ಪ್ರಕಟನೆಗಳು
▪ ಪುಸ್ತಕ ನೀಡುವಿಕೆಗಳು: ಜುಲೈ: ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಬ್ರೋಷರ್ ರೂ. 4 ಕಾಣಿಕೆಗೆ. ಇದು ಎಲ್ಲಿ ದೊರೆಯುವುದಿಲ್ಲವೋ, ಅಲ್ಲಿ ಅದೇ ಕಾಣಿಕೆಗೆ ಕೆಳಗಿನ ಬ್ರೋಷರ್‌ಗಳಲ್ಲಿ ಯಾವುದಾದರೊಂದನ್ನು ನೀಡಬಹುದು: ಡಸ್ ಗಾಡ್ ರಿಯಲಿ ಕೇರ್ ಅಬೌಟ್ ಅಸ್?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, “ಇಗೋ! ಎಲ್ಲವನ್ನು ಹೊಸದುಮಾಡುತ್ತೇನೆ,” ನೀವು ತ್ರಯೈಕ್ಯವನ್ನು ನಂಬ ಬೇಕೋ?, ದಿ ಡಿವೈನ್ ನೇಮ್ ದ್ಯಾಟ್ ವಿಲ್ ಎಂಡ್ಯೂರ್ ಫಾರೆವರ್!, ಯಾ ದ ಗವರ್ನ್‌ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪ್ಯಾರಡೈಸ್. ಆಗಸ್ಟ್ ಮತ್ತು ಸಪ್ಟಂಬರ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ. ದೊಡ್ಡ ಸೈಜ್ ರೂ. 40 ಮತ್ತು ಚಿಕ್ಕ ಸೈಜ್ ರೂ. 20 ರ ಕಾಣಿಕೆಗೆ. ಅಕ್ಟೋಬರ್: ಕಾವಲಿನಬುರುಜು ಯಾ ಎಚ್ಚರ! ಕ್ಕೆ ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ. ಒಂದು ಚಂದಾದ ನೀಡುವಿಕೆಯು ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ರೂ. 3 ಕ್ಕೆ ನೀಡಬಹುದು. ಸೂಕ್ತವಾದಲ್ಲಿ ಮ್ಯಾನ್‌ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕವನ್ನು ಕೂಡ ರೂ. 30 ರ ಕಾಣಿಕೆಗೆ ನೀಡಬಹುದು. ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.
▪ ಅಂಚೆಯ ಮೂಲಕ ದೊರೆಯುವ ಎಚ್ಚರ! ಪತ್ರಿಕೆಯ ಮಾಸಿಕ ಸಂಚಿಕೆಗಳ ಪಟ್ಟಿಗೆ ಗುಜರಾಥಿ ಭಾಷೆಯನ್ನು ಸೇರಿಸಲಾಗಿದೆ. ಹೀಗೆ ಗುಜರಾಥಿ ಯಲ್ಲಿ ಎಚ್ಚರ! ಪತ್ರಿಕೆಗಾಗಿ ಒಂದು ವರ್ಷದ ಚಂದಾಗಳನ್ನು ರೂ. 30 ರ ಕಾಣಿಕೆಗೆ ಪಡೆದುಕೊಳ್ಳಬಹುದು.
▪ ಪತ್ರಿಕೆ ಸೈಜಿನ 4 ಪುಟದ ಹೌ ಟು ಫೈಂಡ್ ದ ರೋಡ್ ಟು ಪ್ಯಾರಡೈಸ್ ಎಂಬ ಕಿರುಹೊತ್ತಗೆಯ ಬಹಳ ಮಿತವಾದ ಸಂಗ್ರಹವು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಈಗ ಲಭ್ಯವಿದೆ. ಈ ಕಿರುಹೊತ್ತಗೆಯು ವಿಶೇಷವಾಗಿ ಮುಸ್ಲಿಮ್ ನಂಬಿಕೆಯ ವ್ಯಕ್ತಿಗಳಿಗಾಗಿ ತಯಾರಿಸಲಾಗಿದೆ. ಪ್ರತಿ ಪ್ರಚಾರಕನು ಒಂದನ್ನು ಒಯ್ಯಲು ಮತ್ತು ಸೂಕ್ತವಾದಲ್ಲಿ ಮನೆಯ ಬಾಗಿಲಿನಲ್ಲಿ ತೋರಿಸಲು, ಸಭೆಗಳು ಈ ಕಿರುಹೊತ್ತಗೆಗಳ ಒಂದು ಸಣ್ಣ ಸಂಗ್ರಹವನ್ನು ಆರ್ಡರ್ ಮಾಡಬಹುದು, ಆದರೆ ಸದ್ಯಕ್ಕೆ ಸಾರ್ವಜನಿಕ ಹಂಚಿಕೆಗಾಗಿ ನಮ್ಮಲ್ಲಿ ಸಾಕಷ್ಟು ಸಂಗ್ರಹವಿಲ್ಲ.
▪ ದೊರೆಯುವ ಹೊಸ ಪ್ರಕಾಶನಗಳು:
ಬಂಗಾಳಿ: ಎಚ್ಚರ! ಬ್ರೋಷರ್ 13-1; ಮರಾಠಿ: ಎಚ್ಚರ! ಬ್ರೋಷರ್ 13-1.
▪ ಪುನಃ ದೊರೆಯುವ ಪ್ರಕಾಶನಗಳು:
ತಮಿಳು: ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ; ಇಜ್ ದೇರ್ ಎ ಗಾಡ್ ಹೂ ಕೇರ್ಸ್?