“ರಾಜ್ಯ ಸಭಾಗೃಹಕ್ಕೆ ನಾನು ನೀಡಿದ ಭೇಟಿ”
ಲಾರa ಒಬ್ಬ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಳು. ಒಂದು ಧಾರ್ಮಿಕ ಆರಾಧನಾ ಸಭೆಗೆ ಹಾಜರಾಗುವಂತಹ ಮತ್ತು ಅಲ್ಲಿ ತನಗಾದ ಅನುಭವದ ಕುರಿತು ಒಂದು ವರದಿಯನ್ನು ಬರೆಯುವಂತಹ ನೇಮಕವು ಅವಳಿಗೆ ಸಿಕ್ಕಿತು. ಅವಳು ಯೆಹೋವನ ಸಾಕ್ಷಿಗಳ ಸಭೆಗೆ ಹಾಜರಾಗುವ ಆಯ್ಕೆಮಾಡಿದಳು, ಮತ್ತು “ರಾಜ್ಯ ಸಭಾಗೃಹಕ್ಕೆ ನಾನು ನೀಡಿದ ಭೇಟಿ” ಎಂಬುದು ಅವಳ ಪ್ರಬಂಧದ ಶೀರ್ಷಿಕೆಯಾಗಿತ್ತು. ಸಾಕ್ಷಿಗಳ ವಿಷಯದಲ್ಲಿ ಯಾವ ಭಿನ್ನತೆಯನ್ನು ಲಾರ ಕಂಡುಕೊಂಡಳು? ಅವಳು ತಿಳಿಸಿದ ಅನೇಕ ಸಂಗತಿಗಳಲ್ಲಿ ಕೆಲವು ಈ ಕೆಳಗಿನಂತಿವೆ.
ಮಕ್ಕಳು: “ಎಲ್ಲ ಮಕ್ಕಳು ವಯಸ್ಕರೊಂದಿಗೆ ಒಂದೇ ಕೋಣೆಯಲ್ಲಿದ್ದರು. ನಾನು ಹಾಜರಾಗಿರುವ ಎಲ್ಲ ಚರ್ಚುಗಳಲ್ಲಿ, ಮಕ್ಕಳು ತಮ್ಮ ಹೆತ್ತವರನ್ನು ಬಿಟ್ಟು, ಸಂಡೇ ಸ್ಕೂಲ್ಗೆ ಹಾಜರಾಗಬೇಕಾಗುತ್ತದೆ.”
ಜಾತಿಸಂಬಂಧವಾದ ಹೊಂದಾಣಿಕೆ: “ಸರ್ವಸಾಮಾನ್ಯವಾಗಿ, ಚರ್ಚುಗಳು ಒಂದು ನಿರ್ದಿಷ್ಟ ಜಾತಿ ಅಥವಾ ಕುಲದ ಸದಸ್ಯರನ್ನು ಮಾತ್ರ ತಮ್ಮ ಕಡೆಗೆ ಸೆಳೆದುಕೊಳ್ಳುತ್ತವೆ. . . . ಆದರೆ, ಯೆಹೋವನ ಸಾಕ್ಷಿಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡಿದ್ದರು—ಪ್ರತ್ಯೇಕ ಬಳಗಗಳಾಗಿ ಅಲ್ಲ.”
ಸ್ವಾಗತ ಮನೋಭಾವ: “ಅನೇಕರು ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಿದರು. . . . ನನ್ನೊಂದಿಗೆ ಯಾರಾದರೂ ಬೈಬಲ್ ಅಭ್ಯಾಸ ಮಾಡುತ್ತಿದ್ದಾರೋ ಎಂದು ಸಹ ಕೆಲವರು ಕೇಳಿದರು. ಆದರೂ, ಅವರು ನನ್ನನ್ನು ಒತ್ತಾಯಿಸುತ್ತಿದ್ದಾರೆ ಎಂದು ನನಗನಿಸಲಿಲ್ಲ. ಅವರು . . . ನಾನು ಬೈಬಲ್ ಅಭ್ಯಾಸ ಮಾಡಬೇಕೋ ಇಲ್ಲವೋ ಎಂಬುದನ್ನು ನನ್ನ ತೀರ್ಮಾನಕ್ಕೆ ಬಿಟ್ಟರು.”
ವಂತಿಗೆ ಇಲ್ಲ: “ನನಗೆ ನಿಜವಾಗಿಯೂ ಅತ್ಯಾಶ್ಚರ್ಯವನ್ನುಂಟುಮಾಡಿದ ಒಂದು ಸಂಗತಿಯೇನೆಂದರೆ, ಯಾರೊಬ್ಬರೂ ಹಣವನ್ನು ಕಾಣಿಕೆಯಾಗಿ ಕೇಳಲಿಲ್ಲ. . . . ನಾನು ಸಂದರ್ಶಿಸಿರುವ ಚರ್ಚುಗಳಲ್ಲಿ, ಮಕ್ಕಳ ಕ್ಲಾಸುಗಳಲ್ಲಿ ಸಹ ಹಣವನ್ನು ಕಾಣಿಕೆಯಾಗಿ ತೆಗೆದುಕೊಳ್ಳಲಾಗುತ್ತಿತ್ತು.”
ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸುಮಾರು 90,000 ಸಭೆಗಳಿವೆ. ನಿಮಗೆ ಸಮೀಪವಿರುವ ಒಂದು ಸಭೆಯನ್ನು ನೀವೇಕೆ ಸಂದರ್ಶಿಸಬಾರದು?
[ಪಾದಟಿಪ್ಪಣಿ]
a ಹೆಸರು ಬದಲಾಯಿಸಲಾಗಿದೆ.