್ಮಲವಾದ ಹೇತುವಿರಸಾಧ್ಯವಿದೆ, ಮತ್ತು ಅಂಥ ಹೇತುವನ್ನು ಹೊಂದಿರುವುದು ಯಾಕೆ ಪ್ರಾಮುಖ್ಯವಾಗಿದೆ? [be-KA ಪು. 24 ಪ್ಯಾರ. 1]
9. ವಿವೇಕಿಯು ಯಾವ ರೀತಿಯಲ್ಲಿ “ಜ್ಞಾನವನ್ನು ಶೇಖರಿಸುತ್ತಾನೆ”? (ಜ್ಞಾನೋ. 10:14, NW) [w-KA01 7/15 ಪು. 27 ಪ್ಯಾರ. 4-5]
10. ಯೋಬನ ಒಳ್ಳೆಯ ಅಭ್ಯಾಸಗಳು ಏಕೆ ಗಮನಾರ್ಹವಾಗಿವೆ? (ಯೋಬ 1:1, 8; 2:3) [w-KA01 8/1 ಪು. 20 ಪ್ಯಾರ. 4]
ಸಾಪ್ತಾಹಿಕ ಬೈಬಲ್ ವಾಚನ
11. ವಿಶ್ವಾಸಿಗಳಾದ ಅನ್ಯಜನರು ತಮ್ಮ ರಕ್ಷಣೆಗಾಗಿ ಸುನ್ನತಿ ಮಾಡಿಕೊಳ್ಳುವ ಆವಶ್ಯಕತೆಯಿಲ್ಲ ಎಂಬುದನ್ನು ಆಡಳಿತ ಮಂಡಳಿಯ ಸದಸ್ಯರು ಹೇಗೆ ‘ಏಕಮನಸ್ಸಾಗಿ ತೀರ್ಮಾನಿಸಲು’ ಶಕ್ತರಾದರು? (ಅ. ಕೃ. 15:25)
12. ಮೋಶೆಯ ಧರ್ಮಶಾಸ್ತ್ರವು ಯೆಹೋವನಿಂದ ರದ್ದುಗೊಳಿಸಲ್ಪಟ್ಟಿರಲಾಗಿ, ಅದರ ನಿರ್ದಿಷ್ಟ ವಿಧಿಗಳನ್ನು ಪೌಲನು ಪಾಲಿಸುವಂತೆ ಆಡಳಿತ ಮಂಡಳಿಯು ಹೇಗೆ ಕೇಳಿಕೊಳ್ಳಸಾಧ್ಯವಿತ್ತು? (ಅ. ಕೃ. 21:20-26) [it-1 ಪು. 481 ಪ್ಯಾರ. 3; it-2 ಪು. 1163 ಪ್ಯಾರ. 6-ಪು. 1164 ಪ್ಯಾರ. 1]
13. ಪೌಲನ ಮೇಲೆ ಹೊರಿಸಲಾದ ಯಾವ ಆರೋಪಗಳು, ಆಧುನಿಕ ಸಮಯಗಳಲ್ಲಿ ಯೆಹೋವನ ಸಾಕ್ಷಿಗಳ ವಿರುದ್ಧ ಮಾಡಲಾಗಿರುವ ಹೇಳಿಕೆಗಳನ್ನು ನಮ್ಮ ಜ್ಞಾಪಕಕ್ಕೆ ತರುತ್ತವೆ? (ಅ. ಕೃ. 24:5, 6) [w-KA01 12/15 ಪು. 22 ಪ್ಯಾರ. 7-ಪು. 23 ಪ್ಯಾರ. 2]
14. ಎರಡು ವರ್ಷಗಳ ವರೆಗೆ ಗೃಹಬಂಧನದಲ್ಲಿದ್ದ ಸಮಯದಲ್ಲಿಯೂ ಪೌಲನು ರಾಜ್ಯ ಘೋಷಕನಾಗಿ ಹೇಗೆ ಒಂದು ಉತ್ತಮ ಮಾದರಿಯನ್ನಿಟ್ಟನು? (ಅ. ಕೃ. 28:30, 31)
15. “ಮೇಲಿರುವ ಅಧಿಕಾರಿ”ಗಳು ಯಾವ ರೀತಿಯಲ್ಲಿ “ದೇವರ ನೇಮಕ”ದ ಭಾಗವಾಗಿದ್ದಾರೆ, ಮತ್ತು ಇದು ಕ್ರೈಸ್ತರ ಮೇಲೆ ಯಾವ ಪ್ರಭಾವವನ್ನು ಬೀರಬೇಕು? (ರೋಮಾ. 13:1, 2) [w-KA00 8/1 ಪು. 4 ಪ್ಯಾರ. 5]