ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 2000ದ ಜನವರಿ 3ರಿಂದ ಏಪ್ರಿಲ್ 17ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಯೆಹೋವನ ಆಶೀರ್ವಾದಗಳನ್ನು ಪಡೆದುಕೊಳ್ಳುವ ಮೊದಲು ಕೆಲವೊಮ್ಮೆ ನಾವು ಕಾಯಬೇಕು, ಯಾಕೆಂದರೆ ನಮ್ಮ ಸನ್ನಿವೇಶವು ಯೆಹೋವನಿಗೆ ತಿಳಿದಿದೆ ಮತ್ತು ಅತ್ಯಂತ ಪ್ರಯೋಜನಕರವಾಗಿರುವಾಗ ಆತನು ಪ್ರತಿಯೊಂದು ಆವಶ್ಯಕತೆಯನ್ನು ಪೂರೈಸುತ್ತಾನೆ. (ಕೀರ್ತ. 145:16; ಯಾಕೋ. 1:17) [w-KA98 1/1 ಪು. 23 ಪ್ಯಾರ. 6]
2. ಲೈಂಗಿಕ ವಿಷಯಗಳಲ್ಲಿ ಸಾಕಷ್ಟು ಮಟ್ಟಿಗೆ ನಮ್ಮ ಮಕ್ಕಳಿಗೆ ಬೋಧಿಸುವುದು ಕೇವಲ ಸರಿಯಾದ ಸಂಗತಿಯಾಗಿದೆ ಮಾತ್ರವಲ್ಲ ದಯಾಪರವಾದದ್ದೂ ಆಗಿದೆ. [w-KA98 2/15 ಪು. 8]
3. ಇಂದು ನಾವು ಬರೇ ಯೆಹೋವನ ಮಾತುಗಳ ವಾಚನದಿಂದ ಆತ್ಮಿಕವಾಗಿ ಪೋಷಿಸಲ್ಪಡುತ್ತೇವೆ. (ಧರ್ಮೋ. 8:3) [ವಾರದ ಬೈಬಲ್ ವಾಚನ; w-KA86 1/1 ಪು. 13-14 ಪ್ಯಾರ. 15, 17ನ್ನು ನೋಡಿರಿ.]
4. ಒಬ್ಬ ಕ್ರೈಸ್ತನು ಹಣವನ್ನು ಸಾಲವಾಗಿ ಕೊಡುವಾಗ ಬಡ್ಡಿಯನ್ನು ಕೇಳುವುದು ಪ್ರೀತಿಪರವಲ್ಲವೆಂದು, ಧರ್ಮೋಪದೇಶಕಾಂಡ 23:20ರಲ್ಲಿರುವ ಮೋಶೆಯ ಧರ್ಮಶಾಸ್ತ್ರದಲ್ಲಿ ಎತ್ತಿತೋರಿಸಲ್ಪಟ್ಟಿರುವ ಮೂಲತತ್ವವು ತೋರಿಸುತ್ತದೆ. [ವಾರದ ಬೈಬಲ್ ವಾಚನ; it-1, ಪು. 1212 ಪ್ಯಾರ. 5; it-2, ಪು. 259 ಪ್ಯಾರ. 11; w-KA87 7/1 ಪು. 8 ಪ್ಯಾರ. 9ನ್ನು ನೋಡಿ.]
