ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 12/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಅನುರೂಪ ಮಾಹಿತಿ
  • ಮಗ್ದಲದ ಮರಿಯ ಯಾರು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • “ನಾನು ಪ್ರಭುನ ನೋಡಿದೆ!”
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • “ನಾನು ಕರ್ತನನ್ನು ನೋಡಿದೆ!”
    ಅವರ ನಂಬಿಕೆಯನ್ನು ಅನುಕರಿಸಿ
  • ಬಾಗಿಲುಮುಚ್ಚಿದ್ದ ಕೋಣೆಯಲ್ಲಿ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 12/1 ಪು. 31

ವಾಚಕರಿಂದ ಪ್ರಶ್ನೆಗಳು

ಪುನರುತ್ಥಿತ ಯೇಸುವು ತೋಮನು ತನ್ನನ್ನು ಮುಟ್ಟುವಂತೆ ಕರೆಕೊಟ್ಟನಾದರೂ, ಅದಕ್ಕೆ ಮುಂಚೆ ತನ್ನನ್ನು ಮುಟ್ಟುವುದರಿಂದ ಮಗ್ದಲದ ಮರಿಯಳನ್ನು ಏಕೆ ತಡೆದನು?

ಬೈಬಲಿನ ಕೆಲವು ಹಳೇ ಭಾಷಾಂತರಗಳು, ತನ್ನನ್ನು ಮುಟ್ಟಬೇಡ ಎಂದು ಯೇಸು ಮಗ್ದಲದ ಮರಿಯಳಿಗೆ ಹೇಳಿದನೆಂಬ ಅರ್ಥವನ್ನು ಕೊಡುತ್ತವೆ. ಉದಾಹರಣೆಗೆ, ಕಿಂಗ್‌ ಜೇಮ್ಸ್‌ ವರ್ಷನ್‌ ಯೇಸುವಿನ ಮಾತುಗಳನ್ನು ಹೀಗೆ ತರ್ಜುಮೆಮಾಡಿದೆ: “ನನ್ನನ್ನು ಮುಟ್ಟಬೇಡ; ಏಕೆಂದರೆ ನಾನಿನ್ನೂ ತಂದೆಯ ಬಳಿಗೆ ಏರಿಹೋಗಿಲ್ಲ.” (ಯೋಹಾನ 20:17) ಆದರೆ ಸಾಮಾನ್ಯವಾಗಿ “ಮುಟ್ಟು” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್‌ ಕ್ರಿಯಾಪದವು, “ಅಂಟಿಕೊಂಡಿರು, ಭದ್ರವಾಗಿ ಹಿಡಿದುಕೊ, ಗಟ್ಟಿಯಾಗಿ ಹಿಡಿ, ಬಿಗಿಯಾಗಿ ಹಿಡಿ” ಎಂಬರ್ಥವನ್ನೂ ಕೊಡುತ್ತದೆ. ತರ್ಕಬದ್ಧವಾಗಿಯೇ, ಮಗ್ದಲದ ಮರಿಯಳು ತನ್ನನ್ನು ಮುಟ್ಟುವುದನ್ನು ಯೇಸು ಆಕ್ಷೇಪಿಸಲಿಲ್ಲ, ಏಕೆಂದರೆ ಅವನು ಸಮಾಧಿಯ ಬಳಿಯಿದ್ದ ಇತರ ಸ್ತ್ರೀಯರು ತನ್ನ ‘ಪಾದಗಳನ್ನು ಹಿಡಿಯುವಂತೆ’ ಬಿಟ್ಟನು.​—ಮತ್ತಾಯ 28:9.

ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌), ದ ನ್ಯೂ ಜೆರೂಸಲೇಮ್‌ ಬೈಬಲ್‌ ಮತ್ತು ದ ನ್ಯೂ ಇಂಗ್ಲಿಷ್‌ ಬೈಬಲ್‌ನಂಥ ಆಧುನಿಕ ಭಾಷೆಯ ಅನೇಕ ಭಾಷಾಂತರಗಳು, ಯೇಸುವಿನ ಮಾತುಗಳನ್ನು “ನನಗೆ ಅಂಟಿಕೊಳ್ಳುವುದನ್ನು ನಿಲ್ಲಿಸು” ಎಂದು ತರ್ಜುಮೆಮಾಡುವ ಮೂಲಕ ಅವುಗಳ ನಿಜಾರ್ಥವನ್ನು ಗ್ರಹಿಸಲು ನಮಗೆ ಸಹಾಯಮಾಡುತ್ತವೆ. ಒಬ್ಬ ನಿಕಟ ಸಹವಾಸಿಯಾಗಿದ್ದ ಮಗ್ದಲದ ಮರಿಯಳಿಗೆ ಯೇಸು ಹೀಗೇಕೆ ಹೇಳಿದನು?​—ಲೂಕ 8:​1-3.

