ಪರಿವಿಡಿ
ಡಿಸೆಂಬರ್ 25-31ರ ವಾರ, 2017
3 ಸ್ವರವೆತ್ತಿ ಸಂತೋಷದಿಂದ ಹಾಡಿರಿ!
ಹಿಂದಿನ ಕಾಲದಿಂದಲೂ ಯೆಹೋವನ ಜನರಿಗೆ ಗೀತೆ ಹಾಡುವುದು ಆರಾಧನೆಯ ಮುಖ್ಯ ಭಾಗವಾಗಿದೆ. ಆದರೆ ಕೆಲವರಿಗೆ ಬೇರೆಯವರ ಮುಂದೆ ಹಾಡುವುದೆಂದರೆ ಸ್ವಲ್ಪ ಮುಜುಗರ. ನಾವು ಹಿಂಜರಿಕೆಯಿಲ್ಲದೆ ಆತ್ಮವಿಶ್ವಾಸದಿಂದ ಹೇಗೆ ಹಾಡಬಹುದು? ಈ ಲೇಖನ ನಮಗೆ ಸ್ವರವೆತ್ತಿ ಹಾಡಲು ಒಳ್ಳೇ ಕಾರಣಗಳನ್ನು ಕೊಡುತ್ತದೆ ಮತ್ತು ಇನ್ನೂ ಚೆನ್ನಾಗಿ ಹಾಡಲು ಕೆಲವು ಸಲಹೆಗಳನ್ನೂ ಕೊಡುತ್ತದೆ.
ಜನವರಿ 1-7ರ ವಾರ, 2018
8 ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
ಜನವರಿ 8-14ರ ವಾರ, 2018
13 ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ
ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಆಶ್ರಯನಗರಗಳ ಏರ್ಪಾಡಿನಿಂದ ಅಮೂಲ್ಯ ಪಾಠಗಳನ್ನು ಕಲಿಯಬಹುದು. ಮೊದಲ ಲೇಖನ, ಇಂದು ಪಾಪಿಗಳು ಹೇಗೆ ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳಬಹುದು ಎಂದು ತಿಳಿಸುತ್ತದೆ. ಎರಡನೇ ಲೇಖನ, ಬೇರೆಯವರನ್ನು ಕ್ಷಮಿಸಲು, ಜೀವವನ್ನು ಗೌರವಿಸಲು, ನ್ಯಾಯವಾಗಿ ನಡೆದುಕೊಳ್ಳಲು ಯೆಹೋವನ ಮಾದರಿ ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಸುತ್ತದೆ.
18 “ಉದಾರವಾಗಿ ಕೊಡುವವನು ಆಶೀರ್ವಾದವನ್ನು ಹೊಂದುವನು”
ಜನವರಿ 15-21ರ ವಾರ, 2018
20 ಲೋಕದ ಯೋಚನಾ ರೀತಿಯನ್ನು ತಿರಸ್ಕರಿಸಿರಿ
ಜನವರಿ 22-28ರ ವಾರ, 2018
25 ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ
ಪೌಲನು ದೇವಪ್ರೇರಿತನಾಗಿ ಕೊಲೊಸ್ಸೆಯ ಕ್ರೈಸ್ತರಿಗೆ ಬರೆದ ಪತ್ರದ ಮೇಲೆ ಈ ಎರಡು ಲೇಖನಗಳು ಆಧರಿತವಾಗಿವೆ. ಮೊದಲ ಲೇಖನ, ಸರಿಯೆನಿಸುವ ಲೋಕದ ವಿಚಾರಗಳನ್ನು ಕೇಳಿಸಿಕೊಂಡಾಗ ನಾವು ಏನು ಮಾಡಬೇಕೆಂದು ವಿವರಿಸುತ್ತದೆ. ಎರಡನೇ ಲೇಖನ, ಯೆಹೋವನ ಆಶೀರ್ವಾದಗಳು ನಮಗೆ ಸಿಗದಂತೆ ಮಾಡುವ ಮನೋಭಾವಗಳನ್ನು ಹೇಗೆ ತಿರಸ್ಕರಿಸಬೇಕು ಎಂದು ವಿವರಿಸುತ್ತದೆ.