ಮೇ ತಿಂಗಳಿಗಾಗಿ ನಿಮ್ಮ ಯೋಜನೆಗಳೇನು?
1 ಮೇ ತಿಂಗಳು ನಮ್ಮಲ್ಲಿ ಅನೇಕರಿಗೆ ಒಂದು ಅಧಿಕ ಕ್ಷೇತ್ರ ಸೇವಾ ಅವಧಿಯನ್ನು ಆರಂಭಿಸುತ್ತದೆ. ಶುಶ್ರೂಷೆಯಲ್ಲಿ ಹೆಚ್ಚು ಚಟುವಟಿಕೆಯ ವೈಯಕ್ತಿಕ ಗುರಿಗಳನ್ನು ಇಡುವಂತೆ ಸಾಮಾನ್ಯವಾಗಿ ಮೇ ತಿಂಗಳು ಉತ್ತಮವೆಂದು ರುಜುವಾಗಿದೆ.
2 ಮೇ ತಿಂಗಳಿಗಾಗಿ ಕ್ಷೇತ್ರ ಸೇವೆಯ ಯಾವ ಏರ್ಪಾಡುಗಳನ್ನು ನಿಮ್ಮ ಸಭೆಯು ಮಾಡಿದೆ? ಕ್ಷೇತ್ರ ಸೇವೆಗಾಗಿ ಅಧಿಕ ಕೂಟಗಳು, ಸಂಜಾ ಸಾಕ್ಷಿಕಾರ್ಯದ ಏರ್ಪಾಡನ್ನು ಸಹಾ ಮಾಡಲಾಗುವುದೋ? ಈ ಏರ್ಪಾಡುಗಳ ಸದುಪಯೋಗವನ್ನು ಮಾಡುವಂತೆ ಮತ್ತು ಕ್ಷೇತ್ರದಲ್ಲಿ ಇತರರೊಂದಿಗೆ ಸೇವೆ ಮಾಡುವಂತೆ ನಿಮ್ಮ ಶೆಡ್ಯೂಲನ್ನು ನೀವು ಅಳವಡಿಸಬಲ್ಲಿರೋ? ಕಡಿಮೆ ಮಹತ್ವದ ಬೇರೆ ಚಟುವಟಿಕೆಗಳನ್ನು ನೀವು ತಾತ್ಕಾಲಿಕವಾಗಿ ಬದಿಗಿಡ ಶಕ್ತರೋ?
3 ಸ್ಮಾರಕಾಚರಣೆಗೆ ಹಾಜರಾದವರನ್ನು ಸಂದರ್ಶಿಸುವುದು ಮಾತ್ರವಲ್ಲದೆ, ಕಳೆದ ಸಲ ನೀವು ಸಂದರ್ಶಿಸಿದಾಗ ಮನೆಯಲ್ಲಿ ಇದ್ದಿರದ ಅಥವಾ ಮಾತಾಡಲು ತೀರಾ ಕಾರ್ಯಮಗ್ನರಿದ್ದ ಆಸಕ್ತ ಜನರನ್ನು ಕಂಡುಹಿಡಿಯುವರೇ ಹೊಸ ಪ್ರಯತ್ನ ಮಾಡಲು ಸಹಾ ಮೇ ತಿಂಗಳು ಉತ್ತಮವಾಗಿದೆ. ಅವರಿಗೆ ಅಧಿಕ ಸಾಕ್ಷಿಯನ್ನು ಕೊಡಲು ನೀವು ಈ ಮೊದಲೇ ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ, ನಿಮ್ಮ ದಾಖಲೆಯನ್ನು ಪರೀಕ್ಷಿಸಿ, ಅವರನ್ನು ಪುನಃ ಭೇಟಿಯಾಗಿ, ಸುವಾರ್ತೆಯಲ್ಲಿ ಅವರ ಆಸಕ್ತಿಯನ್ನು ಏಕೆ ಚೇತರಿಸಬಾರದು? ಪ್ರಾಯಶಃ ಸಂಜಾವೇಳೆಯ ಸಂದರ್ಶನೆಗಳು ಅಧಿಕ ಫಲಕಾರಿಯಾಗಬಹುದು. ಈ ತಿಂಗಳಲ್ಲಿ ಸಹಾಯಕ ಪಯನೀಯರರಾಗುವ ಸಹೋದರ ಮತ್ತು ಸಹೋದರಿಯರಲ್ಲಿ ಕೆಲವರಿಗೆ ಜವಾಬ್ದಾರಿಕೆಗಳೂ ಮತ್ತು ಪೂರ್ಣ ಸಮಯದ ಐಹಿಕ ಉದ್ಯೋಗವೂ ಇವೆ. ದಿನಕ್ಕೆ ಎರಡು ತಾಸಿನ ಸೇವೆಯ ಆವಶ್ಯಕತೆ ಮಾತ್ರ ಅವರಿಗಿದೆ.
4 ಮೇ ತಿಂಗಳಲ್ಲಿ ಸಹಾಯಕ ಪಯನೀಯರರಾಗಲು ಪರಿಸ್ಥಿತಿಗಳು ಅನುಮತಿಸದಿದ್ದರೆ, ಒಂದುವೇಳೆ ಪಯನೀಯರರೊಂದಿಗೆ ಅಥವಾ ಮೇ ತಿಂಗಳಲ್ಲಿ ತಮ್ಮ ಶುಶ್ರೂಷೆಯನ್ನು ಹೆಚ್ಚು ಮಾಡಲು ಪ್ರಯತ್ನಿಸುವವರೊಂದಿಗೆ ಕೂಡಿ ನೀವೂ ನಿಮ್ಮ ಸೇವೆಯನ್ನು ಹೆಚ್ಚಿಸ ಸಾಧ್ಯವಿದೆಯೇ? ನಿಮ್ಮ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನೆಂಬ ಆಶ್ವಾಸನೆ ನಿಮಗಿರಲಿ. ನಿಮ್ಮ ಗುರಿ ಮುಟ್ಟುವಂತೆ ಆತನು ತನ್ನಾತ್ಮದ ಶಕ್ತಿಯಿಂದ ನಿಮಗೆ ಬಲವನ್ನು ಕೊಡುವನು.—ಜ್ಞಾನೋ. 20:18; 21:5ಎ.