5. ಯೆಹೋಶುವ ಮತ್ತು ಕಾಲೇಬರ ಆಶಾವಾದಿ ವರದಿಯು, ವಾಗ್ದತ್ತ ದೇಶವನ್ನು ಜಯಿಸುವುದರಲ್ಲಿ ಬರುವ ಯಾವುದೇ ತಡೆಗಳನ್ನು ತೆಗೆದುಹಾಕಲು ಇಸ್ರಾಯೇಲ್ಯರಿಗಿರುವ ಶಕ್ತಿ ಮತ್ತು ದೃಢನಿರ್ಧಾರದ ಮೇಲೆ ಅವರಿಗಿದ್ದ ನಂಬಿಕೆಯ ಮೇಲೆ ಆಧಾರಿತವಾಗಿತ್ತು. (ಅರಣ್ಯ. 13:30) [w-KA98 2/1 ಪು. 5 ಪ್ಯಾರ. 4]
6. ತಿಮೊಥೆಯನಿಗೆ ಬರೆದ ಒಂದನೆಯ ಪತ್ರದಲ್ಲಿ, ಪೌಲನು “ವರ”ಕ್ಕೆ ಸೂಚಿಸುತ್ತಿದ್ದಾಗ, ತಿಮೊಥೆಯನು ಪವಿತ್ರಾತ್ಮದಿಂದ ಅಭಿಷಿಕ್ತನಾಗಿ, ಅವನ ಮುಂದೆ ಇದ್ದ ಸ್ವರ್ಗೀಯ ಬಹುಮಾನದ ಕುರಿತಾಗಿ ಅವನು ತಿಮೊಥೆಯನಿಗೆ ನೆನಪು ಹುಟ್ಟಿಸುತ್ತಿದ್ದನು. (1 ತಿಮೊ. 4:14) [w-KA98 2/15 ಪು. 25 ಪ್ಯಾರ. 1]
7. ವ್ಯಭಿಚಾರವು ಕ್ಷಮಿಸಲ್ಪಡಬಹುದಾದರೂ, ನಿರ್ದೋಷಿಯಾದ ಜೊತೆಯ ಕಡೆಯಿಂದ ಅದು ವಿವಾಹ ವಿಚ್ಛೇದನಕ್ಕೆ ನ್ಯಾಯಸಮ್ಮತವಾದ ಶಾಸ್ತ್ರೀಯ ಆಧಾರವಾಗಿದೆ. (ಮತ್ತಾಯ 5:32) [kl ಅಧ್ಯಾ. 13 ಪ್ಯಾರ. 13]
8. ಯೇಸು ಸಭೆಯನ್ನು ಸದಾ ಉಪಚರಿಸಿರುವಂತೆ ಒಬ್ಬ ಗಂಡನು ತನ್ನ ಹೆಂಡತಿಯನ್ನು ಅತ್ಯಂತ ಸೌಮ್ಯತೆ, ಪ್ರೀತಿ ಮತ್ತು ವಿವೇಚನೆಯಿಂದ ಉಪಚರಿಸುವಾಗ ಅವನು ಕ್ರಿಸ್ತನಿಗೆ ತನ್ನ ಅಧೀನತೆಯನ್ನು ಪ್ರತಿಬಿಂಬಿಸುತ್ತಾನೆ. (1 ಯೋಹಾನ 2:6; ಮತ್ತಾಯ 20:25-28) [kl ಅಧ್ಯಾ. 14 ಪ್ಯಾರ. 12]
9. ನ್ಯಾಯಸ್ಥಾಪಕರು 6:37-39ರಲ್ಲಿ ವರ್ಣಿಸಲ್ಪಟ್ಟಿರುವ ಗಿದ್ಯೋನನ ವಿನಂತಿಯು, ಅವನು ಅತಿಯಾದ ಮುಂಜಾಗ್ರತೆಯನ್ನು ವಹಿಸುತ್ತಿದ್ದನು ಮತ್ತು ಶಂಕಿಸುವವನಾಗಿದ್ದನೆಂಬುದನ್ನು ತೋರಿಸುತ್ತದೆ. [ವಾರದ ಬೈಬಲ್ ವಾಚನ; w88 4/1 ಪು. 30 ಪ್ಯಾರ. 6ನ್ನು ನೋಡಿರಿ.]
