ಸಕಲ ಶಾಸ್ತ್ರವೂ ಬೋಧನೆಗೆ ಪ್ರಯೋಜನಕರ
1 ಬೈಬಲಿನ ಮೌಲ್ಯದ ಕುರಿತಾದ ಅಭಿಪ್ರಾಯಗಳು ಅನೇಕವೂ ವಿಭಿನ್ನವೂ ಆಗಿವೆ. ಆದರೂ, ಮಾನವ ಕುಲದ ಕಂಗೆಡಿಸುವ ಸಮಸ್ಯೆಗಳಿಗೆ ಉತ್ತರಗಳು ಹಾಗೂ ಜೀವಿತದಲ್ಲಿನ ನಮ್ಮ ವೈಯಕ್ತಿಕ ಮಾರ್ಗಕ್ಕಾಗಿ ವಿಶ್ವಾಸಾರ್ಹವಾದ ಮಾರ್ಗದರ್ಶನವು, ಅದರ ಪುಟಗಳೊಳಗೆ ಅಸ್ತಿತ್ವದಲ್ಲಿವೆ ಎಂಬುದಾಗಿ ನಾವು ಮನಗಂಡಿದ್ದೇವೆ. (ಜ್ಞಾನೋ. 3:5, 6) ಅದರ ಸಲಹೆಯ ವಿವೇಕವು ಅಸಮಾನವಾಗಿದೆ. ಅದು ಎತ್ತಿಹಿಡಿಯುವ ನೈತಿಕ ಮಟ್ಟಗಳು ಅತಿಶಯಿಸಲು ಅಸಾಧ್ಯವಾದವುಗಳಾಗಿವೆ. ಅದರ ಸಂದೇಶವು ಪ್ರಬಲವಾಗಿದೆ, “ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿ. 4:12) ಅದನ್ನು ಜಾಗರೂಕವಾಗಿ ಪರಿಶೀಲನೆ ಮಾಡುವ ಅಗತ್ಯವನ್ನು ಅವಲೋಕಿಸಲಿಕ್ಕಾಗಿ, ನಾವು ಇತರರಿಗೆ ಹೇಗೆ ಸಹಾಯ ಮಾಡಬಲ್ಲೆವು? ನವೆಂಬರ್ ತಿಂಗಳಿನಲ್ಲಿ, ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್) ಎಂಬ ಪುಸ್ತಕದೊಂದಿಗೆ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅನ್ನು ಅಥವಾ ಹಳೆಯ 192 ಪುಟದ ಪುಸ್ತಕಗಳಲ್ಲಿ ಒಂದನ್ನು ನೀಡುವಾಗ, ನೀವು ಈ ಕೆಳಗಿನ ಸಲಹೆಗಳಲ್ಲಿ ಕೆಲವನ್ನು ಪ್ರಯತ್ನಿಸಲು ಬಯಸಬಹುದು.
2 ಅನೇಕ ಜನರು ತಮ್ಮ ಮೂಲ ಆವಶ್ಯಕತೆಗಳನ್ನು ನಿಭಾಯಿಸುವುದರ ಕುರಿತು ಚಿಂತಿಸುವುದರಿಂದ, ಬಹುಶಃ ಈ ಪ್ರಸ್ತಾವನೆಯು ಅವರ ಗಮನವನ್ನು ಸೆಳೆಯಸಾಧ್ಯವಿದೆ:
◼ “ಈ ದಿನಗಳಲ್ಲಿ ನಾನು ಯಾರೊಂದಿಗೆ ಮಾತಾಡುತ್ತೇನೊ ಅವರಲ್ಲಿ ಅನೇಕ ಜನರು, ತಮ್ಮ ಹಣಕಾಸಿನ ಹಂಗುಗಳನ್ನು ನಿಭಾಯಿಸುವುದರ ಕುರಿತು ಚಿಂತಿತರಾಗಿದ್ದಾರೆ. ಅನೇಕರು ಪ್ರಾಪಂಚಿಕ ವಿಷಯಗಳ ಬೆನ್ನಟ್ಟುವಿಕೆಯಲ್ಲಿ ಸಿಲುಕಿಕೊಂಡಿದ್ದಾರೆ, ಮತ್ತು ಇದು ಒತ್ತಡದಲ್ಲಿ ಫಲಿಸುತ್ತದೆ. ಅಂತಹ ವಿಷಯಗಳ ಕುರಿತಾದ ಸಲಹೆಗಾಗಿ ತಿರುಗಲು ಅತ್ಯುತ್ತಮವಾದ ಸ್ಥಳವು ಎಲ್ಲಿದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅನಗತ್ಯವಾದ ಸಮಸ್ಯೆಗಳನ್ನು ವರ್ಜಿಸಲು ನಮಗೆ ಸಹಾಯ ಮಾಡಸಾಧ್ಯವಿರುವ ಪ್ರಾಯೋಗಿಕ ಸಲಹೆಯನ್ನು ಬೈಬಲು ಒದಗಿಸುತ್ತದೆಂದು ನಾನು ಕಂಡುಕೊಂಡಿದ್ದೇನೆ. ನಾನು ಒಂದು ಉದಾಹರಣೆಯನ್ನು ನಿಮಗೆ ತೋರಿಸುತ್ತೇನೆ.” ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? ಎಂಬ ಪುಸ್ತಕದ 163ನೆಯ ಪುಟಕ್ಕೆ ತಿರುಗಿಸಿರಿ, ಮತ್ತು 3ನೆಯ ಪ್ಯಾರಗ್ರಾಫ್ನಲ್ಲಿ ಉದ್ಧರಿಸಲ್ಪಟ್ಟಿರುವ 1 ತಿಮೊಥೆಯ 6:9, 10ನ್ನು ಓದಿರಿ. 4ನೆಯ ಪ್ಯಾರಗ್ರಾಫ್ನ ಮೇಲೆ ಹೆಚ್ಚಿನ ಹೇಳಿಕೆಗಳನ್ನು ಮಾಡಿರಿ, ಮತ್ತು ತದನಂತರ ಪುಸ್ತಕವನ್ನು ನೀಡಿರಿ.
