ಪರಿವಿಡಿ
3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು
ಫೆಬ್ರವರಿ 27, 2017–ಮಾರ್ಚ್ 5ರ ವಾರ, 2017
7 ‘ಯೆಹೋವನಲ್ಲಿ ಭರವಸೆ ಇಟ್ಟು ಒಳ್ಳೇದನ್ನು ಮಾಡಿ’
ನಮಗೆ ಕಷ್ಟಗಳು ಬಂದಾಗ ಯೆಹೋವನ ಮೇಲೆ ಭರವಸೆ ಇಡುವಂತೆ 2017ರ ವರ್ಷವಚನ ಪ್ರೋತ್ಸಾಹಿಸುತ್ತದೆ. ಇದರ ಬಗ್ಗೆ ನಾವು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಹಿಂದಿನ ಕಾಲದ ಯೆಹೋವನ ಸೇವಕರು ಹೇಗೆ ಯೆಹೋವನಲ್ಲಿ ಭರವಸೆ ಇಟ್ಟರೆಂದು ನೋಡಲಿದ್ದೇವೆ. ಅವರಂತೆ ನಾವು ಸಹ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಮ್ಮಿಂದಾದ ಪ್ರಯತ್ನ ಮಾಡುವುದರ ಬಗ್ಗೆ ಮತ್ತು ಬೇರೆಯವರಿಗೂ ಸಹಾಯ ಮಾಡುವುದರ ಬಗ್ಗೆ ಕಲಿಯಲಿದ್ದೇವೆ.
ಮಾರ್ಚ್ 6-12ರ ವಾರ, 2017
12 ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ
ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ಉಡುಗೊರೆಯನ್ನು ಕೊಟ್ಟಿದ್ದಾನೆ. ಈ ಉಡುಗೊರೆಯನ್ನು ಆತನು ಮೆಚ್ಚುವ ವಿಧದಲ್ಲಿ ಹೇಗೆ ಬಳಸಬಹುದೆಂದು ಈ ಲೇಖನದಲ್ಲಿ ತಿಳಿಯಲಿದ್ದೇವೆ. ಬೇರೆಯವರು ತಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುತ್ತಾ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅದನ್ನು ನಾವು ಹೇಗೆ ಗೌರವಿಸಬೇಕು ಎಂದು ಸಹ ನೋಡಲಿದ್ದೇವೆ.
ಮಾರ್ಚ್ 13-19ರ ವಾರ, 2017
17 ವಿನಯಶೀಲತೆಗೆ ಈಗಲೂ ಬೆಲೆ ಇದೆಯಾ?
ಮಾರ್ಚ್ 20-26ರ ವಾರ, 2017
22 ಯಾವುದೇ ಸನ್ನಿವೇಶದಲ್ಲಿ ವಿನಯಶೀಲತೆ ತೋರಿಸಸಾಧ್ಯ
ವಿನಯಶೀಲತೆ ಅಂದರೆ ಏನೆಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಈ ಲೇಖನಗಳು ಸಹಾಯಮಾಡುತ್ತವೆ. ಮೊದಲನೇ ಲೇಖನ, ವಿನಯಶೀಲತೆ ಅಂದರೆ ಏನು, ಏನಲ್ಲ ಎಂದು ತಿಳಿಸುತ್ತದೆ. ಕಷ್ಟವಾದಾಗಲೂ ಈ ಗುಣವನ್ನು ಹೇಗೆ ತೋರಿಸಬಹುದು ಎಂದು ಎರಡನೇ ಲೇಖನ ತಿಳಿಸುತ್ತದೆ.
ಮಾರ್ಚ್ 27, 2017–ಏಪ್ರಿಲ್ 2ರ ವಾರ, 2017
27 ನಂಬಿಗಸ್ತ ಪುರುಷರಿಗೆ ಜವಾಬ್ದಾರಿ ವಹಿಸಿಕೊಡಿ
ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ದೊಡ್ಡವರು ಚಿಕ್ಕ ವಯಸ್ಸಿನವರಿಗೆ ತರಬೇತಿ ಕೊಡುತ್ತಾರೆ. ಚಿಕ್ಕವರೂ ದೊಡ್ಡವರೂ ಹೇಗೆ ಒಬ್ಬರಿಗೊಬ್ಬರು ಸಹಕಾರ ಕೊಡಬಹುದೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.