ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/02 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2002 ನಮ್ಮ ರಾಜ್ಯದ ಸೇವೆ
2002 ನಮ್ಮ ರಾಜ್ಯದ ಸೇವೆ
km 6/02 ಪು. 3

ಪ್ರಕಟನೆಗಳು

◼ ಜೂನ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಈ ಪ್ರಕಾಶನಗಳು ಸಭೆಯ ಸ್ಟಾಕ್‌ನಲ್ಲಿ ಇಲ್ಲದಿರುವಲ್ಲಿ, ಹೆಚ್ಚಿನ ಪ್ರಕಾಶನಗಳಿಗಾಗಿ ಹೊಸ ವಿನಂತಿಯನ್ನು ಕಳುಹಿಸುವ ಬದಲು ಸಭೆಯಲ್ಲಿ ಶೇಖರಿಸಲ್ಪಟ್ಟಿರುವ ಹಳೆಯ ಪತ್ರಿಕೆಗಳನ್ನು ಹಾಗೂ ಸಾಹಿತ್ಯವನ್ನು ನೀಡಲು ಪ್ರಯತ್ನವನ್ನು ಮಾಡಬೇಕು. ಜುಲೈ ಮತ್ತು ಆಗಸ್ಟ್‌: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ?, ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ. ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ?, ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್‌: ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? ಎಂಬ ಪುಸ್ತಕ. ಪರ್ಯಾಯ ನೀಡುವಿಕೆಯಾಗಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ಉಪಯೋಗಿಸಬಹುದು.

◼ ಜಿಲ್ಲಾ ಅಧಿವೇಶನಗಳ ತಾರೀಖಿನಲ್ಲಿ ಬದಲಾವಣೆ: ಮೇ 2002ರ ನಮ್ಮ ರಾಜ್ಯದ ಸೇವೆಯಲ್ಲಿ, 2002ನೇ ಇಸವಿಗಾಗಿ ಸಿಕಂದರಾಬಾದ್‌ನಲ್ಲಿ ನಡೆಯಲಿರುವ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಆಧಿವೇಶನಗಳ ತಾರೀಖುಗಳನ್ನು ತಿಳಿಸಲಾಗಿತ್ತು. ಅವುಗಳನ್ನು ಈಗ ಪುನಃ ಶೆಡ್ಯೂಲ್‌ ಮಾಡಲಾಗಿದೆ. ಪರಿಷ್ಕೃತ ತಾರೀಖುಗಳು ಹೀಗಿವೆ: 1) ಸಿಕಂದರಾಬಾದ್‌ (ಇಂಗ್ಲಿಷ್‌) ನವೆಂಬರ್‌ 8-10, ಮತ್ತು 2) ಸಿಕಂದರಾಬಾದ್‌ (ತೆಲುಗು) ನವೆಂಬರ್‌ 15-17.

◼ 10 ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಗುಂಪು ಬೆಂಗಳೂರಿನಲ್ಲಿ ಹೊಸ ಬ್ರಾಂಚ್‌ ಸೌಕರ್ಯಗಳನ್ನು ಭೇಟಿಮಾಡಲು ಯೋಜಿಸುವಲ್ಲಿ, ಅವರು ಮೊದಲಾಗಿ ಪತ್ರದ ಮೂಲಕ ಈ ವಿಳಾಸವನ್ನು ಸಂಪರ್ಕಿಸುವುದು ಪ್ರಾಮುಖ್ಯವಾಗಿದೆ: Bethel office, Post Box No. 6441, Yelahanka, Bangalore 560 064, Karnataka. ಬೆಂಗಳೂರಿನ ಅದ್ದೆವಿಶ್ವನಾಥಪುರದಲ್ಲಿ ಬೆತೆಲ್‌ ಸೌಕರ್ಯಗಳಿಗೆ ಭೇಟಿನೀಡಲಿರುವ ಗುಂಪುಗಳನ್ನು ಬೆತೆಲ್‌ ಆಫೀಸ್‌ ನೋಡಿಕೊಳ್ಳುವುದು. ಭೇಟಿನೀಡಲು ನೀವು ಯೋಜಿಸಿರುವಲ್ಲಿ, ಅದನ್ನು ಸಾಕಷ್ಟು ಮುಂಚಿತವಾಗಿ ಪತ್ರಬರೆದು ತಿಳಿಸಿರಿ. ಎಷ್ಟು ಜನರು ಬರಲಿರುವಿರಿ, ಯಾವ ತಾರೀಖಿಗೆ ಹಾಗೂ ಸಮಯಕ್ಕೆ ಬರುವಿರೆಂಬುದರ ಕುರಿತು ಮಾಹಿತಿಯನ್ನು ಒದಗಿಸಿರಿ. ದಯವಿಟ್ಟು ಗಮನಿಸಿ, ಅಗಸ್ಟ್‌ 1, 2002ರ ಮೊದಲು ಯಾರಿಗೂ ಬೆತೆಲ್‌ ಪ್ರವಾಸವನ್ನು ಏರ್ಪಡಿಸಲಾಗುವುದಿಲ್ಲ. ನೀವು ಭೇಟಿನೀಡುವ ಮೊದಲು, ಬೆತೆಲ್‌ ಗೃಹಗಳನ್ನು ಭೇಟಿಮಾಡುವಾಗ ಇರಬೇಕಾದ ಸಭ್ಯವಾದ ಉಡುಪು ಹಾಗೂ ಕೇಶಶೈಲಿಯ ಕುರಿತಾಗಿ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ಪುನರ್ವಿಮರ್ಶಿಸಿರಿ.

