ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 8/96 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಆಗಸ್ಟ್‌: ಈ ಮುಂದಿರುವ 32 ಪುಟದ ಯಾವುದಾದರೂ ಬ್ರೋಷರ್‌ಗಳನ್ನು ರೂ. 5.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಮತ್ತು ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!

ಸೆಪ್ಟೆಂಬರ್‌: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಪುಸ್ತಕ, ರೂ. 20.00ರ ಕಾಣಿಕೆಗೆ. ಪರ್ಯಾಯವಾಗಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಅಥವಾ ಲೈಫ್‌—ಹೌ ಡಿಡ್‌ ಇಟ್‌ ಗೆಟ್‌ ಹಿಯರ್‌? ಬೈ ಎವಲ್ಯೂಷನ್‌ ಆರ್‌ ಬೈ ಕ್ರಿಯೇಷನ್‌? ಎಂಬ ಎರಡು ಪುಸ್ತಕಗಳಲ್ಲಿ ಯಾವುದನ್ನಾದರೂ ರೂ. 25.00ರ ಕಾಣಿಕೆಗೆ ನೀಡಬಹುದು (ದೊಡ್ಡ ಸೈಸ್‌ ರೂ. 45.00 ಆಗಿದೆ).

ಅಕ್ಟೋಬರ್‌: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00 ಆಗಿದೆ. ಮಾಸಿಕ ಮುದ್ರಣಗಳಿಗಾಗಿ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳಿಗೆ ಆರು ತಿಂಗಳಿನ ಚಂದಾಗಳು ರೂ. 45.00 ಆಗಿವೆ. ಮಾಸಿಕ ಮುದ್ರಣಗಳಿಗಾಗಿ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಪ್ರತಿಯೊಂದು ಬಿಡಿ ಪ್ರತಿಗಳು ರೂ. 4.00ಕ್ಕೆ ನೀಡಲ್ಪಡಬೇಕು.

ನವೆಂಬರ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು ರೂ. 20.00ರ ಕಾಣಿಕೆಗೆ. ಮನೆ ಬೈಬಲ್‌ ಅಭ್ಯಾಸಗಳನ್ನು ಪ್ರಾರಂಭಿಸುವ ಉದ್ದೇಶದೊಂದಿಗೆ, ಎಲ್ಲ ಕೊಡಿಕೆಗಳನ್ನು ಅನುಸರಿಸಿಕೊಂಡು ಹೋಗಲು ಒಂದು ವಿಶೇಷವಾದ ಪ್ರಯತ್ನವು ಮಾಡಲ್ಪಡುವುದು.

ಸೂಚನೆ: ಕುಟುಂಬ ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕಗಳ ಸದುಪಯೋಗವನ್ನು ಮಾಡುವಂತೆ ನಾವು ಎಲ್ಲ ಸಭೆಗಳನ್ನು ಪ್ರೋತ್ಸಾಹಿಸುತ್ತೇವೆ. ಈ ಪುಸ್ತಕಗಳ ಪ್ರತಿಗಳನ್ನು ಎಲ್ಲ ಸಮಯಗಳಲ್ಲಿ ವರ್ಷದಾದ್ಯಂತವಾಗಿ ಪ್ರಚಾರಕರು ತಮ್ಮೊಂದಿಗೆ ಇಟ್ಟುಕೊಳ್ಳುವಂತೆ ಮತ್ತು ಅವುಗಳನ್ನು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ನೀಡುವಂತೆ ಪ್ರೋತ್ಸಾಹಿಸಲ್ಪಡಸಾಧ್ಯವಿದೆ. ಮೇಲೆ ತಿಳಿಸಲ್ಪಟ್ಟಿರುವ ಕ್ಯಾಂಪೇನ್‌ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-AB-14) ಹಾಗೆ ಮಾಡತಕ್ಕದ್ದು.