3 “ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ?” ಎಂಬ ಪುಸ್ತಕವನ್ನು ಅಥವಾ ಹಳೆಯ 192 ಪುಟದ ಪುಸ್ತಕಗಳಲ್ಲಿ ಒಂದನ್ನು ನೀಡುವಾಗ, ನೀವು ಪರಿಗಣಿಸಬಹುದಾದ ಒಂದು ಸಲಹೆಯು ಇಲ್ಲಿದೆ:
◼ “ಪ್ರತಿ ಬಾರಿ ನಾವು ಪೇಪರನ್ನು ಓದುವಾಗ ಅಥವಾ ವಾರ್ತೆಗೆ ಕಿವಿಗೊಡುವಾಗ, ನಮ್ಮನ್ನು ಚಿಂತಿತರನ್ನಾಗಿ ಮಾಡುವ ಇನ್ನೊಂದು ವಿಷಾದಕರ ಸಮಸ್ಯೆಯ ಕುರಿತು ನಾವು ಕೇಳುತ್ತೇವೆ. [ಇತ್ತೀಚೆಗೆ ವಾರ್ತೆಯಲ್ಲಿ ವರದಿಸಲ್ಪಟ್ಟ ಯಾವುದೋ ಗಲಭೆಯ ಘಟನೆಯನ್ನು ಪ್ರಸ್ತಾಪಿಸಿರಿ.] ಇಂತಹ ಸಮಸ್ಯೆಗಳೊಂದಿಗೆ ನಾವು ಹೇಗೆ ನಿಭಾಯಿಸಬಲ್ಲೆವು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದುವರೆಗೆ ಬರೆಯಲ್ಪಟ್ಟಿರುವ ಅತ್ಯಂತ ಮಹಾನ್ ಸಂದೇಶವು ಬೈಬಲಿನಲ್ಲಿದೆ ಮತ್ತು ‘ಮನುಷ್ಯನಿಗೆ ಇದುವರೆಗೆ ತಿಳಿದಿರುವಂತಹ ಎಲ್ಲ ಸಮಸ್ಯೆಗಳಿಗೆ ಎಲ್ಲ ಉತ್ತರಗಳು ಅದರ ಪುಟಗಳಲ್ಲಿವೆ’ ಎಂದು ಒಬ್ಬ ಪ್ರಸಿದ್ಧ ವ್ಯಕ್ತಿಯು ಹೇಳಿದನು. ಅವನು ಏನನ್ನು ಹೇಳಿದನೊ ಆ ವಿಷಯವು, ಬೈಬಲು ತಾನೇ ಹೇಳುವ ವಿಷಯವನ್ನು ಮನಸ್ಸಿಗೆ ತರುತ್ತದೆ. [2 ತಿಮೊಥೆಯ 3:16, 17ನ್ನು ಓದಿರಿ.] ನಾವು ಬೈಬಲಿನಲ್ಲಿ ಭರವಸೆಯಿಡಸಾಧ್ಯವಿರುವುದಕ್ಕೆ ಕಾರಣವನ್ನು ನಾನು ನಿಮಗೆ ತೋರಿಸುತ್ತೇನೆ.” ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಎಂಬ ಕಿರುಹೊತ್ತಗೆಯಿಂದ ಕೆಲವು ಮುಖ್ಯವಿಷಯಗಳನ್ನು ತೋರಿಸಿರಿ ಮತ್ತು ಒಂದು ನಿರ್ದಿಷ್ಟ ವಿಷಯದ ಮೇಲೆ ಬೈಬಲ್ ಬೋಧನೆಗಳನ್ನು ಕೊಡುವ, ಹಳೆಯ 192 ಪುಟದ ಪುಸ್ತಕಗಳಲ್ಲಿ ಒಂದನ್ನು ನೀಡಿರಿ. ಈ ಆಧುನಿಕ ಲೋಕದಲ್ಲೂ ಬೈಬಲಿನ ಸಲಹೆಯು ಪ್ರಾಯೋಗಿಕವಾಗಿದೆ ಎಂಬುದು ಎಷ್ಟು ಗಮನಾರ್ಹವಾಗಿದೆ ಎಂಬುದನ್ನು ಚರ್ಚಿಸಲು ನೀವು ನಂತರ ಹಿಂದಿರುಗುವಿರೆಂದು ಸೂಚಿಸಿರಿ.
