ವೃದ್ಧರು ಎಡೆಬಿಡದೆ ಸಾರುತ್ತಾರೆ
1 ಜನರು ವೃದ್ಧರಾದಂತೆ, ಅನೇಕರು ತಮ್ಮ ಕ್ರಮವಾದ ಐಹಿಕ ಕೆಲಸದಿಂದ ನಿವೃತ್ತರಾಗಿ, ತಮ್ಮ ಉಳಿದ ವರ್ಷಗಳಲ್ಲಿ ನೆಮ್ಮದಿಯ ಜೀವಿತವನ್ನು ಅನುಭವಿಸಲು ಎದುರುನೋಡುತ್ತಾರೆ. ತಾವು ಸಾಕಷ್ಟು ಶ್ರಮಪಟ್ಟು ಕೆಲಸಮಾಡಿದ್ದೇವೆ, ಈಗ ನಮಗೆ ವಿಶ್ರಾಂತಿಯ ಅಗತ್ಯವಿದೆಯೆಂದು ಅವರು ಭಾವಿಸಬಹುದು. ಅಥವಾ ತಮ್ಮ ಉಳಿದ ಜೀವಮಾನಕಾಲದಲ್ಲಿ, ಜೀವಿತದಲ್ಲಿ ಆನಂದಿಸಲು ಮಾತ್ರವೇ ಅವರು ಅಪೇಕ್ಷಿಸಬಹುದು.—ಲೂಕ 12:19.
2 ಯೆಹೋವನ ಸಮರ್ಪಿತ ಸೇವಕರೋಪಾದಿ, ನಮಗೆ ಜೀವಿತದಲ್ಲಿ ಭಿನ್ನವಾದ ಹೊರನೋಟವಿದೆ. ದೇವರ ಸೇವೆಯಿಂದ ನಿವೃತ್ತಿಯಿಲ್ಲವೆಂಬುದು ನಮಗೆ ಗೊತ್ತು. ನಮ್ಮ ಹೊರನೋಟವು ಸಕಾರಾತ್ಮಕವಾದದ್ದಾಗಿದೆ, ಏಕೆಂದರೆ ನಾವು “ನಿತ್ಯಜೀವಕ್ಕಾಗಿ . . . ಎದುರುನೋಡು”ತ್ತೇವೆ. (ಯೂದ 21) ಅನೇಕ ವರ್ಷಗಳ ಸಂಗ್ರಹಿತ ಜ್ಞಾನ ಹಾಗೂ ಅನುಭವವು, ವ್ಯಕ್ತಿಯೊಬ್ಬನ ವಿವೇಚನಾಶಕ್ತಿ ಹಾಗೂ ಒಳನೋಟವನ್ನು ಉತ್ತಮಗೊಳಿಸಬಹುದು. ಇದು ಒಬ್ಬನನ್ನು ಹೆಚ್ಚು ವಿವೇಚನಾಶೀಲನಾಗಲು ಹಾಗೂ ಹೆಚ್ಚು ಸಮತೂಕವುಳ್ಳವನಾಗಲು, ಮತ್ತು ಜೀವಿತಕ್ಕಾಗಿ ಹೆಚ್ಚು ಗಾಢವಾದ ಗಣ್ಯತೆಯನ್ನು ಪ್ರದರ್ಶಿಸಲು ಶಕ್ತನನ್ನಾಗಿ ಮಾಡಸಾಧ್ಯವಿದೆ. ಈ ಎಲ್ಲ ಗುಣಗಳು, ಸುವಾರ್ತೆಯ ಒಬ್ಬ ಶುಶ್ರೂಷಕನಿಗೆ ಬಹಳವಾದ ಪ್ರಯೋಜನಗಳನ್ನು ಉಂಟುಮಾಡುತ್ತವೆ.
3 ವೃದ್ಧರಾಗುವುದು ಕೇವಲ ಶಾರೀರಿಕ ಮುಪ್ಪಿನ ಒಂದು ವಿಷಯವಾಗಿರುವುದಿಲ್ಲ; ಇದು ಒಬ್ಬನ ಮಾನಸಿಕ ಮನೋಭಾವವನ್ನೂ ಒಳಗೂಡುತ್ತದೆ. ನೀವು ದೀರ್ಘಕಾಲ ಜೀವಿಸಲು ನಿರೀಕ್ಷಿಸುವಲ್ಲಿ, ಮತ್ತು ನಿಮ್ಮ ಹೊರನೋಟದಲ್ಲಿ ಎಳೆಯರಾಗಿಯೇ ಉಳಿಯಲು ಶ್ರಮಿಸುವಲ್ಲಿ, ಈ ಎರಡನ್ನೂ ಮಾಡುವ ನಿಮ್ಮ ಅವಕಾಶಗಳು ಅಧಿಕಗೊಳ್ಳಬಹುದು. ತಮ್ಮ ಆತ್ಮಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಮತ್ತು ಇತರರೊಂದಿಗೆ ಅದನ್ನು ಹಂಚಿಕೊಳ್ಳುವ ಮೂಲಕ, ವೃದ್ಧರು ತಮ್ಮ ಜೀವಿತಗಳನ್ನು ಸಂಪದ್ಯುಕ್ತವನ್ನಾಗಿ ಮಾಡಿಕೊಳ್ಳಸಾಧ್ಯವಿದೆ.—1 ಕೊರಿಂ. 9:23.