◼ ಅಕ್ಟೋಬರ್‌-ಡಿಸೆಂಬರ್‌ 1996ರ ಸಂಚಿಕೆಯೊಂದಿಗೆ ಪ್ರಾರಂಭಿಸುತ್ತಾ, ಉರ್ದು ಭಾಷೆಯಲ್ಲಿನ ತ್ರೈಮಾಸಿಕ ಎಚ್ಚರ! ಪತ್ರಿಕೆಯು ಜರ್ಮನಿಯಲ್ಲಿ ಚತುರ್ವರ್ಣಗಳಲ್ಲಿ ಮುದ್ರಿಸಲ್ಪಟ್ಟು, ಭಾರತದಲ್ಲಿರುವ ಸಭೆಗಳಿಗೆ ನೇರವಾಗಿ ಅಂಚೆಯ ಮೂಲಕ ಕಳುಹಿಸಲ್ಪಡುವುದು. ಉರ್ದು ಭಾಷೆಯಲ್ಲಿ ತ್ರೈಮಾಸಿಕ ಎಚ್ಚರ! ಪತ್ರಿಕೆಗಾಗಿ ಈಗಾಗಲೇ ಆರ್ಡರ್‌ ಪಡೆದಿರುವ ಸಭೆಗಳು ಒಂದು ವಿತರಕರ ಆರ್ಡರ್‌ (M-229) ಫಾರ್ಮ್‌ ಅನ್ನು ಕಳುಹಿಸುವುದರ ಮೂಲಕ ತಮ್ಮ ಆರ್ಡರ್‌ ಅನ್ನು ಹೆಚ್ಚಿಸಲು ಇಚ್ಛಿಸಬಹುದು. ಇತರ ಸಭೆಗಳು ಅದೇ ಫಾರ್ಮ್‌ ಅನ್ನು ಉಪಯೋಗಿಸುತ್ತಾ, ಒಂದು ಸ್ಥಾಯಿ ಆರ್ಡರ್‌ ಮಾಡಲು ಇಚ್ಛಿಸಬಹುದು. ಉರ್ದು ಭಾಷೆಯಲ್ಲಿನ ಮಾಸಿಕ ಕಾವಲಿನಬುರುಜು ಪತ್ರಿಕೆಯು ಭಾರತದಲ್ಲಿ ಮುದ್ರಿಸಲ್ಪಡುತ್ತಾ ಮುಂದುವರಿಸುವುದು.

◼ ಪ್ರತಿ ಸಭೆಯು ಮೂರು (S-AB-18) ಲಿಟರೇಚರ್‌ ಇನ್‌ವೆಂಟರಿ ಫಾರ್ಮ್‌ಗಳನ್ನು ಪಡೆಯುವುದು. ಆಗಸ್ಟ್‌ ತಿಂಗಳಿನ ಆದಿಭಾಗದಲ್ಲಿ ಸಭಾ ಸೆಕ್ರಿಟರಿಯು, ಸಾಹಿತ್ಯ ಸೇವಕನೊಂದಿಗೆ ಸಂಧಿಸಿ, ತಿಂಗಳ ಅಂತ್ಯದಲ್ಲಿ ಸಭೆಯ ಸಾಹಿತ್ಯದ ಸ್ಟಾಕ್‌ನ ಇನ್‌ವೆಂಟರಿಯನ್ನು ತೆಗೆದುಕೊಳ್ಳುವುದಕ್ಕಾಗಿ ಒಂದು ತಾರೀಖನ್ನು ಗೊತ್ತುಮಾಡಬೇಕು. ವಶದಲ್ಲಿರುವ ಎಲ್ಲ ಸಾಹಿತ್ಯದ ವಾಸ್ತವಿಕ ಲೆಕ್ಕವು ಮಾಡಲ್ಪಡತಕ್ಕದ್ದು ಮತ್ತು ಮೊತ್ತಗಳು ಲಿಟರೇಚರ್‌ ಇನ್‌ವೆಂಟರಿ ಫಾರ್ಮ್‌ ಮೇಲೆ ಬರೆಯಲ್ಪಡಬೇಕು. ಕೈಯಲ್ಲಿರುವ ಪತ್ರಿಕೆಗಳ ಮೊತ್ತ ಸಂಖ್ಯೆಯನ್ನು ಪತ್ರಿಕಾ ಸೇವಕನಿಂದ ಪಡೆದುಕೊಳ್ಳಸಾಧ್ಯವಿದೆ. ಮೂಲಪ್ರತಿಯನ್ನು ದಯವಿಟ್ಟು ಸೆಪ್ಟೆಂಬರ್‌ 6ನೇ ತಾರೀಖಿಗಿಂತ ಮುಂಚೆ ಸೊಸೈಟಿಗೆ ಅಂಚೆ ರವಾನೆ ಮಾಡಿರಿ. ನಿಮ್ಮ ಫೈಲ್‌ಗಳಿಗಾಗಿ ಒಂದು ನಕಲಿ ಪ್ರತಿಯನ್ನು ಇಡಿರಿ. ಮೂರನೆಯ ಪ್ರತಿಯು ಒಂದು ವರ್ಕ್‌ ಷೀಟ್‌ ಆಗಿ ಉಪಯೋಗಿಸಲ್ಪಡಬಹುದು. ಇನ್‌ವೆಂಟರಿ, ಸೆಕ್ರಿಟರಿಯಿಂದ ಪರಿಶೀಲಿಸಲ್ಪಡಬೇಕು, ಮತ್ತು ಪೂರ್ಣಗೊಳಿಸಲ್ಪಟ್ಟ ಫಾರ್ಮ್‌ ಅಧ್ಯಕ್ಷ ಮೇಲ್ವಿಚಾರಕರು—ಇಬ್ಬರೂ—ಫಾರ್ಮ್‌ ಮೇಲೆ ಸಹಿಹಾಕುವರು.

