ಒಂದು ವಿಶೇಷ ಸಂದರ್ಭಕ್ಕಾಗಿ ದಯವಿಟ್ಟು ನಮ್ಮೊಂದಿಗೆ ಜೊತೆಗೂಡಿರಿ 1998, ಏಪ್ರಿಲ್ 11ರ ಶನಿವಾರ
ದೇವರ ಕೊಡುಗೆಯಾದ, ಪುತ್ರ ಯೇಸು ಕ್ರಿಸ್ತನನ್ನು ತಮ್ಮೊಂದಿಗೆ ಜ್ಞಾಪಿಸಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ. ಈ ಕೊಡುಗೆಯು ಮಾನವಕುಲಕ್ಕೆ ನಿತ್ಯಜೀವದಲ್ಲಿ ಆನಂದಿಸುವ ಪ್ರತೀಕ್ಷೆಯನ್ನು ತೆರೆಯಿತು.—ಯೋಹಾನ 3:16.
ಈ ವರ್ಷ ಯೇಸುವಿನ ಮರಣದ ಜ್ಞಾಪಕವು, ಏಪ್ರಿಲ್ 11ರ ಶನಿವಾರದಂದು ಸೂರ್ಯಾಸ್ತಮಾನದ ಅನಂತರ ಆಚರಿಸಲ್ಪಡುವುದು. ಆ ತಾರೀಖು ಬೈಬಲಿನ ಚಾಂದ್ರಮಾನ ಕ್ಯಾಲೆಂಡರಿನ ನೈಸಾನ್ 14ಕ್ಕೆ ಸರಿಹೊಂದುತ್ತದೆ. ಒಟ್ಟುಗೂಡುವ ಸ್ಥಳ ಮತ್ತು ನಿಖರವಾದ ಸಮಯಕ್ಕಾಗಿ ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ವಿಚಾರಿಸಿರಿ.
ಭೂಮಿಯಲ್ಲಿ ಯೇಸುವಿನ ಕಡೇ ದಿವಸಗಳಲ್ಲಿ ಸಂಭವಿಸಿದ ಈ ಘಟನೆಗಳ ಕುರಿತು ನಿಮಗೆ ತಿಳಿದಿದೆಯೋ?