ದೇವಪ್ರಭುತ್ವ ಶುಶ್ರೂಷೆ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷೆ ಶಾಲೆಯಲ್ಲಿ ಜುಲೈ 2ರಿಂದ ಒಕ್ಟೋಬರ 15, 1990ರ ತನಕದ ನೇಮಕಗಳಲ್ಲಿ ಆವರಿತವಾದ ಸಮಾಚಾರದ ಮೇಲೆ ಪುಸ್ತಕ ಮುಚ್ಚಿದ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆ ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಗಳನ್ನುತ್ತ ರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನೆಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ಕಾವಲಿನಬುರುಜು ನಿರ್ದೇಶನೆಗಳೆಲ್ಲದರಲ್ಲಿ ಪುಟ ಮತ್ತು ಪಾರಾ ನಂಬ್ರಗಳು ಒಂದುವೇಳೆ ಇರಲಿಕ್ಕಿಲ್ಲ.]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂದುತ್ತ ರಿಸಿರಿ:
1. ತಿಮೊಥಿಯು ಪೌಲದಿಂದ ಕಲಿತ ಸಂಗತಿಗಳನ್ನು ಬೇರೆಯವರಿಗೆ ಪ್ರಕಟಿಸಬಾರದಿತ್ತು. [ಎಸ್ಐ ಪು. 236 ಪಾರಾ. 6]
2. ತನಗಾಗಲಿದ್ದ ಕೊನೆಯ ವಿಚಾರಣೆ ಮತ್ತು, ಮರಣಶಿಕ್ಷೆಯನ್ನು ಮುನ್ನೋಡುತ್ತಾ ಪೌಲನು ತಿಮೊಥಿಯನ್ನು ಬೇಗ ಬರುವಂತೆಯೂ ಮತ್ತು ತನ್ನೊಂದಿಗೆ ಮಾರ್ಕನನ್ನೂ ತ್ರೋವದಲ್ಲಿ ಉಳಿದಿದ್ದ ಚರ್ಮಪತ್ರಗಳನ್ನೂ ತರುವಂತೆ ಎರಡು ಸಾರಿ ಒತ್ತಾಯಿಸಿದನು. [ಎಸ್ಐ ಪು. 235 ಪಾರಾ. 2, 3]
3. ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನ ಹೆಸರು ಇಲ್ಲದಿದ್ದರೂ, ಅದನ್ನು ಬರೆದವನು ಅವನೇ ಎಂಬದಕ್ಕೆ ಯಾವ ಸಂಶಯವೂ ಇಲ್ಲ. [ಎಸ್ಐ ಪು. 241 ಪಾರಾ. 2, 3]
4. ಇಬ್ರಿಯರಿಗೆ ಬರೆದ ಪತ್ರದಲ್ಲಿ ಆಳವಾದ ಶಾಸ್ತ್ರೀಯ ಸತ್ಯಗಳ ಮೂಲ್ಯ ವಿವರಣೆ ಇರುವುದಾದರೂ, ಯೆಹೂದಿ ಸಹೋದರರ ದೈನಿಕ ಜೀವನದಲ್ಲಿ ಅದರ ವ್ಯಾವಹಾರ್ಯ ಬೆಲೆಯು ಕಡಿಮೆ. [ಎಸ್ಐ ಪು. 242 ಪಾರಾ. 9]
5. ಯೇಸುವಿನ ಮಲತಮ್ಮನಾದ ಬೈಬಲ್ ಲೇಖಕ ಯಾಕೋಬನು ಯೇಸುವಿನ ಭೂಶುಶ್ರೂಷೆಯ ಸಮಯದಲ್ಲಿ ಒಬ್ಬ ಶಿಷ್ಯನಾಗಿರಲಿಲ್ಲ. [ಎಸ್ಐ ಪು. 246 ಪಾರಾ 1]
6. ಸಾ.ಶ. 33 ರ ಪಂಚಾಶತ್ತಮದಂದು ನಡೆದ ಅದ್ಭುತ ಘಟನೆಯು ಮಧ್ಯಾಹ್ನದ ಮೇಲೆ ನಡೆಯಿತು. [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 29]
7. ಮೊದಲನೆ ಅನ್ಯ ಮತಾಂತರಿಯಾದ ಕೊರ್ನೇಲ್ಯನ ದೀಕ್ಷಾಸ್ನಾನವು, “ಎಪ್ಪತ್ತು ವಾರಗಳ” ಅಂತ್ಯವನ್ನು ಗುರುತಿಸಿತು. (ದಾನಿ. 9:24) [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 29.]