10. ‘ದಾರಿಯಲ್ಲಿ ಯಾರನ್ನೂ ವಂದಿಸುವಾಗ ಆಲಿಂಗಿಸಬೇಡಿರಿ’ ಎಂದು ಯೇಸು ತನ್ನ ಶಿಷ್ಯರಿಗೆ ಸೂಚನೆಗಳನ್ನು ಕೊಡುವ ಮೂಲಕ, ತುರ್ತಿನಿಂದ ಈ ಸಾರುವ ಕಾರ್ಯವನ್ನು ಮಾಡುವ ಮತ್ತು ಈ ಅತಿ ಪ್ರಮುಖ ನೇಮಕಕ್ಕೆ ಪೂರ್ಣ ಗಮನವನ್ನು ಕೊಡುವ ಅಗತ್ಯವನ್ನು ಎತ್ತಿಹೇಳುತ್ತಿದ್ದನು. (ಲೂಕ 10:4, NW) [w-KA98 3/1 ಪು. 30 ಪ್ಯಾರ. 5]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಯೆಹೋವನ ಮಾತುಗಳು ಹೆತ್ತವರ ಹೃದಯದಲ್ಲಿರುವುದು ಏಕೆ ಪ್ರಾಮುಖ್ಯ? (ಧರ್ಮೋ. 6:5, 6) [ವಾರದ ಬೈಬಲ್ ವಾಚನ; w-KA98 6/1 ಪು. 20 ಪ್ಯಾರ. 4ನ್ನು ನೋಡಿರಿ.]
12. ಧರ್ಮೋಪದೇಶಕಾಂಡ 11:18, 19ರಲ್ಲಿರುವ ಮೂಲತತ್ವವನ್ನು ಒಬ್ಬ ಕುಟುಂಬದ ತಲೆಯು ಹೇಗೆ ಅನ್ವಯಿಸಸಾಧ್ಯವಿದೆ? [ವಾರದ ಬೈಬಲ್ ವಾಚನ; fy ಪು. 70 ಪ್ಯಾರ. 14ನ್ನು ನೋಡಿರಿ.]
13. ಅಪೊಸ್ತಲ ಪೌಲನು ಫಿಲೆಮೋನನಿಗೆ ಪತ್ರ ಬರೆಯುವ ಮುಂಚೆ, ಓಡಿಹೋದ ದಾಸ ಓನೇಸಿಮನು ಸ್ವಲ್ಪ ಸಮಯ ಪೌಲನೊಂದಿಗಿದ್ದನೆಂಬುದಕ್ಕೆ ಯಾವ ಶಾಸ್ತ್ರೀಯ ಸೂಚನೆಯಿದೆ? [w-KA98 1/15 ಪು. 30 ಪ್ಯಾರ. 2]
14. ಅನ್ಯಾಯವಾಗುತ್ತಿರುವುದನ್ನು ನಾವು ನೋಡುವಾಗ ಅಥವಾ ನಾವದನ್ನು ಸ್ವತಃ ಅನುಭವಿಸುವಾಗ, ನಮ್ಮಲ್ಲಿ ಎದೆಗುಂದಿದ ಅಥವಾ ನಿರಾಶಾವಾದದ ಮನೋಭಾವ ಉಂಟಾಗದಂತೆ ಏನು ಮಾಡಸಾಧ್ಯವಿದೆ? [w-KA98 2/1, ಪು. 6, ಪ್ಯಾರ. 2-3]
15. ಈ ವ್ಯವಸ್ಥೆಯು ಹೇಗೆ ಅಂತ್ಯಗೊಳ್ಳುವುದು? [kl ಅಧ್ಯಾ. 11 ಪ್ಯಾರ. 15]
16. ಯೆಹೋಶುವ 10:10-14ರಲ್ಲಿ ವರ್ಣಿಸಲ್ಪಟ್ಟಿರುವ ಘಟನೆಗಳು, ನಾವು ಅರ್ಮಗೆದೋನಿನಲ್ಲಿ ನಿರೀಕ್ಷಿಸಸಾಧ್ಯವಿರುವ ಘಟನೆಗಳೊಂದಿಗೆ ಹೇಗೆ ಹೋಲುತ್ತವೆ? [ವಾರದ ಬೈಬಲ್ ವಾಚನ; w-KA87 1/1 ಪು. 21 ಪ್ಯಾರ. 12-ಪು. 22 ಪ್ಯಾರ. 14ನ್ನು ನೋಡಿರಿ.]
