ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ-ಸೆಪ್ಟೆಂ.
“ಭೂಕಂಪಗಳು ಅಸಂಖ್ಯಾತ ಮರಣಗಳು ಹಾಗೂ ವಿನಾಶವನ್ನು ಉಂಟುಮಾಡಬಲ್ಲವು. ಅನೇಕವೇಳೆ ಅದರಿಂದ ಪಾರಾಗುವವರು ನಿರ್ಗತಿಕರಾಗಿಬಿಡುತ್ತಾರೆ, ಮತ್ತು ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ಅವರ ಬಳಿ ಯಾವುದೇ ಸಾಧನೋಪಾಯ ಇರುವುದಿಲ್ಲ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಭೂಕಂಪಕ್ಕೆ ತುತ್ತಾದವರು ನಂತರದ ಪರಿಣಾಮವನ್ನು ನಿಭಾಯಿಸಲು ಹೇಗೆ ಶಕ್ತರಾದರು ಎಂಬುದನ್ನು ತೋರಿಸುತ್ತದೆ. ಭೂಕಂಪಗಳು ಹೇಗೆ ತುಂಬ ಪ್ರಾಮುಖ್ಯವಾದ ಒಂದು ಬೈಬಲ್ ಪ್ರವಾದನೆಯ ಭಾಗವಾಗಿವೆ ಎಂಬುದನ್ನೂ ಇದು ವಿವರಿಸುತ್ತದೆ.”
ಕಾವಲಿನಬುರುಜು ಜುಲೈ15
“ದುಷ್ಟರನ್ನು ನರಕದಲ್ಲಿ ದಂಡಿಸಲಾಗುತ್ತದೆ ಎಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಪಾಪಕ್ಕಾಗಿರುವ ದಂಡನೆಯು ಏನೆಂಬುದನ್ನು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. [ರೋಮಾಪುರ 6:23ಎ ಭಾಗವನ್ನು ಓದಿರಿ.] ಹಾಗಾದರೆ ನರಕವು, ಯಾತನೆಯ ಉರಿಯುತ್ತಿರುವ ಸ್ಥಳವಾಗಿದೆಯೋ? ಅದು ಕೇವಲ ದೇವರಿಂದ ಪ್ರತ್ಯೇಕಗೊಂಡಿರುವಂಥ ಒಂದು ಸ್ಥಿತಿಯಾಗಿದೆಯೋ? ಈ ಪತ್ರಿಕೆಯು ಈ ಪ್ರಶ್ನೆಗಳಿಗೆ ಶಾಸ್ತ್ರಾಧಾರಿತ ಉತ್ತರಗಳನ್ನು ಕೊಡುತ್ತದೆ.”
ಎಚ್ಚರ ಜುಲೈ - ಸೆಪ್ಟೆಂ.
“ನಿಮ್ಮ ಆರೋಗ್ಯದ ವಿಷಯದಲ್ಲಿ ನಿಮಗೆ ಆಸಕ್ತಿಯಿದೆ ಎಂಬ ಖಾತ್ರಿ ನನಗಿದೆ. ಹೌದಲ್ಲವೇ? ಬಹುಶಃ ನಿಮ್ಮನ್ನು ಅಥವಾ ನಿಮಗೆ ಗೊತ್ತಿರುವ ಯಾರಾದರೊಬ್ಬರನ್ನು ಅಧಿಕ ರಕ್ತದೊತ್ತಡವು ಬಾಧಿಸುತ್ತಿರಬಹುದು. [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು 15ನೆಯ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.] ಸೃಷ್ಟಿಕರ್ತನು ಏನನ್ನು ವಾಗ್ದಾನಿಸಿದ್ದಾನೆ ಎಂಬುದನ್ನು ಗಮನಿಸಿರಿ. [ಯೆಶಾಯ 33:24ನ್ನು ಓದಿ.] ನೀವು ಈ ಲೇಖನವನ್ನು ಬೋಧಪ್ರದವೂ ಅತಿ ಪ್ರಾಯೋಗಿಕವೂ ಆಗಿರುವುದಾಗಿ ಕಂಡುಕೊಳ್ಳುವಿರಿ ಎಂಬ ಭರವಸೆ ನನಗಿದೆ.”
ಕಾವಲಿನಬುರುಜು ಆಗ.1
“ಮೂಢನಂಬಿಕೆಯ ಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳು ಕೇವಲ ಹಾನಿರಹಿತ ಮನೋರಂಜನೆಯಾಗಿವೆ ಎಂದು ಅನೇಕರು ನೆನಸುತ್ತಾರೆ. [ಪುಟ 5ರಲ್ಲಿರುವ ರೇಖಾಚೌಕದಿಂದ ಒಂದೊ ಎರಡೊ ವಿಷಯಗಳನ್ನು ತೋರಿಸಿರಿ.] ಇಂತಹ ವಿಚಾರಗಳ ಹಿಂದೆ ಏನಿದೆ ಎಂಬುದರ ಕುರಿತು ನೀವು ಎಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಯ ನಂತರ, 2 ಕೊರಿಂಥ 11:14ನ್ನು ಓದಿರಿ.] ಮೂಢನಂಬಿಕೆಗಳ ಕುರಿತಾದ ಬೈಬಲಿನ ದೃಷ್ಟಿಕೋನವನ್ನು ಈ ಪತ್ರಿಕೆಯು ತಿಳಿಯಪಡಿಸುತ್ತದೆ.”