ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ಅಗೋಸ್ತ್ ಮತ್ತು ಸಪ್ಟಂಬರ: ಸ್ಕೂಲ್ ಬ್ರೊಷೂರನ್ನು ಬಿಟ್ಟು ಬೇರೆ ಯಾವುದೇ 32 ಪುಟದ ಬ್ರೊಷೂರನ್ನು ರೂ. 3ಕ್ಕೆ. ಒಕ್ಟೋಬರ: ಕ್ರಿಯೇಶನ್ ಪುಸ್ತಕವನ್ನು ರೂ. 30ಕ್ಕೆ. ಚಿಕ್ಕ ಸೈಜ್ ರೂ.15ಕ್ಕೆ. (ಈ ಪುಸ್ತಕವು ದೊರೆಯದ ಭಾಷೆಗಳಲ್ಲಿ ಲಿವ್ವ್ ಫಾರೆವರ್ ಮತ್ತು ಬೈಬಲ್ ಸ್ಟೋರಿಸ್ ಪುಸ್ತಕಗಳನ್ನು ಬಳಸಬಹುದು) ನವಂಬರ: ಎವೇಕ್! ಅಥವಾ ವಾಚ್‌ಟವರ್ ವಾರ್ಷಿಕ ಚಂದಾ, ಅಥವಾ ಎರಡಕ್ಕೂ, ರೂ. 40ಕ್ಕೆ. ಆರು ತಿಂಗಳ ಚಂದಾ ಮತ್ತು ತಿಂಗಳ ಸಂಚಿಕೆಗಳ ಚಂದಾ ರೂ. 20. (ತಿಂಗಳ ಸಂಚಿಕೆಗಳಿಗೆ ಆರು ತಿಂಗಳ ಚಂದಾ ಇಲ್ಲ.) ದಶಂಬರ: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್‌ನ್ನು ಟ್ರಿನಿಟಿ ಯಾ ಲುಕ್! ಬ್ರೊಷೂರ್‌ನೊಂದಿಗೆ ರೂ. 43ಕ್ಕೆ. ಜನವರಿ: “ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸ್‌ರ್ಸ್ ದ್ಯಾಟ್ ವರ್ಕ್” ಪುಸ್ತಕವನ್ನು ರೂ. 15ಕ್ಕೆ ನೀಡಿರಿ. (ಇದು ದೊರೆಯದಲ್ಲಿ ಎರಡು ಹಳೇ 192 ಪುಟದ ಪುಸ್ತಕ 10 ರೂಪಾಯಿಗೆ ಅಥವಾ ಒಂದು ಪುಸ್ತಕ 5 ರೂಪಾಯಿಗೆ.) ಫೆಬ್ರವರಿ ಮತ್ತು ಮಾರ್ಚ್: ಹಳೇ 192 ಪುಟಗಳ ಪುಸ್ತಕ 2ಕ್ಕೆ 10 ರೂಪಾಯಿ ಅಥವಾ ಒಂದಕ್ಕೆ 5 ರೂಪಾಯಿ.
• ಜಿಲ್ಲಾ ಅಧಿವೇಶನಗಳಲ್ಲಿ ಬದಲಾವಣೆ: ಕಿಲ್ವೋನ್‌ನ ಬದಲಿಗೆ ತ್ರಿವೆಂಡ್ರಮ್‌ನಲ್ಲಿ ಸಪ್ಟಂಬರ 27-30, 1990ಕ್ಕೆ. ಕನನೂರಿನ ಬದಲಿಗೆ ತಲ್ಲಿಚೇರಿಯಲ್ಲಿ; ಆದರೆ ತಾರೀಕು ಅದೇ, ದಶಂಬರ 27-30, 1990ಕ್ಕೆ.
