1995ರ “ಹರ್ಷಭರಿತ ಸುತ್ತಿಗಾರರು” ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 ಕಳೆದ ವರ್ಷ ಭಾರತದಲ್ಲಿ ನಡೆದ “ದಿವ್ಯ ಭಯ” ಜಿಲ್ಲಾ ಅಧಿವೇಶನಗಳನ್ನು ಹಾಜರಾದ 23,363 ಜನರ ಮಧ್ಯದಲ್ಲಿದ್ದುದು ಎಂತಹ ಒಂದು ಆನಂದವಾಗಿತ್ತು! ದೀಕ್ಷಾಸ್ನಾನ ಪಡೆಯುವ ಮೂಲಕ ಒಟ್ಟು 830 ಜನರು ಯೋಗ್ಯವಾದ ದಿವ್ಯ ಭಯವನ್ನು ವ್ಯಕ್ತಪಡಿಸಿದರು. ಈ ವರ್ಷ 1995ರ “ಹರ್ಷಭರಿತ ಸುತ್ತಿಗಾರರು” ಎಂಬ ಮೂರು ದಿನಗಳ ಜಿಲ್ಲಾ ಅಧಿವೇಶನಗಳಿಗೆ ಕೂಡಿಬರುವುದು ಎಷ್ಟು ಉತ್ತೇಜನದಾಯಕವಾಗಿರುವುದು! ಆಸಕ್ತಿಯನ್ನು ಕೆರಳಿಸುವಂಥ ಆ ಮುಖ್ಯವಿಷಯವು, ನಮ್ಮ ಬೈಬಲ್ ವಿದ್ಯಾರ್ಥಿಗಳೊಂದಿಗೆ ಹಾಜರಾಗಲು ಎಲ್ಲ ಪ್ರಯತ್ನವನ್ನು ಮಾಡುವಂತೆ ನಮ್ಮನ್ನು ನಿಜವಾಗಿಯೂ ಪ್ರಚೋದಿಸತಕ್ಕದ್ದು. ಅಂತ್ಯದ ಈ ಸಮಯದಲ್ಲಿ ನಾವು ನಂಬಿಗಸ್ತಿಕೆಯಿಂದ ಯೆಹೋವನನ್ನು ಸೇವಿಸಲು ಮುಂದುವರಿದಂತೆ, ಕಾರ್ಯಕ್ರಮವು ನಮಗೆಲ್ಲರಿಗೂ ಆತ್ಮಿಕ ಚೈತನ್ಯದ ನಿಜವಾದ ಮೂಲವಾಗಿ ಪರಿಣಮಿಸುವುದು.
2 ನಿಮ್ಮ ಅಧಿವೇಶನದ ಏರ್ಪಾಡುಗಳನ್ನು ಬಹಳ ಮುಂಚಿತವಾಗಿಯೆ ಮಾಡಿಕೊಳ್ಳಲು ನಿಶ್ಚಯಿಸಿಕೊಳ್ಳಿ. ಇದರಿಂದ ಆರಂಭದ ಗೀತೆಯಿಂದ ಕೊನೆಯ ಪ್ರಾರ್ಥನೆಯ ವರೆಗೆ ಆನಂದಕರ ಆತ್ಮಿಕ ಕಾರ್ಯಕ್ರಮದ ಎಲ್ಲ ಮೂರು ದಿನಗಳನ್ನೂ ಆನಂದಿಸುವಂತೆ ಅಲ್ಲಿರಲು ನಿಮಗೆ ಸಾಧ್ಯವಾಗುವುದು. ನೆರವಿನ ಅಗತ್ಯವಿರುವವರನ್ನು, ವಿಶೇಷವಾಗಿ ಹೊಸದಾಗಿ ಆಸಕ್ತರಾಗಿರುವವರನ್ನು ನಿಮ್ಮ ಯೋಜನೆಗಳಲ್ಲಿ ಪ್ರೀತಿಯಿಂದ ಸೇರಿಸಿಕೊಳ್ಳಿ, ಇದರಿಂದ ಅವರು ಕೂಡ ಪ್ರತಿಯೊಂದು ಕಾರ್ಯಕ್ರಮಕ್ಕೆ ಉಪಸ್ಥಿತರಾಗಿರಬಲ್ಲರು. ಹಾಜರಾಗಲು ಯೋಜಿಸಬಹುದಾದ ಯಾವುದೇ ಬೈಬಲ್ ವಿದ್ಯಾರ್ಥಿಗಳೊಂದಿಗೆ ಈ ಪುರವಣಿಯಲ್ಲಿರುವ ಮಾಹಿತಿಯನ್ನು ಪರಿಗಣಿಸುವುದು ಬಹಳ ಉಪಯುಕ್ತವಾಗಿರುವುದು. (ಗಲಾ. 6:6, 10) ಕಾರ್ಯಕ್ರಮವು ಶುಕ್ರವಾರ ಬೆಳಗ್ಗೆ 9:40ಕ್ಕೆ ಸಂಗೀತದೊಂದಿಗೆ ಆರಂಭವಾಗಿ ಸರಿಸುಮಾರಾಗಿ ಸಂಜೆ 5 ಗಂಟೆಗೆ ಕೊನೆಗೊಳ್ಳುವುದು. ಶನಿವಾರದ ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಆರಂಭಗೊಂಡು ಸರಿಸುಮಾರಾಗಿ ಸಂಜೆ 4:50ಕ್ಕೆ ಗೀತೆ ಮತ್ತು ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುವುದು. ಆದಿತ್ಯವಾರದ ಬೆಳಗ್ಗಿನ ಕಾರ್ಯಕ್ರಮವು 9:30ಕ್ಕೆ ಆರಂಭವಾಗುತ್ತದೆ ಮತ್ತು ಆ ದಿನದ ಕಾರ್ಯಕ್ರಮವು ಸರಿಸುಮಾರಾಗಿ ಮಧ್ಯಾಹ್ನ 3:50ಕ್ಕೆ ಕೊನೆಗೊಳ್ಳುತ್ತದೆ.
3 ಆತ್ಮಿಕ ಉತ್ಸವಗಳಲ್ಲಿ—ಅವು ಸಭಾ ಕೂಟಗಳಾಗಿರಲಿ, ಸರ್ಕಿಟ್ ಸಮ್ಮೇಳನಗಳಾಗಿರಲಿ, ವಿಶೇಷ ಸಮ್ಮೇಳನ ದಿನಗಳಾಗಿರಲಿ ಅಥವಾ ಜಿಲ್ಲಾ ಅಧಿವೇಶನಗಳಾಗಿರಲಿ—ಉಪಸ್ಥಿತರಾಗಿರುವುದು ಎಷ್ಟೊಂದು ರೋಮಾಂಚಕ! ಯಾಕೆ? ದೇವರಿಗೆ ಭಯಪಡುವ ವ್ಯಕ್ತಿಗಳ ಸಾಹಚರ್ಯವು ಚೈತನ್ಯದಾಯಕವಾಗಿದೆ, ಮತ್ತು ಇಂತಹ ಸಂದರ್ಭಗಳಲ್ಲಿ ಸಾದರಪಡಿಸಲಾಗುವ ಆತ್ಮಿಕ ವಿಷಯಗಳು ನಮಗೆ ಅಧಿಕ ಪ್ರಾಮುಖ್ಯವಾದ ಸಂಗತಿಗಳ ಜ್ಞಾಪಕ ಹುಟ್ಟಿಸುತ್ತವೆ.
