ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಜನವರಿ 1ರಿಂದ ಏಪ್ರಿಲ್ 23, 2001ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬರ್ಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಗಂಭೀರವಾದ ತಪ್ಪೊಂದು ನಡೆದಿರುವಾಗ ಕೇವಲ ಭಾವಾವೇಶವು ನಮ್ಮನ್ನು ಕುರುಡುಗೊಳಿಸುವಂತೆ ಬಿಡಬಾರದಾಗಿರುವುದಾದರೂ, ನಮ್ಮ ವಿರುದ್ಧ ಪಾಪಮಾಡಿರುವ ವ್ಯಕ್ತಿಯು ಪಶ್ಚಾತ್ತಾಪವನ್ನು ವ್ಯಕ್ತಪಡಿಸುವಾಗ, ದಯಾಪೂರ್ವಕವಾಗಿ ಕ್ಷಮಿಸುವ ಮೂಲಕ ನಾವು ಯೋಸೇಫನ ಮಾದರಿಯನ್ನು ಅನುಕರಿಸಸಾಧ್ಯವಿದೆ. (ಆದಿ. 42:21; 45:4, 5) [w-KA99 1/1 ಪು. 31 ಪ್ಯಾರ. 2-3]
2. ಒಂದೇ ನಂಬಿಕೆಯಿರುವುದು ವಿವಾಹವೊಂದರಲ್ಲಿನ ಐಕ್ಯದ ಏಕಮಾತ್ರ ಅಂಶವಾಗಿದೆ. [fy ಪು. 21, 22 ಪ್ಯಾರ. 14]
3. ಕ್ರಿಸ್ತನ ಕೈಕೆಳಗೆ ದೇವರ ರಾಜ್ಯವು ಭೂಮಿಯಲ್ಲೆಲ್ಲ ತುಂಬಿಕೊಂಡು ರಾಜ್ಯಭಾರ ಮಾಡುವುದು ಎಂಬುದಾಗಿ ಹಬಕ್ಕೂಕನ ಪುಸ್ತಕವು ಪ್ರವಾದಿಸುತ್ತದೆ. [br78 ಪು. 17 ಪ್ಯಾರ. 1]
4. ಸ್ವರ್ಗೀಯ ಸ್ಥಾನದಿಂದ ಭೂಮಿಗೆ ಬರುವ ಅಪೂರ್ವ ನೇಮಕವನ್ನು ಸ್ವೀಕರಿಸಿ, ದೀನ ಮಾನವನಾಗಿ ಪರಿಣಮಿಸಿ, ದೇವದೂತರಿಗಿಂತಲೂ ಕೆಳಗಿನ ಸ್ಥಾನವನ್ನು ಪಡೆಯುವ ಮೂಲಕ ಯೇಸು ತನ್ನ ದೀನಭಾವವನ್ನು ತೋರಿಸಿದನು. (ಫಿಲಿ. 2:5-8; ಇಬ್ರಿ. 2:7) [w-KA99 2/1 ಪು. 6 ಪ್ಯಾರ. 3]
5. ಶೀಶಕನು ಯೆಹೂದದ ಮೇಲೆ ಮಾಡಿದ ಆಕ್ರಮಣವನ್ನು ಮತ್ತು “ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ” ಲೂಟಿಹೊಡೆದದ್ದನ್ನು ಪ್ರಾಕ್ತನಾಶಾಸ್ತ್ರವು ಊರ್ಜಿತಪಡಿಸಿದೆ. (2 ಪೂರ್ವ. 12:9) [ವಾರದ ಬೈಬಲ್ ವಾಚನ; w88 2/1 ಪು. 26 ಪ್ಯಾರ. 4ನ್ನು ನೋಡಿ.]
