ಕಾವಲಿನಬುರುಜು—ಹೊತ್ತುಹೊತ್ತಿಗೆ ಆತ್ಮಿಕ ಆಹಾರ
1 ಬಹುಮಟ್ಟಿಗೆ 114 ವರ್ಷಗಳಿಂದ, ಕಾವಲಿನಬುರುಜು ಅದರ ವಾಚಕರಿಗೆ ಆತ್ಮಿಕವಾಗಿ ಸಚೇತಕರಾಗಿಟ್ಟುಕೊಳ್ಳುವಂತೆ ಎಚ್ಚರಿಸುತ್ತಾ ಇದೆ. ಅದರ ಜೊತೆ ಪತ್ರಿಕೆ ಎಚ್ಚರ!ವು ನಮ್ಮ ಸಂತತಿಯೊಳಗಿನ ಶಾಂತಿಭರಿತ ಮತ್ತು ಭದ್ರತೆಯ ಒಂದು ಹೊಸ ಲೋಕದ ನಿರ್ಮಾಣಿಕನ ವಾಗ್ದಾನದಲ್ಲಿ ಭರವಸವನ್ನು ಕಟ್ಟುತ್ತದೆ. ಒಟ್ಟಿಗೆ, ಇವೆರಡು ಪ್ರಕಾಶನಗಳು ಅಂಧಕಾರಮಯ ಲೋಕದ ಮೂಲಕ ನಮ್ಮ ದಾರಿಯನ್ನು ಬೆಳಗಿಸುವುದರಲ್ಲಿ ನಂಬುಗೆಯ ಸಾಧನಗಳಾಗಿರುತ್ತವೆ. (ಯೆಶಾ. 60:2) ದೇವರ ವಾಕ್ಯದ ಸತ್ಯತೆಯು ಎಂದಿಗೂ ಮಾರ್ಪಡುವುದಿಲ್ಲ, ಆದರೆ ನಮಗೆ ಆತ್ಮಿಕ “ಆಹಾರವನ್ನು ಹೊತ್ತುಹೊತ್ತಿಗೆ” ಕೊಡಲು ಇವು ಮತ್ತು ಇತರ ಸಾಧನಗಳನ್ನು ಯೆಹೋವನು ಬಳಸುವಂತೆಯೇ, ಸತ್ಯತೆಯ ನಮ್ಮ ತಿಳಿವಳಿಕೆಯು ಸ್ಪಷ್ಟವಾಗಿಗುತ್ತಾ ಬರುತ್ತದೆ.—ಮತ್ತಾ. 24:45; ಜ್ಞಾನೋ. 4:18.
2 ಪತ್ರಿಕೆಗಳ ಅತ್ಯುತ್ತಮ ಉಪಯೋಗವನ್ನು ಮಾಡಿರಿ: ಕಾವಲಿನಬುರುಜು ಮತ್ತು ಎಚ್ಚರ! ಎರಡನ್ನೂ ಓದುವಂತೆ ಜನರನ್ನು ಉತ್ಸಾಹಪೂರ್ವಕವಾಗಿ ಪ್ರೋತ್ಸಾಹಿಸುವುದರಿಂದ ನಮಗೆ ದೊರೆತಿರುವ ಆತ್ಮಿಕ ಜ್ಞಾನೋದಯಕ್ಕಾಗಿ ನಮ್ಮ ಕೃತಜ್ಞತೆಯನ್ನು ನಾವು ಪ್ರದರ್ಶಿಸಬಹುದು. ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನಮ್ಮ ಮನೆ-ಮನೆಯ ಶುಶ್ರೂಷೆಯಲ್ಲಿ ಕಾವಲಿನಬುರುಜು ಪತ್ರಿಕೆಗೆ ಚಂದಾವನ್ನು ಪಡೆಯಲು ಜನರನ್ನು ಉತ್ತೇಜಿಸುವುದರಲ್ಲಿ ನಾವು ಒಂದು ವಿಶೇಷ ಪ್ರಯತ್ನವನ್ನು ಮಾಡಲಿರುವೆವು. ಆಗ ಕೂಡ, ಸ್ವಲ್ಪ ಕ್ರಮಾನುಸಾರವಾಗಿ ನಮ್ಮಿಂದ ಪತ್ರಿಕೆಗಳ ಒಂದೊಂದು ಪ್ರತಿಗಳನ್ನು ಪಡೆದುಕೊಳ್ಳುವ ಮತ್ತು ಅವುಗಳನ್ನು ಓದುವುದರಲ್ಲಿ ನಿಸ್ಸಂಶಯವಾಗಿ ಆನಂದಿಸುವ ಅನೇಕ ಜನರನ್ನು ನಾವು ತಿಳಿದಿರಬಹುದು. ಎಪ್ರಿಲ್ ಮತ್ತು ಮೇಯಲ್ಲಿ ಈ ವ್ಯಕ್ತಿಗಳನ್ನು ನಾವು ಪುನಃ ಸಂದರ್ಶಿಸಬಲ್ಲೆವು ಮತ್ತು ಅವರು ಚಂದಾ ಮಾಡುವಲ್ಲಿ, ಅವರ ಮನೆಗಳಿಗೆ ಕ್ರಮವಾಗಿ ಈ ಪತ್ರಿಕೆಗಳು ಅಂಚೆಯ ಮೂಲಕ ಬರುವ ವಿಧವನ್ನು ಅವರಿಗೆ ತೋರಿಸುತ್ತಾ, ಚಂದಾವೊಂದನ್ನು ನಾವವರಿಗೆ ನೀಡಬಲ್ಲೆವು.
