ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು ಡಿಸೆಂಬರ್: ಈ ಮುಂದಿನ ಮೂರು ಪುಸ್ತಕಗಳಲ್ಲಿ ಯಾವುದೇ ಒಂದು ಪುಸ್ತಕವು, ರೂ. 45.00ರ ಕಾಣಿಕೆಗಾಗಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, (ಚಿಕ್ಕ ಸೈಜ್ ರೂ. 25.00), ಬೈಬಲ್ ಕಥೆಗಳ ನನ್ನ ಪುಸ್ತಕ, (ಚಿಕ್ಕ ಸೈಜ್ ರೂ. 30.00), ಅಥವಾ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಪರ್ಯಾಯವಾಗಿ, ವಿಶೇಷ ದರದ ಪುಸ್ತಕಗಳಾಗಿ, ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಪುಸ್ತಕಗಳಲ್ಲಿ ಯಾವುದೇ ಪುಸ್ತಕಗಳನ್ನು ರೂ. 2.50ಕ್ಕೆ ನೀಡಸಾಧ್ಯವಿದೆ. ಜನವರಿ: ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಇರದಿದ್ದರೆ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು, ರೂ. 25.00 (ದೊಡ್ಡ ಸೈಜ್ ರೂ. 45.00)ರ ಕಾಣಿಕೆಗೆ ಅಥವಾ ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಲಭ್ಯವಿರದಿದ್ದಲ್ಲಿ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದು ರೂ. 20.00ಕ್ಕೆ ನೀಡಸಾಧ್ಯವಿದೆ. ಮಾರ್ಚ್: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ರೂ. 20ರ ಕಾಣಿಕೆಗೆ. ಮನೆ ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರ ಮೇಲೆ ಕೇಂದ್ರೀಕರಿಸಿರಿ.
ಸೂಚನೆ: ಮೇಲೆ ಉಲ್ಲೇಖಿಸಲ್ಪಟ್ಟಿರುವ ಯಾವುದೇ ಕ್ಯಾಂಪೇನ್ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಹಾಗೆ ಮಾಡತಕ್ಕದ್ದು. ಈ ಮುಂದಿನ ವಿಶೇಷ ದರದ ಪುಸ್ತಕಗಳು (ಪ್ರಚಾರಕರಿಗೆ, ಪಯನೀಯರರಿಗೆ, ಮತ್ತು ಸಾರ್ವಜನಿಕರಿಗೆ ರೂ. 2.50) ನಮ್ಮಲ್ಲಿ ಇನ್ನೂ ಇವೆ: ಇರುವುದು ಈ ಜೀವಿತ ಮಾತ್ರವೋ?—ಇಂಗ್ಲಿಷ್; ಒಬ್ಬನೇ ಸತ್ಯ ದೇವರ ಆರಾಧನೆಯಲ್ಲಿ ಐಕ್ಯರು—ಮರಾಠಿ, ನೇಪಾಲಿ, ತಮಿಳು; “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು”—ಕನ್ನಡ; “ನಿನ್ನ ರಾಜ್ಯವು ಬರಲಿ”—ಗುಜರಾಥಿ, ಮರಾಠಿ, ಹಿಂದಿ; ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು—ಗುಜರಾಥಿ; ನಿತ್ಯಜೀವಕ್ಕೆ ನಡಿಸುವ ಸತ್ಯವು—ಗುಜರಾಥಿ; ಬೈಬಲ್—ದೇವರ ವಾಕ್ಯವೊ ಮನುಷ್ಯನದ್ದೊ—ಇಂಗ್ಲಿಷ್; ಮಹಾ ಬೋಧಕನಿಗೆ ಕಿವಿಗೊಡುವುದು—ಮರಾಠಿ; “ಶಾಂತಿಯ ಪ್ರಭು”ವಿನ ಕೆಳಗೆ ಲೋಕವ್ಯಾಪಕ ಭದ್ರತೆ—ಇಂಗ್ಲಿಷ್.
◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಡಿಸೆಂಬರ್ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೆ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ 1997, ಡಿಸೆಂಬರ್ 26-28ರಂದು ಕಲ್ಕತ್ತದಲ್ಲಿ ಜರುಗಲಿರುವ ಜಿಲ್ಲಾ ಅಧಿವೇಶನವು, ಈ ಸ್ಥಳದಲ್ಲಿ ಜರುಗುವುದು: Rabindra Sarobar Stadium Hall, Southern Avenue, Opposite Menoka Cinema, Calcutta.
