ಪರಿವಿಡಿ
ಮೇ 2-8ರ ವಾರ, 2016
3 ಯುವ ಜನರೇ, ದೀಕ್ಷಾಸ್ನಾನ ಪಡೆಯಲು ತಯಾರಾಗಿದ್ದೀರಾ?
ಮೇ 9-15ರ ವಾರ, 2016
8 ಯುವ ಜನರೇ, ದೀಕ್ಷಾಸ್ನಾನಕ್ಕೆ ತಯಾರಾಗಲು ನೀವೇನು ಮಾಡಬೇಕು?
ಯೆಹೋವನ ಸೇವಕರಾದ ನಮಗೆ ಪ್ರತಿ ವರ್ಷ ಸುಮಾರು 2,50,000 ಜನರು ದೀಕ್ಷಾಸ್ನಾನ ಪಡೆಯುತ್ತಿರುವುದನ್ನು ನೋಡಿ ತುಂಬ ಸಂತೋಷವಾಗುತ್ತದೆ. ಅವರಲ್ಲಿ ಹೆಚ್ಚಿನವರು ಯುವ ಜನರು. ಕೆಲವರು 13 ವಯಸ್ಸಿಗಿಂತ ಕೆಳಗಿನವರು. ದೀಕ್ಷಾಸ್ನಾನಕ್ಕೆ ತಾವು ಸಿದ್ಧರಿದ್ದೇವೆಂದು ಅವರು ಹೇಗೆ ತಿಳುಕೊಂಡರು? ಅದಕ್ಕಾಗಿ ತಯಾರಾಗಲು ಏನೆಲ್ಲ ಮಾಡಿದರು? ಈ ಎರಡು ಲೇಖನಗಳಲ್ಲಿ ಉತ್ತರವಿದೆ.
ಮೇ 16-22ರ ವಾರ, 2016
13 ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ
ನಾವು ಜೊತೆಯಾಗಿ ಕೆಲಸಮಾಡುವಾಗ ಮತ್ತು ಒಬ್ಬರೊಂದಿಗೆ ಒಬ್ಬರು ಸಹಕರಿಸುವಾಗ ಯೆಹೋವನು ನಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ. ಸೇವೆಯಲ್ಲಿ, ಸಭೆಯಲ್ಲಿ, ಕುಟುಂಬದಲ್ಲಿ ನಾವು ಹೇಗೆ ಸಹಕರಿಸಬಹುದೆಂದು ಈ ಲೇಖನ ತಿಳಿಸುತ್ತದೆ.
ಮೇ 23-29ರ ವಾರ, 2016
18 ಯೆಹೋವನು ತನ್ನ ಜನರನ್ನು ಜೀವದ ದಾರಿಯಲ್ಲಿ ಮಾರ್ಗದರ್ಶಿಸುತ್ತಾನೆ
ಯೆಹೋವನು ತನ್ನ ಜನರನ್ನು ಆರಂಭದಿಂದಲೂ ಮಾರ್ಗದರ್ಶಿಸುತ್ತಾ ಬಂದಿದ್ದಾನೆ. ತನ್ನ ಜನರ ಸನ್ನಿವೇಶಗಳು ಬದಲಾದಾಗ ಆತನು ಹೇಗೆ ಹೊಸ ಮಾರ್ಗದರ್ಶನ ಕೊಟ್ಟನೆಂದು ಈ ಲೇಖನದಿಂದ ತಿಳಿಯುವಿರಿ. ದೇವರ ಮಾರ್ಗದರ್ಶನ ಪಡೆಯಲು ನಮಗೆ ಮನಸ್ಸಿದೆಯೆಂದು ಹೇಗೆ ತೋರಿಸಬಹುದು? ಇದಕ್ಕೂ ಉತ್ತರವಿದೆ.
23 ನೀವು ನಿಮ್ಮ ಸಭೆಗೆ ಸಹಾಯ ಮಾಡುವಿರಾ?