ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಸಂಪರ್ಕಿಸಲು ಕಷ್ಟವಾಗುವವರನ್ನು ಸಂಪರ್ಕಿಸುವುದು
ಯೆಹೋವನ ಸಾಕ್ಷಿಗಳು ರಾಜ್ಯದ ಸಂದೇಶದೊಂದಿಗೆ ಸಾಧ್ಯವಿರುವವರೆಲ್ಲರನ್ನು ಸಂಪರ್ಕಿಸಲು ಪ್ರಯಾಸಪಡುತ್ತಾರೆ. ಹೆಚ್ಚಿನವೇಳೆ ಮನೆಯಲ್ಲಿ ಸಿಗದವರನ್ನು ಸಂಪರ್ಕಿಸಲು ಕೆಲವು ಸಲ ಅಸಾಮಾನ್ಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. (ಮಾರ್ಕ 13:10) ಈ ವಿಷಯದಲ್ಲಿ, ದಕ್ಷಿಣ ಅಮೆರಿಕದ ದೇಶವೊಂದರ ವಿಶೇಷ ಪಯನೀಯರನು ಈ ಕೆಳಗಿನ ಅನುಭವವನ್ನು ತಿಳಿಸುತ್ತಾನೆ.
“ನಾನೂ ನನ್ನ ಪತ್ನಿಯೂ ನೇಮಿಸಲ್ಪಟ್ಟ ಟೆರಿಟೊರಿಯನ್ನು ಒಂದು ದಿನ ರಾಜ್ಯಪಾಲರು ಸಂದರ್ಶಿಸಲಿದ್ದಾರೆಂದು ನನಗೆ ತಿಳಿದುಬಂತು. ಅವರು ಮನೆಯಲ್ಲಿ ಇರುವುದು ವಿರಳವಾಗಿರುವುದರಿಂದ ನಾನು ಅವರಿಗೊಂದು ಪತ್ರ ಬರೆದು, ಹಲವಾರು ಬೈಬಲ್ ಪ್ರಕಾಶನಗಳನ್ನೂ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ಮತ್ತು ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಹಾಗೂ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕಗಳನ್ನು ಕಳುಹಿಸಿಕೊಟ್ಟೆ. ಅವುಗಳಲ್ಲಿ ಪ್ರತಿಯೊಂದು ಪ್ರಕಾಶನದ ಉದ್ದೇಶವನ್ನು ನನ್ನ ಪತ್ರವು ವಿವರಿಸಿತ್ತು.
“ಪ್ರಕಾಶನಗಳಿಗೆ ಅವರ ಪ್ರತಿಕ್ರಿಯೆ ಏನಾಗಿದೆಯೆಂದು ನೋಡುವುದರಲ್ಲಿ ನನಗೆ ಆಸಕ್ತಿ ಇದ್ದುದರಿಂದ, ಅವರನ್ನು ನಾನು ಭೇಟಿಯಾಗಲು ಅನುಮತಿ ನೀಡುವಂತೆ ವಿನಂತಿಸಿದೆ. ಕೆಲವು ವಾರಗಳ ಅನಂತರ ಅವರ ಭೇಟಿಗಾಗಿ ಅನುಮತಿಯನ್ನು ನೀಡಲಾಯಿತು. ನಾನು ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೋದ ಕಾಪಿಯೊಂದನ್ನು ಸಂಗಡ ಒಯ್ದೆ. ಅವರೊಂದಿಗೆ ಎರಡು ತಾಸುಗಳನ್ನು ಕಳೆದೆ. ರಾಜ್ಯಪಾಲರು ವಿಡಿಯೋ ನೋಡಿದ ಬಳಿಕ ಅದರ ಕುರಿತು ಅವರ ಅಭಿಪ್ರಾಯವೇನೆಂದು ಕೇಳಿದೆ. ಅವರು ಉತ್ತರಿಸಿದ್ದು: ‘ನಿಮ್ಮಂಥ ಒಂದು ಸಂಸ್ಥೆಯು ಭೂಮಿಯಲ್ಲಿ ಬೇರೆ ಯಾವುದೂ ಇಲ್ಲ. ನನ್ನ ಸರ್ಕಾರಿ ಕಾರ್ಯಯೋಜನೆಗಳನ್ನು ಪೂರೈಸಲು ನಿಮ್ಮಂಥ ಜನರಿದ್ದರೆ ಎಷ್ಟೊ ಒಳ್ಳೇದಿತ್ತು!’ ಅನಂತರ, ನಾನು ನಮ್ಮ ಸಂಸ್ಥೆಯ ಮುಖ್ಯ ಕಾರ್ಯಾಲಯಕ್ಕೆ ಎಂದಾದರೂ ಭೇಟಿ ನೀಡಿದ್ದೆನೋ ಎಂದವರು ಕೇಳಿದರು. ನನ್ನ 14ನೆಯ ವಯಸ್ಸಿನಿಂದ ಅದು ನನ್ನ ಧ್ಯೇಯವಾಗಿದ್ದರೂ, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ನಮ್ಮ ಮುಖ್ಯಕಾರ್ಯಾಲಯವನ್ನು ನೋಡುವ ಸಂದರ್ಭ ನನಗೆ ಸಿಕ್ಕಿರಲಿಲ್ಲ ಎಂದು ನಾನಂದೆ. ಅದು ಮುಟ್ಟಲು ಕಷ್ಟಕರವಾದ ಧ್ಯೇಯಗಳಲ್ಲಿ ಒಂದಾಗಿತ್ತು. ಅವರು ಒಂದು ಕ್ಷಣ ನನ್ನನ್ನು ನೇರವಾಗಿ ದಿಟ್ಟಿಸಿದರು. ಆ ಸಂದರ್ಭ ನಿನಗೆ ಸಿಗುವಂತೆ ಮಾಡುವುದು ನನ್ನ ಇಚ್ಛೆಯಾಗಿದೆ ಎಂದು ಅನಂತರ ನುಡಿದರು. ಅವರು ನಮಗಾಗಿ ಕಾನೂನುಬದ್ಧ ಪತ್ರಗಳನ್ನು ಏರ್ಪಡಿಸಿ ವಿಮಾನಯಾನದ ಟಿಕೇಟುಗಳನ್ನು ಕೊಡುಗೆಯಾಗಿ ಕೊಟ್ಟರು!
“ಆ ರಾಜ್ಯಪಾಲರಿಗೆ ಈಗ ಕ್ರಮವಾಗಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಕಳುಹಿಸಲ್ಪಡುತ್ತಿವೆ. ಬೇಗನೆ ಅವರೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲು ನಾವು ಶಕ್ತರಾಗುವೆವೆಂಬುದು ನಮ್ಮ ನಿರೀಕ್ಷೆ.”