◼ 1997, ಡಿಸೆಂಬರ್ 12-14ರಂದು ಸಿಲಿಗುರಿಯಲ್ಲಿ ಜರುಗಲಿರುವ ಜಿಲ್ಲಾ ಅಧಿವೇಶನದ ಹೊಸ ಮುಖ್ಯ ಕಾರ್ಯಾಲಯದ ವಿಳಾಸವು ಹೀಗಿದೆ: Mr. Pradip Mondal, c/o G.N. Sarkar, Vidya Nilay, South Deshbondhu Para, Near Himachal Sangha, Siliguri Town P.O., WB 734 404.
◼ 1998ರಲ್ಲಿ ಉಪಯೋಗಿಸಲಿಕ್ಕಾಗಿ, ಫಾರ್ಮ್‌ಗಳ ಯಥೋಚಿತ ಸರಬರಾಯಿಯು ಪ್ರತಿಯೊಂದು ಸಭೆಗೆ ಕಳುಹಿಸಲ್ಪಟ್ಟಿದೆ. ದಯವಿಟ್ಟು ಈ ಫಾರ್ಮ್‌ಗಳನ್ನು ಒಳ್ಳೆಯ ವಿವೇಚನೆಯಿಂದ ಉಪಯೋಗಿಸಿರಿ. ಅವುಗಳ ನಿಗದಿತ ಉದ್ದೇಶಕ್ಕಾಗಿ ಮಾತ್ರವೇ ಅವುಗಳನ್ನು ಉಪಯೋಗಿಸತಕ್ಕದ್ದು.
ಫಾರ್ಮ್‌ಗಳೊಂದಿಗೆ ಹೊಸ ವಾಚ್‌ಟವರ್ ಪಬ್ಲಿಕೇಷನ್ಸ್ ಲಿಸ್ಟ್‌ನ ನಾಲ್ಕು ಪ್ರತಿಗಳು ಸೇರಿಸಲ್ಪಟ್ಟಿವೆ. ಸೆಕ್ರಿಟರಿಯು ಒಂದು ಪ್ರತಿಯನ್ನು ಇಟ್ಟುಕೊಳ್ಳತಕ್ಕದ್ದು, ಮತ್ತು ಉಳಿದ ಪ್ರತಿಗಳು, ಸಾಹಿತ್ಯ, ಪತ್ರಿಕೆಗಳು, ಮತ್ತು ಅಕೌಂಟ್ಸ್‌ನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಸಹೋದರರಿಗೆ ಹಂಚಲ್ಪಡಬೇಕು.
◼ 1998ಕ್ಕಾಗಿರುವ ವರ್ಷವಚನವು, “ಯೆಹೋವನ ನಾಮವನ್ನು ಕರೆಯುವವರೆಲ್ಲರ ರಕ್ಷಣೆಯಾಗುವುದು.”—ರೋಮಾಪುರ 10:13, NW. ಜನವರಿ 1, 1998ರಂದು ಅಥವಾ ಅದರ ಅನಂತರ ಸಾಧ್ಯವಾದಷ್ಟು ಬೇಗನೆ ಪ್ರದರ್ಶಿಸಲು ಸಾಧ್ಯವಾಗುವಂತೆ, ಸಭೆಗಳು ಹೊಸ ವರ್ಷವಚನದ ತಮ್ಮ ಬೋರ್ಡುಗಳನ್ನು ಸಿದ್ಧಪಡಿಸುವುದಾದರೆ ಒಳ್ಳೆಯದಾಗಿರುವುದು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ 1996—ಇಂಗ್ಲಿಷ್
ಈ ಒಂದು ವರ್ಷದ ಇಂಡೆಕ್ಸ್ ಪಯನೀಯರರಿಗೆ ರೂ. 8.00ರ ದರಕ್ಕೆ ಮತ್ತು ಸಾರ್ವಜನಿಕರಿಗೆ ರೂ. 12.00ಕ್ಕೆ ದೊರೆಯುತ್ತದೆ.