ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 3/15 ಪು. 11
  • “ಒಂದು ಬೆರಳಿನ ಬೈಬಲು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಒಂದು ಬೆರಳಿನ ಬೈಬಲು”
  • ಕಾವಲಿನಬುರುಜು—1998
  • ಅನುರೂಪ ಮಾಹಿತಿ
  • ದೇವರ ವಾಕ್ಯದ ಪ್ರೇಮಿಗಳಿಗೊಂದು ಮಹತ್ವದ ಮೈಲಿಗಲ್ಲು
    ಕಾವಲಿನಬುರುಜು—1999
  • ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಲೋಕವ್ಯಾಪಕವಾಗಿ ಲಕ್ಷಗಟ್ಟಲೆ ಜನರಿಂದ ಗಣ್ಯಮಾಡಲ್ಪಡುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವ—ಮನುಷ್ಯರೊಟ್ಟಿಗೆ ಜೊತೆ ಸಂವಾದ ಮಾಡುವ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಕಾವಲಿನಬುರುಜು—1998
w98 3/15 ಪು. 11

“ಒಂದು ಬೆರಳಿನ ಬೈಬಲು”

ಸೂರ್ಯಾಘಾತವಾದ ಅನಂತರ ಲಕ್ವಪೀಡಿತನಾದ ಜೋಸೆಫ್‌ ಶೇರಶೆವ್‌ಸ್ಕೀ, ಒಂದು ಬೆರಳನ್ನು ಉಪಯೋಗಿಸುತ್ತಾ, ಬೆರಳಚ್ಚಿನ ಮೂಲಕ ಮಾತ್ರ ಬರೆಯಶಕ್ತನಾದನು. ಆದರೂ ಅವನು, ಒಬ್ಬ ವಿದೇಶಿಗೆ ಪ್ರವೀಣನಾಗಲಿಕ್ಕೆ ಅತ್ಯಂತ ಕಷ್ಟಕರವಾದ ಭಾಷೆಗಳಲ್ಲಿ ಒಂದಾದ, ಚೈನೀಸ್‌ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸುವ ತನ್ನ ಗುರಿಯನ್ನು ತಲಪಿದನು.

ಜನ್ಮತಃ ಒಬ್ಬ ಯೆಹೂದಿಯಾದ ಶೇರಶೆವ್‌ಸ್ಕೀ, ಒಬ್ಬ ವಯಸ್ಕನೋಪಾದಿ ಕ್ರೈಸ್ತತ್ವವನ್ನು ಪರಿಶೀಲಿಸಿ, ಅದನ್ನು ಸ್ವೀಕರಿಸಿದನು. ಅವನು ಕಟ್ಟಕಡೆಗೆ ಚೈನಾದಲ್ಲಿ ಒಬ್ಬ ಮಿಷನೆರಿಯಾದನು. ಅಲ್ಲಿ, 1866ರಷ್ಟು ಹಿಂದೆ ಆರಂಭಿಸಿ, 20ನೇ ಶತಮಾನದ ಪ್ರಥಮ ವರ್ಷಗಳ ವರೆಗೆ ಮುಂದುವರಿಸುತ್ತಾ, ಅವನು ಅನೇಕ ಭಾಷಾಂತರ ಕಾರ್ಯಯೋಜನೆಗಳಲ್ಲಿ ಭಾಗವಹಿಸಿದನು. ಅವನ ಯೆಹೂದಿ ಹಿನ್ನೆಲೆಯ ಕಾರಣ, ಶೇರಶೆವ್‌ಸ್ಕೀ ಇಬ್ರಿಯ ಭಾಷೆಯೊಂದಿಗೆ ತನ್ನ ಜೊತೆವಿದ್ವಾಂಸರಿಗಿಂತ ಹೆಚ್ಚು ಪರಿಚಿತನಾಗಿದ್ದನು. ಹೀಗೆ, ಇಡೀ ಇಬ್ರಿಯ ಶಾಸ್ತ್ರಗಳನ್ನು ಭಾಷಾಂತರ ಮಾಡುವ ಕೆಲಸವನ್ನು ಅವನಿಗೆ ಒಪ್ಪಿಸಲಾಯಿತು. ಅವನು ತನ್ನ ದೀರ್ಘವಾದ ವೃತ್ತಿಜೀವನದ ಅಂತ್ಯದಲ್ಲಿ, ಚೈನೀಸ್‌ ಭಾಷೆಯ ಪ್ರಕರಣಾಂತರ ಸೂಚಿಗಳುಳ್ಳ ಇಡೀ ಬೈಬಲನ್ನು ಉತ್ಪಾದಿಸಿದನು.