8. ಫಿಲಿಪ್ಪಿಯಲ್ಲಿ ಪೌಲ ಮತ್ತು ಬಾರ್ನಬನ ಸಾಕ್ಷಿಕಾರ್ಯವು ದೊಂಬಿ ಮತ್ತು ಸೆರೆವಾಸದಲ್ಲಿ ಪರಿಣಮಿಸಿತು, ಒಂದು ಭೂಕಂಪದಿಂದಾಗಿ ಅವರು ಸೆರೆಯಿಂದ ಮುಕ್ತರಾದರು. [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 30.]
9. ತಾನು ಬಹಿರಂಗವಾಗಿ ಮತ್ತು ಮನೆಯಿಂದ ಮನೆಗೆ ಹೇಗೆ ಅವರಿಗೆ ಕಲಿಸಿದೆನೆಂದು ಹಿರಿಯರಿಗೆ ಭೇಟಿಯಾದಾಗ ಪೌಲನು ಹೇಳಿದ್ದು ಎಫೆಸದಲ್ಲಿ. [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 31.]
10. ದೀಕ್ಷಾಸ್ನಾನದ ನೀರು ತಾನೇ ಪಾಪಗಳನ್ನು ತೊಳೆದು ಹಾಕುವುದಾದರೆ, ವ್ಯಕ್ತಿಯು ಪ್ರತಿಯೊಂದು ಹೊಸ ಪಾಪ ಮಾಡುವಾಗ ಪುನ: ಸ್ನಾನ ಪಡೆಯ ಬೇಕಾಗುವುದು. (ಅಪೊ. 22:16) [ವಾರದ ಬೈಬಲ್ ವಾಚನ]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಪೌಲನು ತಿಮೊಥಿಯನ್ನು ಎಫೆಸದಲ್ಲಿ ಉಳಿಯುವಂತೆ ಪ್ರೋತ್ಸಾಹಿಸಿದ್ದು ಯಾಕೆ? [ಎಸ್ಐ ಪು. 233 ಪಾರಾ. 7]
12. ಸಾ.ಶ. 64 ರಲ್ಲಿ ಸಂಭವಿಸಿದ ಮಹಾ ಬೆಂಕಿಯ ವಿನಾಶವು ಕ್ರೈಸ್ತ ರ ಮೇಲೆ ಹೇಗೆ ಪರಿಣಮಿಸಿತು? [ಎಸ್ಐ ಪು. 235 ಪಾರಾ. 1]
13. ಪಲಾಯನಗೈದ ದಾಸ ಒನೀಸಿಮಸನ ಯಜಮಾನನು ಯಾರು? [ಎಸ್ಐ ಪು. 239 ಪಾರಾ. 1, 2]
14. ನಂಬಿಕೆಯ ಅರ್ಥವನ್ನು ಪೌಲನು ವಿವರಿಸಿದ್ದು ಹೇಗೆ? [ಎಸ್ಐ ಪು. 244 ಪಾರಾ. 20]
15. ಒಂದು ಪಾಷಂಡಮತ ಎಂದರೇನು? (ಅಪೋ. 24:5) [ವಾರದ ಬೈಬಲ್ ವಾಚನ; g88 1⁄8 ಪು. 26.]
16. ರೋಮಿನಲ್ಲಿ ತನ್ನ ಮೊದಲನೆ ಸೆರೆವಾಸದ ಸಮಯದಲ್ಲಿ ಪೌಲನು ಯಾವ ಐದು ಅಂಗೀಕೃತ ಪತ್ರಿಕೆಗಳನ್ನು ಬರೆದನು? [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 31.]
17. ಪೌಲನು (ಸೌಲ) ಹೇಗೆ “ಮುಳ್ಳುಗೋಲುಗಳನ್ನು ಒದೆಯುತ್ತಿದ್ದನು”? (ಅಪೊ. 26:14) [ವಾರದ ಬೈಬಲ್ ವಾಚನ; w78 4⁄1 ಪು. 23.]
18. ಪೌಲನು ರೋಮಿಗೆ ಹೋಗಲು ತೀವ್ರಾಪೇಕ್ಷೆ ಪಟ್ಟದ್ದೇಕೆ? (ರೋಮಾ. 1:11, 12) [ವಾರದ ಬೈಬಲ್ ವಾಚನ; ಕಾ.ಬು. 90 8⁄1 ಪು. 31.]