3 ನಮ್ಮ ಸಂದೇಶದಲ್ಲಿ ಆಸಕ್ತಿಯನ್ನು ಪ್ರದರ್ಶಿಸುವ ಜನರನ್ನು, ಅವರು ಚಂದಾ ಮಾಡಲಿ ಯಾ ಮಾಡದಿರಲಿ, ನಾವು ಪುನಃ ಭೇಟಿಮಾಡುವ ಅಗತ್ಯವಿದೆ. ಸಾಚ ಆಸಕ್ತಿಯಿದೆಯೆಂದು ನೀವು ಹೇಗೆ ವಿವೇಚಿಸಬಲ್ಲಿರಿ? ಪತ್ರಿಕೆ, ಕಿರುಹೊತ್ತಗೆ, ಯಾ ಬ್ರೋಷರೊಂದರಲ್ಲಿ ಒಂದೆರಡು ವಿಷಯಗಳನ್ನು ನೀವು ಮುಖ್ಯನೋಟವಾಗಿ ತೋರಿಸುತ್ತಿರುವಾಗ, ಮನೆಯವನ ಪ್ರತಿಕ್ರಿಯೆಯನ್ನು ಗಮನಿಸಿರಿ. ಅವನು ಗಮನಕೊಟ್ಟು ಆಲಿಸುತ್ತಾನೋ? ಬೈಬಲನ್ನು ಅವನು ಗೌರವಿಸುತ್ತಾನೋ ಮತ್ತು ಬೈಬಲ್ ವಚನಗಳ ಓದುವಿಕೆಯನ್ನು ಅವನು ಅನುಸರಿಸುತ್ತಾನೋ? ದೃಷ್ಟಿಕೋನ ಪ್ರಶ್ನೆಗಳಿಗೆ ಅವನು ಪ್ರತಿಕ್ರಿಯಿಸುತ್ತಾನೋ? ಹಾಗಿರುವುದಾದರೆ, ಒಂದು ವಾರದೊಳಗೆ ಯಾ ಇನ್ನೂ ಬೇಗನೇ ಒಂದು ಪುನರ್ಭೇಟಿಗಾಗಿ ನೀವು ಏರ್ಪಡಿಸಬಹುದು ಮತ್ತು ಆ ಸಮಯದಲ್ಲಿ ಇನ್ನೂ ಹೆಚ್ಚಿನ ಚರ್ಚೆಯಲ್ಲಿ ಆನಂದಿಸಬಹುದು. ಹೀಗೆ ಮನೆಯವನೊಂದಿಗೆ ಒಂದು ಕ್ರಮದ ಬೈಬಲ್ ಅಭ್ಯಾಸವನ್ನು ಆರಂಭಿಸಸಾಧ್ಯವಿದೆ.
