ಪರಿವಿಡಿ
ಜೂನ್ 27, 2016–ಜುಲೈ 3ರ ವಾರ, 2016
3 ಮನಸ್ತಾಪಗಳನ್ನು ಪ್ರೀತಿಯಿಂದ ಬಗೆಹರಿಸಿರಿ
ನಾವು ಅಪರಿಪೂರ್ಣರಾಗಿರುವ ಕಾರಣ ಕೆಲವು ಸಲ ನಮ್ಮ ಸಹೋದರ ಸಹೋದರಿಯರೊಂದಿಗೆ ಮನಸ್ತಾಪ, ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಇವನ್ನು ಬಗೆಹರಿಸಿ ಇತರರೊಂದಿಗೆ ಸಮಾಧಾನದಿಂದಿರಲು ನೆರವಾಗುವ ಬೈಬಲ್ ತತ್ವಗಳನ್ನು ಈ ಲೇಖನದಲ್ಲಿ ಕಲಿಯಲಿದ್ದೇವೆ.
ಜುಲೈ 4-10ರ ವಾರ, 2016
8 “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”
ಇಡೀ ಭೂಮಿಯಲ್ಲಿ ಯೆಹೋವನ ಸಾಕ್ಷಿಗಳು ಮಾತ್ರವೇ ಮತ್ತಾಯ 24:14 ರ ಯೇಸುವಿನ ಪ್ರವಾದನೆಯನ್ನು ನೆರವೇರಿಸುತ್ತಿದ್ದಾರೆಂದು ಏಕೆ ಹೇಳಬಹುದು? ಇದನ್ನು ಈ ಲೇಖನ ನಮಗೆ ವಿವರಿಸುತ್ತದೆ. ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಆಗಿರುವುದರ ಅರ್ಥವೇನೆಂದೂ ನಾವು ಕಲಿಯಲಿದ್ದೇವೆ.—ಮತ್ತಾ. 4:19.
ಜುಲೈ 11-17ರ ವಾರ, 2016
13 ವೈಯಕ್ತಿಕ ನಿರ್ಣಯಗಳನ್ನು ನೀವು ಹೇಗೆ ಮಾಡುತ್ತೀರಿ?
ಒಂದು ನಿರ್ಣಯವನ್ನು ಮಾಡುವಾಗ ನಿಮಗೇನು ಸರಿಯೆಂದು ಕಾಣುತ್ತದೋ ಅದನ್ನೇ ಮಾಡುತ್ತೀರಾ? ಅಥವಾ ಏನು ಮಾಡಬೇಕೆಂದು ಬೇರೆಯವರನ್ನು ಕೇಳುತ್ತೀರಾ? ಅತ್ಯುತ್ತಮ ನಿರ್ಣಯಗಳನ್ನು ಮಾಡಲು ನಾವೇಕೆ ಯೆಹೋವ ದೇವರ ಯೋಚನಾರೀತಿಯ ಬಗ್ಗೆ ಕಲಿಯಬೇಕೆಂದು ಈ ಲೇಖನ ವಿವರಿಸುತ್ತದೆ.
ಜುಲೈ 18-24ರ ವಾರ, 2016
18 ಬೈಬಲ್ ನಿಮ್ಮ ಬದುಕನ್ನು ಈಗಲೂ ಬದಲಾಯಿಸುತ್ತಿದೆಯಾ?
ದೀಕ್ಷಾಸ್ನಾನ ಪಡೆಯುವ ಮುಂಚೆ ನೀವು ನಿಮ್ಮ ಜೀವನದಲ್ಲಿ ದೊಡ್ಡದೊಡ್ಡ ಬದಲಾವಣೆಗಳನ್ನು ಮಾಡಿರಬಹುದು. ಆದರೆ ಯೆಹೋವನನ್ನು ಮತ್ತು ಯೇಸುವನ್ನು ಅನುಕರಿಸಲು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡುವುದು ಈಗ ನಿಮಗೆ ಕಷ್ಟವಾಗಿ ಕಾಣುತ್ತದಾ? ಈ ಬದಲಾವಣೆಗಳನ್ನು ಮಾಡುವುದು ಏಕೆ ಅಷ್ಟು ಕಷ್ಟ ಮತ್ತು ಬೈಬಲ್ ನಮಗೆ ಹೇಗೆ ಸಹಾಯಮಾಡುತ್ತದೆ ಎಂದು ಈ ಲೇಖನ ವಿವರಿಸುತ್ತದೆ.
ಜುಲೈ 25-31ರ ವಾರ, 2016
23 ಯೆಹೋವನು ಕೊಡುವ ಆಧ್ಯಾತ್ಮಿಕ ಆಹಾರದ ಪೂರ್ಣ ಪ್ರಯೋಜನ ಪಡೆಯಿರಿ
ಯಾವ ಅಪಾಯದ ಬಗ್ಗೆ ನಾವು ಎಚ್ಚರವಹಿಸಬೇಕು? ಯೆಹೋವನು ಕೊಡುವ ಎಲ್ಲ ಆಧ್ಯಾತ್ಮಿಕ ಆಹಾರದಿಂದ ನಾವು ಹೇಗೆ ಪೂರ್ಣ ಪ್ರಯೋಜನ ಪಡೆಯಬಹುದು? ಉತ್ತರ ಈ ಲೇಖನದಲ್ಲಿದೆ.