6. ಯೇಸುವು ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಿರುವಂತೆ, ‘ಪರಲೋಕವು ತೆರೆಯಲ್ಪಟ್ಟಿತು’ ಮತ್ತು ಇದು ಪರಲೋಕದಲ್ಲಿ ಮಾನವ ಪೂರ್ವದ ಜೀವಿತದ ಜ್ಞಾಪಕವು ಅವನಿಗೆ ಹಿಂದಕ್ಕೆ ಬಂದಿರಬೇಕು ಎಂಬರ್ಥದಲ್ಲಿ ಸ್ಫುಟವಾಗುತ್ತದೆ. (ಮತ್ತಾ. 3:16) [gt 12]
7. ಒಬ್ಬನು ಯಾವುದೇ ರೀತಿಯ ಪ್ರತಿಫಲವನ್ನು ಎದುರುನೋಡದೆ ದೇವರ ಸೇವೆಯನ್ನು ಮಾಡಬೇಕು. [w-KA99 4/15 ಪು. 16 ಪ್ಯಾರ. 1]
8. ಕೀರ್ತನೆ 103:2ರಲ್ಲಿ ದಾಖಲೆಯಾಗಿರುವ ಯೆಹೋವನ “ಮಾಡುವಿಕೆಗಳ” ಕುರಿತು ದಾವೀದನು ಸೂಚಿಸಿ ಹೇಳಿದಾಗ, ಅವನು ಯೆಹೋವನ ಭೌತಿಕ ಸೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದನು. [w-KA99 5/15 ಪು. 21 ಪ್ಯಾರ. 5-6]
9. ಆತ್ಮಿಕವಾಗಿ ಪ್ರಾಮುಖ್ಯವಾಗಿರುವ ವಿಷಯಗಳನ್ನು ಸಂವಾದಿಸುವುದಕ್ಕೆ ಕುಟುಂಬ ಅಭ್ಯಾಸವು ಏಕಮಾತ್ರ ಸಂದರ್ಭವಾಗಿರುವುದಿಲ್ಲ. [fy ಪು. 70 ಪ್ಯಾರ. 14]
10. ತನ್ನ ಗಂಡನು ಒಬ್ಬ ಉತ್ತಮ ತಲೆಯಾಗಿರುವಂತೆ ಹೆಂಡತಿಯು ಅವನಿಗೆ ಸಹಾಯಮಾಡಸಾಧ್ಯವಿಲ್ಲ. [fy ಪು. 34, 35 ಪ್ಯಾರ. 17, 18]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ವಿವಾಹ ಸಲಹೆ ನೀಡುವಿಕೆಯಲ್ಲಿ ಬೈಬಲನ್ನು ಪ್ರಮಾಣ ಗ್ರಂಥವೆಂದು ಅಂಗೀಕರಿಸುವುದು ನ್ಯಾಯಸಮ್ಮತವೇಕೆ? [fy ಪು. 10 ಪ್ಯಾರ. 18]
12. ಯೋಸೇಫನಿಗೆ ಇನ್ನೂ ಮರಿಯಳೊಂದಿಗೆ ಮದುವೆಯಾಗದಿರುವಾಗ ಅವನು ಆಕೆಯನ್ನು ‘ವಿಚ್ಛೇದಿಸಲು ಮನಸ್ಸುಮಾಡಿದ್ದು’ (NW) ಹೇಗೆ ಸಾಧ್ಯ? (ಮತ್ತಾ. 1:18, 19) [gt 4]
13. ಬಲದ ಕುರಿತಾಗಿ ಅರಸನಾದ ಉಜ್ಜೀಯನ ಅನುಭವದಿಂದ ನಾವು ಯಾವ ಗಂಭೀರವಾದ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? (2 ಪೂರ್ವ. 26:15-21) [ವಾರದ ಬೈಬಲ್ ವಾಚನ; w-KA99 12/1 ಪು. 26 ಪ್ಯಾರ. 1-2 ನ್ನು ನೋಡಿ.]
