ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/01 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2001 ನಮ್ಮ ರಾಜ್ಯದ ಸೇವೆ
2001 ನಮ್ಮ ರಾಜ್ಯದ ಸೇವೆ
km 1/01 ಪು. 7

ಪ್ರಕಟನೆಗಳು

◼ ಜನವರಿ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಬ್ರೋಷರುಗಳು: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಯೆಹೋವನ ಸಾಕ್ಷಿಗಳು​—⁠ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್‌). 192 ಪುಟದ ಹಳೆಯ ಪುಸ್ತಕಗಳನ್ನು ಸಹ ನೀಡಬಹುದು. ಫೆಬ್ರವರಿ: ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌), ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಅಥವಾ ಸಭೆಯ ಸ್ಟಾಕಿನಲ್ಲಿರುವ ಯಾವುದಾದರೂ 192 ಪುಟದ ಹಳೆಯ ಪುಸ್ತಕ. ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆಯಲ್ಲಿ ಬೈಬಲ್‌ ಅಭ್ಯಾಸಗಳನ್ನು ನಡೆಸಲು ವಿಶೇಷವಾದ ಪ್ರಯತ್ನವನ್ನು ಮಾಡಲಾಗುವುದು. ಏಪ್ರಿಲ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಯನ್ನು ಮಾಡಿದಾಗ ಆಸಕ್ತಿ ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕವನ್ನು ನೀಡಿ.

◼ ಇಸವಿ 2002ರ ಜ್ಞಾಪಕಾಚರಣೆಯು, 2001ರ ಕ್ಯಾಲೆಂಡರ್‌ನಲ್ಲಿ ಸೂಚಿಸಲ್ಪಟ್ಟಿರುವಂತೆ ಮಾರ್ಚ್‌ 22ರ ಶುಕ್ರವಾರದ ಬದಲು, ಮಾರ್ಚ್‌ 28ರ ಗುರುವಾರ ಸೂರ್ಯಾಸ್ತಮಾನದ ನಂತರ ಆಚರಿಸಲ್ಪಡುವುದು ಎಂಬುದನ್ನು ದಯವಿಟ್ಟು ಗಮನಿಸಿ. ಈ ಮುಂಚಿತವಾದ ನೋಟಿಸು ಕೊಡಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿದ್ದು, ಬೇರೆ ಹಾಲ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಬೇಕಾಗಿರುವಲ್ಲಿ, ಸಹೋದರರು ಲಭ್ಯವಿರುವ ಹಾಲ್‌ಗಳಿಗಾಗಿ ಮಾಡಬೇಕಾದ ಕಾಯ್ದಿರಿಸುವಿಕೆ ಇಲ್ಲವೇ ಕಾಂಟ್ರ್ಯಾಕ್ಟ್‌ ಅನ್ನು ಮುಂಚಿತವಾಗಿ ಮಾಡಬಹುದಾಗಿದೆ. ಜ್ಞಾಪಕಾಚರಣೆಯು ಶಾಂತಿಯಿಂದ ಮತ್ತು ಕ್ರಮಬದ್ಧವಾಗಿ ನಡೆಯಸಾಧ್ಯವಾಗುವಂತೆ, ನಿಗದಿತ ಕಟ್ಟಡದೊಳಗೆ ಬೇರೆ ಯಾವುದೇ ರೀತಿಯ ಕಾರ್ಯಕ್ರಮಗಳ ಗಲಾಟೆಯು ಇರದಂತೆ ನೋಡಿಕೊಳ್ಳಲು, ಹಾಲ್‌ನ ನಿರ್ವಾಹಕ ಮಂಡಲಿಯೊಂದಿಗೆ ಹಿರಿಯರು ಒಪ್ಪಂದವನ್ನು ಮಾಡಿಕೊಂಡಿರಬೇಕು. ಈ ಸಂದರ್ಭವು ತುಂಬ ಪ್ರಾಮುಖ್ಯವಾಗಿರುವುದರಿಂದ, ಜ್ಞಾಪಕಾಚರಣೆಯ ಭಾಷಣಕರ್ತನನ್ನು ನೇಮಿಸುವಾಗ, ಹಿರಿಯರ ಮಂಡಲಿಯು ಒಬ್ಬ ಸಹೋದರನನ್ನೇ ಪ್ರತಿವರ್ಷ ಆಯ್ಕೆಮಾಡುವುದು ಅಥವಾ ತಮ್ಮೊಳಗೆ ಸರದಿಗನುಸಾರ ಭಾಷಣವನ್ನು ಕೊಡುವ ಬದಲು, ಹೆಚ್ಚು ಅರ್ಹರಾದ ಹಿರಿಯರಲ್ಲಿ ಒಬ್ಬರನ್ನು ಆಯ್ಕೆಮಾಡಬೇಕು. ಅರ್ಹ ಹಿರಿಯರಲ್ಲಿ ಭಾಷಣ ನೀಡಲು ಸಾಧ್ಯವಿರುವ ಅಭಿಷಿಕ್ತ ಸಹೋದರರೊಬ್ಬರು ಇರುವುದಾದರೆ ವಿನಾಯಿತಿ ನೀಡಲಾಗುವುದು.

