ಪ್ರಕಟನೆಗಳು
◼ ಜುಲೈ ಮತ್ತು ಆಗಸ್ಟ್: ಈ ಕೆಳಗೆ ತಿಳಿಸಲ್ಪಟ್ಟಿರುವ ಯಾವುದೇ 32-ಪುಟದ ಬ್ರೋಷರುಗಳನ್ನು ಉಪಯೋಗಿಸಬಹುದು: ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರಲಿರುವ ಸರಕಾರ (ಇಂಗ್ಲಿಷ್), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು—ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್) ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯ ಬಿಡಿ ಪ್ರತಿಗಳು. ಪುನರ್ಭೇಟಿಗಳನ್ನು ಮಾಡುವಾಗ ಆಸಕ್ತಿಯು ಕಂಡುಬರುವಲ್ಲಿ, ಚಂದಾಗಳನ್ನು ನೀಡಬಹುದು.
◼ ಸೆಪ್ಟೆಂಬರ್ ತಿಂಗಳಿನಿಂದ ಸರ್ಕಿಟ್ ಮೇಲ್ವಿಚಾರಕರು, “ತಕ್ಕಡಿಯಲ್ಲಿ ತೂಗಲ್ಪಟ್ಟಿರುವ ಮಾನವಾಳ್ವಿಕೆ” ಎಂಬ ಬಹಿರಂಗ ಭಾಷಣವನ್ನು ಕೊಡುವರು.
◼ ಪುನಃ ಲಭ್ಯವಿರುವ ಹೊಸ ಪ್ರಕಾಶನಗಳು:
ನಸೀಬ್ ನಮ್ಮ ಜೀವಿತಗಳನ್ನು ಆಳುತ್ತದೊ? ಅಥವಾ ಖುದಾ ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತಾನೊ? (ಟ್ರ್ಯಾಕ್ಟ್ ನಂ. 71), ಸರ್ವಶ್ರೇಷ್ಠ ಹೆಸರು (ಟ್ರ್ಯಾಕ್ಟ್ ನಂ. 72), ಯೆಹೋವನ ಸಾಕ್ಷಿಗಳು ಯಾರು? (ಟ್ರ್ಯಾಕ್ಟ್ ನಂ. 73) ಮತ್ತು ಜಹನ್ನುಮ್ ದೈವಿಕ ನ್ಯಾಯದ ಒಂದು ಭಾಗವೊ? (ಟ್ರ್ಯಾಕ್ಟ್ ನಂ. 74)—ಒರಿಯಾ
◼ ತಿಂಗಳಿಗೆ ಕೇವಲ ಒಂದು ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಅನ್ನು ಮಾತ್ರ ಸೊಸೈಟಿಗೆ ಕಳುಹಿಸುವಂತೆ ಸಭೆಗಳಿಗೆ ವಿನಂತಿಸಲಾಗಿದೆ. ಈ ಫಾರ್ಮ್ ಅನ್ನು ಸೊಸೈಟಿಗೆ ಕಳುಹಿಸಿದ ನಂತರ, ಯಾವುದೇ ವ್ಯಕ್ತಿಯು ಸಾಹಿತ್ಯಗಳಿಗಾಗಿ ಸಭೆಗೆ ವಿನಂತಿಸುವಲ್ಲಿ, ಅದನ್ನು ಮುಂದಿನ ತಿಂಗಳಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್‌ನಲ್ಲಿ ಸೇರಿಸಬೇಕು.
◼ ಸರ್ವಿಸ್ ಫಾರ್ಮ್‌ಗಳ ಅಗತ್ಯವಿರುವ ಸಭೆಗಳು, ಅದನ್ನು ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-14)ನಲ್ಲಿ ತಮ್ಮ ಸಾಹಿತ್ಯದ ವಿನಂತಿಯೊಂದಿಗೆ ಆರ್ಡರ್ ಮಾಡತಕ್ಕದ್ದು.