4 ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸಾವಿರಾರು ಮಂದಿ ಇಂತಹ ಆತ್ಮಿಕ ಕೂಟಗಳ ಕಡೆಗೆ ಸೆಳೆಯಲ್ಪಟ್ಟಿದ್ದಾರೆ. 1985 ಮತ್ತು 1994ರ ವರ್ಷಗಳ ನಡುವೆ ಲೋಕವ್ಯಾಪಕವಾಗಿ ಸಭೆಗಳ ಸಂಖ್ಯೆಯು—49,716 ರಿಂದ 75,573ಕ್ಕೆ—50 ಪ್ರತಿಶತಕ್ಕಿಂತಲೂ ಹೆಚ್ಚಾಗಿ ಅಭಿವೃದ್ಧಿ ಹೊಂದಿತು. ಒಟ್ಟುಗೂಡಿಸುವ ಕೆಲಸವನ್ನು ಯೆಹೋವನು ತ್ವರಿತಗೊಳಿಸಿದಂತೆ, ಅದಕ್ಕನುಗುಣವಾಗಿ ಜಿಲ್ಲಾ ಅಧಿವೇಶನಗಳ ಹಾಗೂ ಸರ್ಕಿಟ್ ಸಮ್ಮೇಳನಗಳ ಸಂಖ್ಯೆಯು ಹೆಚ್ಚಾಗುತ್ತದೆ. (ಯೆಶಾ. 60:22) ಭಾರತದಲ್ಲಿ ಜಿಲ್ಲಾ ಅಧಿವೇಶನಗಳ ಹಾಜರಿಯು 1985 ರಲ್ಲಿದ್ದ 11,243 ರಿಂದ 1994 ರಲ್ಲಿ 23,363ಕ್ಕೆ ಏರಿತು. ಹತ್ತು ವರ್ಷಗಳಲ್ಲಿ 108 ಪ್ರತಿಶತ ಅಭಿವೃದ್ಧಿ! ಇದು ಸಂಸ್ಥೆಯಲ್ಲಾದ ಮಹತ್ತರವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಫಲಸ್ವರೂಪವಾಗಿ ಈ ಅಧಿವೇಶನಗಳನ್ನು ಏರ್ಪಡಿಸುವುದರಲ್ಲಿ ಮತ್ತು ಅವುಗಳನ್ನು ನಿರ್ವಹಿಸುವುದರಲ್ಲಿ ಒಳಗೊಂಡಿರುವ ಕೆಲಸವು ಅತಿ ಹೆಚ್ಚಾಗಿದೆ. ಈ ಉತ್ಸವಗಳಿಗಾಗಿ ತಯಾರಿಸಲಾದ ಆತ್ಮಿಕ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಲು ನಾವು ಕೂಡಿಬರುವುದರಿಂದ, ಪ್ರಾಯೋಗಿಕವಾದಷ್ಟು ಮಟ್ಟಿಗೆ ಶಾರೀರಿಕ ಏರ್ಪಾಡುಗಳ ಕಡೆಗೆ ಲಕ್ಷ್ಯಕೊಡುವುದನ್ನು ಸರಳೀಕರಿಸುವುದು ಬುದ್ಧಿವಂತಿಕೆಯಾಗಿದೆ.
5 ತೆಗೆದುಕೊಳ್ಳಬೇಕಾದ ಹೆಜ್ಜೆಗಳು: ನಾವು ಪ್ರಗತಿಪರವಾಗಿ ಮುಂದೆ ಸಾಗಿದಂತೆ ಯೆಹೋವನ ಆಶೀರ್ವಾದಕ್ಕಾಗಿ ನಾವು ಎದುರುನೋಡುತ್ತೇವೆ. ಆತನ ಜನರಿಗೆ ಅಗತ್ಯವಾದ ವಿವೇಕ ಮತ್ತು ತಿಳಿವಳಿಕೆಯ ಆತ್ಮವನ್ನು ಆತನು ಕೊಟ್ಟಿದ್ದಾನೆಂಬುದನ್ನು ನೋಡಲು ನಾವು ಸಂತೋಷಿಸುತ್ತೇವೆ. ನಂಬಿಗಸ್ತ ಆಳು ವರ್ಗದ ಮುಖಾಂತರ, ಅದ್ಭುತವಾದ ರೀತಿಯಲ್ಲಿ ಯೆಹೋವನ ಉದ್ದೇಶದ ನೆರವೇರಿಕೆಗಾಗಿ ಯೇಸು ಕ್ರಿಸ್ತನು ವಿಷಯಗಳನ್ನು ದಕ್ಷತೆಯಿಂದ ನಿರ್ದೇಶಿಸಿದ್ದಾನೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. (ಮತ್ತಾ. 24:45-47; ಕೊಲೊ. 1:9, 10) ಜೂನ್ ತಿಂಗಳಿನ ನಮ್ಮ ರಾಜ್ಯದ ಸೇವೆಯ ಒಂದು ಪ್ರಕಟನೆಯು ಹೇಳಿದ್ದು: “ಇನ್ನು ಮುಂದೆ, ಜಿಲ್ಲಾ ಅಧಿವೇಶನ, ಸರ್ಕಿಟ್ ಸಮ್ಮೇಳನ, ಮತ್ತು ವಿಶೇಷ ಸಮ್ಮೇಳನ ದಿನಗಳಲ್ಲಿ ಕೇವಲ ಲಘು ಉಪಾಹಾರವನ್ನು ದೊರಕಿಸಲಾಗುವುದು. ಕ್ಯಾಫಿಟೀರಿಯ ರೀತಿಯ ಊಟಗಳಿರುವುದಿಲ್ಲ. ಅವರು ಬಯಸುವುದಾದರೆ, ಉಪಾಹಾರ ಸ್ಥಳಗಳಲ್ಲಿ ಏನು ದೊರಕುತ್ತದೋ, ಅದಕ್ಕೆ ಹೆಚ್ಚನ್ನು ದೊರಕಿಸಲು ಹಾಜರಾಗುವವರು ತಮ್ಮ ಸ್ವಂತ ಆಹಾರವನ್ನು ತರಬಹುದು.” ಈ ಏರ್ಪಾಡನ್ನು ಕೂಡಲೇ ಕಾರ್ಯರೂಪಕ್ಕೆ ತರಲಾಗಿದೆ ಮತ್ತು ಪ್ರಕಟನೆಗೆ ಸಕಾರಾತ್ಮಕ ಪ್ರತಿಕ್ರಿಯೆಯು ದೊರಕಿದೆ. ಈ ಬದಲಾವಣೆಯು ಯಾವ ರೀತಿಯಲ್ಲಿ ಪ್ರಯೋಜನಕರವಾಗಿರುವುದೆಂದು ಅರಿಯುವುದರಲ್ಲಿ ನೀವು ಆಸಕ್ತರಾಗಿರಬಹುದು. ಹೊಂದಾಣಿಕೆಗೆ ನಡೆಸಿರುವ ವಿಷಯದ ಮುಂದಿನ ಪುನರ್ವಿಮರ್ಶೆಯು ಬಹುಶಃ, ಅಧಿವೇಶನಗಳಲ್ಲಿ ಕೆಲಸವನ್ನು ಸರಳೀಕರಿಸಿದರಿಂದ ನಾವು ಈಗಾಗಲೇ ಪಡೆದಿರುವ ಪ್ರಯೋಜನಗಳ ಒಳ್ಳೆಯ ಮರುಜ್ಞಾಪನವಾಗಿ ಪರಿಣಮಿಸುವುದು.