14. ಯೇಸು ತನ್ನ ಅಪೊಸ್ತಲರ ಕಾಲುಗಳನ್ನು ತೊಳೆಯುವ ಮೂಲಕ, ಸಂಸ್ಕಾರವನ್ನು ಸ್ಥಾಪಿಸುವ ಬದಲು, ಅವರಿಗೆ ಯಾವ ಪ್ರಭಾವಕಾರಿ ಪಾಠವನ್ನು ಕಲಿಸಿದನು? (ಯೋಹಾ. 13:4, 5) [w-KA99 3/1 ಪು. 31 ಪ್ಯಾರ. 1]
15. ಯೆಶಾಯನ ದಿನದಲ್ಲಿ 1 ಪೂರ್ವಕಾಲವೃತ್ತಾಂತ 14:8-17ರಲ್ಲಿರುವ ವೃತ್ತಾಂತವು ಏಕೆ ಆಸಕ್ತಿಕರವಾಗಿತ್ತು ಹಾಗೂ ಅದು ಇಂದು ಕ್ರೈಸ್ತಪ್ರಪಂಚಕ್ಕೂ ಏಕೆ ಆಸಕ್ತಿಕರವಾಗಿರಬೇಕು? (ಯೆಶಾ. 28:21) [ವಾರದ ಬೈಬಲ್ ವಾಚನ; w91 6/1 ಪು. 21 ಪ್ಯಾರ. 2-3 ನ್ನು ನೋಡಿ.]
16. ಅನೇಕ ಇಸ್ರಾಯೇಲ್ಯರಿಗೆ ಬಾಳನ ಆರಾಧನೆಯ ಯಾವ ಅಂಶವು ಹೆಚ್ಚು ಆಕರ್ಷಕವಾಗಿ ತೋರಿತು? [w-KA99 4/1 ಪು. 29 ಪ್ಯಾರ. 3-6]
17. ಯೆರೂಸಲೇಮಿಗೆ ನೀರಿನ ಸರಬರಾಯಿಯನ್ನು ಸಂರಕ್ಷಿಸಿ, ಅದನ್ನು ಹೆಚ್ಚಿಸಲು ಹಿಜ್ಕೀಯನು ಮಾಡಿದ ಕೆಲಸದಿಂದ ಯಾವ ಪ್ರಾಯೋಗಿಕ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? (2 ಪೂರ್ವ. 32:3, 4) [ವಾರದ ಬೈಬಲ್ ವಾಚನ; w-KA96 8/15 ಪು. 6 ಪ್ಯಾರ. 1-2 ನ್ನು ನೋಡಿ.]
18. ದೇವರನ್ನು ಸೇವಿಸುವ ಹಾಗೂ ಸುಳ್ಳು ಆರಾಧನೆಯ ವಿರುದ್ಧ ದೃಢವಾಗಿ ನಿಲ್ಲುವ ಇಂದಿನ ಯುವ ಜನರಿಗೆ ಯೋಷೀಯನ ಉದಾಹರಣೆಯು ಯಾವ ರೀತಿಯಲ್ಲಿ ಪ್ರೋತ್ಸಾಹನದಾಯಕವಾಗಿರಬಲ್ಲದು? (2 ಪೂರ್ವ. 34:3, 8, 33) [ವಾರದ ಬೈಬಲ್ ವಾಚನ; w90 8/1 ಪು. 5 ಪ್ಯಾರ. 2ನ್ನು ನೋಡಿ.]
19. ಬಬಿಲೋನ್ಯದಲ್ಲೇ ಉಳಿದಿದ್ದ ಯೆಹೂದ್ಯರೆಲ್ಲರೂ ಅಪನಂಬಿಗಸ್ತರಾಗಿದ್ದರೋ? ಮತ್ತು ಅದರಿಂದ ನಾವು ಯಾವ ಪ್ರಾಯೋಗಿಕ ಪಾಠವನ್ನು ಕಲಿತುಕೊಳ್ಳಬಹುದು? (ಎಜ್ರ 1:3-6) [ವಾರದ ಬೈಬಲ್ ವಾಚನ; w86 1/15 ಪು. 8 ಪ್ಯಾರ. 4, 7ನ್ನು ನೋಡಿ.]
