ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/00 ಪು. 1
  • ‘ನಾವು ಹೇಳದೆ ಇರಲಾರೆವು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ನಾವು ಹೇಳದೆ ಇರಲಾರೆವು’
  • 2000 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವರ ವಾಕ್ಯವನ್ನು ಧೈರ್ಯದಿಂದ ಹೇಳುತ್ತಾ ಮುಂದುವರಿಯಿರಿ
    ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ
  • ‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಸುವಾರ್ತೆಯನ್ನು ಧೈರ್ಯದಿಂದ ಸಾರಿರಿ
    1990 ನಮ್ಮ ರಾಜ್ಯದ ಸೇವೆ
  • “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
2000 ನಮ್ಮ ರಾಜ್ಯದ ಸೇವೆ
km 7/00 ಪು. 1

‘ನಾವು ಹೇಳದೆ ಇರಲಾರೆವು’

1 ಸಾರುವ ಕೆಲಸವು ಹೇಗೆ ನಡೆಯುತ್ತಿದೆಯೆಂಬುದನ್ನು ಯೇಸು ಕ್ರಿಸ್ತನು ತುಂಬ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದಾನೆ. (ಮತ್ತಾ. 28:20; ಮಾರ್ಕ 13:10) ಈಗ ಸುಮಾರು 60 ಲಕ್ಷ ಸಕ್ರಿಯ ಪ್ರಚಾರಕರು 234 ದೇಶಗಳಲ್ಲಿ ಸಾಕ್ಷಿಕಾರ್ಯವನ್ನು ನಡೆಸುತ್ತಾ ಇರುವುದಾದರೂ, ನಮ್ಮ ಸಾಕ್ಷಿಕಾರ್ಯವು ಮುಗಿದಿದೆಯೆಂದು ನಾವು ನೆನಸಬಾರದು. ಯಾಕೆಂದರೆ, ನಮ್ಮ ಸಾರುವ ಕೆಲಸವು ಮುಗಿದಿದೆಯೆಂದು ದೇವರು ಘೋಷಿಸುವ ವರೆಗೂ, ನಾವು ಕಲಿತಿರುವ ಸಂಗತಿಗಳನ್ನು ಇತರರಿಗೆ ‘ಹೇಳದೆ ಇರಲಾರೆವು.’—ಅ. ಕೃ. 4:20.

2 ದೇವರಾತ್ಮದ ಮೇಲೆ ಆತುಕೊಳ್ಳಿರಿ: ನಮ್ಮನ್ನು ನಿರುತ್ಸಾಹಗೊಳಿಸುವ ಉದ್ದೇಶದಿಂದ ಸೈತಾನನು ನಮ್ಮ ಮೇಲೆ ತುಂಬ ಒತ್ತಡವನ್ನು ಹಾಕುತ್ತಾನೆ. (ಪ್ರಕ. 12:17) ನಮ್ಮ ಸ್ವಂತ ಅಪರಿಪೂರ್ಣ ಶರೀರವು ಸಹ ನಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತಾ ಇರುತ್ತದೆ. ಇವೆಲ್ಲವೂ, ಅತಿ ಪ್ರಾಮುಖ್ಯವಾಗಿರುವ ಸಾರುವ ಕೆಲಸದಿಂದ ನಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಹಾಗಿದ್ದರೂ ನಾವು ಯೆಹೋವನಲ್ಲಿ ಭರವಸೆಯನ್ನಿಡುವುದಾದರೆ, ನಾವು ಯಾವುದೇ ತಡೆಯನ್ನು ಜಯಿಸುವಂತೆ ಆತನ ಆತ್ಮವು ನಮಗೆ ಸಹಾಯಮಾಡಬಲ್ಲದು.