6 ಸರಳೀಕರಿಸಲು ಮಾಡಲಾದ ಹಿಂದಿನ ಹೊಂದಾಣಿಕೆಗಳು: ಸ್ವಯಂ ಸೇವೆ ಮತ್ತು ರೂಮಿಂಗ್ನಂತಹ ಪ್ರಮಾಣಭೂತ ಹಾಗೂ ಸರಳೀಕರಿಸಿದ ಜಿಲ್ಲಾ ಅಧಿವೇಶನ ಏರ್ಪಾಡುಗಳ ಜಾರಿಗೊಳಿಸುವಿಕೆಯ ಮುಂಚೆ, ಅಧಿವೇಶನಪೂರ್ವ ಕೆಲಸದಲ್ಲಿ ಸಾವಿರಾರು ಸ್ಥಳೀಯ ಸಹೋದರಸಹೋದರಿಯರ ವತಿಯಿಂದ ಬಹಳಷ್ಟು ಕೆಲಸ ಅವಶ್ಯವಾಗಿತ್ತು. ದಿನನಿತ್ಯದ ಜೀವನ ಹಾಗೂ ಸಂಸ್ಥೆಯ ಸತತ ಬೆಳವಣಿಗೆಯ ಮೂಲಕ ನಮ್ಮ ಸಹೋದರರ ಮೇಲಿರುವ ಒತ್ತಡ ಮತ್ತು ತಗಾದೆಗಳ ನೋಟದಲ್ಲಿ, ಕೆಲಸವನ್ನು ಸರಳೀಕರಿಸಲು ಬೇಕಾದ ಹೊಂದಾಣಿಕೆಗಳು ಖಂಡಿತವಾಗಿ ಅಗತ್ಯವಾಗಿದ್ದವು. ಇದಕ್ಕೆ ಕೂಡಿಸಿ, ಅಮೆರಿಕ ಒಂದರಲ್ಲಿಯೇ ಆಹಾರ ಸೇವೆಯ ಕಾರ್ಯವನ್ನು ಸರಳೀಕರಿಸಿದ ಫಲಸ್ವರೂಪವಾಗಿ, ಆಹಾರವನ್ನು ಒದಗಿಸಲು ಕಾರ್ಯಕ್ರಮಗಳ ಸಮಯದಲ್ಲಿ ಕಷ್ಟಪಟ್ಟು ಕೆಲಸಮಾಡುತ್ತಿದ್ದ 70,000 ಕ್ಕಿಂತಲೂ ಹೆಚ್ಚಿನ ಸಹೋದರಸಹೋದರಿಯರು, 1978 ರಲ್ಲಿ ಕಾರ್ಯಕ್ರಮಕ್ಕೆ ಕಿವಿಗೊಡಲು ಶಕ್ತರಾದರು. 1987 ರಲ್ಲಿ ಅಧಿವೇಶನಗಳಲ್ಲಿ ಆಹಾರ ಸೇವೆಯ ಸಂಬಂಧದಲ್ಲಿ ಇನ್ನೂ ಹೆಚ್ಚಿನ ಸರಳೀಕರಿಸುವ ಪ್ರಕ್ರಿಯೆಗಳು ಜಾರಿಗೊಳಿಸಲ್ಪಟ್ಟವು ಮತ್ತು ಮುಂದಿನ ಸೇವಾ ವರ್ಷದಲ್ಲಿ ಆ ದೇಶದಲ್ಲಿರುವ ಸಮ್ಮೇಳನ ಹಾಲ್ಗಳಲ್ಲಿಯೂ ಹಾಗೆ ಮಾಡಲಾಯಿತು. ಈ ವರ್ಷದಿಂದ ಆರಂಭಿಸಿ ಆ ದೇಶದಲ್ಲಿ ಯಾವುದೇ ಆಹಾರವನ್ನು ಅಧಿವೇಶನಗಳಲ್ಲಿ ಅಥವಾ ಸಮ್ಮೇಳನಗಳಲ್ಲಿ ಒದಗಿಸಲಾಗುವುದಿಲ್ಲ. ಕೆಲಸವನ್ನು ಹಗುರ ಮಾಡುತ್ತಾ, ಅಧಿವೇಶನದ ಆತ್ಮಿಕ ವಿಷಯಾಂಶಗಳಿಗೆ ಹೆಚ್ಚಿನ ಗಮನವು ಕೊಡಲ್ಪಡುವಂತೆ ಅನುಮತಿಸುತ್ತಾ, ಇವು ಪ್ರಯೋಜನಕರ ಹೊಂದಾಣಿಕೆಗಳಾಗಿ ಪರಿಣಮಿಸಿವೆ. ಕೆಲಸಗಾರರು ಕಾರ್ಯಕ್ರಮದ ಹೆಚ್ಚಿನ ಭಾಗಕ್ಕೆ ಕಿವಿಗೊಡಲು ಮತ್ತು ಆನಂದಿಸಲು ಶಕ್ತರಾಗಿದ್ದಾರೆ. (ಧರ್ಮೋ. 31:12) ನಮ್ಮ ಮಧ್ಯದಲ್ಲಿ ಅನೇಕ ವರ್ಷಗಳ ನಿಷ್ಠಾವಂತ ಸೇವೆಯನ್ನು ಮಾಡಿರುವ ಆ ನಂಬಿಗಸ್ತ ಸಹೋದರರು ಈ ಅಭಿವೃದ್ಧಿಯನ್ನು ಚೆನ್ನಾಗಿ ಜ್ಞಾಪಿಸಿಕೊಳ್ಳುತ್ತಾರೆ ಮತ್ತು ಪಡೆದಂತಹ ನಿರ್ದೇಶನಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲಸವನ್ನು ಕಡಿಮೆಮಾಡಲು ಮತ್ತು ಆತ್ಮಿಕ ಕಾರ್ಯಕ್ರಮದಿಂದ ಇನ್ನೂ ಹೆಚ್ಚಿನವರು ಪೂರ್ಣವಾಗಿ ಪ್ರಯೋಜನಪಡೆಯುವುದನ್ನು ಸಾಧ್ಯಗೊಳಿಸಲು, ತದ್ರೀತಿಯ ಬದಲಾವಣೆಗಳನ್ನು ಈ ದೇಶದಲ್ಲಿ ಮಾಡಸಾಧ್ಯವಿದೆಯೊ?
7 ಮುಂಭಾವಿಸಲ್ಪಟ್ಟ ಬದಲಾವಣೆಗಳು: ಇತರ ದೇಶಗಳಲ್ಲಿ ಸರಳೀಕರಿಸಿದ ಊಟವನ್ನು ತಯಾರಿಸಿ ಬಡಿಸಿದ ವರ್ಷಗಳಲ್ಲಿ, ಸಾಪೇಕ್ಷವಾಗಿ “ಕೆಲವು ಮಾತ್ರ” ನಿಜವಾಗಿಯೂ “ಬೇಕಾದದ್ದು” ಎಂದು ಗಮನಿಸಲಾಯಿತು. (ಹೋಲಿಸಿ ಲೂಕ 10:38-42.) ಹಾಜರಾಗುವ ಸಂಖ್ಯೆಗೆ ಪುಷ್ಕಳ ಭೋಜನವನ್ನು ತಯಾರಿಸುವುದು ಬಹಳ ದೊಡ್ಡ ಪ್ರಮಾಣದ ಸರಬರಾಯಿಗಳನ್ನು ಮತ್ತು ಕೆಲಸವನ್ನು ರೂಪಿಸುತ್ತದೆ. ಅಷ್ಟೇ ಅಲ್ಲದೆ ದುಬಾರಿಯಾದ ಸಜ್ಜನ್ನು ಬಾಡಿಗೆಗೆ ತೆಗೆದುಕೊಳ್ಳುವಂತೆ ಅಥವಾ ಖರೀದಿಸುವಂತೆ ಮತ್ತು ತದನಂತರ ಸರ್ಕಿಟ್ಗಳ ಮೂಲಕ ಕಾಪಾಡಲ್ಪಡುವಂತೆ ಮತ್ತು ಸಾಗಿಸಲ್ಪಡುವಂತೆ ಅದು ಕೇಳಿಕೊಳ್ಳುತ್ತದೆ. ಆಗಲೂ ಏರ್ಪಾಡುಗಳನ್ನು ಸಂಘಟಿಸಲು ಮತ್ತು ಸಮರ್ಥಿಸಲು ಸ್ವಯಂ ಸೇವಕರ ಒಂದು ದೊಡ್ಡ ಸಂಖ್ಯೆಯು ಬೇಕಾಗುತ್ತದೆ. ಆಹಾರವನ್ನು ಕಡಿಮೆ ಪಕ್ಷ ಸ್ವಲ್ಪ ಸಮಯದ ತನಕವಾದರೂ ಕೂಡಿಡಬೇಕು. ಕ್ಯಾಫಿಟೀರಿಯ ಇಲಾಖೆಯಿಂದ ಊಟಗಳನ್ನು ಪಡೆದುಕೊಳ್ಳುವ ವ್ಯಕ್ತಿಗಳ ನಿಖರವಾದ ಸಂಖ್ಯೆಯ ಅಂದಾಜು ಮಾಡುವುದು ಬಹುಮಟ್ಟಿಗೆ ಅಸಾಧ್ಯವಾಗಿದೆ, ಆದುದರಿಂದ ಕೆಲವು ಸಂದರ್ಭಗಳಲ್ಲಿ ಊಟಗಳ ಸಂಖ್ಯೆ ಕಡಿಮೆಯಾಗಿ ಸಹೋದರರು ಆ ಕೊರತೆಗೆ ಸಿದ್ಧರಾಗಿರುವುದಿಲ್ಲ, ಅಥವಾ ಊಟವು ಹಾಳಾಗಿ ಹೋಗುತ್ತದೆ. ಇದೆಲ್ಲವು ಸೊಸೈಟಿಗೆ ಮಹಾ ಚಿಂತೆಯ ಹೊಣೆಗಾರಿಕೆಯನ್ನು ಉಂಟುಮಾಡಿದೆ. ತಮ್ಮ ಸ್ವಂತ ಅಡಿಗೆಯ ಸಜ್ಜನ್ನು ಹೊಂದಿರುವ ಸರ್ಕಿಟ್ಗಳ ವಿಷಯದಲ್ಲಿ, ಅದು ಕಾಪಾಡುವಿಕೆ, ಶೇಖರಣೆ, ಮತ್ತು ಸಾಗಣೆಯನ್ನು ಕೇಳಿಕೊಳ್ಳುತ್ತದೆ. ಇದು ಕೆಲಸ, ಸಮಯ, ಮತ್ತು ವೆಚ್ಚವನ್ನು ಒಳಗೊಳ್ಳುತ್ತದೆ. ಸರಳೀಕರಣದೊಂದಿಗೆ, ಈ ಕೆಲಸದಲ್ಲಿ ಹೆಚ್ಚಿನದನ್ನು ತಪ್ಪಿಸಬಹುದು ಮತ್ತು ಅನೇಕ ಸಹೋದರರು ಈ ಕೆಲಸಗಳಿಂದ ವಿಶ್ರಾಂತಿ ಪಡೆಯುವರು.
