ಒಂದು ವಿಶೇಷ ಘಟನೆಗಾಗಿ ದಯವಿಟ್ಟು ನಮ್ಮೊಂದಿಗೆ ಜೊತೆಗೂಡಿರಿ 1998, ಏಪ್ರಿಲ್ 11ರ ಶನಿವಾರ
ದೇವರು ತನ್ನ ಮಗನಾದ ಯೇಸು ಕ್ರಿಸ್ತನನ್ನು ವರದಾನವಾಗಿ ನೀಡಿದ್ದನ್ನು ತಮ್ಮೊಂದಿಗೆ ಜ್ಞಾಪಿಸಿಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತಾರೆ. ಈ ವರದಾನವು, ಭೂಮಿಯ ಮೇಲೆ ನಿತ್ಯಜೀವವನ್ನು ಅನುಭವಿಸುವುದರ ಪ್ರತೀಕ್ಷೆಯನ್ನು ಮಾನವಕುಲಕ್ಕೆ ತೆರೆಯಿತು.—ಯೋಹಾನ 3:16.
ಈ ವರ್ಷ ಯೇಸುವಿನ ಮರಣದ ಜ್ಞಾಪಕವನ್ನು, ಏಪ್ರಿಲ್ 11ರ ಶನಿವಾರದಂದು, ಸೂರ್ಯಾಸ್ತಮಾನದ ಬಳಿಕ ಆಚರಿಸಲಾಗುವುದು. ಬೈಬಲಿನ ಚಾಂದ್ರಮಾನ ಕ್ಯಾಲೆಂಡರಿನಲ್ಲಿ ಈ ತಾರೀಖು ನೈಸಾನ್ 14ಕ್ಕೆ ಸರಿಸಮವಾಗಿದೆ. ನಿರ್ದಿಷ್ಟವಾದ ಕೂಟದ ಸ್ಥಳಕ್ಕಾಗಿ ಹಾಗೂ ಸಮಯಕ್ಕಾಗಿ, ದಯವಿಟ್ಟು ಸ್ಥಳೀಯ ಯೆಹೋವನ ಸಾಕ್ಷಿಗಳೊಂದಿಗೆ ವಿಚಾರಿಸಿರಿ.