◼ ಸಭಾ ಸೆಕ್ರಿಟರಿಯು, ಕಾಂಗ್ರಿಗೇಷನ್‌ ಆ್ಯನಾಲಿಸಿಸ್‌ ರಿಪೋರ್ಟ್‌ ಫಾರ್ಮ್‌ (S-10) ಮೇಲೆ ಬರೆಯುವುದಕ್ಕಾಗಿ ಸಂಖ್ಯೆಗಳನ್ನು ಸಂಕಲಿಸುವನು ಸಹ. ಅವನು ಪಬ್ಲಿಷರ್‌ ರೆಕಾರ್ಡ್‌ ಕಾರ್ಡ್‌ (S-21)ಗಳಿಂದ ಅಗತ್ಯವಿರುವ ಮಾಹಿತಿಯ ಒಂದು ನಿಷ್ಕೃಷ್ಟ ಪಟ್ಟಿಮಾಡುವಿಕೆಯನ್ನು ಖಚಿತಪಡಿಸಿಕೊಳ್ಳಲು, ವರದಿಯನ್ನು ಸಂಕಲಿಸುವುದಕ್ಕೆ ಸಹಾಯಮಾಡುತ್ತಿರಬಹುದಾದ ಯಾವನೇ ಹಿರಿಯನನ್ನು ಅಥವಾ ಶುಶ್ರೂಷಕ ಸೇವಕನನ್ನು ಜಾಗರೂಕತೆಯಿಂದ ನಿರ್ದೇಶಿಸುವನು. ಕಾಂಗ್ರಿಗೇಷನ್‌ ಆ್ಯನಾಲಿಸಿಸ್‌ ರಿಪೋರ್ಟ್‌ ಫಾರ್ಮ್‌ ನಿಷ್ಕೃಷ್ಟವಾಗಿ ಮತ್ತು ನೀಟಾಗಿ ತುಂಬಿಸಲ್ಪಡಬೇಕು ಮತ್ತು ಸಹಿಮಾಡಲ್ಪಡುವ ಮುನ್ನ ಸರ್ವಿಸ್‌ ಕಮಿಟಿಯಿಂದ ಜಾಗರೂಕವಾಗಿ ಪರಿಶೀಲಿಸಲ್ಪಡಬೇಕು. ಫಾರ್ಮ್‌ ಮೇಲಿರುವ ಮೊದಲ ಐದು ಬಾಕ್ಸ್‌ಗಳು ಸರಾಸರಿ ಸಾಪ್ತಾಹಿಕ ಕೂಟದ ಹಾಜರಿಗಳೊಂದಿಗೆ ತುಂಬಿಸಲ್ಪಡಬೇಕೆಂಬುದನ್ನು ದಯವಿಟ್ಟು ಗಮನಿಸಿರಿ. ಇವುಗಳನ್ನು ಲೆಕ್ಕಮಾಡಲು, ಬಾಕ್ಸ್‌ಗಳ ಮೇಲೆ ನೀಡಲ್ಪಟ್ಟ ಸಲಹೆಗಳನ್ನು ದಯವಿಟ್ಟು ನಿಕಟವಾಗಿ ಅನುಸರಿಸಿರಿ. ಹಾಗೂ ಫಾರ್ಮ್‌ನ ಮೇಲ್ಮುಖದಲ್ಲಿರುವ, ಕೆಳಗಿನಿಂದ ಎರಡನೆಯ ಬಾಕ್ಸ್‌ನಲ್ಲಿನ ಸಂಖ್ಯೆಯು, ನಿಯುಕ್ತ ಹಿರಿಯರನ್ನು ಮಾತ್ರವೇ ಒಳಗೂಡಬೇಕೆಂಬುದನ್ನು ಜ್ಞಾಪಕದಲ್ಲಿಡಿರಿ; ಬದಲಿ ಮೇಲ್ವಿಚಾರಕರು ಶುಶ್ರೂಷಕ ಸೇವಕರಾಗಿದ್ದು, ಈ ಕಾರಣದಿಂದ ಕೊನೆಯ ಬಾಕ್ಸ್‌ನಲ್ಲಿ ಒಳಗೂಡಿಸಲ್ಪಡಬೇಕು. ದಯವಿಟ್ಟು S-10 ಫಾರ್ಮ್‌ನ ಮೂಲಪ್ರತಿಯನ್ನು ಸೆಪ್ಟೆಂಬರ್‌ 10ರೊಳಗೆ ಸೊಸೈಟಿಗೆ ಕಳುಹಿಸಿರಿ; ನಿಮ್ಮ ಫೈಲ್‌ನಲ್ಲಿ ಒಂದು ನಕಲಿ ಪ್ರತಿಯನ್ನಿಡಿರಿ.

◼ ಸೆಪ್ಟೆಂಬರ್‌ 1ರಿಂದ ಕ್ರಮದ ಪಯನೀಯರ್‌ ಸೇವೆಯನ್ನು ಪ್ರಾರಂಭಿಸಲು ಯೋಜಿಸುವ ಪ್ರಚಾರಕರು ತಡವಿಲ್ಲದೆ ಅರ್ಜಿಹಾಕಬೇಕು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