8 ಸಂಬಂಧಪಟ್ಟ ಈ ಕ್ಷೇತ್ರಗಳಲ್ಲಿ ಸ್ವಯಂ ಸೇವಕರಾಗಿ ಕೆಲಸಮಾಡಿದವರ ಮನಃಪೂರ್ವಕವಾದ ಸೇವೆಯು ಅಮೂಲ್ಯವಾದದ್ದಾಗಿದೆ ಮತ್ತು ಬಹಳಷ್ಟು ಗಣ್ಯಮಾಡಲ್ಪಡುತ್ತದೆ. ಹಾಗಿದ್ದರೂ ಈ ಸರಳೀಕರಣದಿಂದ, ಸಜ್ಜಿನ ಕಾಳಜಿಗಾಗಿ, ಊಟದ ಖರೀದಿ, ತಯಾರಿ, ಅಡಿಗೆ ಮತ್ತು ಬಡಿಸುವಿಕೆಗಾಗಿ ಕೆಲಸಮಾಡಿದ ನೂರಾರು ಸಹೋದರಸಹೋದರಿಯರು ತಮ್ಮ ಸಮಯವನ್ನು ಇತರ ಆವಶ್ಯಕ ರಾಜ್ಯ ಬೆನ್ನಟ್ಟುವಿಕೆಗಳಿಗೆ ಬಳಸಲು ಶಕ್ತರಾಗುವರು. ಇದರಲ್ಲಿ ಅಧಿವೇಶನಗಳಲ್ಲಿ ಹೆಚ್ಚು ಪೂರ್ಣವಾಗಿ ಸಾಹಚರ್ಯದಲ್ಲಿ ಆನಂದಿಸುವುದೂ ಸೇರಿದೆ. ಆಹಾರ ಸೇವೆಯಲ್ಲಿ ಕಾರ್ಯಮಾಡುತ್ತಿದ್ದ ಸ್ವಯಂ ಸೇವಕರಲ್ಲಿ ಅನೇಕರು, ಅಟೆಂಡೆಂಟ್ಸ್ ಮತ್ತು ಕ್ಲೀನಿಂಗ್ ಇಲಾಖೆಗಳಲ್ಲಿ ಸಹಾಯ ಮಾಡಲು ಈಗ ಶಕ್ತರಾಗಿರುವರು. ಇದು ಎಲ್ಲರ ಹೊರೆಯನ್ನು ಹಗುರಗೊಳಿಸುವುದು ಮತ್ತು ಆಹಾರ ಸೇವೆಯಲ್ಲಿ ಅನೇಕರ ವಿಷಯದಲ್ಲಿ ಆದಂತೆ, ರಾತ್ರಿ ತಡವಾಗಿ, ಬೆಳಗ್ಗೆ ಬೇಗನೆ, ಅಥವಾ ಕಾರ್ಯಕ್ರಮಗಳ ನಡುವೆ ಕೆಲಸಮಾಡುವುದನ್ನು ಇದು ಅಗತ್ಯಪಡಿಸದು.
9 ಏರ್ಪಾಡುಗಳನ್ನು ಬೆಂಬಲಿಸುವುದು: ಆಹಾರ ಸೇವೆಯನ್ನು ಸೇರಿಸಿ ಅಧಿವೇಶನದ ಏರ್ಪಾಡುಗಳಿಗೆ ಸಹೋದರಸಹೋದರಿಯರಾದ ನೀವು ಇಷ್ಟು ವರ್ಷಗಳ ವರೆಗೆ “ಪೂರ್ಣ ಹೃದಯದಿಂದ” ನೀಡಿದ ಉತ್ತಮ ಬೆಂಬಲವನ್ನು ಸೊಸೈಟಿಯು ಬಹಳ ಗಣ್ಯಮಾಡುತ್ತದೆ. (1 ಪೂರ್ವ. 29:9) ಇದು ಅನೇಕ ವಿಧಗಳಲ್ಲಿ ಸಹಾಯ ಮಾಡಿದೆ. ಒಳ್ಳೆಯ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲು ಮತ್ತು ಅಧಿವೇಶನದ ವೆಚ್ಚಗಳನ್ನು ನೋಡಿಕೊಳ್ಳಲು ಇದು ಸಾಧ್ಯಮಾಡಿದೆ. ಹಾಜರಾಗುವವರು ಮಧ್ಯಾಹ್ನದ ಅಲ್ಪ ಸಮಯದ ವಿರಾಮದಲ್ಲಿ ಅಧಿವೇಶನದ ಸ್ಥಳದಲ್ಲಿದ್ದು, ಆಹಾರವನ್ನು ಅನುಕೂಲಕರವಾಗಿ ಪಡೆಯಲು, ದಣಿವಾರಿಸಿಕೊಳ್ಳಲು, ನಂತರ ಆತ್ಮಿಕ ಕಾರ್ಯಕ್ರಮಕ್ಕೆ ಉಪಸ್ಥಿತರಾಗಿರಲು ಸಹ ಇದು ಸಾಧ್ಯಮಾಡಿದೆ. ಈ ಒದಗಿಸುವಿಕೆಗಳಿಗೆ ನೆರವು ನೀಡುವುದರಲ್ಲಿ ಸಹೋದರಸಹೋದರಿಯರ ಮೂಲಕ ತೋರಿಸಲ್ಪಟ್ಟಿರುವ ಉದಾರತೆ ಮತ್ತು ಬೆಂಬಲವು ನಿಸ್ಸಂದೇಹವಾಗಿ ಮುಂದುವರಿಯುವುದು. ಅದು ಪ್ರಾಯೋಗಿಕವಾದ ವಿಧದಲ್ಲಿ ಅವರ ಗಣ್ಯತೆಯ ಅಭಿವ್ಯಕ್ತಿಯಾಗಿದೆ.—ಜ್ಞಾನೋ. 11:25; ಲೂಕ 16:9.
10 ಆಹಾರಕ್ಕಾಗಿರುವ ನಿಮ್ಮ ಅಗತ್ಯಗಳಿಗೆ ಗಮನ ನೀಡುವುದು: ಆದರೂ ಈ ಹೊಂದಾಣಿಕೆಗಳೊಂದಿಗೆ, ನಮ್ಮ ಮಧ್ಯಾಹ್ನದ ವಿರಾಮದಲ್ಲಿ ದೈಹಿಕ ಪೋಷಣೆಯ ವಿಧದಲ್ಲಿ ಅಗತ್ಯವಾಗಿರುವ ಕೊಂಚವನ್ನು ತಮಗಾಗಿ ಒದಗಿಸಿಕೊಳ್ಳುವುದು ವ್ಯಕ್ತಿಗಳಿಗೆ ಮತ್ತು ಕುಟುಂಬ ಗುಂಪುಗಳಿಗೆ ಅಗತ್ಯವಾಗಿರಬಹುದು. ಆತ್ಮಿಕ ಕಾರ್ಯಕ್ರಮದ ಉತ್ತಮ ಪ್ರಯೋಜನಗಳನ್ನು ನಾವು ಅತಿ ಮೌಲ್ಯವುಳ್ಳದ್ದೆಂದು ಎಣಿಸುತ್ತೇವೆ. ಶಾರೀರಿಕ ಆಹಾರವು ಅನುಚಿತವಾದ ಪ್ರಮುಖತೆಯನ್ನು ಪಡೆಯುವಂತೆ ಅನುಮತಿಸುವುದು ಅವಿವೇಕತನವಾಗಿರುವುದು. ಈ ವಿಷಯದಲ್ಲಿ ಪ್ರತಿಯೊಬ್ಬನು “ಉತ್ತಮ ಕಾರ್ಯಗಳು ಯಾವವೆಂದು . . . ವಿವೇಚಿಸು” ವುದು ಪ್ರಾಮುಖ್ಯವಾಗಿದೆ. (ಫಿಲಿ. 1:9, 10ಎ) ಪೋಲೆಂಡ್, ರಷ್ಯಾ, ಮತ್ತು ಯುಕ್ರೇನ್, ಅಷ್ಟೇ ಅಲ್ಲದೆ ಇತರ ಸ್ಥಳಗಳಲ್ಲಿ ನಡೆದ ಯೆಹೋವನ ಜನರ ಇತ್ತೀಚಿನ ದೊಡ್ಡ ಅಧಿವೇಶನಗಳು, ಆಹಾರ ಸೇವೆಯ ಏರ್ಪಾಡುಗಳಿಲ್ಲದೆ ಉತ್ತಮ ಯಶಸ್ಸಿನೊಂದಿಗೆ ನಡೆಸಲ್ಪಟ್ಟವು. ಇದಕ್ಕೆ ಸೇರಿಸಿ, ಈ ದೇಶದಲ್ಲಿನ ಕೆಲವು ಸರ್ಕಿಟ್ಗಳು ಈಗಾಗಲೇ ತಮ್ಮ ಸಮ್ಮೇಳನಗಳನ್ನು ಮತ್ತು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳನ್ನು ಪುಷ್ಕಳ ಭೋಜನವನ್ನು ನೀಡದೆ ಕೇವಲ ಲಘು ಉಪಾಹಾರಗಳನ್ನು ನೀಡುವ ಮೂಲಕ ನಡೆಸಿವೆ. ಕೆಲವು ವಿದ್ಯಮಾನಗಳಲ್ಲಿ ಪ್ರತಿನಿಧಿಗಳು ಮಧ್ಯಾಹ್ನದ ಊಟಕ್ಕಾಗಿ ತಮ್ಮ ಸ್ವಂತ ಆಹಾರವನ್ನು ತಂದರು. ಸ್ಯಾಂಡ್ವಿಚ್ಗಳು, ಬೇಯಿಸಿದ ಮೊಟ್ಟೆಗಳು, ಮತ್ತು ಹಣ್ಣುಗಳಂಥ ಲಘು ಉಪಾಹಾರಗಳು ಲಭ್ಯವಾಗಿರುವವು ಮತ್ತು ಇದು ಅನೇಕ ಪ್ರತಿನಿಧಿಗಳಿಗೆ ಸಾಕಾಗಬಹುದು. ಹೆಚ್ಚು ಸತ್ವವುಳ್ಳ ಬೇರೆ ಏನನ್ನಾದರೂ ತಾವು ಇಷ್ಟಪಡುವೆವೆಂದು ಇತರರಿಗೆ ಅನಿಸಿದರೆ, ತಾವು ಲಘುವಾದ ಮಧ್ಯಾಹ್ನದ ಊಟವನ್ನು ತರುವಲ್ಲಿ, ಚುರುಕಾದ ಮಾನಸಿಕ ಸ್ಥಿತಿಯನ್ನು ಪಡೆದಿರುವಂತೆ ಅದು ನೆರವು ನೀಡುವುದೆಂದು ಮತ್ತು ಮಧ್ಯಾಹ್ನದ ಕಾರ್ಯಕ್ರಮದಿಂದ ಪೂರ್ಣ ಪ್ರಯೋಜನವನ್ನು ಪಡೆಯುವಂತೆ ಅವರಿಗೆ ಸಹಾಯ ಮಾಡುವುದೆಂದು ಅವರು ಕಂಡುಕೊಳ್ಳುವರು. ಇದಕ್ಕೆ ಹೊಂದಿಕೆಯಲ್ಲಿ, ಆಹಾರವನ್ನು ತರುವವರು ಸಾದಾ ಹಾಗೂ ಪುಷ್ಟಿದಾಯಕವಾದ ಆಹಾರವನ್ನು ತರತಕ್ಕದ್ದು. ಉದಾಹರಣೆಗೆ, ಯೇಸು ಸಮೂಹಗಳನ್ನು ಉಣಿಸಿದಾಗ, ಅವನು ಕೇವಲ ಎರಡು ಪದಾರ್ಥಗಳನ್ನು ಒದಗಿಸಿದನು—ರೊಟ್ಟಿ ಮತ್ತು ಮೀನು. (ಮತ್ತಾ. 14:16-20; ಲೂಕ 10:42ಎ ಸಹ ನೋಡಿರಿ.) ಆ ವಿಷಯವಾಗಿ, ಕಡಿಮೆಗೊಳಿಸಲ್ಪಟ್ಟ ಮಧ್ಯಾಹ್ನದ ವಿರಾಮ ಮತ್ತು ನಾವು ಬಳಸುವಂತಹ ರೀತಿಯ ಸೌಕರ್ಯಗಳ ನೋಟದಲ್ಲಿ, ಯಾವುದು ಸೂಕ್ತವೂ ಪ್ರಾಯೋಗಿಕವೂ ಆಗಿರಬಹುದೆಂಬ ವಿಷಯದಲ್ಲಿ ಕೆಲವು ಸೂಚನೆಗಳನ್ನು ನೀಡಲು ನಾವು ಇಷ್ಟಪಡುತ್ತೇವೆ.
11 ಅಧಿವೇಶನದಲ್ಲಿ ಆಹಾರ ಸೇವೆಯ ಏರ್ಪಾಡುಗಳು ಇನ್ನು ಮುಂದೆ ಇರದ ಕಾರಣ, ಸರಿಯಾದ ಯೋಜನೆಯನ್ನು ಮಾಡಿ, ಹಾಜರಾಗುವವರು ತಮ್ಮ ಕುಟುಂಬದೊಂದಿಗೆ ಹೊತ್ತರೂಟವನ್ನು ಮನೆಯಲ್ಲಾಗಲಿ ಅಥವಾ ಒಂದು ಸ್ಥಳೀಯ ಊಟದ ಸ್ಥಳದಲ್ಲಾಗಲಿ ಆನಂದಿಸಲು ಶಕ್ತರಾಗಿರುವರು. ಹಿಂದಿನ ರಾತ್ರಿ ಸಾಕಾಗುವಷ್ಟು ವಿಶ್ರಾಂತಿಯನ್ನು ಪಡೆಯುವ ಮೂಲಕ, ಬೇಗ ಎದ್ದು ಬೆಳಗ್ಗಿನ ಪೋಷಣೆಗೆ ಬೇಕಾಗಿರುವುದನ್ನು ಪಡೆಯಲು ಮತ್ತು ಇತರ ಪ್ರತಿನಿಧಿಗಳೊಂದಿಗೆ ಸಾಹಚರ್ಯವನ್ನು ಆನಂದಿಸಲು ಸಾಕಷ್ಟು ಸಮಯ ಇರುವಂತೆ ಅಧಿವೇಶನವನ್ನು ತಲಪಲು ನೀವು ಶಕ್ತರಾಗಿರತಕ್ಕದ್ದು. ಹೊಸ ಏರ್ಪಾಡಿನ ಮತ್ತೊಂದು ಪ್ರಯೋಜನವು ಏನೆಂದರೆ, ಆಹಾರ ಸೇವೆಯ ಸ್ವಯಂ ಸೇವಕರು ತಮ್ಮ ಕುಟುಂಬಗಳೊಂದಿಗೆ ಒಳಗೆ ಪ್ರವೇಶಿಸುವಂತೆ ಬಿಡಲ್ಪಡುತ್ತಿದ್ದಷ್ಟು ಬೇಗನೆ ಸಭಾಗೃಹವನ್ನು ತೆರೆಯುವ ಮತ್ತು ಕೆಲಸಗಾರರನ್ನು ಒಳಗೆ ಬಿಡುವ ಅಗತ್ಯವಿರುವುದಿಲ್ಲ. ಹೆಚ್ಚಿನ ವಿದ್ಯಮಾನಗಳಲ್ಲಿ ಕಟ್ಟಡದ ಬಾಗಿಲು ಎಲ್ಲ ಪ್ರತಿನಿಧಿಗಳಿಗೆ ಬೆಳಗ್ಗೆ ಎಂಟು ಗಂಟೆಗೆ ತೆರೆಯುವುದು. ಯಾರನ್ನು ನಿರ್ದಿಷ್ಟವಾದ ಕೆಲಸದ ನೇಮಕಗಳು ಬೇಗನೆ ಪ್ರವೇಶಿಸುವಂತೆ ಅಗತ್ಯಪಡಿಸುತವ್ತೊ ಅಂತಹ ಕೆಲವರು ಇದಕ್ಕೆ ಹೊರತಾಗಿದ್ದಾರೆ. ಹಿಂದಿನಂತೆ, ಆಸನಗಳಿಗಾಗಿ ಅಧಿವೇಶನ ಸ್ಥಳಕ್ಕೆ ಧಾವಿಸುವ ಯಾವ ಅಗತ್ಯವೂ ಇರುವುದಿಲ್ಲ, ಯಾಕೆಂದರೆ ಅಂದಾಜು ಮಾಡಲಾದ ಸಮೂಹಕ್ಕಾಗಿ ಸಾಕಾಗುವಷ್ಟು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಯೋಜಿಸಲಾಗಿದೆ.
12 ಮಧ್ಯಾಹ್ನದ ವಿರಾಮವು ಹಿಂದಿನ ಅಧಿವೇಶನಗಳಿಗಿಂತ ಸ್ವಲ್ಪ ಕಡಿಮೆಯಾಗಿರುವುದು. ಹಾಗಿದ್ದರೂ ಲಘು ಪೋಷಣೆಯನ್ನು ಪಡೆದುಕೊಳ್ಳಲು ಒಂದು ಅವಕಾಶವನ್ನು ಹಾಗೂ ಇತರರೊಂದಿಗೆ ಸಹವಾಸಕ್ಕಾಗಿ ಸಮಯವನ್ನು ಅದು ಇನ್ನೂ ಒದಗಿಸುವುದು. ಅಧಿವೇಶನ ನಗರದಲ್ಲಿ ಅಥವಾ ಹತ್ತಿರದಲ್ಲಿ ಜೀವಿಸುವ ಮತ್ತು ಪ್ರತಿದಿನ ಸಂಜೆ ಮನೆಗೆ ಹಿಂದಿರುಗುವ ಸಹೋದರಸಹೋದರಿಯರಿಗೆ ಲಘು ಉಪಾಹಾರದ ಸ್ಥಳಗಳಲ್ಲಿ ಲಭ್ಯವಿರುವ ಪದಾರ್ಥಗಳಿಗೆ ಭಿನ್ನವಾದವುಗಳು ಬೇಕೆಂದು ಅನಿಸಿದರೆ, ದಿನದ ಮಧ್ಯಾಹ್ನದ ವಿರಾಮಕ್ಕಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಅಲ್ಪ ಪ್ರಮಾಣದ ಆಹಾರವನ್ನು ತಯಾರಿಸಲು ಸುಲಭವಾಗಿ ಸಾಧ್ಯವಾಗುವುದು. ಇದು ಶಾಲೆಗೆ ಯುವಜನರು ತೆಗೆದುಕೊಂಡು ಹೋಗುವ ಊಟದಂತೆಯೇ ಇರುವುದು. ಅನೇಕ ಜನರು ತದ್ರೀತಿಯ ಊಟಗಳನ್ನು ತಮ್ಮ ಐಹಿಕ ಕೆಲಸಗಳಿಗೆ ತೆಗೆದುಕೊಂಡು ಹೋಗುತ್ತಾರೆ.
