ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 8/1 ಪು. 32
  • ಕುಲವಾದ ಮತ್ತು ಧರ್ಮ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಲವಾದ ಮತ್ತು ಧರ್ಮ
  • ಕಾವಲಿನಬುರುಜು—1999
ಕಾವಲಿನಬುರುಜು—1999
w99 8/1 ಪು. 32

ಕುಲವಾದ ಮತ್ತು ಧರ್ಮ

ನಾನು 1978ರಲ್ಲಿ ಅಮೆರಿಕಕ್ಕೆ ಬಂದಾಗ, ಅಲ್ಲಿ ದೀರ್ಘಕಾಲದಿಂದಿದ್ದ ಕುಲವಾದದ ಸಮಸ್ಯೆಯನ್ನು ಬಗೆಹರಿಸಲಾಗಿತ್ತೆಂದು, ಹೀಗೆ ಕರಿಯರು ಸಮಾನ ಪ್ರಜೆಗಳಾಗಿದ್ದರೆಂದು ನಾನು ನೆನಸಿದೆ.” ಹೀಗೆಂದು ದಕ್ಷಿಣ ಆಫ್ರಿಕದಲ್ಲಿ ಜನಿಸಿದ ಮಾರ್ಕ್‌ ಮಾಟಾಬಾನೆ ಎಂಬ ಹೆಸರಿನ ಲೇಖಕನೊಬ್ಬನು, ಟೈಮ್‌ ಪತ್ರಿಕೆಗೆ ನೀಡಿದ ಒಂದು ಸಂದರ್ಶನದಲ್ಲಿ ತಿಳಿಸಿದನು. “ಅನೇಕ ವಿಧಗಳಲ್ಲಿ ಅದು ನಿಜವೆಂದು ನನಗೆ ತೋರಿತು. ದಕ್ಷಿಣ ಆಫ್ರಿಕಕ್ಕಿಂತಲೂ ಅಮೆರಿಕವು, ನೂರು ವರ್ಷ ಮುಂದುವರಿದಿರುವಂತೆ ತೋರುತ್ತಿತ್ತು. ಆದರೆ, ನನ್ನ ಆಘಾತಕ್ಕೆ, ಜನರ ಹೃದಯಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಎಂಬುದನ್ನು ಅನಂತರ ನಾನು ಕಂಡುಕೊಂಡೆ.” ಅವನನ್ನು ಈ ದಿಗ್ಭ್ರಮೆಗೊಳಿಸುವಂತಹ ಕಂಡುಹಿಡಿಯುವಿಕೆಗೆ ಯಾವುದು ನಡೆಸಿತು?

“ಅಮೆರಿಕದಲ್ಲಿ, ಭಾನುವಾರದ 11 ಘಂಟೆಯು ಬಹಳ ವಿಶೇಷವಾದ ಸಮಯವಾಗಿರುತ್ತದೆ,” ಎಂದು ಮಾಟಾಬಾನೆ ಹೇಳಿದರು. ಅವರು ಗಮನಿಸಿದ್ದೇನಂದರೆ, ಚರ್ಚಿನಲ್ಲಿ ಸಹ ಜನರು ಬೇರೊಂದು ಕುಲದೊಂದಿಗೆ ಆರಾಧನೆಯಲ್ಲಿ ಜೊತೆಸೇರಲು ಮನಸ್ಸಿಲ್ಲದವರಾಗಿದ್ದಾರೆ. “ವಾರದ ಬೇರೆ ದಿನಗಳಲ್ಲಿ ಇತರ ಕುಲದ ಕಡೆಗೆ ಇಂಥವರು ಯಾವ ಭಾವನೆಗಳಿಂದ ಬೆರೆಯುತ್ತಿರಬಹುದು?” ಎಂದು ಅವರು ಕೇಳುತ್ತಾರೆ. ಶಿಕ್ಷಣವನ್ನು, ಬದಲಾವಣೆಯ ಒಂದು ಪರಿವರ್ತಕವಾಗಿ ಉಪಯೋಗಿಸಬೇಕೆಂದು ಕೇಳಿಕೊಳ್ಳುತ್ತಾ, ಮಾಟಾಬಾನೆ ಹೇಳಿದ್ದು: “ಶಿಕ್ಷಣದ ಮೂಲಕ ಮಾನವ ಸಮಾನತೆಯನ್ನು ಅಂಗೀಕರಿಸಲು ನಿಮಗೆ ಸಾಧ್ಯವಾಗುತ್ತದೆ”.

ಯೆಹೋವನ ಸಾಕ್ಷಿಗಳು ಶಿಕ್ಷಣವೇ ತಕ್ಕ ಪರಿಹಾರವೆಂದು ಕಂಡುಕೊಂಡಿದ್ದಾರೆ. ಆದರೆ, ಇವರು ಮುಖ್ಯವಾಗಿ ದೇವರ ವಾಕ್ಯದ ಮೇಲೆ ಆಧಾರಿತವಾದ ಶಿಕ್ಷಣವನ್ನು ಶಿಫಾರಸುಮಾಡುತ್ತಾರೆ. ಹೌದು, ಕುಲ ದ್ವೇಷವು ಮಿತಿಮೀರಿರುವ ದೇಶಗಳಲ್ಲಿಯೂ ಕುಲವಾದದ ಅವಿಚಾರಾಭಿಪ್ರಾಯವೆಂಬ ಗೋಡೆಗಳನ್ನು ಒಡೆದುಹಾಕುವುದರಲ್ಲಿ ಬೈಬಲು ಇವರಿಗೆ ಸಹಾಯಮಾಡುತ್ತದೆ. ಪ್ರತಿವಾರ, ಇವರ ರಾಜ್ಯ ಸಭಾಗೃಹಗಳಲ್ಲಿ ದೇವರ ವಾಕ್ಯವಾದ ಬೈಬಲಿನ ನಿಯಮಗಳಿಂದ ಮತ್ತು ಮೂಲತತ್ವಗಳಿಂದ ಶಿಕ್ಷಿತರಾಗಲು, ವಿಭಿನ್ನ ಕುಲ ಮತ್ತು ರಾಷ್ಟ್ರಗಳಿಂದ ಜನರು ಒಟ್ಟಾಗಿ ಕೂಡಿಬರುತ್ತಾರೆ. ಈ ಕೂಟಗಳಲ್ಲಿ ಹಣವನ್ನು ಕೇಳಲಾಗುವುದಿಲ್ಲ. ನಿಮಗೂ ಹಾಜರಾಗಲು ಸ್ವಾಗತವಿದೆ!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