20. 2 ಪೂರ್ವಕಾಲವೃತ್ತಾಂತ 5:13, 14ರಲ್ಲಿರುವ ವೃತ್ತಾಂತದಲ್ಲಿ, ಯೆಹೋವನು ತನ್ನ ಜನರ ಸುಮಧುರ ಸ್ತುತಿಗೀತೆಗಳನ್ನು ಕೇಳುತ್ತಿದ್ದನು ಹಾಗೂ ಅದನ್ನು ಕೇಳಿ ಸಂತೋಷಿಸಿದನು ಎಂಬುದಕ್ಕೆ ಯಾವ ಸೂಚನೆಯಿದೆ? [ವಾರದ ಬೈಬಲ್ ವಾಚನ; w-KA94 5/1 ಪು. 10 ಪ್ಯಾರ. 7ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಜೊತೆ ಕ್ರೈಸ್ತನಿಗೆ ಬುದ್ಧಿವಾದವನ್ನು ಕೊಡುತ್ತಿರುವವರು, ಅದು ಮಾನವ _________________________ ಮತ್ತು _________________________ ಮೇಲೆ ಅಲ್ಲ, ಬದಲಾಗಿ ದೈವಿಕ _________________________ ಮೇಲೆ ಆಧಾರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. (ಕೊಲೊ. 2:8) [w-KA99 1/15 ಪು. 22 ಪ್ಯಾರ. 1]
22. ಯೆಹೋವನ ಸಾಕ್ಷಿಗಳು ಆಸಕ್ತ ವ್ಯಕ್ತಿಗಳ _________________________ ಅವರೊಂದಿಗೆ ಉಚಿತ _________________________ ನಡಿಸುತ್ತಾರೆ. [br78 ಪು. 28 ಪ್ಯಾರ. 1]
23. ಗಿಡಗಳು ದೊಡ್ಡ ಮರಗಳಾಗಿ ಬೆಳೆದು ಹಣ್ಣುಕೊಡುವುದನ್ನು ಮುಳ್ಳುಗಳು ತಡೆಯುವಂತೆಯೇ, ಆತ್ಮಿಕ ಪ್ರಗತಿಯನ್ನು ಮಾಡುವುದರಿಂದ ಅನಿಯಂತ್ರಿತ _________________________ ಮತ್ತು _________________________ದ ಮೋಸಕರ ಶಕ್ತಿಯು ತಡೆಯಬಲ್ಲದು. (ಮತ್ತಾ. 13:19, 22) [w-KA99 3/15 ಪು. 22 ಪ್ಯಾರ. 5]
24. ಪ್ರಾಯಶಃ ಪ್ರಾಪಂಚಿಕ _________________________ ಅಥವಾ _________________________ಯನ್ನು ಪಡೆಯುವ ಆಶೆ ಉಂಟುಮಾಡುವ ಸಂದರ್ಭಗಳನ್ನು ನಮ್ಮ ಮುಂದೆ ಇಡುತ್ತಾ, ಪಿಶಾಚನು ನಮ್ಮನ್ನು _________________________ ಪ್ರಯತ್ನಿಸಬಹುದು. [gt 13]