13 ಅಧಿವೇಶನ ನಗರದ ಹೊರಗಿನ ಸ್ಥಳಗಳಿಂದ ಹಾಜರಾಗುವವರಿಗೆ ಇದು ನಿಸ್ಸಂದೇಹವಾಗಿ ಒಂದು ಸವಾಲನ್ನು ಒಡ್ಡುವುದು, ಯಾಕೆಂದರೆ ತಮ್ಮ ಮಧ್ಯಾಹ್ನದ ಆಹಾರದ ಪದಾರ್ಥಗಳಿಗಾಗಿ, ಅವರು ಬಯಸುವುದಾದರೆ, ಮುಂಚಿತವಾದ ಯೋಜನೆ ಅಗತ್ಯವಾಗಿರುವುದು. ಕೆಲವು ಶುಷ್ಕ ಹಾಗೂ ಶೇಖರಿಸಬಹುದಾದ ಪದಾರ್ಥಗಳು ತಮ್ಮ ಬೇಡಿಕೆಗಳನ್ನು ಪೂರೈಸಲು ಸಾಕಾಗುವವೆಂದು ಕೆಲವರು ಕಂಡುಕೊಳ್ಳಬಹುದು, ಮತ್ತು ಇದನ್ನು ಮನೆಯಿಂದ ತರಬಹುದು. ಪ್ರತಿ ದಿನದ ಮಧ್ಯಾಹ್ನದ ವಿರಾಮಕ್ಕಾಗಿ ಇತರ ಆಹಾರ ಅಗತ್ಯಗಳನ್ನು ಅಧಿವೇಶನ ನಗರದಲ್ಲಿನ ಕಿರಾಣಿ ಸಾಮಾನಿನ ಅಂಗಡಿಯಿಂದ ಪಡೆದುಕೊಳ್ಳಬಹುದು.
14 ಅಡಿಗೆ ಮಾಡುವ ಏರ್ಪಾಡು ಇರದಿದ್ದಲ್ಲಿ ದಯಮಾಡಿ ಹೋಟೆಲ್ ಕೋಣೆಗಳಲ್ಲಿ ಅಡಿಗೆ ಮಾಡಬೇಡಿ. ಇದು ಒಂದು ಮರುಜ್ಞಾಪನದ ರೂಪದಲ್ಲಿದೆ. ಇದು ಅಪಾಯಕರ ಮತ್ತು ಕೆಲವೊಮ್ಮೆ ಹಾಗೆ ಮಾಡುವುದು ನ್ಯಾಯ ವಿರುದ್ಧವಾಗಿದ್ದು, ಕೋಣೆಯ ಉಪಕರಣಗಳನ್ನು ಕಲೆಗಳಿಂದ ಮತ್ತು ಎಣ್ಣೆಯಿಂದ ನಷ್ಟಪಡಿಸಬಲ್ಲದು. ಕೋಣೆಯಿಂದ ಅನೇಕ ದಿನಗಳ ವರೆಗೆ ತೆಗೆಯಲು ಕಷ್ಟವಾಗುವ ವಾಸನೆಗಳನ್ನು ಅದು ಉತ್ಪಾದಿಸುತ್ತದೆ. ಇದು ಕೋಣೆಯನ್ನು ಸಂಪೂರ್ಣವಾಗಿ ಶುಚಿಮಾಡುವ ವೆಚ್ಚ ಹಾಗೂ ಕೆಲಸವನ್ನು ಮಾಡದೆ ಕೋಣೆಯನ್ನು ಪುನಃ ಬಾಡಿಗೆಗೆ ನೀಡುವುದನ್ನು ಹೋಟೆಲ್ನವರಿಗೆ ಕಠಿನವಾಗಿ ಮಾಡುತ್ತದೆ. ಆದುದರಿಂದ ಮನೆಯಿಂದ ಆಹಾರವನ್ನು ತರುವ ಅಥವಾ ಅಧಿವೇಶನದಲ್ಲಿ ಕಡಿಮೆ ಪಕ್ಷ ಪ್ರಥಮ ದಿನ ಅಥವಾ ಎರಡನೆಯ ದಿನ ಉಪಯೋಗಿಸಸಾಧ್ಯವಿರುವ, ಕೆಟ್ಟು ಹೋಗದೆ ಇರುವ ಪದಾರ್ಥಗಳನ್ನು ಖರೀದಿಸುವ ವಿಷಯವನ್ನು ಪರಿಗಣಿಸುವುದು ವಿವೇಕಪ್ರದವಾಗಿರಬಹುದು. ನೀವು ಅಧಿವೇಶನ ಸ್ಥಳಕ್ಕೆ ತರಬಹುದಾದ ಒಂದು ಲಘು, ಶುಷ್ಕ ಭೋಜನವನ್ನು ನಿಮಗಾಗಿ ಬೆಳಗ್ಗೆ ಕಟ್ಟಿಕೊಡುವ ಒಂದು ಹೋಟೆಲನ್ನು ಕಂಡುಹಿಡಿಯಲು ನೀವು ಶಕ್ತರಾಗಿರಬಹುದು. ಈ ರೀತಿ ಕಟ್ಟಿಕೊಡುವ ಊಟವನ್ನು ಖರೀದಿಸುವುದು ಹೋಟೆಲ್ ಕೋಣೆಗಳಲ್ಲಿ ಆಹಾರದ ತಯಾರಿಕೆಯನ್ನು ರದ್ದುಗೊಳಿಸುವುದು.
15 ಅಧಿವೇಶನದ ಸಮಯದಲ್ಲಿ ಅಧಿವೇಶನ ಸ್ಥಳವು ನಿಜವಾಗಿಯೂ ಒಂದು ದೊಡ್ಡ ರಾಜ್ಯ ಸಭಾಗೃಹವಾಗುವುದರಿಂದ, ಮಧ್ಯಾಹ್ನದ ವಿರಾಮದಲ್ಲಿ ಒಂದು ಪಿಕ್ನಿಕ್ ಸನ್ನಿವೇಶ ವಿಕಾಸಗೊಳ್ಳುವುದನ್ನು ತಡೆಯುವುದು ಸಹ ವಿವೇಕಪ್ರದವು. ಮತ್ತು ರಾಜ್ಯ ಸಭಾಗೃಹದಲ್ಲಿ ಕೂಟಗಳ ಮಧ್ಯದಲ್ಲಿ ನಾವು ಹೇಗೆ ತಿನ್ನುವುದಿಲ್ಲವೊ ಹಾಗೆಯೆ ಅಧಿವೇಶನದ ಕಾರ್ಯಕ್ರಮಗಳ ಸಮಯದಲ್ಲಿ ನಾವು ತಿನ್ನುತ್ತಾ ಕುಡಿಯುತ್ತಾ ಇರಲಾರೆವು. ಸಭಾಂಗಣದ ಒಳಗೆ ಅವಾಹಕವಾದ ದೊಡ್ಡ ಪಾತ್ರೆಗಳನ್ನು ತರುವುದು ವಿವೇಕಪ್ರದವಾಗಿರಲಾರದು. ಅವು ಅಪಾಯವನ್ನುಂಟುಮಾಡುವವು ಮತ್ತು ಅವುಗಳನ್ನು ನಡುದಾರಿಗಳಲ್ಲಿ ಅಥವಾ ಆಸನಗಳ ಮೇಲೆ ಬಿಡಲು ಸಾಧ್ಯವಿಲ್ಲ. ನಮ್ಮ ಮಧ್ಯಾಹ್ನದ ವಿರಾಮಕ್ಕಾಗಿ ಬೇಕಾಗಿರುವ ಲಘು ಊಟಕ್ಕೆ ಬಹುಶಃ ಪ್ಲಾಸಿಕ್ಟ್ ಚೀಲಗಳು ಅಥವಾ ಪ್ಯಾಕೆಟ್ಗಳು ಹೆಚ್ಚು ಸೂಕ್ತವಾಗಿರುವವು. ಬೇಕಾದಲ್ಲಿ ಆಸನದ ಮೇಲಲ್ಲ, ಅದರ ಕೆಳಗೆ ಇಡಸಾಧ್ಯವಿರುವ ಸಣ್ಣ ಟಿಫಿನ್ ಅಥವಾ ಪ್ಲ್ಯಾಸ್ಟಿಕ್ ಪಾತ್ರೆಗಳನ್ನು ಉಪಯೋಗಿಸಬಹುದು.