◼ ಜನವರಿ 8ರ ವಾರದ ಸೇವಾ ಕೂಟಕ್ಕೆ ಹಾಜರಾಗುವ ಎಲ್ಲ ದೀಕ್ಷಾಸ್ನಾನ ಪಡೆದುಕೊಂಡ ಪ್ರಚಾರಕರು ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌/ರಿಲೀಸ್‌ ಕಾರ್ಡನ್ನು ಮತ್ತು ಅವರ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡನ್ನು ಪಡೆದುಕೊಳ್ಳಬಹುದು.

◼ ಫೆಬ್ರವರಿಯಲ್ಲಿ ಪ್ರಾರಂಭಿಸುತ್ತಾ, ಮಾರ್ಚ್‌ 4ರ ಮುಂಚೆ, “ನ್ಯಾಯತೀರ್ಪಿನ ದಿನ​—⁠ಭಯಪಡುವ ಸಮಯವೋ ನಿರೀಕ್ಷೆಯ ಸಮಯವೋ?” ಎಂಬ ಹೊಸ ಬಹಿರಂಗ ಭಾಷಣ ಸರ್ಕಿಟ್‌ ಮೇಲ್ವಿಚಾರಕರಿಂದ ಕೊಡಲಾಗುವುದು.

◼ ಈ ವರ್ಷ ಭಾನುವಾರ, ಜನವರಿ 8ರ, ಸೂರ್ಯಾಸ್ತಮಾನದ ನಂತರ ಜ್ಞಾಪಕಾಚರಣೆ ಇರುವುದರಿಂದ, ಸಭೆಗಳು ತಮಗೆ ಅನುಕೂಲವಾಗುವಂಥ ರೀತಿಯಲ್ಲಿ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ಭಾಷಣವು ಸ್ವಲ್ಪ ಬೇಗನೆ ಪ್ರಾರಂಭವಾಗಬಹುದಾದರೂ, ಜ್ಞಾಪಕದ ಕುರುಹುಗಳನ್ನು ಸೂರ್ಯಾಸ್ತಮಾನದ ಮುಂಚೆ ದಾಟಿಸಬಾರದು. ನಿಮ್ಮ ಪ್ರದೇಶದಲ್ಲಿ ಸೂರ್ಯಾಸ್ತಮಾನವು ಯಾವಾಗ ಆಗುತ್ತದೆ ಎಂಬುದರ ಬಗ್ಗೆ ಸ್ಥಳಿಕ ಮೂಲಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಿರಿ. ಆ ದಿನ ಕ್ಷೇತ್ರ ಸೇವೆಯನ್ನು ಬಿಟ್ಟು ಕೂಟಗಳು ಇಲ್ಲದಿರುವ ಕಾರಣ, ಕಾವಲಿನಬುರುಜು ಅಭ್ಯಾಸವನ್ನು ಬೇರೊಂದು ಸಮಯದಲ್ಲಿ ನಡೆಸಲು ಸೂಕ್ತವಾದ ಏರ್ಪಾಡುಗಳನ್ನು ಮಾಡಬೇಕು. ಸರ್ಕಿಟ್‌ ಮೇಲ್ವಿಚಾರಕರು ಸ್ಥಳಿಕ ಪರಿಸ್ಥಿತಿಗಳಿಗನುಸಾರ ತಮ್ಮ ಕೂಟಗಳ ಸಮಯವನ್ನು ಬದಲಾಯಿಸಬೇಕಾಗುವುದು. ಪ್ರತಿ ಸಭೆಯು ತಮ್ಮ ಸ್ವಂತ ಜ್ಞಾಪಕಾಚರಣೆಯನ್ನು ನಡೆಸುವುದು ಒಳ್ಳೆಯದಾಗಿರುವುದಾದರೂ, ಇದು ಯಾವಾಗಲೂ ಸಾಧ್ಯವಾಗುವುದಿಲ್ಲ. ಒಂದೇ ರಾಜ್ಯ ಸಭಾಗೃಹವನ್ನು