17. ಯೋಗ್ಯ ನಡವಳಿಕೆಗಾಗಿ ನಿಷ್ಕಪಟವಾಗಿ ಶ್ಲಾಘಿಸುವುದರ ಮೂರು ಪ್ರಯೋಜನಗಳನ್ನು ತಿಳಿಸಿರಿ. (ಜ್ಞಾನೋಕ್ತಿ 15:23ನ್ನು ಹೋಲಿಸಿರಿ.) [w-KA98 2/1 ಪು. 31 ಪ್ಯಾರ. 5-6]
18. ಯೆಹೋಶುವ 20:4ಕ್ಕೆ ಹೊಂದಿಕೆಯಲ್ಲಿ, ಒಬ್ಬ ವ್ಯಕ್ತಿಯು ಪ್ರತಿನಿಧಿರೂಪದ ಆಶ್ರಯ ನಗರಕ್ಕೆ ಓಡಿಹೋಗುವುದು ಹೇಗೆ? [ವಾರದ ಬೈಬಲ್ ವಾಚನ; w-KA87 1/1 ಪು. 22 ಪ್ಯಾರ. 16ನ್ನು ನೋಡಿರಿ.]
19. ಕೀಷೋನ್ ಹೊಳೆಯ ಕಣಿವೆಯಲ್ಲಿ ಸೀಸೆರನ ಶಕ್ತಿಶಾಲಿ ಸೈನ್ಯಗಳ ಮೇಲೆ ನ್ಯಾಯಸ್ಥಾಪಕನಾದ ಬಾರಾಕನು ಗಳಿಸಿದ ವಿಜಯವು, ನಮ್ಮ ದಿನಕ್ಕಾಗಿ ಮಹತ್ವಪೂರ್ಣ ಅರ್ಥವುಳ್ಳದ್ದಾಗಿದೆಯೆಂದು ನ್ಯಾಯಸ್ಥಾಪಕರು 5:31 ಹೇಗೆ ಸೂಚಿಸುತ್ತದೆ? [ವಾರದ ಬೈಬಲ್ ವಾಚನ; w-KA87 3/1 ಪು. 26 ಪ್ಯಾರ. 4ನ್ನು ನೋಡಿರಿ.]
20. ನ್ಯಾಯಸ್ಥಾಪಕರು 7:21ರಲ್ಲಿ ದಾಖಲಿಸಲ್ಪಟ್ಟಿರುವಂತೆ, “ಪ್ರತಿಯೊಬ್ಬರು ತಮ್ಮ ತಮ್ಮ ಸ್ಥಳದಲ್ಲಿ ನಿಂತರು” ಎಂಬ ವಾಕ್ಸರಣಿಯ ಮರೆಯಲ್ಲಿರುವ ಸೂತ್ರಕ್ಕೆ ನಾವು ಹೇಗೆ ಗಣನೆಯನ್ನು ತೋರಿಸಬಹುದು? [ವಾರದ ಬೈಬಲ್ ವಾಚನ; w-KA84 2/1 ಪು. 13 ಪ್ಯಾರ. 17ನ್ನು ನೋಡಿರಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಯೆಹೋವನ ಆಶೀರ್ವಾದವನ್ನು ಇನ್ನೂ ಸಂಪೂರ್ಣವಾಗಿ ಅನುಭವಿಸಲಿಕ್ಕಾಗಿ, ನಾವು _________________________ ಮುಂದುವರಿಸಬೇಕು ಮತ್ತು ಯೆಹೋವನ ಪ್ರೇರಿತ ವಾಕ್ಯದಲ್ಲಿರುವ ಬೋಧನೆಗಳನ್ನು _________________________ ನಮಗೆ ಸಹಾಯ ಮಾಡುವಂತೆ ಆತನ ಬಳಿ ವಿನಂತಿಸಿಕೊಳ್ಳಬೇಕು. (1 ತಿಮೊ. 4:8, 9) [w-KA98 1/1 ಪು. 24 ಪ್ಯಾರ. 6]