3 ಪ್ರಥಮ ಶತಮಾನದ ಕ್ರೈಸ್ತ ಸಭೆಯು ಸಹ ತೀವ್ರವಾದ ಹಿಂಸೆಗೆ ಗುರಿಯಾಯಿತು. ಆಗ ಸಹೋದರರು, ದೇವರ ವಾಕ್ಯವನ್ನು ತುಂಬ ಧೈರ್ಯದಿಂದ ಸಾರಲಿಕ್ಕಾಗಿ ಸಹಾಯವನ್ನು ನೀಡುವಂತೆ ದೇವರಿಗೆ ಪ್ರಾರ್ಥಿಸಿದರು. ಯೆಹೋವನು ಅವರ ಪ್ರಾರ್ಥನೆಗಳನ್ನು ಆಲಿಸಿದನು. ಆತನು ತನ್ನ ಆತ್ಮವನ್ನು ಅವರಿಗೆ ಕೊಟ್ಟನು ಮತ್ತು ಸಾರುವುದನ್ನು ಮುಂದುವರಿಸಲು ಅವರಿಗೆ ಬೇಕಾಗಿದ್ದ ಹುರುಪು ಮತ್ತು ದೃಢಸಂಕಲ್ಪವನ್ನು ಸಹ ಕೊಟ್ಟನು. ಇದರಿಂದಾಗಿ, ಅವರು ಧೈರ್ಯದಿಂದ ಸುವಾರ್ತೆಯನ್ನು ಸಾರುತ್ತಾ ಮುಂದುವರಿದರು.—ಅ. ಕೃ. 4:29, 31; 5:42.

4 ಎದೆಗುಂದಿಸುವ ಮಾತುಗಳಿಗೆ ಭಯಪಡಬೇಡಿರಿ: ಜನರಿಗೆ ನಮ್ಮ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯ ಅಥವಾ ನಮ್ಮ ಕುರಿತಾದ ಅಪಪ್ರಚಾರವು, ನಮ್ಮಲ್ಲಿ ಭಯವನ್ನು ಹುಟ್ಟಿಸಬಹುದು. ಆದರೆ, ಅ. ಕೃತ್ಯಗಳು 5:29-32ರಲ್ಲಿರುವ ಪೇತ್ರನ ಮತ್ತು ಬೇರೆ ಅಪೊಸ್ತಲರ ಧೈರ್ಯದ ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ನ್ಯಾಯಶಾಸ್ತ್ರಿಯಾದ ಗಮಲಿಯೇಲನು ಒಪ್ಪಿಕೊಂಡಂತೆಯೇ, ದೇವರ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾವು ಮಾಡುತ್ತಿರುವ ಈ ಕೆಲಸವು ನಮ್ಮ ಸ್ವಂತ ಶಕ್ತಿಯಿಂದ ಪೂರೈಸಲ್ಪಡುತ್ತಿಲ್ಲ. ಈ ಮಹಾ ಕೆಲಸಕ್ಕೆ ದೇವರ ಬೆಂಬಲವಿದೆ, ಮತ್ತು ಆತನೊಬ್ಬನೇ ಅದನ್ನು ಪೂರೈಸಬಲ್ಲನು!—ಜೆಕ. 4:6.

5 ಸುವಾರ್ತೆಯನ್ನು ಹುರುಪಿನಿಂದ ಘೋಷಿಸಲು ಸಹಾಯ ಮಾಡುವಂತೆ ನಾವು ದಿನಾಲೂ ಯೆಹೋವನಿಗೆ ಪ್ರಾರ್ಥಿಸೋಣ. ರಾಜ್ಯದ ಸಂದೇಶವು ನಮ್ಮ ಎಲುಬುಗಳಲ್ಲಿ ಉರಿಯುವ ಬೆಂಕಿಯಂತೆ ಇದೆಯೆಂದು ಯೆರೆಮೀಯನಂತೆ ನಾವು ಸಹ ಹೇಳುವಂತಾಗಲಿ. (ಯೆರೆ. 20:9) ನಾವು ಈ ವಿಷಯದಲ್ಲಿ ಮೌನವಾಗಿರಲು ಸಾಧ್ಯವೇ ಇಲ್ಲ!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