ಪ್ರಕಟನೆಗಳು
◼ ಅಕ್ಟೋಬರ್ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯು ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು. ನವೆಂಬರ್: ರಾಜ್ಯ ವಾರ್ತೆ ನಂ. 36ರ ವಿತರಣೆ. ಸಭೆಗಳು ತಮ್ಮ ಟೆರಿಟೊರಿಯಲ್ಲಿರುವ ಪ್ರತಿಯೊಂದು ಮನೆಯಲ್ಲಿ ರಾಜ್ಯ ವಾರ್ತೆ ನಂ. 36ನ್ನು ನೀಡಿದ ಬಳಿಕ, ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ನೀಡಬಹುದು. ಈ ಬ್ರೋಷರ್ ಅಥವಾ ಪುಸ್ತಕವು ಜನರ ಬಳಿ ಈಗಾಗಲೇ ಇರುವುದಾದರೆ, ಸದಾ ಜೀವಿಸಬಲ್ಲಿರಿ ಅಥವಾ ಸೃಷ್ಟಿ (ಇಂಗ್ಲಿಷ್) ಪುಸ್ತಕವನ್ನು ಕೊಡಬಹುದು. ಡಿಸೆಂಬರ್: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ. ಜನವರಿ: ಬ್ರೋಷರುಗಳು: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಜೆಹೋವಾಸ್ ವಿಟ್ನೆಸಸ್ ಯುನೈಟೆಡ್ಲಿ ಡೂಯಿಂಗ್ ಗಾಡ್ಸ್ ವಿಲ್ ವರ್ಲ್ಡ್‌ವೈಡ್. 192 ಪುಟದ ಹಳೆಯ ಪುಸ್ತಕಗಳನ್ನು ಸಹ ನೀಡಬಹುದು.
◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ “2001ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್” ಇದೆ. ಇದನ್ನು 2001ರ ಆದ್ಯಂತ ರೆಫರೆನ್ಸ್‌ಗಾಗಿ ಇಡಿರಿ.
◼ ಜನವರಿ 1ರಿಂದ ನಿಮ್ಮ ಸಭೆಯ ಕೂಟದ ಸಮಯಗಳು ಬದಲಾಗುವುದಾದರೆ, ಸಭೆಯ ಸೆಕ್ರಿಟರಿಯು ಕಾಂಗ್ರಿಗೇಷನ್ ಮೀಟಿಂಗ್ ಇನ್‌ಫರ್ಮೇಶನ್ ಮತ್ತು ಹ್ಯಾಂಡ್‌ಬಿಲ್ ಫಾರ್ಮ್ (S-5)ನ ಮೂಲಕ ಬದಲಾವಣೆಗಳನ್ನು ಸೊಸೈಟಿಗೆ ತಿಳಿಸತಕ್ಕದ್ದು. ಅಗತ್ಯವಿದ್ದಲ್ಲಿ, ಅದೇ ಫಾರ್ಮ್‌ನ ಮೇಲೆ ಹ್ಯಾಂಡ್‌ಬಿಲ್‌ಗಳಿಗಾಗಿ ಆರ್ಡರ್ ಮಾಡಸಾಧ್ಯವಿದೆ. ಹ್ಯಾಂಡ್‌ಬಿಲ್‌ಗಳನ್ನು ಪಡೆದುಕೊಳ್ಳಲು ಇಷ್ಟಪಡುವ ಎಂಟು ವಾರಗಳ ಮುಂಚೆ ಅವುಗಳನ್ನು ಆರ್ಡರ್ ಮಾಡತಕ್ಕದ್ದು.