22. ಮುಖಸ್ತುತಿಯು ಯೆಹೋವನಿಗೆ ತುಂಬ ಅಪ್ರಸನ್ನಕರವಾಗಿದೆ ಯಾಕೆಂದರೆ ಅದು _________________________ದಿಂದ ಪ್ರಚೋದಿಸಲ್ಪಟ್ಟಿರುತ್ತದೆ, _________________________ ಆಗಿರುವುದಿಲ್ಲ ಅಥವಾ _________________________ ಆಗಿರುವುದಿಲ್ಲ. ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಅದು _________________________. [w-KA98 2/1 ಪು. 30 ಪ್ಯಾರ. 2-3]
23. _________________________ಗಳೊಂದಿಗೆ, ಅಥವಾ _________________________ಗಳೊಂದಿಗೆ, ಪ್ರತ್ಯಕ್ಷವಾಗಿಯಾಗಲಿ, _________________________ ಮೂಲಕವಾಗಿಯಾಗಲಿ ಒಳಗೊಳ್ಳುವುದೇ ಪ್ರೇತಾತ್ಮವಾದವಾಗಿದೆ. [kl ಅಧ್ಯಾ. 12 ಪ್ಯಾರ. 6]
24. ಮತ್ತಾಯ 7:24-27ರಲ್ಲಿರುವ ಯೇಸುವಿನ ದೃಷ್ಟಾಂತಕ್ಕೆ ಹೊಂದಿಕೆಯಲ್ಲಿ, ವಿವೇಕಿ ಹೆತ್ತವರು, ತಮ್ಮ ಮಕ್ಕಳು _________________________ ಉಳಿಯುವಂತೆ ಸಹಾಯಮಾಡುವ _________________________ ಅವರಿಗೆ ಕೊಡುವ ಮೂಲಕ ಅವರು ಬಿರುಗಾಳಿಯಂಥ ಒತ್ತಡಗಳನ್ನು ಎದುರಿಸುವಂತೆ ಸಹಾಯಮಾಡಬಲ್ಲರು. [w-KA98 2/15 ಪು. 9 ಪ್ಯಾರ. 1]
25. ಬೈಬಲಿನಲ್ಲಿ _________________________ಕ್ಕೂ ಹೆಚ್ಚು ಬಾರಿ ಯೆಹೋವನನ್ನು _________________________ ಎಂದು ಕರೆಯಲಾಗುತ್ತದೆ. _________________________ವನ್ನು ಹೊಂದಿರುವವನೇ ಪರಮಾಧಿಕಾರಿ. [kl ಅಧ್ಯಾ. 