16 ಅಧಿವೇಶನ ಸ್ಥಳಕ್ಕೆ ನಾವು ತರಲು ಆರಿಸುವ ಪಾತ್ರೆಗಳ ವಿಧದ ಸಂಬಂಧದಲ್ಲಿಯೂ ಎಚ್ಚರಿಕೆಯನ್ನು ತೋರಿಸುವ ಅಗತ್ಯವಿದೆ. ಯಾವುದೇ ರೀತಿಯ ಗಾಜಿನ ಪಾತ್ರೆಗಳು ಅಪಾಯಕರವಾಗಿರಬಲ್ಲವು. ಕೆಲವು ಸೌಕರ್ಯಗಳು ಅವುಗಳ ಉಪಯೋಗವನ್ನು ಸಹ ಪ್ರತಿಬಂಧಿಸುತ್ತವೆ. ಆದುದರಿಂದ ಕಟ್ಟಡದೊಳಗೆ ಯಾವುದೇ ಗಾಜಿನ ಪಾತ್ರೆಗಳನ್ನು ಅಥವಾ ಬಾಟ್ಲ್ಗಳನ್ನು ತರಬೇಡಿರೆಂದು ನಾವು ವಿನಂತಿಸುತ್ತೇವೆ.
17 ಹೆಚ್ಚಿನ ಪ್ರಯೋಜನಗಳು: ಇಂತಹ ಅಳವಡಿಸಲ್ಪಟ್ಟ ಏರ್ಪಾಡುಗಳ ವಿವೇಕವನ್ನು ನಾವು ನಿಜವಾಗಿಯೂ ನೋಡಬಲ್ಲೆವು. ಆತ್ಮಿಕ ಪ್ರಯೋಜನಗಳನ್ನು ಪಡೆಯುವುದರ ಕಡೆಗೆ ಎಲ್ಲರು ಪೂರ್ಣ ಗಮನವನ್ನು ಕೊಡಲು ಶಕ್ತರಾಗಿರುವರು. ಇದು ನಮ್ಮ ಸಭೆ ಸೇರುವಿಕೆಯ ನಿಜವಾದ ಉದ್ದೇಶ. ಈ ಪ್ರಯೋಜನಗಳು, ನಾವು ಆನಂದಿಸುವ ಸಹವಾಸದಲ್ಲಿ ಅಷ್ಟೇ ಅಲ್ಲದೆ ಸ್ವತಃ ಕಾರ್ಯಕ್ರಮದಲ್ಲಿಯೂ ಒದಗಿಸಲಾಗಿವೆ. ಆದುದರಿಂದ ಮಧ್ಯಾಹ್ನದ ವಿರಾಮದಲ್ಲಿ ಆಹಾರವನ್ನು ಹುಡುಕಲು ಸ್ಥಳವನ್ನು ಬಿಟ್ಟು ಹೋಗುವ ಬದಲಿಗೆ, ಲಘು ಉಪಾಹಾರಗಳ ಇಲಾಖೆಯಿಂದ ನೀಡಲ್ಪಡುವುದಕ್ಕಿಂತ ಹೆಚ್ಚು ಬೇಕೆಂದು ನಮಗೆ ಅನಿಸುವುದಾದರೆ ನಮ್ಮೊಂದಿಗೆ ಏನನ್ನಾದರೂ ತರುವುದು ಎಷ್ಟು ಪ್ರಯೋಜನಕಾರಿಯಾಗಿ ಪರಿಣಮಿಸುವುದು. ಇದು ನಮ್ಮ ಸಹೋದರಸಹೋದರಿಯರ ಸಾಹಚರ್ಯದಲ್ಲಿ ನಾವು ಆನಂದಿಸುವಂತೆ ಸಾಧ್ಯಮಾಡುವುದು ಮತ್ತು ಮಧ್ಯಾಹ್ನದ ಕಾರ್ಯಕ್ರಮದಲ್ಲಿರುವ ಯಾವದೇ ಭಾಗವನ್ನು ತಪ್ಪುವುದರಿಂದ ನಮ್ಮನ್ನು ತಡೆಯುವುದು.
18 ಮಧ್ಯಾಹ್ನದ ಕಾರ್ಯಕ್ರಮವನ್ನು ಹಿಂಬಾಲಿಸಿ ಆತ್ಮಿಕವಾಗಿ ಪುನಃ ಚೈತನ್ಯಗೊಂಡು, ಸ್ಥಳಿಕ ಭೋಜನ ಮಂದಿರಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸತ್ವವುಳ್ಳ ಭೋಜನವನ್ನು ತೆಗೆದುಕೊಳ್ಳುತ್ತಿರುವಾಗ ಕೆಲವರು ಮುಂದುವರಿದ ಕ್ರೈಸ್ತ ಸಾಹಚರ್ಯದಲ್ಲಿ ಮತ್ತು ಕಲಿತ ಒಳ್ಳೆಯ ವಿಷಯಗಳ ಕುರಿತು ಸಂಭಾಷಣೆಯಲ್ಲಿ ಆನಂದಿಸಬಹುದು. ಇತರರು ಒಂದು ಹೋಟೆಲಿನಿಂದ ಅಥವಾ ಕಿರಾಣಿ ಸಾಮಾನಿನ ಅಂಗಡಿಯಿಂದ ಆಹಾರದ ಸರಬರಾಯಿಗಳನ್ನು ಖರೀದಿಸಬಹುದು. ತಮ್ಮ ಸ್ವಂತ ಮನೆಗಳಿಗೆ ಹಿಂದಿರುಗಲು ಶಕ್ತರಾಗಿರುವವರು, ಕ್ಷೇತ್ರ ಸೇವೆಯಲ್ಲಿ ಅಥವಾ ಐಹಿಕ ಕೆಲಸದಲ್ಲಿ ತಾವು ವ್ಯಯಿಸುವ ಇತರ ದಿನಗಳಲ್ಲಿ ಮಾಡುವಂತೆಯೆ ಮನೆಯಲ್ಲಿ ಸಂಜೆಯ ಊಟವನ್ನು ಮಾಡಲು ಆರಿಸಬಹುದು.
19 ಈ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ನಾವು ಆತ್ಮಿಕ ಔತಣವನ್ನು ನಿಜವಾಗಿಯೂ ಅನುಭೋಗಿಸುತ್ತೇವೆ. ಅಲ್ಲಿ ನಾವು ಹೊಸ ಪ್ರಕಾಶನಗಳನ್ನು, ಉತ್ತಮ ಬೋಧನೆಯನ್ನು, ಮತ್ತು ಪ್ರಾಯೋಗಿಕ ಸಲಹೆಯನ್ನು ಪಡೆಯುತ್ತೇವೆ. ಒಟ್ಟುಸೇರಿರುವ ದೇವರ ಜನರೊಂದಿಗೆ ಇರುವ ಆನಂದದೊಂದಿಗೆ ಪ್ರತಿಯೊಬ್ಬರೂ ಸ್ಮರಿಸಿಕೊಳ್ಳುವುದು ಈ ಆಶೀರ್ವಾದಗಳನ್ನೇ. ಜ್ಞಾನೋಕ್ತಿ 10:22 ಹೇಳುವುದು: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.” ಇದು ಯಾಕೆಂದರೆ ಯೆಹೋವನ ಜನರೋಪಾದಿ ಅಧಿವೇಶನಗಳನ್ನು ನಾವು, ಪ್ರಾಪಂಚಿಕ ಅಪೇಕ್ಷೆಗಳನ್ನು ಮತ್ತು ಹಿತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಜರಾಗುವುದಿಲ್ಲ. ಆತ್ಮಿಕ ವಿಧದಲ್ಲಿ ಸಾಧ್ಯವಿರುವ ಅತ್ಯಂತ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಸಕಾರಾತ್ಮಕ ಬಯಕೆಯಿಂದ ನಾವು ಕೂಡಿಬರುತ್ತೇವೆ, ಮತ್ತು ನಾವು ತೋರಿಸುವ ಆತ್ಮಕ್ಕಾಗಿ ಯೆಹೋವನು ನಮಗೆ ಹೇರಳವಾಗಿ ಪ್ರತಿಫಲ ನೀಡುತ್ತಾನೆ.—1 ತಿಮೊ. 6:6-8; ಇಬ್ರಿ. 11:6.