ಹಲವಾರು ಸಭೆಗಳು ಉಪಯೋಗಿಸುತ್ತಿರುವಾಗ, ಆ ಸಂಜೆಯಂದು ಒಂದು ಅಥವಾ ಹೆಚ್ಚಿನ ಸಭೆಗಳು ಜ್ಞಾಪಕಾಚರಣೆಯನ್ನು ಬೇರೆಲ್ಲಾದರೂ ನಡೆಸುವುದು ಒಳ್ಳೆಯದು. ಸಾಧ್ಯವಿರುವಲ್ಲಿ, ಹಾಜರಿರುವವರನ್ನು ಅಭಿವಂದಿಸಲು, ಹೊಸದಾಗಿ ಆಸಕ್ತಿ ತೋರಿಸುತ್ತಿರುವವರನ್ನು ಪ್ರೋತ್ಸಾಹಿಸಲು ಮತ್ತು ಆ ಸಂದರ್ಭದಿಂದ ಸಂಪೂರ್ಣ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ಕಾರ್ಯಕ್ರಮಗಳ ನಡುವೆ ಕಡಿಮೆಪಕ್ಷ 40 ನಿಮಿಷಗಳಷ್ಟು ಸಮಯವನ್ನು ಅನುಮತಿಸುವಂತೆ ನಾವು ಸಲಹೆ ನೀಡುತ್ತೇವೆ. ಪ್ರಯಾಣಿಕರನ್ನು ಇಳಿಸುವುದು, ಹತ್ತಿಸಿಕೊಳ್ಳುವುದನ್ನು ಸೇರಿಸಿ, ಟ್ರ್ಯಾಫಿಕ್‌ ಮತ್ತು ಪಾರ್ಕಿಂಗ್‌ ವಿಷಯಗಳ ಕುರಿತು ಗಮನಕೊಡಬೇಕು. ಸ್ಥಳಿಕವಾಗಿ ಯಾವ ಏರ್ಪಾಡುಗಳು ಉತ್ತಮವಾಗಿರುವುವು ಎಂಬುದನ್ನು ಹಿರಿಯರ ಮಂಡಳಿಯು ನಿರ್ಧರಿಸಬೇಕು.

◼ 2001ರ ಜ್ಞಾಪಕಾಚರಣೆಯ ಸಮಯದಲ್ಲಿ ವಿಶೇಷ ಬಹಿರಂಗ ಭಾಷಣವು ಭಾನುವಾರ, ಏಪ್ರಿಲ್‌ 1ರಂದು ನೀಡಲಾಗುವುದು. ಭಾಷಣದ ವಿಷಯವು, “ಯಾರು ರಕ್ಷಿಸಲ್ಪಡುವರು?” ಎಂದಾಗಿರುವುದು. ಇದರ ಹೊರಮೇರೆಯನ್ನು ಒದಗಿಸಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕನ ಸಂದರ್ಶನ, ಸರ್ಕಿಟ್‌ ಸಮ್ಮೇಳನ, ಅಥವಾ ವಿಶೇಷ ಸಮ್ಮೇಳನವಿರುವ ಸಭೆಗಳಿಗೆ ಅದರ ಮುಂದಿನ ವಾರ, ಏಪ್ರಿಲ್‌ 9ರಂದು ವಿಶೇಷ ಭಾಷಣ ನೀಡಲಾಗುವುದು. ಯಾವ ಸಭೆಯಲ್ಲಿಯೂ 2001, ಏಪ್ರಿಲ್‌ 1ರ ಮುಂಚೆ ಈ ವಿಶೇಷ ಭಾಷಣವು ನೀಡಲ್ಪಡಬಾರದು.

◼ 2001, ಜನವರಿ 8ರಿಂದ ಪ್ರಾರಂಭಿಸಿ, ಮಾಸಿಕ ಸಂಚಿಕೆಯೋಪಾದಿ ಉರ್ದು ಭಾಷೆಯಲ್ಲಿ ಎಚ್ಚರ! ಪತ್ರಿಕೆಯು ಸಿಗುವುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