14 ಪ್ಯಾರ. 3]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಮರಣವು ಸಂಭವಿಸುವಲ್ಲಿ, ಆಸ್ತಿಯನ್ನು ಮಾರುವ ವಿಷಯದಲ್ಲಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವುದು, (ಸಭೆಯ ವಿಷಯವಾಗಿದೆ; ವೈಯಕ್ತಿಕವಾದ ಒಂದು ವಿಷಯವಾಗಿದೆ; ಸತ್ಕ್ರೈಸ್ತರಿಗಾಗಿರುವ ಒಂದು ಆವಶ್ಯಕತೆಯಾಗಿದೆ). (ಗಲಾ. 6:5) [w-KA98 1/15 ಪು. 19 ಪ್ಯಾರ. 6]
27. (ಓನಾಮ್, ಒನೇಸಿಫೊರಸ; ಓನೇಸಿಮ)ನನ್ನು ದಯೆಯಿಂದ ಸ್ವಾಗತಿಸುವಂತೆ ಪೌಲನು ಫಿಲೆಮೋನನನ್ನು ಉತ್ತೇಜಿಸಿದನು. ಆದರೆ ಅವನು ಹಾಗೆ ಮಾಡುವಂತೆ ಅಥವಾ ಅವನ ದಾಸನನ್ನು ಬಿಡುಗಡೆಗೊಳಿಸುವಂತೆ ಆಜ್ಞಾಪಿಸಲು ತನ್ನ ಅಪೊಸ್ತಲ ಸಂಬಂಧಿತ ಅಧಿಕಾರವನ್ನು ಉಪಯೋಗಿಸಲಿಲ್ಲ. (ಫಿಲೆ. 21) [w-KA98 1/15 ಪು. 31 ಪ್ಯಾರ. 1]
28. ಯೇಸುವಿನಿಂದ ಗುಣಪಡಿಸಲ್ಪಟ್ಟ ಕುಷ್ಠರೋಗಿಗಳ ವೃತ್ತಾಂತದಿಂದ ಸೂಚಿಸಲ್ಪಟ್ಟಿರುವ ಒಂದು ಗಂಭೀರವಾದ ಕುಂದು, ಅವರ (ನಂಬಿಕೆಯ ಕೊರತೆ; ಅವಿಧೇಯತೆ, ಕೃತಘ್ನತೆ) ಆಗಿದೆ. (ಲೂಕ 17:11-19) [w-KA98 2/15 ಪು. 5 ಪ್ಯಾರ. 1]
29. ದೇವರು ರಾಹಾಬಳ ನಡವಳಿಯನ್ನು ಒಪ್ಪಿದ್ದರಿಂದ, ಇಸ್ರಾಯೇಲಿನ ಗೂಢಚಾರರನ್ನು ಬೆನ್ನಟ್ಟಿಕೊಂಡು ಬಂದಿದ್ದ ಯೆರಿಕೋವಿನ ಪುರುಷರಿಗೆ ಅವಳು ಹೇಳಿದ ಮಾತುಗಳು (ಸುಳ್ಳಾಡಬೇಕೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ; ಯಾರು ಅದಕ್ಕೆ ಅನರ್ಹರೋ ಆ ಜನರಿಗೆ ಸತ್ಯ ಮಾಹಿತಿಯನ್ನು ಹೊರಗೆಡಹುವ ಹಂಗಿಗೆ ಒಬ್ಬ ವ್ಯಕ್ತಿಯು ಒಳಗಾಗಿರುವುದಿಲ್ಲ; ಅವಳು ತನ್ನ ಎಲ್ಲ ಲೌಕಿಕ ರೀತಿನೀತಿಗಳನ್ನು ಇನ್ನೂ ಬದಲಾಯಿಸಿರಲಿಲ್ಲ) ಎಂಬುದನ್ನು ಸೂಚಿಸುತ್ತವೆ. (ಯೆಹೋ. 2:3-5; ಹೋಲಿಸಿರಿ ರೋಮಾಪುರ 14:4.) [ವಾರದ ಬೈಬಲ್ ವಾಚನ; w-KA93 12/15 ಪು. 25 ಪ್ಯಾರ. 1ನ್ನು ನೋಡಿರಿ.]