ಯೇಸು ಇನ್ನೇನು ತಮ್ಮನ್ನು ಬಿಟ್ಟುಹೋಗಲಿದ್ದಾನೆ ಮತ್ತು ಸ್ವರ್ಗಾರೋಹಣ ಮಾಡಲಿದ್ದಾನೆ ಎಂದು ಮಗ್ದಲದ ಮರಿಯಳು ಭಯಪಟ್ಟಿರುವುದು ಸಂಭವನೀಯ. ತನ್ನ ಕರ್ತನೊಂದಿಗಿರಬೇಕೆಂಬ ಕಟ್ಟಾಸೆಯಿಂದ ಪ್ರಚೋದಿತಳಾದ ಅವಳು ಯೇಸುವನ್ನು ಹೋಗಲು ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಇಷ್ಟು ಬೇಗ ಅವರನ್ನು ಬಿಟ್ಟುಹೋಗುವುದಿಲ್ಲ ಎಂಬ ಆಶ್ವಾಸನೆಯನ್ನು ಮರಿಯಳಿಗೆ ಕೊಡಲಿಕ್ಕಾಗಿ ಯೇಸು, ತನಗೆ ಅಂಟಿಕೊಳ್ಳುವುದಕ್ಕೆ ಬದಲಾಗಿ ಶಿಷ್ಯರ ಬಳಿಗೆ ಹೋಗಿ ತನ್ನ ಪುನರುತ್ಥಾನದ ಸುದ್ದಿಯನ್ನು ತಿಳಿಸುವಂತೆ ಅವಳಿಗೆ ಉಪದೇಶಿಸಿದನು.​—ಯೋಹಾನ 20:17.

ಯೇಸು ಮತ್ತು ತೋಮನ ಸಂಭಾಷಣೆಯಾದರೋ ಭಿನ್ನ ರೀತಿಯದ್ದಾಗಿತ್ತು. ಯೇಸು ಕೆಲವು ಶಿಷ್ಯರಿಗೆ ಕಾಣಿಸಿಕೊಂಡಾಗ, ತೋಮನು ಅವರ ಸಂಗಡ ಇರಲಿಲ್ಲ. ಅನಂತರ, ಯೇಸುವಿನ ಪುನರುತ್ಥಾನದ ವಿಷಯದಲ್ಲಿ ತೋಮನು ತನ್ನ ಸಂಶಯಗಳನ್ನು ವ್ಯಕ್ತಪಡಿಸಿದನು ಮತ್ತು ಯೇಸುವಿನ ಮೊಳೆಯ ಘಾಯಗಳನ್ನು ನೋಡಿ, ಅವನ ಪಕ್ಕೆಯಲ್ಲಿ ತನ್ನ ಕೈಯನ್ನು ಹಾಕಿದ ಹೊರತು ತಾನಿದನ್ನು ನಂಬುವುದಿಲ್ಲ ಎಂದು ಹೇಳಿದನು. ಎಂಟು ದಿನಗಳ ತರುವಾಯ ಯೇಸು ಪುನಃ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಈ ಸಲ ತೋಮನು ಅಲ್ಲಿ ಹಾಜರಿದ್ದನು, ಮತ್ತು ತನ್ನ ಘಾಯಗಳನ್ನು ಮುಟ್ಟಿನೋಡುವಂತೆ ಯೇಸು ಅವನಿಗೆ ಹೇಳಿದನು.​—ಯೋಹಾನ 20:​24-27.

ಹೀಗೆ, ಮಗ್ದಲದ ಮರಿಯಳ ವಿಷಯದಲ್ಲಾದರೋ, ಹೋಗುವುದರಿಂದ ತನ್ನನ್ನು ತಡೆಯುತ್ತಿದ್ದ ತಪ್ಪಾದ ಬಯಕೆಯೊಂದಿಗೆ ಯೇಸು ವ್ಯವಹರಿಸುತ್ತಿದ್ದನು; ತೋಮನ ವಿಷಯದಲ್ಲಾದರೋ, ಸಂಶಯಗಳಿದ್ದ ಒಬ್ಬ ವ್ಯಕ್ತಿಗೆ ಯೇಸು ಸಹಾಯಮಾಡುತ್ತಿದ್ದನು. ಎರಡೂ ಘಟನೆಗಳಲ್ಲಿ ಯೇಸು ತೋರಿಸಿದ ವರ್ತನೆಗಳಿಗೆ ಅವನಲ್ಲಿ ಸಕಾರಣಗಳಿದ್ದವು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