ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು ನವೆಂಬರ್: ರಾಜ್ಯ ವಾರ್ತೆ ನಂ. 35ರ ವಿತರಣೆಯು ಮುಂದುವರಿಯುವುದು. ರಾಜ್ಯ ವಾರ್ತೆ ನಂ. 35ರ ಲಭ್ಯ ಸರಬರಾಯಿಯು ಮುಗಿದುಹೋದ ಮೇಲೆ, ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಬಹುದು. ಡಿಸೆಂಬರ್: ಈ ಮುಂದಿನ ಮೂರು ಪುಸ್ತಕಗಳಲ್ಲಿ ಯಾವುದೇ ಒಂದು ಪುಸ್ತಕವು, ರೂ. 45.00ರ ಕಾಣಿಕೆಗಾಗಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, (ಚಿಕ್ಕ ಸೈಜ್ ರೂ. 25.00), ಬೈಬಲ್ ಕಥೆಗಳ ನನ್ನ ಪುಸ್ತಕ, (ಚಿಕ್ಕ ಸೈಜ್ ರೂ. 30.00), ಅಥವಾ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಪರ್ಯಾಯವಾಗಿ, ವಿಶೇಷ ದರದ ಪುಸ್ತಕಗಳಾಗಿ, ಜುಲೈ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿ ಪಟ್ಟಿಮಾಡಲ್ಪಟ್ಟಿರುವ ಪುಸ್ತಕಗಳಲ್ಲಿ ಯಾವುದೇ ಪುಸ್ತಕಗಳನ್ನು ರೂ. 2.50ಕ್ಕೆ ನೀಡಸಾಧ್ಯವಿದೆ. ಜನವರಿ: ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಇರದಿದ್ದರೆ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು, ರೂ. 25.00 (ದೊಡ್ಡ ಸೈಜ್ ರೂ. 45.00)ರ ಕಾಣಿಕೆಗೆ ಅಥವಾ ಅರ್ಧ ದರ ಅಥವಾ ವಿಶೇಷ ದರದ ಪುಸ್ತಕಗಳಾಗಿ ಸೊಸೈಟಿಯಿಂದ ಪಟ್ಟಿಮಾಡಲ್ಪಟ್ಟಿರುವ ಯಾವುದೇ ಹಳೆಯ 192 ಪುಟದ ಪುಸ್ತಕಗಳು. ಸ್ಥಳಿಕ ಭಾಷೆಯಲ್ಲಿ ಅಂಥ ಪುಸ್ತಕಗಳು ಲಭ್ಯವಿರದಿದ್ದಲ್ಲಿ, ಜ್ಞಾನ ಅಥವಾ ಕುಟುಂಬ ಸಂತೋಷ ಪುಸ್ತಕಗಳು ಪ್ರತಿಯೊಂದು ರೂ. 20.00ಕ್ಕೆ ನೀಡಸಾಧ್ಯವಿದೆ.
◼ ನವೆಂಬರ್ 16ರಂದು ವಿಶೇಷ ಕಾರ್ಯಾಚರಣೆಯು ಪೂರ್ಣಗೊಂಡ ಅನಂತರ, ರಾಜ್ಯ ವಾರ್ತೆ ನಂ. 35ರ ಸರಬರಾಯಿಯನ್ನು ಇನ್ನೂ ಪಡೆದಿರುವ ಸಭೆಗಳು, ಮನೆಯಿಂದ ಮನೆಗೆ ಅಥವಾ ಬೇರೆ ಸ್ಥಳಗಳಲ್ಲಿ ಕಿರುಹೊತ್ತಗೆಗಳು ಉಪಯೋಗಿಸಲ್ಪಡುವ ವಿಧದಲ್ಲಿಯೇ ಇವುಗಳನ್ನು ನೀಡಲು ಪ್ರಚಾರಕರನ್ನು ಉತ್ತೇಜಿಸಬಹುದು. ಉಚಿತವಾದಲ್ಲಿ, ಪ್ರತಿಯೊಂದು ಮನೆಯಲ್ಲಿರದವರ ಬಾಗಿಲಲ್ಲಿ ಪ್ರಚಾರಕರು ಒಂದು ಪ್ರತಿಯನ್ನು ಬಿಟ್ಟುಬರಬಹುದು. ಹಾದುಹೋಗುವವರಿಗೆ ಕಾಣದಂತೆ ಇಡುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಪ್ರಾಮುಖ್ಯ ಸಂದೇಶದ ಉಳಿದ ಪ್ರತಿಗಳೆಲ್ಲವನ್ನು ವಿತರಿಸಲು ಪ್ರಯತ್ನಗಳು ಮಾಡಲ್ಪಡಬೇಕು.
◼ 1998, ಜನವರಿ ತಿಂಗಳಿನಿಂದ ಆರಂಭಿಸಿ, ಸರ್ಕಿಟ್ ಮೇಲ್ವಿಚಾರಕರು ತಮ್ಮ ಸಂದರ್ಶನಗಳ ಸಮಯದಲ್ಲಿ, “ಯೆಹೋವನ ರಕ್ಷಣಾ ಶಕ್ತಿಯಲ್ಲಿ ಭರವಸೆಯಿಡಿರಿ” ಎಂಬ ಸಾರ್ವಜನಿಕ ಭಾಷಣವನ್ನು ಹಾಗೂ “ಯೆಹೋವನ ಭಯದಲ್ಲಿ ಮುನ್ನಡೆಯುತ್ತಿರುವ ಸಭೆಗಳು—ಸುನಡತೆಯನ್ನು ಕಾಪಾಡಿಕೊಳ್ಳಿರಿ” ಎಂಬ ಮುಕ್ತಾಯದ ಸೇವಾ ಭಾಷಣವನ್ನು ನೀಡಲಿರುವರು. ಗುರುವಾರ (ಅಥವಾ ಶುಕ್ರವಾರ)ದಂದು ಅವರು ನೀಡಲಿರುವ ಮೊದಲ ಸೇವಾ ಭಾಷಣವು, “‘ಪ್ರತಿಯೊಂದು ಸ್ಥಳದಲ್ಲಿಯೂ’ ದೇವರ ಸುಗಂಧಭರಿತ ಜ್ಞಾನವನ್ನು ಹಬ್ಬಿಸುವುದು” ಎಂಬ ಶೀರ್ಷಿಕೆಯದ್ದಾಗಿದೆ.