ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 12/1 ಪು. 32
  • ತಾಯಿಯ ಮಮತೆಯನ್ನೂ ಮೀರಿದ ಮಮತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ತಾಯಿಯ ಮಮತೆಯನ್ನೂ ಮೀರಿದ ಮಮತೆ
  • ಕಾವಲಿನಬುರುಜು—1998
ಕಾವಲಿನಬುರುಜು—1998
w98 12/1 ಪು. 32

ತಾಯಿಯ ಮಮತೆಯನ್ನೂ ಮೀರಿದ ಮಮತೆ

ರೈಲು ನಿಲ್ದಾಣಗಳಲ್ಲಿ, ಸಾರ್ವಜನಿಕ ಟ್ಲಾಯೆಟ್‌ಗಳಲ್ಲಿ, ಇಲ್ಲವೆ ಗದ್ದಲಭರಿತ ರಸ್ತೆಗಳಲ್ಲಿ, ತಾಯಂದಿರು ತಮ್ಮ ನವಜಾತ ಶಿಶುಗಳನ್ನು ತೊರೆದುಬಿಡುತ್ತಿದ್ದಾರೆ. ಕೆಲವೊಮ್ಮೆ, ಕಸದ ತೊಟ್ಟಿಗಳಲ್ಲೂ ತಾಯಿಗಾಗಿ ಅಳುತ್ತಿರುವ ಪುಟ್ಟ ಶಿಶುಗಳನ್ನು ಕಸ ಶೇಖರಿಸುವವರು ಕಂಡುಕೊಂಡಿದ್ದಾರೆ. ಓ ಎಸ್‌ಟಾಡೊ ಡೆ ಸಾವೊ ಪೌಲೊ ಪತ್ರಿಕೆಗನುಸಾರ, “ಬೀದಿಗಳಲ್ಲಿ ತೊರೆಯಲ್ಪಡುವ ಶಿಶುಗಳ ಸಂಭವವು ಹೆಚ್ಚುತ್ತಾ ಇದೆ.” ಮಗುವನ್ನು ತೊರೆಯುವ ಆ ಯುವ ತಾಯಿಯು ತದನಂತರ ವಿಷಾದಪಡಬಹುದಾದರೂ, ತನ್ನ ಮಗುವಿನ ಪ್ರಾಣ ಹೋದರೂ ಅದನ್ನು ತೊರೆದುಬಿಡುತ್ತಾಳೆ.

‘ತಾಯಿಯೊಬ್ಬಳು ತನ್ನ ಮಗುವನ್ನು ಅನಿಶ್ಚಿತ ಭವಿಷ್ಯತ್ತಿಗೆ ತೊರೆದುಬಿಡುವುದರ ಕುರಿತು ಯೋಚಿಸುವುದಾದರೂ ಹೇಗೆ?’ ಎಂಬುದಾಗಿ ನೀವು ವಿಸ್ಮಯಪಡಬಹುದು. ಆದರೆ, ತನ್ನವರಿಗಾಗಿ ಸೃಷ್ಟಿಕರ್ತನಲ್ಲಿರುವ ಅನಿಸಿಕೆಗಳು ಎಷ್ಟು ಭಿನ್ನವಾಗಿವೆ ಎಂಬುದನ್ನು ತೋರಿಸಲು, ಬೈಬಲು ಇಂತಹ ಒಂದು ದುಃಖಕರ ಸಂಗತಿಯನ್ನು ರೂಪಕವಾಗಿ ಉಪಯೋಗಿಸುತ್ತದೆ: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.”—ಯೆಶಾಯ 49:15.

ನಿಜ, ಬೇರೆ ಯಾವುದೇ ತಾಯಿಗಿಂತಲೂ ದೇವರಿಗೆ ನಮ್ಮ ಮೇಲೆ ಗಾಢವಾದ ಮಮತೆಯಿದೆ ಮತ್ತು ನಮ್ಮ ಅಗತ್ಯಗಳಿಗೆ ಆತನು ಸೂಕ್ಷ್ಮಸಂವೇದಿಯಾಗಿದ್ದಾನೆ. ನೀವು ಯುವಕರಾಗಿರಲಿ ವಯಸ್ಕರಾಗಿರಲಿ, ನಿಮ್ಮ ಸಮಸ್ಯೆಯು ಏನೇ ಆಗಿರಲಿ ನೀವು ಒಬ್ಬಂಟಿಗರಾಗಿಲ್ಲ. ನಿಮ್ಮ ಸೃಷ್ಟಿಕರ್ತನು ನಿಮಗೆ ಸಹಾಯ ಮಾಡಲು ಬಯಸುತ್ತಾನೆ ಮತ್ತು ನಿಮ್ಮ ಯೋಗಕ್ಷೇಮದಲ್ಲಿ ಆತನಿಗೆ ಆಸಕ್ತಿಯಿದೆ. ಕೀರ್ತನೆಗಾರನು ಅದನ್ನು ಹೀಗೆ ಹೇಳುತ್ತಾನೆ: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.”—ಕೀರ್ತನೆ 27:10.

ಲೋಕವ್ಯಾಪಕವಾಗಿ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು “ಒಬ್ಬನೇ ಸತ್ಯ ದೇವರಾದ” ಯೆಹೋವ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ನೀಡಲಿಕ್ಕಾಗಿ ಪ್ರಕಾಶಿಸಲ್ಪಡುತ್ತವೆ. ಆ ಜ್ಞಾನವನ್ನು ಗಣ್ಯತಾಪೂರ್ವಕವಾಗಿ ಪಡೆದುಕೊಳ್ಳುವವರಿಗೆ ಅದು ನಿತ್ಯಜೀವವನ್ನು ನೀಡಬಲ್ಲದು.—ಯೋಹಾನ 17:3.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