• ಸೊಸೈಟಿಗೆ ಕಳಿಸುವ ಎಲ್ಲಾ ಪತ್ರಗಳಲ್ಲಿ ಯಾವಾಗಲೂ ನಿಮ್ಮ ಸಭಾನಂಬ್ರ ಹಾಗೂ ಸಭೆಯ ಹೆಸರು ಕೂಡಿರುವುದನ್ನು ನಾವು ಅತಿ ಗಣ್ಯಮಾಡುತ್ತೇವೆ. ಇದು ನಮ್ಮ ಆಫೀಸಿನ ಸ್ವಲ್ಪ ಕೆಲಸವನ್ನು ಸುಲಭಿಸುವುದು ಮತ್ತು ಯಾವ ಸಭೆಯು ನಮಗೆ ಬರೆದಿದೆ ಎಂದು ಖಾತ್ರಿಯಾಗುವುದು. ಮುಖ್ಯವಾಗಿ, ಎಕೌಂಟ್ಸ್‌ಗೆ ಸಂಬಂಧಿಸಿದ ಎಲ್ಲಾ ಪತ್ರಗಳಲ್ಲಿ ಸಭೆ ಅಥವಾ ಐಸಲೇಟೆಡ್ ಗುಂಪಿನ ನಂಬ್ರವು ಸೇರಿರಲೇಬೇಕು.
• ಹಲವಾರು ಚಂದಾ ಪಟ್ಟಿಗಳಲ್ಲಿ ಬರವಣಿಗೆ ಸ್ಪಷ್ಟವಿಲ್ಲ. ಕೆಲವು ಸಲ ಮನೆಯ ಹೆಸರನ್ನು ಚಂದಾದಾರನ ಹೆಸರಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ. ಒಂದು ಅಲ್ಪವಿರಾಮ ಚಿಹ್ನೆಯನ್ನು ಹಾಕುವದಾದರೆ ಈ ವಿಷಯದಲ್ಲಿ ಸಹಾಯಕಾರಿಯು. ಬಹುಬಾರಿ ‘8’, ‘3’ ನಂತಹ ನಂಬ್ರಗಳಲ್ಲಿ ಮತ್ತು B ಅಕ್ಷರದಲ್ಲಿ ವ್ಯತ್ಯಾಸ ಗೊತ್ತಾಗುವುದಿಲ್ಲ. ಇದು ತಪ್ಪು ವಿಳಾಸವನ್ನು ಕೊಡಬಹುದು, ಫಲಿತಾಂಶವಾಗಿ ಪತ್ರಿಕೆಗಳು ಬಟವಾಡೆಯಾಗವು. ವಿಳಾಸದ ನಿಷ್ಕೃಷ್ಟತೆಯನ್ನು ಪರೀಕ್ಷೆ ಮಾಡಿದ ಮೇಲೆ ಕೊನೆಗೆ, ಪಿನ್‌ಕೋಡ್ ಯಾವಾಗಲೂ ಸೇರಿರುವಂತೆ ನೋಡಿಕೊಳ್ಳಿರಿ.
• ಅಧ್ಯಕ್ಷ ಮೇಲ್ವಿಚಾರಕ ಅಥವಾ ಅವನಿಂದ ನೇಮಿತನಾದ ಯಾವನಾದರೂ ಸಭಾ ಎಕೌಂಟನ್ನು ಸಪ್ಟಂಬರ 1, ಯಾ ತದನಂತರ ಆದಷ್ಟು ಬೇಗ ಆಡಿಟ್ ಮಾಡತಕ್ಕದ್ದು.
• ಅಗೋಸ್ತ್ ಸಭಾ ವರದಿಯು ಸಂಕಲಿತವಾದೊಡನೇ ಸಭಾ ಎನಾಲಿಸಿಸ್ ರಿಪೋರ್ಟ್ ಫಾರ್ಮ್ (ಎಸ್-10) ನ್ನು ತುಂಬಿಸಿರಿ ಮತ್ತು ಸೊಸೈಟಿಗೆ ಕಳುಹಿಸುವ ಮೊದಲು ನಿಷ್ಕೃಷ್ಟತೆಗಾಗಿ ಎರಡೆರಡು ಬಾರಿ ಪರೀಕ್ಷಿಸಿರಿ. ಈ ಫಾರ್ಮಿನ ಹಿಂದುಗಡೆ ಇರುವ ಕ್ರಮದ ಪಯನೀಯರ ವರದಿಯನ್ನು ಪಯನೀಯರರಿಂದ ಅಗೋಸ್ತ್ ರಿಪೋರ್ಟ್ ದೊರೆತ ಕೂಡಲೇ ಸೆಕ್ರಿಟರಿಯು ತುಂಬಿಸಬೇಕು. ಮೇಲಿನ ಸಮಾಚಾರವನ್ನು ಸೊಸೈಟಿಗೆ ಸಪ್ಟಂಬರ 6 ರೊಳಗೆ ಕಳುಹಿಸಿರಿ.