ಕೆಳಗಿನ ಪ್ರತಿಯೊಂದು ಹೇಳಿಕೆಗಳನ್ನು ಪೂರ್ಣಮಾಡಲು ಬೇಕಾದ ಪದ ಯಾ ಪದಪುಂಜವನ್ನು ಕೊಡಿರಿ:
19. 1ನೇ ತಿಮೊಥಿಯು ಪೌಲನಿಂದ ಬರೆಯಲ್ಪಟ್ಟದ್ದು _______________ ವರ್ಷಗಳ ನಡುವಣ ಸಮಯದಲ್ಲಿ. [ಎಸ್ಐ ಪು. 232 ಪಾರಾ. 2]
20. ತೀತನಿಗೆ ಬರೆದ ತನ್ನ ಪತ್ರದಲ್ಲಿ, ಮೇಲ್ವಿಚಾರಕರು“ _______________ ವಿಲ್ಲದವರಾಗಿರ” ಬೇಕೆಂದು ಪೌಲನು ಹೇಳಿದನು. [ಎಸ್ಐ ಪು. 238 ಪಾರಾ. 5]
21. ಮಾಂಸಿಕ ಇಸ್ರಾಯೇಲ್ಯರು _______________ ಮತ್ತು _______________ ದಿಂದಾಗಿ ದೇವರ ವಿಶ್ರಾಂತಿಯನ್ನು ಪ್ರವೇಶಿಸಲಾರದೆ ಹೋದರು. [ಎಸ್ಐ ಪು. 242 ಪಾರಾ. 12]
22. ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವು ಈ ಎರಡು ಬದಲಾಗದ ವಿಷಯಗಳಿಂದ ಖಂಡಿತವೂ ದೃಢವೂ ಆಗಿ ಮಾಡಲ್ಪಟ್ಟಿತು: _______________ ದಿಂದ. [ಎಸ್ಐ ಪು. 243 ಪಾರಾ. 14]
23. ಸುವಾರ್ತಾ ಲೇಖಕರಲ್ಲಿ ಯೇಸುವಿನ ಅಂತರಂಗದ ಮಾತುಗಳನ್ನು ಮತ್ತು ಅವನು ಕೊನೆಯ ರಾತ್ರಿಯಲ್ಲಿ ತನ್ನ ಅಪೊಸ್ತಲರ ಪರವಾಗಿ ಮಾಡಿದ ಪ್ರಾರ್ಥನೆಯನ್ನು ದಾಖಲೆ ಮಾಡಿದವನು _______________ ಮಾತ್ರ. [ವಾರದ ಬೈಬಲ್ ವಾಚನ; ಕಾ.ಬು. 90 2⁄1 ಪು. 26 ನೋಡಿ.]
24. ಅಪೊ. 8:9-24 ಕ್ಕನುಸಾರ ಜವಾಬ್ದಾರಿ ಸ್ಥಾನದಲ್ಲಿರುವ ಕ್ರೈಸ್ತರು _______________ ದೋಷಿಗಳಾಗಿರಬಾರದು. [ವಾರದ ಬೈಬಲ್ ವಾಚನ; ಕಾ.ಬು. 87 11⁄1 ಪು. 11 ಪಾರಾ. 9 ನೋಡಿ.]
ಕೆಳಗಿನ ಪ್ರತಿಯೊಂದು ಹೇಳಿಕೆಯಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ:
25. ಪಾಪ ಮಾಡುತ್ತಿರುವವರು (ಹಿರಿಯರ ಮುಂದೆ ಮಾತ್ರ; ಎಲ್ಲಾ ಪ್ರೇಕ್ಷಕರ ಮುಂದೆ; ಇಡೀ ಸಭೆಯ ಮುಂದೆ ಗದರಿಸಲ್ಪಡಬೇಕು). [ಎಸ್ಐ ಪು. 234 ಪಾರಾ. 13]
26. ಪೌಲನು ತೀತನಿಗೆ ತನ್ನ ಪತ್ರವನ್ನು ಬರೆದದ್ದು ತೀತನು (ರೋಮಿನಲ್ಲಿ; ಕೊರಿಂಥದಲ್ಲಿ; ಕ್ರೇತದಲ್ಲಿ) ಇದ್ದಾಗ. [ಎಸ್ಐ ಪು. 237 ಪಾರಾ. 1]
27. ಯೇಸು (ಹೊಸ ಒಡಂಬಡಿಕೆಯ; ಅಬ್ರಹಾಮನ ಒಡಂಬಡಿಕೆಯ; ಸ್ವರ್ಗೀಯ ರಾಜ್ಯದ ಒಡಂಬಡಿಕೆಯ) ಮಧ್ಯಸ್ಥನು. [ಎಸ್ಐ ಪು. 243 ಪಾರಾ. 17]
28. ಅಪೊ. 12:1, 2 ರಲ್ಲಿ ತಿಳಿಸಲ್ಪಟ್ಟ ಹೆರೋದನು (ಮಹಾ ಹೆರೋದ; ಹೆರೋದ ಅಂತಿಪ್ಪ; 1ನೇ ಹೆರೋದ ಅಗ್ರಿಪ್ಪ). [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 29 ನೋಡಿ.]