◼ ಏಪ್ರಿಲ್‌-ಜೂನ್‌ 2002ರ ಸಂಚಿಕೆಯಿಂದ ಆರಂಭಿಸಿ, ಎಚ್ಚರ! ಪತ್ರಿಕೆಯು ಉರ್ದು ಭಾಷೆಯಲ್ಲಿ ಮಾಸಿಕ ಪ್ರತಿಯಿಂದ ತ್ರೈಮಾಸಿಕ ಪ್ರತಿಯಾಗಿ ಬದಲಾಯಿಸಲ್ಪಟ್ಟಿದೆ.

◼ ದಯವಿಟ್ಟು ಗಮನಿಸಿರಿ, FAB:FAC ಜನವರಿ 24, 2001ರ ತಾರೀಖಿನ ಸೊಸೈಟಿಯ ಪತ್ರದಲ್ಲಿ ತಿಳಿಸಿರುವಂತೆ, ಸಭೆಗಳು ತಮ್ಮ ಸಭೆಯ ಲೈಬ್ರರಿಗಾಗಿ ವಿಡಿಯೋಕ್ಯಾಸೆಟ್‌ನ ಕೇವಲ ಒಂದು ಸೆಟ್‌ ಅನ್ನು ವಿನಂತಿಸಸಾಧ್ಯವಿದೆ. ಈ ವಿನಂತಿಯನ್ನು ಕಳುಹಿಸುವಾಗ, ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-14)ನಲ್ಲಿ “For Cong. Use”ನ ಕೆಳಗೆ ಅದನ್ನು ಸೂಚಿಸಬೇಕು.

◼ ಎಲ್ಲಾ ಸಭೆಗಳು, ಬ್ರಾಂಚ್‌ ಆಫೀಸ್‌ನಲ್ಲಿ ಲಭ್ಯವಿರುವ ಪ್ರಕಾಶನಗಳನ್ನು ಸೂಚಿಸುವ ಒಂದು ತ್ರೈಮಾಸಿಕ ಪಟ್ಟಿಯನ್ನು ಪಡೆಯಲಿವೆ. ಎಲ್ಲ ಸಭೆಗಳಿಗೆ ಮೂರು ತಿಂಗಳಿಗೊಮ್ಮೆ ಈ ಸದ್ಯೋಚಿತ ಪಟ್ಟಿಯನ್ನು ಕಳುಹಿಸಲಾಗುವುದು. ಈ ಪಟ್ಟಿಯನ್ನು ಒಂದು ಪ್ಲ್ಯಾಸ್ಟಿಕ್‌ ಫೋಲ್ಡರ್‌ನಲ್ಲಿ ಹಾಕಿ, ಅದನ್ನು ಸಾಹಿತ್ಯ ಕೌಂಟರ್‌ನ ಬಳಿಯಲ್ಲಿ ಇಡಿ. ಇತ್ತೀಚೆಗಿನ ಪಟ್ಟಿಯಲ್ಲಿ ತಿಳಿಸಲ್ಪಟ್ಟಿರುವ ಪ್ರಕಾಶನಗಳನ್ನು ಮಾತ್ರ ವಿನಂತಿಸಲಾಗಿದೆ ಎಂಬುದನ್ನು ಸೇವಾ ಮೇಲ್ವಿಚಾರಕನು ಹಾಗೂ ಸೆಕ್ರಿಟರಿಯು ಖಚಿತಪಡಿಸಿಕೊಳ್ಳಬೇಕು. ಬ್ರಾಂಚ್‌ ಆಫೀಸಿನ ಪತ್ರದ ಮೂಲಕ ಅಥವಾ ನಮ್ಮ ರಾಜ್ಯದ ಸೇವೆಯ ಮೂಲಕ ತಿಳಿಸಲ್ಪಟ್ಟ ಹೊರತು ಬೇರೆ ಯಾವುದೇ ಪ್ರಕಾಶನಗಳಿಗೆ ದಯವಿಟ್ಟು ವಿನಂತಿಯನ್ನು ಕಳುಹಿಸಬೇಡಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು II ​—⁠ತೆಲುಗು, ಹಿಂದಿ

◼ ಪುನಃ ಲಭ್ಯವಿರುವ ಪ್ರಕಾಶನಗಳು:

ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ​—⁠ಇಂಗ್ಲಿಷ್‌

ಸಕಲ ಜನರಿಗಾಗಿರುವ ಒಂದು ಗ್ರಂಥ ​—⁠ನೇಪಾಲಿ

ಯೆಹೋವನು ಯಾರು? (ಟ್ರ್ಯಾಕ್ಟ್‌ ನಂಬರ್‌ 23) ​—⁠ಉರ್ದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