30. ಯೋಹಾನ 13:5ರಲ್ಲಿ ದಾಖಲಿಸಲ್ಪಟ್ಟಂತೆ, ಯೇಸುವು ಕೊಟ್ಟಂತಹ ವಸ್ತುಪಾಠವು, ಇತರರಿಗಾಗಿ ಅತಿ ದೈನ್ಯ ಕೆಲಸವನ್ನೂ ಮಾಡುವ ಪ್ರವೃತ್ತಿಯನ್ನುಂಟುಮಾಡುವ (ದಯೆ; ಸಹಾನುಭೂತಿ; ನಮ್ರತೆ) ಎಂಬ ಗುಣವನ್ನು ಎತ್ತಿತೋರಿಸುತ್ತದೆ. [w-KA98 3/15 ಪು. 7 ಪ್ಯಾರ. 6]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಧರ್ಮೋ. 7:3, 4; 25:11, 12; 28:3; ಯೆರೆ. 15:20; ಎಫೆ. 1:22
31. ಸಂತಾನೋತ್ಪಾದಕ ಅಂಗಗಳಿಗಾಗಿ ಸೃಷ್ಟಿಕರ್ತನಿಗಿರುವ ಉಚ್ಚಮಾನ್ಯತೆಯು, ಒಬ್ಬ ಕ್ರೈಸ್ತನು ಕುಟುಂಬ ಯೋಜನೆಗಾಗಿ ಸೂಕ್ತವಾದ ವಿಧಾನದ ಕುರಿತಾಗಿ ಮಾಡುವ ನಿರ್ಣಯವನ್ನು ಪ್ರಭಾವಿಸಬೇಕು. [ವಾರದ ಬೈಬಲ್ ವಾಚನ; w-KA99 6/15 ಪು. 28 ಪ್ಯಾರ. 1-4ನ್ನು ನೋಡಿರಿ.]
32. ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ನೇಮಕವನ್ನು ನಾವು ಪೂರೈಸುತ್ತಿರುವಾಗ ಯೆಹೋವನು ಬೆಂಬಲವನ್ನು ನೀಡುವನೆಂಬ ಭರವಸೆ ನಮಗಿರಸಾಧ್ಯವಿದೆ. [w-KA98 3/1 ಪು. 28 ಪ್ಯಾರ. 1]
33. ಬೈಬಲಿನ ಎಚ್ಚರಿಕೆಗೆ ಕಿವಿಗೊಡುವುದು, ಕ್ರೈಸ್ತನು ಅವಿಶಾಸ್ವಿಯ ಜೋಡಿಯಾಗುವುದರಿಂದ ಅನೇಕಸಲ ಬರುವ ವೇದನೆಯ ಪರಿಣಾಮಗಳಿಂದ ನಮ್ಮನ್ನು ರಕ್ಷಿಸುತ್ತದೆ. [ವಾರದ ಬೈಬಲ್ ವಾಚನ; w-KA90 6/1 ಪು. 14 ಪ್ಯಾರ. 11]
34. ದೇವರ ಆಶೀರ್ವಾದಗಳನ್ನು ಅನುಭವಿಸುವುದು, ನಾವು ಎಲ್ಲಿ ಜೀವಿಸುತ್ತೇವೆ ಇಲ್ಲವೆ ಸೇವೆಮಾಡುತ್ತೇವೆ ಅಥವಾ ದೇವರ ಸೇವೆಯಲ್ಲಿ ಯಾವ ನೇಮಕವಿದೆಯೊ ಅದರ ಮೇಲೆ ಅವಲಂಬಿಸುವುದಿಲ್ಲ. [ವಾರದ ಬೈಬಲ್ ವಾಚನ; w-KA96 6/15 ಪು. 15 ಪ್ಯಾರ. 15ನ್ನು ನೋಡಿರಿ.]
35. ಸಭೆಗಳು ಯೇಸು ಕ್ರಿಸ್ತನಿಗೆ ಸೇರಿದವುಗಳಾಗಿವೆ, ಮತ್ತು ಕೊರಿಂಥದಲ್ಲಿ ಮಾಡಿದಂತೆಯೇ, ತನ್ನ ಸ್ವಂತ ಸೂಕ್ತ ಸಮಯದಲ್ಲಿ, ಅವರ ಆತ್ಮಿಕ ಕ್ಷೇಮ ಮತ್ತು ಶಾಂತಿಗೆ ಬೆದರಿಕೆಯೊಂದನ್ನು ಒಡ್ಡಬಹುದಾದ ಯಾವುದೇ ತೊಂದರೆಗಳನ್ನು ಬಗೆಹರಿಸಲು ಅವನು ಕ್ರಿಯೆಗೈಯುವನು. [w-KA96 6/15 ಪು. 30.]