ಪ್ರಕಟನೆಗಳು
◼ ಸಾಹಿತ್ಯ ನೀಡುವಿಕೆಗಳು
ಜೂನ್: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಪುಸ್ತಕ ರೂ. 45ರ ಕಾಣಿಕೆಗೆ. ದೇಶೀಯ ಭಾಷೆಗಳಲ್ಲಿ ಯಾವುದೇ 192 ಪುಟದ ಹೊಸ ಪುಸ್ತಕಗಳು ರೂ. 15ರ ಕ್ರಮವಾದ ಬೆಲೆಗೆ ನೀಡಲ್ಪಡಬಹುದು.
ಜುಲೈ ಮತ್ತು ಆಗಸ್ಟ್: ಈ ಮುಂದಿರುವ ಯಾವುದಾದರೂ 32 ಪುಟದ ಬ್ರೋಷರನ್ನು ರೂ. 5ರ ಕಾಣಿಕೆಗೆ ನೀಡಬಹುದು: ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ಯಾರು ಸಹಾಯ ಮಾಡುವರು?, ನೀವು ತ್ರಯ್ಯೆಕ್ಯದಲ್ಲಿ ನಂಬಬೇಕೋ?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್), ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್), ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ಮತ್ತು ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ.
ಸೆಪ್ಟೆಂಬರ್: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25ರ ಕಾಣಿಕೆಗೆ (ದೊಡ್ಡ ಸೈಸ್ ರೂ 45ಕ್ಕೆ). ಮನೆ ಬೈಬಲ್ ಅಭ್ಯಾಸಗಳನ್ನು ಪ್ರಾರಂಭಿಸಲು ಪ್ರಯತ್ನಗಳು ಮಾಡಲ್ಪಡಬೇಕು.
◼ ಅನೇಕ ಸಭೆಗಳು ತಮ್ಮ ಅಂಚೆಯ ರವಾನೆಯೊಂದಿಗಿರುವ ಕಷ್ಟಗಳನ್ನು ವರದಿಸಿರುವ ಕಾರಣ, ಹಿರಿಯರು ತಮ್ಮ ಪರಿಸ್ಥಿತಿಯನ್ನು ಸ್ಥಳಿಕವಾಗಿ ಪರಿಶೀಲಿಸಬಹುದು. ಪತ್ರಿಕೆಗಳ ಕಟ್ಟುಗಳನ್ನು ಒಳಗೊಂಡು ಅಸಾಧಾರಣವಾದ ಸಂಖ್ಯೆಯ ಅಂಚೆಗಳನ್ನು ಸಭೆಯೊಂದು ಪಡೆಯುವ ನೋಟದಲ್ಲಿ, ತಮ್ಮ ಸ್ಥಳಿಕ ಅಂಚೆ ಕಚೇರಿಯೊಂದಿಗೆ ಮತ್ತು ಅಂಚೆಯವರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಹಿರಿಯರು ನಿಶಿತ್ಚರಾಗರಬೇಕು. ಅಂಚೆ ಅಧಿಕಾರಿಗಳೊಂದಿಗೆ ಕ್ರಮವಾಗಿ ಸಂಸರ್ಗ ಮಾಡಲು ಮತ್ತು ಸಂಪರ್ಕಿಸಲು, ಹಾಗೂ ಸ್ಥಳಿಕವಾಗಿ ಸೂಕ್ತವಾದದ್ದೆಂದು ಎಣಿಸುವಲ್ಲಿ, ಈ ಹೆಚ್ಚಿನ ಅಂಚೆಯನ್ನು ನಿರ್ವಹಿಸುವ ಮತ್ತು ತಲಪಿಸುವ ಅವರಿಗಾಗಿ ಕೃತಜ್ಞತೆಯಿಂದ ಅಂಚೆಯವರಿಗೆ ಇನಾಮು ಕೊಡಲು, ಒಬ್ಬ ಅಥವಾ ಹೆಚ್ಚು ಅರ್ಹ ಸಹೋದರರನ್ನು ನೇಮಿಸುವುದನ್ನು ಇದು ಒಳಗೊಳ್ಳುತ್ತದೆ.
◼ ಅಧ್ಯಕ್ಷ ಮೇಲಿಚಾರ್ವಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸ್‌ನ್ನು ಜೂನ್ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದು ಮಾಡಿದ ಅನಂತರ ಸಭೆಗೆ ಪ್ರಕಟನೆಯನ್ನು ಮಾಡಿರಿ.
◼ ಇನ್ನು ಮುಂದೆ, ಜಿಲ್ಲಾ ಅಧಿವೇಶನ, ಸರ್ಕಿಟ್ ಸಮ್ಮೇಳನ, ಮತ್ತು ವಿಶೇಷ ಸಮ್ಮೇಳನ ದಿನಗಳಲ್ಲಿ ಕೇವಲ ಲಘು ಉಪಾಹಾರವನ್ನು ದೊರಕಿಸಲಾಗುವುದು. ಕ್ಯಾಫಿಟೀರಿಯ ರೀತಿಯ ಊಟಗಳಿರುವುದಿಲ್ಲ. ಅವರು ಬಯಸುವುದಾದರೆ, ಉಪಾಹಾರ ಸ್ಥಳಗಳಲ್ಲಿ ಏನು ದೊರಕುತ್ತದೋ, ಅದಕ್ಕೆ ಹೆಚ್ಚನ್ನು ದೊರಕಿಸಲು ಹಾಜರಾಗುವವರು ತಮ್ಮ ಸ್ವಂತ ಆಹಾರವನ್ನು ತರಬಹುದು.
◼ ಗೋವಾದ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನದ ಸ್ಥಳವು ಮಡ್‌ಗಾವ್‌ನಿಂದ ಮಾಪುಸಕ್ಕೆ ಬದಲಾಯಿಸಲ್ಪಟ್ಟಿದೆ.
◼ 1995ರ ಅಧಿವೇಶನಕ್ಕೆ ಬ್ಯಾಡ್ಜ್ ಕಾರ್ಡ್‌ಗಳು, 1996ರ ಪರೀಕ್ಷಿಸುವುದು, 1996ರ ಕ್ಯಾಲೆಂಡರ್‌ಗಳು, 1996ರ ವರ್ಷಪುಸ್ತಕಗಳು, ಮತ್ತು 1996ರ ಜ್ಞಾಪಕ ಆಮಂತ್ರಣಗಳನ್ನು ವಿನಂತಿಸದ ಸಭೆಗಳು ಕೂಡಲೇ ವಿನಂತಿಸಬೇಕು. ಈ ಸಂಬಂಧದಲ್ಲಿ, ಏಪ್ರಿಲ್‌ನ ನಮ್ಮ ರಾಜ್ಯದ ಸೇವೆ ಯಲಿಯ್ಲ ಪ್ರಕಟನೆಯನ್ನು ದಯವಿಟ್ಟು ಪುನರ್ವಿಮರ್ಶಿಸಿರಿ.