20 ಉತ್ತೇಜನಕ್ಕಾಗಿರುವ ಈ ಸಂದರ್ಭಗಳು ಆತ್ಮಿಕ ಕೊಯಿನ್ಲ ಪ್ರಗತಿಯ ಕುರಿತು ಸಹ ನಮಗೆ ಜ್ಞಾಪಕ ಹುಟ್ಟಿಸುತ್ತದೆ. (ಯೋಹಾನ 4:35, 36) ಆನಂದಮಯ ಅಭಿವೃದ್ಧಿಗಾಗಿ ತಯಾರಿಸುವಂತೆ ಯೆಶಾಯ 54 ನೆಯ ಅಧ್ಯಾಯದ ಆರಂಭದ ಮಾತುಗಳು ಯೆಹೋವನ ಪತ್ನಿಸದೃಶ ಸಂಸ್ಥೆಗೆ ಕರೆ ನೀಡುತ್ತವೆ. ಹೆಚ್ಚಿನ ಬೆಳವಣಿಗೆ, ವಿಸ್ತರಣೆ, ಮತ್ತು ನವೀಕರಿಸಿದ ಬಲ ಸಮೀಪದ ಭವಿಷ್ಯತ್ತಿನಲ್ಲಿವೆ. ಇದು ಯೆಶಾಯನು ಪ್ರವಾದಿಸಿದಂತಿದೆ: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದಮ್ದಾಡಿ ಗೂಟಗಳನ್ನು ಬಲಪಡಿಸು. ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ.” ಈ ಪ್ರೇರಕ ಪ್ರವಾದನೆಯ ನೆರವೇರಿಕೆಯು ನಾವು ಈಗ ನೋಡುವ ಸತ್ಯ ಆರಾಧನೆಯ ಅದ್ಭುತ ವಿಸ್ತರಣೆಯಲ್ಲಿ ಫಲಿಸಿದೆ.—ಯೆಶಾ. 54:1-4.
21 ಈ ಸರಳೀಕರಿಸಿದ ಅಧಿವೇಶನಾ ಏರ್ಪಾಡನ್ನು ಕಾರ್ಯರೂಪಕ್ಕೆ ತರುವುದು ಒಳ್ಳೆಯ ತೀರ್ಮಾನದ ಮಾರ್ಗವೆಂದು ನಿಜವಾಗಿಯೂ ತೋರಿಬರುತ್ತದೆ. ಇದರಿಂದ ತಯಾರಿಸಲ್ಪಟ್ಟಿರುವ ಆತ್ಮಿಕ ಕಾರ್ಯಕ್ರಮವನ್ನು ಎಲ್ಲರು ಕಡಿಮೆ ಅಪಕರ್ಷಣೆಯೊಂದಿಗೆ ಆನಂದಿಸಲು ಶಕ್ತರಾಗುವರು. ಇದು ಕೂಡ ಯೆಹೋವನ ಆಶೀರ್ವಾದವನ್ನು ಪಡೆಯುವುದೆಂದು ನಾವು ನಂಬುತ್ತೇವೆ, ಯಾಕೆಂದರೆ ಇನ್ನೂ ಹೆಚ್ಚಿನ ಬೆಳವಣಿಗೆಯ ಅಧಿಕ ಪರಿಣಾಮಕಾರಿ ನಿರ್ವಹಣೆಗೆ ಇದು ಅನುಮತಿ ನೀಡುವುದು. ಅಗತ್ಯವಾಗಿರುವ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಸಂತೋಷಕರ ಸಾಹಚರ್ಯದ ನಮ್ಮ ಯೋಜಿತ ದಿನಗಳನ್ನು ಮತ್ತು ಆತ್ಮಿಕ ಒಳ್ಳೆಯ ವಿಷಯಗಳನ್ನು ಆನಂದಿಸಲು ನಾವು ಶಕ್ತರಾಗಿರುವೆವು. ನಾವು ಸೇರಿಬಂದು ಆತನ ಮೇಜಿನಲ್ಲಿ ಉಣ್ಣಲು ಮುಂದುವರಿದಂತೆ ಯೆಹೋವನು ನಮ್ಮ ಎಲ್ಲ ಪ್ರಯತ್ನಗಳನ್ನು ಆಶೀರ್ವದಿಸುವನೆಂಬುದು ನಮ್ಮ ಯಥಾರ್ಥ ಪ್ರಾರ್ಥನೆಯಾಗಿದೆ.—ಹೋಲಿಸಿ ಧರ್ಮೋಪದೇಶಕಾಂಡ 16:14, 15.
[ಪುಟ 6ರಲ್ಲಿರುವಚೌಕ]
ಸರಳೀಕರಿಸಿದ ಆಹಾರ ಸೇವೆಯ ಏರ್ಪಾಡುಗಳ ಪ್ರಯೋಜನಗಳು
▪ ಅಧಿಕ ಸಾಹಚರ್ಯಕ್ಕೆ ಅನುಮತಿ ನೀಡುತ್ತಾ, ಕಾರ್ಯಕ್ರಮದ ಮೊದಲು, ಮಧ್ಯದಲ್ಲಿ, ಮತ್ತು ಅನಂತರ ಕಡಿಮೆ ಕೆಲಸ
▪ ಕಾಪಾಡಲು ಕಡಿಮೆ ಆಹಾರ ಸೇವೆಯ ಉಪಕರಣಗಳು
▪ ಆತ್ಮಿಕ ಕಾರ್ಯಕ್ರಮಕ್ಕೆ ಅಧಿಕ ಜನರು ಪೂರ್ಣ ಗಮನವನ್ನು ಕೊಡಲು ಶಕ್ತರು
▪ ಇತರ ಇಲಾಖೆಗಳಿಗೆ ನೆರವು ನೀಡಲು ಹೆಚ್ಚು ಸ್ವಯಂಸೇವಕರು ಲಭ್ಯ
▪ ಇತರ ದೇವಪ್ರಭುತ್ವ ಬೆನ್ನಟ್ಟುವಿಕೆಗಳಿಗೆ ಹೆಚ್ಚು ಸಮಯ ಲಭ್ಯ
ಬಯಸುವಲ್ಲಿ ಮಧ್ಯಾಹ್ನದ ವಿರಾಮಕ್ಕಾಗಿ ತರಬಲ್ಲ ಸೂಚಿತ ಪದಾರ್ಥಗಳು
▪ ಲಘುವಾದ, ಸರಳ, ಹಾಗೂ ಪುಷ್ಟಿದಾಯಕ ಊಟದ ಪದಾರ್ಥಗಳು
▪ ಚಪಾತಿಗಳು ಅಥವಾ ಬೇಯಿಸಲ್ಪಟ್ಟ ಶುಷ್ಕ ಕಾಯಿಪಲ್ಯಗಳೊಂದಿಗೆ ಪರೋಟ
▪ ಶುಷ್ಕ ಹಣ್ಣುಗಳು, ಕಾಯಿಗಳು, ಕಾವಿನಿಂದ ಬೇಯಿಸಿದ ಪದಾರ್ಥಗಳು, ತಾಜಾ ಹಣ್ಣು
▪ ಅಧಿವೇಶನ ಸೌಕರ್ಯದಲ್ಲಿ ಪ್ರತಿನಿಧಿಗಳಿಗೆ ಅಂತಹ ಊಟಗಳನ್ನು ಮಾಡುವ ಸ್ಥಳವು ಇರುವಲ್ಲಿ, ಅನ್ನ ಮತ್ತು ಬೇಯಿಸಿದ ಕಾಯಿಪಲ್ಯಗಳಿರುವ ಒಂದು ಟಿಫಿನನ್ನು ಸಹ ತರಬಹುದು
ಅಧಿವೇಶನ ಸೌಕರ್ಯದೊಳಗೆ ತರಬೇಡಿ
▪ ಮದ್ಯಸಾರದ ಪಾನೀಯಗಳು
▪ ಗಾಜಿನ ಪಾತ್ರೆಗಳು ಅಥವಾ ಬಾಟ್ಲ್ಗಳು
▪ ದೊಡ್ಡ ಗಾತ್ರದ ಆಹಾರದ ಪಾತ್ರೆಗಳು
ಮಾಂಸಾಹಾರವನ್ನು ತರುವುದರ ಕುರಿತು ಎಚ್ಚರವುಳ್ಳವರಾಗಿರ್ರಿ. ಅನೇಕ ಸಭಾಗೃಹಗಳು ಕಟ್ಟಡದೊಳಗೆ ಅಂತಹ ಆಹಾರದ ಸೇವನೆಯನ್ನು ಪ್ರತಿಬಂಧಿಸುತ್ತವೆ. ಸಂದೇಹ ಇರುವಲ್ಲಿ, ಅಂತಹ ಪದಾರ್ಥಗಳನ್ನು ತೊರೆಯುವುದು ಹೆಚ್ಚು ಸುರಕ್ಷಿತ.