ಪ್ರಕಟನೆಗಳು
◼ ಜುಲೈ ಮತ್ತು ಆಗಸ್ಟ್ ತಿಂಗಳುಗಳಿಗಾಗಿ ಸಾಹಿತ್ಯ ನೀಡುವಿಕೆ: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ. ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? ಎಂಬ ಪುಸ್ತಕ. ಪರ್ಯಾಯ ನೀಡುವಿಕೆಯಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಅಥವಾ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ಉಪಯೋಗಿಸಬಹುದು. ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಎಲ್ಲಿ ಆಸಕ್ತಿಯು ಕಂಡುಬರುತ್ತದೋ ಅಲ್ಲಿ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ವಿಶೇಷ ಪ್ರಯತ್ನವನ್ನು ಮಾಡುತ್ತಾ, ಅಪೇಕ್ಷಿಸು ಬ್ರೋಷರನ್ನು ನೀಡಿರಿ.
◼ ಇಸವಿ 2002, ಸೆಪ್ಟೆಂಬರ್ 16ರ ವಾರದಿಂದ ಆರಂಭಿಸುತ್ತಾ, ನಾವು ನಮ್ಮ ಸಭಾ ಪುಸ್ತಕ ಅಧ್ಯಯನದಲ್ಲಿ ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು IIನ್ನು ಅಧ್ಯಯನ ಮಾಡಲಿರುವೆವು.
◼ ಸೆಪ್ಟೆಂಬರ್ ತಿಂಗಳಿನಿಂದ ಆರಂಭಿಸುತ್ತಾ, ಸರ್ಕಿಟ್ ಮೇಲ್ವಿಚಾರಕರು “ನಿಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳಿರಿ!” ಎಂಬ ಶೀರ್ಷಿಕೆಯುಳ್ಳ ಸಾರ್ವಜನಿಕ ಭಾಷಣವನ್ನು ಕೊಡುವರು.
◼ ಕೆಲವು ಸಭೆಗಳು ಅಧಿಕ ಪ್ರಮಾಣದಲ್ಲಿ ವಾರ್ಷಿಕ ಐಟಮ್‌ಗಳು ಮತ್ತು ಶುಶ್ರೂಷಾ ಶಾಲೆ ಪುಸ್ತಕವನ್ನು ವಿನಂತಿಸಿವೆ. ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಬಿಟ್ಟು, ಸ್ಪೆಷಲ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ ಪಟ್ಟಿಮಾಡಲ್ಪಟ್ಟಿರುವ ಶಾಸ್ತ್ರಗಳನ್ನು ಪರೀಕ್ಷಿಸುವುದು, ಕ್ಯಾಲೆಂಡರ್‌ಗಳು, ಜಿಲ್ಲಾ ಅಧಿವೇಶನದ ಬ್ಯಾಡ್ಜ್ ಕಾರ್ಡ್‌ಗಳು ಮತ್ತು ಶುಶ್ರೂಷಾ ಶಾಲೆ ಪುಸ್ತಕಗಳಂಥ ಇತರ ಐಟಮ್‌ಗಳು ಸಭೆಯೊಂದಿಗೆ ಸಹವಾಸಮಾಡುತ್ತಿರುವವರಿಗೆ ಮಾತ್ರ ಒದಗಿಸಲ್ಪಡುತ್ತವೆ, ಕ್ಷೇತ್ರದಲ್ಲಿ ಹಂಚುವುದಕ್ಕಾಗಿ ಅಲ್ಲ ಎಂಬುದನ್ನು ದಯವಿಟ್ಟು ಗಮನಿಸಿರಿ. ಆದುದರಿಂದ, ಪ್ರಚಾರಕರ ಅನುಪಾತಕ್ಕೆ ಹೊಂದಿಕೆಯಲ್ಲಿ ನಾವು ಸಭೆಗಳಿಂದ ಪಡೆದುಕೊಂಡಿರುವ ಆರ್ಡರ್‌ಗಳಲ್ಲಿ ಹೊಂದಾಣಿಕೆಯನ್ನು ಮಾಡಿದ್ದೇವೆ. ಸೆಕ್ರಿಟರಿಗಳು ಪ್ಯಾಕಿಂಗ್ ಲಿಸ್ಟ್‌ನಲ್ಲಿ ವಾರ್ಷಿಕ ಐಟಮ್‌ಗಳಲ್ಲಿ ಎಷ್ಟು ಬಾಕಿ ಉಳಿದಿವೆ ಎಂಬುದನ್ನು ಪರೀಕ್ಷಿಸಿ ನೋಡುವಂತೆ ವಿನಂತಿಸಿಕೊಳ್ಳಲಾಗಿದೆ. ಹೆಚ್ಚಿನ ಸರಬರಾಯಿ ಇನ್ನೂ ಬೇಕಾಗಿರುವಲ್ಲಿ, ಅದಕ್ಕೆ ಕಾರಣವೇನು ಎಂಬುದನ್ನು ವಿವರಿಸುವಂಥ ಒಂದು ಚೀಟಿಯನ್ನು ಲಗತ್ತಿಸಿ, ದಯವಿಟ್ಟು ತತ್‌ಕ್ಷಣವೇ ಪುನಃ ಆರ್ಡರ್ ಮಾಡಿ.