ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2003ರ ಫೆಬ್ರವರಿ 24ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2003ರ ಜನವರಿ 6ರಿಂದ ಫೆಬ್ರವರಿ 24ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಸರಿಯೋ ತಪ್ಪೋ: ನಿಷ್ಕೃಷ್ಟ ವಾಚನಕ್ಕಿರುವ ಕೀಲಿ ಕೈ, ಓದಲ್ಪಡುವ ವಿಷಯವು ಏನು ಬರೆಯಲ್ಪಟ್ಟಿದೆಯೋ ಅದಕ್ಕಿಂತ ತುಸು ಭಿನ್ನವಾಗಬಹುದಾದರೂ ಅದು ಸರಿಯಾಗಿ ಧ್ವನಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ವಿವರಿಸಿ. [be-KA ಪು. 83]
2. ಖಾಲಿ ಜಾಗ(ಗಳನ್ನು) ಭರ್ತಿಮಾಡಿರಿ: ನಿಷ್ಕೃಷ್ಟವಾಗಿ ಓದಲಿಕ್ಕಾಗಿ ಒಬ್ಬನು ______________________ , _______________________ , _________________________ ಮತ್ತು ಇದನ್ನು ಗಟ್ಟಿಯಾಗಿ ಓದುವ ಮೂಲಕ ಮಾಡಬೇಕು. [be-KA ಪು. 85]
3. ಸ್ಪಷ್ಟವಾಗಿ ಮಾತನಾಡುವುದು ಏಕೆ ಪ್ರಾಮುಖ್ಯವಾಗಿದೆ? (1 ಕೊರಿಂ. 14:8, 9) [be-KA ಪು. 86]
4. ಮಾತನ್ನು ಅಸ್ಪಷ್ಟಗೊಳಿಸಬಲ್ಲ ಕೆಲವು ವಿಷಯಗಳು ಯಾವುವು, ಮತ್ತು ಹೆಚ್ಚು ಸ್ಪಷ್ಟವಾಗಿ ಮಾತನಾಡಲು ನಾವೇನು ಮಾಡಸಾಧ್ಯವಿದೆ? [be-KA ಪು. 87-8]
5. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಉಪಯೋಗಿಸಲ್ಪಟ್ಟ ಯಾವ ಕೆಲವು ಪದಗಳನ್ನು ನೀವು ಸರಿಯಾಗಿ ಉಚ್ಚರಿಸಲು ಅಭ್ಯಾಸಮಾಡಬೇಕೆಂದು ನಿಮಗೆ ಅನಿಸುತ್ತದೆ? [be-KA ಪು. 92]
ನೇಮಕ ನಂಬರ್ 1
6. ಸರಿಯೋ ತಪ್ಪೋ: ನಾವು ಗಮನ ಕೊಡಲು ನಮ್ಮ ಕಣ್ಣುಗಳು ಸಹಾಯಮಾಡುತ್ತವೆ. ವಿವರಿಸಿರಿ. [be-KA ಪು. 14]
7. ಖಾಲಿ ಜಾಗ(ಗಳನ್ನು) ಭರ್ತಿಮಾಡಿರಿ: _________________________ , _________________________ , ಮತ್ತು _________________________ ದೈವಿಕವಾಗಿ ಒದಗಿಸಲ್ಪಟ್ಟ ಕಾಲ ಸೂಚಕಗಳಾಗಿ ಕಾರ್ಯನಡಿಸುತ್ತವೆ. [si ಪು. 279 ಪ್ಯಾರ. 7]
8. ಖಾಲಿ ಜಾಗ(ಗಳನ್ನು) ಭರ್ತಿಮಾಡಿರಿ: ಬೈಬಲ್ ಉಪಯೋಗದಲ್ಲಿ, “ದಿನ” ಎಂಬ ಶಬ್ದದ ಪೂರ್ವಾಪರವು ಅದು ಏನನ್ನು ಅರ್ಥೈಸುತ್ತದೆ ಎಂಬುದನ್ನು ಸೂಚಿಸುತ್ತಾ, _______________________ ತಾಸುಗಳು, _______________________ ತಾಸುಗಳು, ______________________________ ವರ್ಷಗಳು, ಅಥವಾ _________________________ ಕಾಲಾವಧಿಗೆ ಸೂಚಿಸಬಹುದು. [si ಪು. 279 ಪ್ಯಾರ. 8]
