ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 10/96 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಅಕ್ಟೋಬರ್‌: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು.

ಚಂದಾಗಳನ್ನು ಪಡೆಯುವಾಗ, ಕಾವಲಿನಬುರುಜು ಈಗ ಪಂಜಾಬಿ ಮತ್ತು ಉರ್ದು (ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ) ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ.

ಪ್ರಸ್ತುತ, ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ಮತ್ತು ತೆಲುಗು ಭಾಷೆಗಳಲ್ಲಿ ಮಾಸಿಕವಾಗಿದೆ. ಎಚ್ಚರ! ಪತ್ರಿಕೆಗಾಗಿ ವೈಯಕ್ತಿಕ ಚಂದಾಗಳು, ಉರ್ದು, ಬಂಗಾಲಿ, ಮರಾಠಿ, ಹಿಂದಿ ಮತ್ತು ನೇಪಾಲಿ ಭಾಷೆಗಳಲ್ಲಿ ದೊರಕುವುದಿಲ್ಲ, ಆದರೆ ಈ ಐದು ಭಾಷೆಗಳಲ್ಲಿ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ.

ನವೆಂಬರ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ರೂ. 20.00ರ ಕಾಣಿಕೆಗೆ. ಮನೆ ಬೈಬಲ್‌ ಅಭ್ಯಾಸಗಳನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ, ಎಲ್ಲ ಕೊಡಿಕೆಗಳನ್ನು ಅನುಸರಿಸಿಕೊಂಡು ಹೋಗಲು ಒಂದು ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು.

ಡಿಸೆಂಬರ್‌: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವು ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00 ಆಗಿದೆ). ಪರ್ಯಾಯವಾಗಿ, ಸೂಕ್ತವಾಗಿರುವಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್‌) ಎಂಬ ಪುಸ್ತಕವು, ರೂ. 45.00ರ ಕಾಣಿಕೆಗೆ ನೀಡಲ್ಪಡಬಹುದು.

ಜನವರಿ: ಹಳೆಯ 192 ಪುಟದ ಪುಸ್ತಕಗಳ ವಿಶೇಷ ನೀಡಿಕೆ, ಪ್ರತಿಯೊಂದೂ ರೂ. 10.00ರ ಕಾಣಿಕೆಗಾಗಿ. (ಪಯನೀಯರ್‌ ದರ ರೂ. 5.00.) ನಮ್ಮಲ್ಲಿ ಇನ್ನೂ ಲಭ್ಯವಿರುವ ಈ ವಿಭಾಗದಲ್ಲಿನ ಪುಸ್ತಕಗಳ ಪಟ್ಟಿಗಾಗಿ, ಜನವರಿ 1996ರ ನಮ್ಮ ರಾಜ್ಯದ ಸೇವೆಯ ‘ಪ್ರಕಟನೆಗಳು’ ಅಂಕಣವನ್ನು ನೋಡಿರಿ. ನೇಪಾಲಿ ಅಥವಾ ಬಂಗಾಲಿಯನ್ನು ಓದಲು ಇಷ್ಟಪಡುವ ವ್ಯಕ್ತಿಗಳಿಗೆ 32-ಪುಟಗಳ ಯಾವುದೇ ಬ್ರೋಷರುಗಳನ್ನು ನೀಡಸಾಧ್ಯವಿದೆ. ಮಲೆಯಾಳಂ ಇಷ್ಟಪಡುವ ವ್ಯಕ್ತಿಗಳಿಗೆ ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕವನ್ನು ರೂ. 20.00ರ ಕಾಣಿಕೆಗೆ ನೀಡಸಾಧ್ಯವಿದೆ ಮತ್ತು ಪಂಜಾಬಿ ಇಷ್ಟಪಡುವ ವ್ಯಕ್ತಿಗಳಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ರೂ. 20.00ಕ್ಕೆ ನೀಡಸಾಧ್ಯವಿದೆ. ಈ ಮೇಲೆ ತಿಳಿಸಲ್ಪಟ್ಟಿರುವ ಕೊನೆಯ ಎರಡು ಪುಸ್ತಕಗಳು ವಿಶೇಷ ದರದಲ್ಲಿ ನೀಡಲ್ಪಡಬಾರದೆಂಬುದನ್ನು ದಯವಿಟ್ಟು ಗಮನಿಸಿರಿ.

◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿನ ಪುರವಣಿಯು “1997ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್‌” ಆಗಿದ್ದು, ಇದನ್ನು 1997ರ ಆದ್ಯಂತವಾಗಿ ರೆಫರೆನ್ಸ್‌ಗಾಗಿ ಇಡತಕ್ಕದ್ದು.

◼ ಎಲ್ಲಾ ಭಾಷೆಗಳ, ವಿಶೇಷವಾಗಿ ಕನ್ನಡ, ತೆಲುಗು, ಬಂಗಾಲಿ, ಮರಾಠಿ, ಮತ್ತು ಪಂಜಾಬಿ ಭಾಷೆಗಳ ಭಾಷಾಂತರಕಾರರಿಗಾಗಿ ಸೊಸೈಟಿಯು ಇನ್ನೂ ಹುಡುಕುತ್ತಿದೆ. ಬೆತೆಲ್‌ ಸೇವೆಗಾಗಿ ಲಭ್ಯವಿರುವ ಸಹೋದರ ಸಹೋದರಿಯರು, ತಮ್ಮ ಭಾಷೆಯಲ್ಲಿನ ಪರೀಕ್ಷಾ ವಿಷಯವನ್ನು ತಮಗೆ ಕಳುಹಿಸುವಂತೆ ಸೊಸೈಟಿಗೆ ವಿನಂತಿಸುತ್ತಾ ಅರ್ಜಿಹಾಕಬಹುದು.

◼ ಜನವರಿ 8, 1997ರ ಸಂಚಿಕೆಯಿಂದ ಆರಂಭಿಸಿ, ಮರಾಠಿ ಮತ್ತು ಹಿಂದಿಯಲ್ಲಿ ಎಚ್ಚರ! ಪತ್ರಿಕೆಯು ಒಂದು ಮಾಸಿಕ ಪತ್ರಿಕೆಯಾಗಿ ಲಭ್ಯವಾಗುವುದು. ಈ ಎರಡು ಮುದ್ರಣಗಳಿಗಾಗಿ ತಮ್ಮ ಆರ್ಡರ್‌ಗಳನ್ನು ಅಳವಡಿಸಿಕೊಳ್ಳಲು ಬಯಸುವ ಸಭೆಗಳು ಅದನ್ನು ತತ್‌ಕ್ಷಣ ಮಾಡತಕ್ಕದ್ದು. ಜನವರಿ 8, 1997ರ ಸಂಚಿಕೆಯು ಪ್ರಥಮ ಸಂಚಿಕೆಯಾಗಿರುವುದೆಂಬುದನ್ನು ಮನೆಯವನಿಗೆ ತಿಳಿಸುತ್ತಾ, ನವೆಂಬರ್‌ 1996ರಿಂದ ಆರಂಭಿಸಿ, ಈ ಎರಡು ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳನ್ನು ರೂ. 45.00ಕ್ಕೆ ನೀಡಬಹುದು.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ—ತೆಲುಗು

ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ—ತೆಲುಗು

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಕುರುಕ್ಷೇತ್ರದಿಂದ ಅರ್ಮಗೆದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ—ಗುಜರಾಥಿ, ತಮಿಳು, ಮರಾಠಿ, ಮಲೆಯಾಳಂ, ಹಿಂದಿ

ಜೀವನಕ್ಕೆ ಅಧಿಕ ಹೆಚ್ಚಿನದ್ದು ಇದೆ!—ತಮಿಳು, ಮರಾಠಿ

ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ—ತಮಿಳು, ಮಲೆಯಾಳಂ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