4 ಸಾಧ್ಯವಾಗುವಲ್ಲೆಲ್ಲಾ ಪತ್ರಿಕೆಗಳನ್ನು ಕೊಂಡೊಯ್ಯಿರಿ. ಸಹ ಕಾರ್ಮಿಕರಿಗೆ, ವ್ಯಾಪಾರದ ಪರಿಚಯಸ್ಥರಿಗೆ, ಶಾಲಾಸಂಗಾತಿಗಳಿಗೆ, ಮತ್ತು ಸಂಬಂಧಿಕರಿಗೆ ಪತ್ರಿಕೆಗಳನ್ನು ಮತ್ತು ಒಂದು ಚಂದಾವನ್ನೂ ನೀಡಲು ಎಚ್ಚರವುಳ್ಳವರಾಗಿರ್ರಿ. ರಸ್ತೆಯ ಸಾಕ್ಷಿಯಲ್ಲಿ ಯಾ ಪ್ರಯಾಣಿಸುತ್ತಿರುವಾಗ ಕ್ರಮವಾಗಿ ಪತ್ರಿಕೆಗಳನ್ನು ನೀಡಸಾಧ್ಯವಿದೆ.
5 ಸಭೆಗಳಿಗೆ ಹೊಸ ಪತ್ರಿಕೆಗಳು ತಲುಪಿದ ನಂತರ, ಸಾಧ್ಯವಾದಷ್ಟು ಬೇಗನೇ ಪ್ರಚಾರಕರಿಗೆ ಅವುಗಳು ದೊರಕುವಂತೆ ಮಾಡಬೇಕು. ನೀವು ಹೊಸ ಸಂಚಿಕೆಯೊಂದನ್ನು ಪಡೆದಾಗ, ಅದರೊಂದಿಗೆ ಸುಪರಿಚಯಸ್ಥರಾಗಿರಿ. ನಿಮ್ಮ ವಠಾರದಲ್ಲಿ ಯಾವ ವಿಷಯಗಳು ಜನರಿಗೆ ಆಳವಾಗಿ ಆಸ್ಥೆಯದ್ದಾಗಿವೆ? ಲೋಕಶಾಂತಿ ಮತ್ತು ಭದ್ರತೆ? ಆರ್ಥಿಕ ವ್ಯವಸ್ಥೆ? ಒಳ್ಳೇ ಸರಕಾರ? ಪರಿಸರ? ಗಮನಾರ್ಹವಾಗಿ, ಮನುಷ್ಯರನ್ನು ಏಕಮಾತ್ರ ಪರಿಹಾರವಾದ ದೇವರ ರಾಜ್ಯದೆಡೆಗೆ ಕಾವಲಿನಬುರುಜು ನಿರ್ದೇಶಿಸುತ್ತದೆ. (ದಾನಿ. 2:44; ಮತ್ತಾ. 6:10) ಅದು ನಿಜವಾಗಿಯೂ “ನಮ್ಮ ಮಹಾ ಬೋಧಕ” ನಿಂದ ಒಂದು ಬೆಲೆಕಟ್ಟಲಾಗದ ಕೊಡುಗೆಯಾಗಿದೆ.—ಯೆಶಾ. 30:20, NW.
6 ಎಪ್ರಿಲ್ ಮತ್ತು ಮೇ ಕ್ಷೇತ್ರ ಸೇವೆಯಲ್ಲಿ ಹೆಚ್ಚು ಸಮಯವನ್ನು ಸಮರ್ಪಿಸಲು ಅತ್ಯುತ್ಕೃಷ್ಟ ಅವಕಾಶಗಳನ್ನು ಒದಗಿಸುತ್ತದೆ. ಮೇಯಲ್ಲಿ ಐದು ವಾರಾಂತ್ಯಗಳಿರುವುದರಿಂದ, ಅನೇಕರು ಸಹಾಯಕ ಪಯನೀಯರರಾಗಿ ಭರ್ತಿಯಾಗಲಿರುವರು. ಇವೆರಡು ತಿಂಗಳುಗಳಲ್ಲಿ ನಮ್ಮ ಕ್ಷೇತ್ರ ಸೇವೆಯನ್ನು ವರ್ಧಿಸಲು ಮತ್ತು ಚಂದಾಗಳನ್ನು ಉತ್ಸುಕತೆಯಿಂದ ನೀಡಲು, ಈಗ ವೈಯಕ್ತಿಕ ಧ್ಯೇಯಗಳನ್ನು ನಾವೆಲ್ಲರೂ ಇಡಸಾಧ್ಯವಿದೆ, ಆ ಮೂಲಕ ನಾವು ಭೇಟಿಯಾಗುವ ಎಲ್ಲರಿಗೂ ಕಾವಲಿನಬುರುಜು ಮತ್ತು ಎಚ್ಚರ! ವನ್ನು ಓದುವಂತೆ ಪ್ರೋತ್ಸಾಹಿಸಬಲ್ಲೆವು.