29. ಪೌಲನ ಮೊದಲನೆ ಮಿಶನೆರಿ ಸಂಚಾರವು ಆರಂಭಿಸಿದ್ದು (ಪಿಸಿಡ್ಯದ ಅಂತಿಯೋಕ್ಯದಲ್ಲಿ; ಸಿರಿಯಾದ ಅಂತಿಯೋಕ್ಯದಲ್ಲಿ; ಯೆರೂಸಲೇಮಿನಲ್ಲಿ). [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 29 ನೋಡಿ.]
30. ಕೊರಿಂಥದಲ್ಲಿ ಅತಿ ಆಸಕ್ತಿಯು ತೋರಿಬಂದದರಿಂದ ಪೌಲನು ಆ ಶಹರದಲ್ಲಿ (18 ತಿಂಗಳು; 12 ತಿಂಗಳು; 6 ತಿಂಗಳು) ಉಳಿದನು. [ವಾರದ ಬೈಬಲ್ ವಾಚನ; ಕಾ.ಬು. 90 5⁄1 ಪು. 30 ನೋಡಿ.]
ಕೆಳಗಿನ ಶಾಸ್ತ್ರ ವಚನಗಳನ್ನು ಕೆಳಗೆ ಕೊಟ್ಟ ಹೇಳಿಕೆಗಳಿಗೆ ಸರಿಜೋಡಿಸಿರಿ:
ಯೋಹಾನ 14:27; 20:31; ಅಪೊ. 6:3; ರೋಮಾ. 1:16, 17; 6:12
31. ಬಡವರ ಪರಿಪಾಲನೆಗಾಗಿ ಆರಂಭದ ಕ್ರೈಸ್ತರು ಯಾವ ಒದಗಿಸುವಿಕೆಗಳನ್ನು ಮಾಡಿದರು? [ವಾರದ ಬೈಬಲ್ ವಾಚನ; ಕಾ.ಬು. 87 12⁄1 ಪು. 10 ಪಾರಾ. 2 ನೋಡಿ.]
32. ಯೇಸುವಿನಲ್ಲಿ ಕ್ರೈಸ್ತರಿಗಿರುವ ಹೊಸ ಜೀವವು ಅವರನ್ನು ತಮ್ಮ ಮಾಂಸಿಕ ನಿರ್ಬಲತೆಗಳ ವಿರುದ್ಧ ಹೋರಾಡುವಂತೆ ಒತ್ತಾಯಪಡಿಸುತ್ತದೆ. [ವಾರದ ಬೈಬಲ್ ವಾಚನ; ಕಾ.ಬು. 90 8⁄1 ಪು. 30 ನೋಡಿ.]
33. ತನ್ನ ಸುವಾರ್ತೆಯನ್ನು ಬರೆಯವುದರಲ್ಲಿ ಇದು ಅಪೊಸ್ತಲ ಯೋಹಾನನ ನಮೂದಿತ ಉದ್ದೇಶವಾಗಿತ್ತು. [ಬೈಬಲ್ ವಾಚನ; ಕಾ.ಬು. 90 2⁄1 ಪು. 26 ನೋಡಿ.]
34. ನೀತಿವಂತನು ನಂಬಿಕೆಯಿಂದಲೇ ಬದುಕುವನು. [ವಾರದ ಬೈಬಲ್ ವಾಚನ; ಕಾ.ಬು. 90 8⁄1 ಪು. 29 ನೋಡಿ.]
35. ಯೇಸು ತನ್ನ ಶಿಷ್ಯರಿಗೆ ಕೊಟ್ಟಂಥಾ ಶಾಂತಿಯು ಅವರ ಹೃದಮನಗಳನ್ನು ಶಾಂತಗೊಳಿಸಲು ಕಾರ್ಯ ನಡಿಸಿತು. [ವಾರದ ಬೈಬಲ್ ವಾಚನ; ಕಾ.ಬು. 90 2⁄1 ಪು. 27 ನೋಡಿ.]