25. ಸೊಲೊಮೋನನು ತಪ್ಪಿಹೋದ ವಿಷಯದಲ್ಲಿ, ಒಬ್ಬ ನಿಜ ಕ್ರೈಸ್ತನು ಯಶಸ್ವಿಯಾಗಬೇಕಾದರೆ, ಅವನು ತನ್ನ ಆರಾಧನೆಯಲ್ಲಿ ಎಲ್ಲಾ ರೀತಿಯ _________________________ ಅಥವಾ _________________________ ತೆಗೆದುಹಾಕಬೇಕು ಮತ್ತು ‘ಯೆಹೋವನನ್ನು ತನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕು’ ಎಂಬ _________________________ ಮಾತಿಗೆ ಅನುಸಾರವಾಗಿ ನಡೆಯಬೇಕು. (ಮತ್ತಾ. 22:37; 1 ಪೂರ್ವ. 28:9) [ವಾರದ ಬೈಬಲ್ ವಾಚನ; w86 6/1 ಪು. 19 ಪ್ಯಾರ. 17-18ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದಕ್ಕೆ ಸರಿಯಾದ ಉತ್ತರವನ್ನು ಆರಿಸಿರಿ:
26. 2 ಅರಸು 17:5, 6ರಲ್ಲಿರುವ ವೃತ್ತಾಂತವು (ಟಿಗ್ಲತ್-ಪೈಲೇಸರ್; ಶಲ್ಮನೆಸರ V; ಇಸಾರ್-ಹೆಡಾನ್) ಹೇಗೆ ಇಸ್ರಾಯೇಲಿನ ಉತ್ತರದ ಹತ್ತು ಗೋತ್ರದ ರಾಜ್ಯವನ್ನು ಅತಿಕ್ರಮಣಮಾಡಿದನು ಹಾಗೂ ಸಮಾರ್ಯದ ವಿರುದ್ಧ ಮೂರು ವರ್ಷಗಳ ಕಾಲ ಮುತ್ತಿಗೆಯನ್ನು ಆರಂಭಿಸಿದನು, ಅದು ಕೊನೆಗೆ ಸಾ. ಶ. ಪೂ (740; 607; 537)ರಲ್ಲಿ ಅಶ್ಶೂರ್ಯರ ಕೈವಶವಾಯಿತು ಎಂಬುದನ್ನು ವಿವರಿಸುತ್ತದೆ. [ವಾರದ ಬೈಬಲ್ ವಾಚನ; w88 2/15 ಪು. 27 ಪ್ಯಾರ. 1ನ್ನು ನೋಡಿ.]
27. ಬೈಬಲನ್ನು ಸುಮಾರು (3500; 2000; 1000) ವರುಷಗಳ ಹಿಂದೆ ಮುಗಿಸಲಾಯಿತಾದರೂ ಅದರ ಸಲಹೆಯು ನಿಜವಾಗಿಯೂ ಸದ್ಯೋಚಿತವಾಗಿದೆ. [fy ಪು. 12 ಪ್ಯಾರ. 23]
28. ವಿಮೋಚನಕಾಂಡ 4:11 ಸೂಚಿಸುವಂತೆ, ಯೆಹೋವ ದೇವರು ‘ಒಬ್ಬನು ಮೂಕನಾಗಿ ಮತ್ತೊಬ್ಬನು ಕಿವಡನಾಗಿ ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸುತ್ತಾನೆ’ ಎಂಬುದರ ಅರ್ಥ, ಆತನೇ (ಜನರಿಗಿರುವ ನ್ಯೂನತೆಗಳಿಗೆ ಕಾರಣನಾಗಿದ್ದಾನೆ; ಸೇವಾಸುಯೋಗಗಳಿಗಾಗಿ ಬೇರೆ ಬೇರೆ ರೀತಿಯವರನ್ನು ನೇಮಿಸುತ್ತಾನೆ; ಮಾನವರಲ್ಲಿ ನ್ಯೂನತೆಗಳಿರುವಂತೆ ಅನುಮತಿಸಿದ್ದಾನೆ). [w-KA99 5/1 ಪು. 28 ಪ್ಯಾರ. 2]
