ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 4/1 ಪು. 3
  • ಉತ್ತರಗಳಿಗಾಗಿ ಹುಡುಕಾಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ತರಗಳಿಗಾಗಿ ಹುಡುಕಾಟ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಅನುರೂಪ ಮಾಹಿತಿ
  • ಹೆತ್ತವರಿಗೆ ಹೆಚ್ಚಿನ ಸಹಾಯ
    ಎಚ್ಚರ!—2019
  • ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
    ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
  • ಯಾವತ್ತಾದ್ರೂ ಹೀಗೆ ಯೋಚ್ನೆ ಮಾಡಿದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2025
  • ಕುಟುಂಬಕ್ಕಾಗಿ ಇನ್ನಷ್ಟು ನೆರವು
    ಎಚ್ಚರ!—2018
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 4/1 ಪು. 3

ಉತ್ತರಗಳಿಗಾಗಿ ಹುಡುಕಾಟ

“ಹೊಟ್ಟೆಹೊರುವುದು ‘ಹೇಗೆ’ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿದಿದ್ದೇವೆ. ಅಲ್ಲದೆ, ಹಿಂದಿನ ಕಾಲದಲ್ಲಿ ಕಂಡುಕೇಳಿರದ ಏರ್‌ಕಂಡಿಷನ್‌ಗಳು, ಸಂಗೀತ ಕೇಳಿಸಿಕೊಳ್ಳಲು ಉಚ್ಛ ಗುಣಮಟ್ಟದ ಧ್ವನಿವ್ಯವಸ್ಥೆ . . . ಮೊದಲಾದ ಸುಖಸಾಧನಗಳು ನಮ್ಮ ಬಳಿ ಇವೆ. ಆದರೆ ಈಗ ಉಳಿದಿರುವ ಪ್ರಶ್ನೆ: ನಾವು ‘ಯಾಕೆ’ ಜೀವಿಸುತ್ತಿದ್ದೇವೆ? ಬದುಕಬೇಕು, ಉನ್ನತಿಗೇರಬೇಕು ಎಂಬ ಹೋರಾಟ ಯಾತಕ್ಕೆ? ಇದರ ಉದ್ದೇಶವಾದರೂ ಏನು?” —ಡೇವಿಡ್‌ ಜಿ. ಮೈಯರ್ಸ್‌, ಅಮೆರಿಕದ ಮಿಷಿಗನ್‌ನ ಹಾಲೆಂಡ್‌ನಲ್ಲಿರುವ ಹೋಪ್‌ ಕಾಲೇಜ್‌ನ ಮನಶ್ಶಾಸ್ತ್ರದ ಪ್ರೊಫೆಸರ್‌.

ಈ ಪ್ರೊಫೆಸರರು ಕೇಳಿರುವ ಪ್ರಶ್ನೆಗಳಿಗೆ ನೀವೇನು ಉತ್ತರಕೊಡುವಿರಿ? ಅವುಗಳಿಗೆ ಉತ್ತರ ಹುಡುಕುವುದರಿಂದ ಪ್ರಯೋಜನವಾದರೂ ಇದೆಯೇ ಎಂದು ಕೆಲವರು ನೆನಸ್ಯಾರು. ಆದರೆ ಅಂಥ ಪ್ರಶ್ನೆಗಳನ್ನು ಅಲಕ್ಷಿಸುವುದು, ನಿಮ್ಮ ಪಾದರಕ್ಷೆಗಳೊಳಗೆ ಹೋಗಿರುವ ಒಂದು ಚಿಕ್ಕ ಕಲ್ಲನ್ನು ಅಲಕ್ಷಿಸುವುದಕ್ಕೆ ಸಮಾನ. ನೀವು ಹಾಗೆಯೇ ನಡೆಯಬಹುದು, ಆದರೆ ನಿಮ್ಮ ನಡಿಗೆ ಹಾಯಾಗಿರಲಿಕ್ಕಿಲ್ಲ.

ಜೀವನಕ್ಕೆ ಅರ್ಥವಿದೆಯೋ ಎಂದು ನೀವೆಂದಾದರೂ ಯೋಚಿಸಿದ್ದುಂಟೋ? ಬೇರೆಯವರೂ ಇದರ ಕುರಿತು ಚಿಂತಿಸಿದ್ದಾರೆ. ಮಾನವ ಮೌಲ್ಯಗಳ ಬಗ್ಗೆ ನಡೆದಿರುವವುಗಳಲ್ಲೇ ಅತಿ ದೊಡ್ಡ ಅಧ್ಯಯನವಾದ ‘ಲೋಕ ಮೌಲ್ಯಗಳ ಸಮೀಕ್ಷೆ’ಗನುಸಾರ ಹಲವಾರು ದೇಶಗಳಲ್ಲಿ ಹೆಚ್ಚೆಚ್ಚು ಜನರು “ಜೀವನದ ಅರ್ಥ ಮತ್ತು ಉದ್ದೇಶದ” ಕುರಿತು ಯೋಚಿಸುತ್ತಿದ್ದಾರೆ.

ನಿಜ ನೆಮ್ಮದಿಗಾಗಿ ನೀವು ಈ ಮೂರು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವುದು ಮಹತ್ವದ್ದಾಗಿದೆ.

ನಾವು ಅಸ್ತಿತ್ವಕ್ಕೆ ಬಂದದ್ದು ಹೇಗೆ?

ಜೀವನದ ಉದ್ದೇಶ ಏನು?

ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ?

ಈ ಮಹತ್ವದ ಪ್ರಶ್ನೆಗಳಿಗೆ ಭರವಸಾರ್ಹ ಉತ್ತರಗಳು ನಿಮಗೆಲ್ಲಿ ಸಿಗುವವು? ಊಹಾಪೋಹ ಇಲ್ಲವೇ ತಾತ್ತ್ವಿಕ ಉತ್ತರಗಳನ್ನು ಕೊಡುವ ಬದಲು, ಮುಂದಿನ ಪುಟಗಳು ದೇವರ ವಾಕ್ಯವಾದ ಬೈಬಲಿನಲ್ಲಿರುವ ಉತ್ತರಗಳನ್ನು ಸಾದರಪಡಿಸುವವು. ನಿಮ್ಮ ಬಳಿ ಬೈಬಲ್‌ ಇರುವಲ್ಲಿ ಅದನ್ನು ತೆರೆದು, ಅದೇನು ಹೇಳುತ್ತದೆಂಬುದನ್ನು ನೋಡುವಂತೆ ಕೇಳಿಕೊಳ್ಳುತ್ತೇವೆ. (w08 2/1)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