4 ನಿಮ್ಮ ಟೆರಿಟೊರಿಯಲ್ಲಿ ಅಧಾರ್ಮಿಕ ಜನರು ಇರುವುದಾದರೆ, ನೀವು ಈ ಪ್ರಸ್ತಾವನೆಯನ್ನು ಪ್ರಯತ್ನಿಸಬಹುದು:
◼ “ಇಂದು ಅನೇಕ ಜನರು ಪವಿತ್ರ ಗ್ರಂಥಗಳನ್ನು ವಿರೋಧಾತ್ಮಕವಾಗಿ ಮತ್ತು ಕಾಲ್ಪನಿಕ ಕಥೆಗಳಿಗಿಂತ ಹೆಚ್ಚಿನದ್ದೇನೂ ಅಲ್ಲವೆಂಬಂತೆ ವೀಕ್ಷಿಸುತ್ತಾರೆ. ಧರ್ಮದ ಹೆಸರಿನಲ್ಲಿ ಅನೇಕ ಕೆಟ್ಟ ವಿಷಯಗಳು ನಡಿಸಲ್ಪಟ್ಟಿರುವುದನ್ನು ಅವರು ನೋಡಿದ್ದಾರೆ, ಇದರಿಂದಾಗಿ ಅವರು ಇನ್ನುಮುಂದೆ ಧಾರ್ಮಿಕ ಮುಖಂಡರಲ್ಲಿ ಭರವಸೆಯನ್ನು ಇಡುವುದಿಲ್ಲ. ವಾಸ್ತವದಲ್ಲಿ, ದೇವರು ನಮಗೆ ಯಾವುದಾದರೂ ಮಾರ್ಗದರ್ಶನೆಯನ್ನು ಒದಗಿಸಿದ್ದಾನೋ ಎಂದು ಹೆಚ್ಚೆಚ್ಚು ಜನರು ಕುತೂಹಲಪಡುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು?” ಉತ್ತರಕ್ಕಾಗಿ ಅನುಮತಿಸಿರಿ. ಮನೆಯವನ ಪ್ರತಿಕ್ರಿಯೆಯ ಮೇಲೆ ಅವಲಂಬಿಸಿ, ಮನೆಯವನ ಆಕ್ಷೇಪಣೆ ಅಥವಾ ದೃಷ್ಟಿಕೋನದೊಂದಿಗೆ ವ್ಯವಹರಿಸುವ, ನಿಮ್ಮಲ್ಲಿರುವ ಹಳೆಯ 192 ಪುಟದ ಪುಸ್ತಕಗಳಲ್ಲಿ ಒಂದರ ಒಂದು ಭಾಗಕ್ಕೆ ತಿರುಗಿಸಿರಿ, ಮತ್ತು ಒಂದು ಅಥವಾ ಎರಡು ಅಂಶಗಳನ್ನು ಚರ್ಚಿಸಿರಿ. ಉದಾಹರಣೆಗೆ, ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಎಂಬ ಪುಸ್ತಕದಲ್ಲಿ 12ನೆಯ ಅಧ್ಯಾಯವನ್ನು ಉಪಯೋಗಿಸಲು ನಿಮಗೆ ಸಂದರ್ಭವಿರಬಹುದು.
5 ಆತನ ಚಿತ್ತದ ಕುರಿತಾದ ಜ್ಞಾನವನ್ನು ಕಲಿಯಲು ಬಯಸುವವರೆಲ್ಲರಿಗೆ, ಅದು ಸುಲಭಲಭ್ಯವಾಗಿದೆ ಎಂಬುದನ್ನು ನಮ್ಮ ಮಹಾ ಉಪದೇಶಕನು ಖಚಿತಪಡಿಸಿದ್ದಾನೆ. ಬೈಬಲಿನ ನಿಜ ಮೌಲ್ಯವನ್ನು ಗಣ್ಯಮಾಡುವಂತೆ ಇತರರಿಗೆ ಸಹಾಯ ಮಾಡುವುದು, ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಿರುವ ಅತ್ಯಂತ ಉತ್ತಮ ವಿಷಯಗಳಲ್ಲಿ ಒಂದಾಗಿದೆ; ಅದು ಅವರ ಜೀವಗಳನ್ನು ರಕ್ಷಿಸಬಲ್ಲದು.—ಜ್ಞಾನೋ. 1:32, 33.