9. ನಿರುತ್ಸಾಹವನ್ನು ನಿಭಾಯಿಸಲು ಹನ್ನ, ಮಾರ್ಕ ಮತ್ತು ಯೆಹೆಜ್ಕೇಲನ ಮಾದರಿಗಳು ನಮಗೆ ಹೇಗೆ ಸಹಾಯಮಾಡಬಲ್ಲವು? ಇತರರಿಗೆ ಸಹಾಯಮಾಡಲು ನಾವು ಈ ಉದಾಹರಣೆಗಳನ್ನು ಹೇಗೆ ಉಪಯೋಗಿಸಬಲ್ಲೆವು? [w-KA01 2/1 ಪು. 20-3]
10. ಪ್ರಾಚೀನ ಕ್ರೀಡಾ ಪಂದ್ಯಗಳ ತಿಳಿವಳಿಕೆಯು ಕೆಲವು ಬೈಬಲ್ ವಚನಗಳ ಮೇಲೆ ಹೇಗೆ ಬೆಳಕು ಬೀರುತ್ತದೆ? ಈ ಮಾಹಿತಿಯು ನಮ್ಮ ಜೀವಿತಗಳನ್ನು ಹೇಗೆ ಪ್ರಭಾವಿಸಬೇಕು? [w-KA01 1/1 ಪು. 28-31]
ಸಾಪ್ತಾಹಿಕ ಬೈಬಲ್ ವಾಚನ
11. ಸರಿಯೋ ತಪ್ಪೋ: 1914ರಲ್ಲಿ ದೇವರ ರಾಜ್ಯವು ಪರಲೋಕದಲ್ಲಿ ಸ್ಥಾಪಿಸಲ್ಪಟ್ಟ ಕಾರಣ, “ನಿನ್ನ ರಾಜ್ಯವು ಬರಲಿ” ಎಂದು ಪ್ರಾರ್ಥಿಸುವುದು ಇನ್ನು ಸೂಕ್ತವಾಗಿಲ್ಲ. (ಮತ್ತಾ. 6:10) ವಿವರಿಸಿರಿ. [be-KA ಪು. 279; w-KA96 6/1 ಪು. 31]
12. ಸರಿಯೋ ತಪ್ಪೋ: ಮತ್ತಾಯ 11:24ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು, ಯೆಹೋವನು ಸೊದೋಮ್ ಮತ್ತು ಗೊಮೋರದಲ್ಲಿ ಯಾರನ್ನು ನಾಶಗೊಳಿಸಿದನೋ ಅವರು ಪುನರುತ್ಥಾನಗೊಳಿಸಲ್ಪಡುವರು ಎಂಬುದನ್ನು ಅರ್ಥೈಸುತ್ತವೆ. ವಿವರಿಸಿರಿ.
13. ಅನೇಕಾಯ್ಕೆ: ಮತ್ತಾಯ 24:45-47ರಲ್ಲಿ ಯೇಸುವಿನಿಂದ ಸೂಚಿಸಲ್ಪಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಸೂಚಿಸುವುದು (ಎ) ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯನ್ನು; (ಬಿ) ಯಾವುದೇ ಸೂಚಿತ ಸಮಯದಲ್ಲಿ ಒಂದು ಗುಂಪಾಗಿ ಎಲ್ಲಾ ಅಭಿಷಿಕ್ತ ಕ್ರೈಸ್ತರನ್ನು; (ಸಿ) ಸ್ವತಃ ಯೇಸು ಕ್ರಿಸ್ತನನ್ನೇ. ಈ ಆಳು ಹೊತ್ತುಹೊತ್ತಿಗೆ ಆತ್ಮಿಕ ಆಹಾರವನ್ನು “ಮನೆಯವರಿಗೆ” ಒದಗಿಸುತ್ತದೆ. ಆ ಮನೆಯವರು (ಎ) ವ್ಯಕ್ತಿಗತವಾಗಿ ಅಭಿಷಿಕ್ತರನ್ನು; (ಬಿ) ಬೇರೆ ಕುರಿಗಳನ್ನು; (ಸಿ) ಕ್ರೈಸ್ತ ಪ್ರಕಾಶನಗಳ ಎಲ್ಲ ಓದುಗರನ್ನು ಪ್ರತಿನಿಧಿಸುತ್ತಾರೆ. ಯಜಮಾನನು ತನ್ನ ಎಲ್ಲ ಆಸ್ತಿಯ ಮೇಲೆ ಈ ಆಳನ್ನು ನೇಮಿಸಿದ್ದು (ಎ) 1914ರಲ್ಲಿ; (ಬಿ) ಸಾ.ಶ. 33ರಲ್ಲಿ; (ಸಿ) 1919ರಲ್ಲಿ.
14. ಅನೇಕಾಯ್ಕೆ: ಮತ್ತಾಯ 13:47-50ರಲ್ಲಿರುವ ಯೇಸುವಿನ ದೃಷ್ಟಾಂತದಲ್ಲಿ ಹೇಳಲ್ಪಟ್ಟಿರುವ ಎಳೆಬಲೆಯಲ್ಲಿ ಒಳಗೂಡಿಸಲ್ಪಟ್ಟಿರುವುದು ಅಭಿಷಿಕ್ತ ಕ್ರೈಸ್ತರ ಸಭೆ ಮತ್ತು (ಎ) ದೇವರ ಮೆಸ್ಸೀಯ ರಾಜ್ಯ; (ಬಿ) ಅವರ ಬೇರೆ ಕುರಿ ಸಂಗಡಿಗರು; (ಸಿ) ಕ್ರೈಸ್ತ ಪ್ರಪಂಚ.
15. ಮತ್ತಾಯ 5:24ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳಿಗನುಸಾರ, ನೀವು ಒಬ್ಬ ಜೊತೆ ಆರಾಧಕನ ಮನನೋಯಿಸಿದ್ದೀರಿ ಎಂಬುದನ್ನು ಗ್ರಹಿಸುವುದಾದರೆ ನೀವೇನು ಮಾಡಬೇಕು? [g-KA96 3/8 ಪು. 26-7]