4 ವಾಸ್ತವ ಜೀವನದ ಉದಾಹರಣೆಗಳು: 86ರ ಪ್ರಾಯದಲ್ಲಿ, ಒಬ್ಬ ಸಹೋದರಿಯು ಹೇಳಿದ್ದು: “ನಾನು ಸತ್ಯವನ್ನು ಕಲಿತಂದಿನಿಂದ ಗತಿಸಿರುವ 60 ವರ್ಷಗಳನ್ನು ನಾನು ಪುನರಾಲೋಚಿಸುವಾಗ, ದೇವರ ಪುನರಾಶ್ವಾಸನೆಯ ವಾಗ್ದಾನವು ನನ್ನ ಹೃದಯದಲ್ಲಿ ಉಮ್ಮಳಿಸುತ್ತದೆ. ಹೌದು, ನಿಷ್ಠಾವಂತರೊಂದಿಗೆ ನಿಷ್ಠೆಯಿಂದ ವರ್ತಿಸುವ ಯೆಹೋವನು, ನಾವು ಯಥೇಷ್ಟವಾಗಿ ಆನಂದವನ್ನು ಅನುಭೋಗಿಸುವಂತೆ ಅನುಮತಿಸುತ್ತಿದ್ದಾನೆ.” (ಕೀರ್ತ. 18:25) ತನ್ನ ಪತ್ನಿಯ ಮರಣವು ತನ್ನ ಮೇಲೆ ಹೇಗೆ ಒಂದು ಪ್ರಬಲವಾದ ಆಘಾತದೋಪಾದಿ ಬಂದೆರಗಿತು—ಆ ನಂತರವೇ ಅವನ ಆರೋಗ್ಯವು ವಿಪರೀತವಾಗಿ ಕ್ಷಯಿಸಿತು—ಎಂಬುದನ್ನು ಒಬ್ಬ ವೃದ್ಧ ಸಹೋದರನು ಜ್ಞಾಪಿಸಿಕೊಂಡನು. ಅವನು ಹೇಳಿದ್ದು: “ಆದರೂ, ಯೆಹೋವನ ಅಪಾತ್ರ ಕೃಪೆಯಿಂದ, ಎರಡು ವರ್ಷಗಳ ಬಳಿಕ ನಾನು ಪಯನೀಯರ್ ಸೇವೆಯನ್ನು ಪ್ರವೇಶಿಸುವುದಕ್ಕೆ ಶಕ್ತನಾಗಲು ಸಾಕಾಗುವಷ್ಟರ ಮಟ್ಟಿಗೆ ಚೇತರಿಸಿಕೊಂಡೆ. ಸಾರುವ ಚಟುವಟಿಕೆಯಲ್ಲಿನ ಈ ಹೆಚ್ಚಳದಿಂದಾಗಿ, ನನ್ನ ಆರೋಗ್ಯವು ನಿಜವಾಗಿಯೂ ಉತ್ತಮಗೊಂಡಿರುವುದಕ್ಕಾಗಿ ನಾನು ಯೆಹೋವನಿಗೆ ಎಷ್ಟು ಆಭಾರಿಯಾಗಿದ್ದೇನೆ!”
5 ಇಷ್ಟೊಂದು ಮಂದಿ ವೃದ್ಧರು, ಅವರ ಆರೋಗ್ಯ ಹಾಗೂ ಬಲವು ಅವರನ್ನು ಅನುಮತಿಸುವಷ್ಟರ ಮಟ್ಟಿಗೆ, ಎಡೆಬಿಡದೆ ಸಾರುವುದನ್ನು ಮುಂದುವರಿಸುವ ನಿರ್ಧಾರವುಳ್ಳವರಾಗಿದ್ದಾರೆ ಎಂಬುದು ಎಷ್ಟು ಪ್ರಶಂಸಾರ್ಹವಾದ ವಿಷಯವಾಗಿದೆ! ಅವರಿಗೆ ಹೀಗೆ ಉದ್ಘೋಷಿಸಲು ಸಕಾರಣವಿದೆ: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.”—ಕೀರ್ತ. 71:17.