ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 4/1 ಪು. 16
  • ಬೈಬಲ್‌ ಕೊಡುವ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ ಕೊಡುವ ಉತ್ತರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ಕರ್ತನ ರಾತ್ರಿ ಭೋಜನ ಹೇಗೆ ಆಚರಿಸಲ್ಪಡುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಟ್ಟುಗೂಡಿಸುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಯೆಹೋವನನ್ನೂ ಯೇಸುವನ್ನೂ ಜ್ಞಾಪಿಸಿಕೊಳ್ಳಬೇಕು
    ಮಹಾ ಬೋಧಕನಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 4/1 ಪು. 16

ಬೈಬಲ್‌ ಕೊಡುವ ಉತ್ತರ

ಯೇಸುವಿನ ಮರಣವನ್ನು ನಾವೇಕೆ ನೆನಪಿಸಿಕೊಳ್ಳಬೇಕು?

Happy people enjoying life on a paradise earth

ಯೇಸುವಿನ ತ್ಯಾಗದಿಂದ ನಮಗೆ ಎಂಥ ಜೀವನ ಸಿಗಲಿದೆ?—ಯೆಶಾಯ 25:8; 33:24.

ಇತಿಹಾಸದಲ್ಲೇ ಅತಿ ಪ್ರಾಮುಖ್ಯವಾದ ಘಟನೆ ಯೇಸುವಿನ ಮರಣ. ಕಾರಣ ಆತನ ಮರಣದಿಂದ ಮನುಷ್ಯರಿಗಾಗಿರುವ ದೇವರ ಉದ್ದೇಶ ನೆರವೇರುತ್ತದೆ. ದೇವರು ಮನುಷ್ಯರನ್ನು ಸೃಷ್ಟಿ ಮಾಡಿದಾಗ ಕೆಟ್ಟದ್ದನ್ನು ಮಾಡುವ ಸ್ವಭಾವ ಅವರಲ್ಲಿ ಇರಲಿಲ್ಲ. ಅವರು ಸಾವು-ನೋವು, ಕಾಯಿಲೆಗಳು ಯಾವುದೂ ಇಲ್ಲದೆ ನೆಮ್ಮದಿಯ ಜೀವನ ಸಾಗಿಸಬೇಕೆನ್ನುವುದು ದೇವರ ಉದ್ದೇಶವಾಗಿತ್ತು. (ಆದಿಕಾಂಡ 1:31) ಆದರೆ ಮೊದಲ ಮನುಷ್ಯನಾದ ಆದಾಮನ ಪಾಪದಿಂದ ನಾವೆಲ್ಲರೂ ಪಾಪಿಗಳಾಗಿದ್ದೇವೆ ಮತ್ತು ಸಾಯುತ್ತಿದ್ದೇವೆ. ಆ ಪಾಪ ಮತ್ತು ಮರಣದಿಂದ ನಮ್ಮನ್ನು ರಕ್ಷಿಸಲು ಯೇಸು ತನ್ನ ಪ್ರಾಣವನ್ನೇ ತ್ಯಾಗ ಮಾಡಿದನು.—ಮತ್ತಾಯ 20:28; ರೋಮನ್ನರಿಗೆ 6:23 ಓದಿ.

ದೇವರಿಗೆ ನಮ್ಮ ಮೇಲೆ ತುಂಬ ಪ್ರೀತಿ. ಹಾಗಾಗಿ ತನ್ನ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸಿದನು. ನಮಗೋಸ್ಕರ ಯೇಸು ತನ್ನ ಪ್ರಾಣವನ್ನು ಕೊಡುವಂತೆ ಕೂಡ ಅನುಮತಿಸಿದನು. (1 ಯೋಹಾನ 4:9, 10) ತನ್ನನ್ನು ನೆನಪಿಸಿಕೊಳ್ಳಲು ಶಿಷ್ಯರು ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಉಪಯೋಗಿಸಿ ಒಂದು ಸರಳ ಆಚರಣೆಯನ್ನು ಮಾಡಬೇಕೆಂದು ಯೇಸು ಹೇಳಿದನು. ಪ್ರತಿ ವರ್ಷ ಈ ಆಚರಣೆ ಮಾಡುವ ಮೂಲಕ ದೇವರು ಮತ್ತು ಆತನ ಮಗನಾದ ಕ್ರಿಸ್ತನು ತೋರಿಸಿದ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇವೆ.—ಲೂಕ 22:19, 20 ಓದಿ.

ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಯಾರು ಸೇವಿಸಬೇಕು?

ಎಲ್ಲರೂ ಅಲ್ಲ. ಕಾರಣ, ಯೇಸು ಈ ಆಚರಣೆ ಆರಂಭಿಸಿದಾಗ ತನ್ನ ಶಿಷ್ಯರೊಂದಿಗೆ ಒಂದು ಒಪ್ಪಂದ ಅಥವಾ ಒಡಂಬಡಿಕೆಯನ್ನು ಮಾಡಿಕೊಂಡನು. (ಮತ್ತಾಯ 26:26-28) ಈ ಒಡಂಬಡಿಕೆಯಿಂದಾಗಿ ಆತನ ಶಿಷ್ಯರಿಗೆ ಮತ್ತು ಇತರ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಸ್ವರ್ಗದಲ್ಲಿ ರಾಜರು ಮತ್ತು ಯಾಜಕರಾಗಿ ಸೇವೆ ಮಾಡುವ ನಿರೀಕ್ಷೆ ಸಿಕ್ಕಿತು. ಲಕ್ಷಾಂತರ ಜನ ಈ ಆಚರಣೆಗೆ ಹಾಜರಾಗುತ್ತಾರಾದರೂ ಕೇವಲ ಸ್ವಲ್ಪ ಜನ ಅಂದರೆ ಯೇಸು ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೋ ಅವರು ಮಾತ್ರ ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನು ಸೇವಿಸುತ್ತಾರೆ.—ಪ್ರಕಟನೆ 5:10 ಓದಿ.

ಕಳೆದ 2,000 ವರ್ಷಗಳಿಂದ ಯೆಹೋವ ದೇವರು, ರಾಜರಾಗಿ ಸೇವೆ ಮಾಡಲು ಅರ್ಹರಾಗಿರುವವರನ್ನು ಆಯ್ಕೆ ಮಾಡುತ್ತಿದ್ದಾನೆ. (ಲೂಕ 12:32) ಆದರೆ ಇವರ ಸಂಖ್ಯೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವವರ ಸಂಖ್ಯೆಗೆ ಹೋಲಿಸುವಾಗ ತುಂಬ ಚಿಕ್ಕದು.—ಪ್ರಕಟನೆ 7:4, 9, 17 ಓದಿ. (w15-E 03/01)

ಹೆಚ್ಚಿನ ಮಾಹಿತಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 5⁠ರಲ್ಲಿ ಸಿಗುತ್ತದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

ಇದನ್ನು www.jw.orgನಿಂದ ಡೌನ್‌ಲೋಡ್‌ಮಾಡಿಕೊಳ್ಳಬಹುದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