29. ಕ್ರೈಸ್ತ ಹೆತ್ತವರು (ದಯೆಯ; ದೃಢತೆಯ, ಕಠೋರತೆಯ) ಅಗತ್ಯವನ್ನು ಮನಗಾಣುತ್ತಿರುವಾಗಲೂ, ತಮ್ಮ ಮಕ್ಕಳನ್ನು ಶಿಸ್ತುಗೊಳಿಸುವಾಗ ಎಫೆಸ 6:4ರಲ್ಲಿ ನೀಡಲ್ಪಟ್ಟಿರುವ ಸಲಹೆಯನ್ನು ಮನಸ್ಸಿನಲ್ಲಿಡಲು ಪ್ರಯತ್ನಿಸುತ್ತಾರೆ. [fy ಪು. 60 ಪ್ಯಾರ. 21]
30. ಕ್ರೈಸ್ತಪ್ರಪಂಚದ ಮೂಲ ಬೋಧನೆಗಳು ಬೈಬಲಿನಲ್ಲಲ್ಲ, ಬದಲಿಗೆ ಪುರಾತನ (ನಿಜಾಂಶಗಳಲ್ಲಿ; ಮಿಥ್ಯೆಗಳಲ್ಲಿ; ಸಂಪ್ರದಾಯಗಳಲ್ಲಿ) ಆಧಾರಗೊಂಡಿವೆ. [pr ಪು. 17 ಪ್ಯಾರ. 4]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಅ. ಕೃ. 17:10, 11; ಜ್ಞಾನೋ. 25:11; ರೋಮಾ. 12:2; ಯೋಹಾ 2:15-17; ಮತ್ತಾ. 13:55, 56
31. ನಮ್ಮ ಆಲೋಚನಾರೀತಿಯನ್ನು ಬದಲಾಯಿಸಲು ಮತ್ತು ನಮ್ಮ ಮನಸ್ಸಿನಲ್ಲಿ ದೈವಿಕ ಸತ್ಯವನ್ನು ತುಂಬಲು ಹೃತ್ಪೂರ್ವಕ ಪ್ರಯತ್ನವು ಆವಶ್ಯಕ. [w-KA99 4/1 ಪು. 22 ಪ್ಯಾರ. 2]
32. ಸಲಹೆನೀಡುವಾಗ ಸರಿಯಾದ ಪದಗಳನ್ನು ಆಯ್ಕೆಮಾಡುವುದು ಬಹಳ ಪ್ರಾಮುಖ್ಯ. [w-KA99 1/15 ಪು. 23 ಪ್ಯಾರ. 1]
33. ಬೈಬಲಿನ ಸತ್ಯಗಳೆಂದು ನೀಡಲ್ಪಟ್ಟ ಸಂಬಂಧದಲ್ಲಿಯಾದರೋ, ಯೆಹೋವನ ಸಾಕ್ಷಿಗಳು ಪ್ರಥಮ ಶತಮಾನದ ಬೆರೋಯದವರು ತೆಗೆದುಕೊಂಡ ಪಥವನ್ನು ಬಲವಾಗಿ ಒಪ್ಪುತ್ತಾರೆ. [br78 ಪು. 3. ಪ್ಯಾರ. 4]
34. ಯೇಸುವಿಗೆ ಕಡಿಮೆಪಕ್ಷ ಆರು ಜನ ಕಿರಿಯ ಸಹೋದರ ಮತ್ತು ಸಹೋದರಿಯರಿದ್ದರು. [gt 9]
35. ಯೇಸು ಮಾರುವವರನ್ನು ಮತ್ತು ಚಿನಿವಾರರನ್ನು ದೇವಾಲಯದಿಂದ ಹೊರಗಟ್ಟುವುದನ್ನು ಶಿಷ್ಯರು ನೋಡಿದಾಗ, ದೇವರ ಕುಮಾರನ ಒಂದು ಪ್ರವಾದನೆಯು ಅವರ ನೆನಪಿಗೆ ಬರುತ್ತದೆ. [gt 16]