ಬೈಬಲಿನ ಒಬ್ಬ ಭಾಷಾಂತರಕಾರನೋಪಾದಿ, ಜೋಸೆಫ್‌ ಶೇರಶೆವ್‌ಸ್ಕೀಯು ಸರ್ವಸಾಮಾನ್ಯ ಭಾಷೆಯಲ್ಲಿನ ತರ್ಜುಮೆಗಳ ಉತ್ಸುಕ ಸಮರ್ಥಕನಾಗಿದ್ದನು. ಆದರೆ ಅವನ ಕೆಲಸವು ಸುಲಭವಾದದ್ದಾಗಿರಲಿಲ್ಲ. ಚೈನೀಸ್‌ ಭಾಷೆಯ ಬೈಬಲನ್ನು ಹೊರತರುವುದಕ್ಕೆ ಅವನು ಮಾಡಿದ ಸಹಾಯವು ಸರಿಸಾಟಿಯಿಲ್ಲದ್ದು, “ಏಕೆಂದರೆ ಅದು ಬಹಳ ವ್ಯಾಪಕವಾದದ್ದಾಗಿತ್ತು ಮತ್ತು ಅನೇಕ ತೊಂದರೆಗಳಿದ್ದಾಗ್ಯೂ ಸಾಧಿಸಲ್ಪಟ್ಟಿತು” ಎಂದು ಸಾವಿರಾರು ಭಾಷೆಗಳ ಒಂದು ಪುಸ್ತಕ (ಇಂಗ್ಲಿಷ್‌) ಹೇಳುತ್ತದೆ.

ಶೇರಶೆವ್‌ಸ್ಕೀಯ ಕೈಗಳಿಗೆ ಲಕ್ವಹೊಡೆದ ಬಳಿಕವೂ, ಅವನು ಕಷ್ಟಪಟ್ಟು ತನ್ನ ಕೆಲಸದೊಂದಿಗೆ ಮುಂದುವರಿದನು. ಬೆರಳಚ್ಚುಮಾಡುವುದು ಮಹಾ ಪ್ರಯತ್ನವನ್ನು ಕೇಳಿಕೊಂಡಿತು, ಏಕೆಂದರೆ ಅವನು ತನ್ನ ಕೈಗಳ ಸಹಜ ಉಪಯೋಗವನ್ನು ಕಳೆದುಕೊಂಡಿದ್ದನು. ಆದುದರಿಂದ ಅವನು ಈ ಭಾಷಾಂತರವನ್ನು ತನ್ನ ಒಂದು ಬೆರಳಿನ ಬೈಬಲು ಎಂದು ಕರೆದನು. ಅಂಗವಿಕಲತೆಗಳಿದ್ದಾಗ್ಯೂ ಇದನ್ನು ಉತ್ಪಾದಿಸಲಿಕ್ಕಾಗಿ, ಶೇರಶೆವ್‌ಸ್ಕೀ 25 ವರ್ಷಗಳ ತನಕ ಸತತ ಪ್ರಯತ್ನವನ್ನು ಮಾಡಿದನು. ಬಿಟ್ಟುಕೊಡದಿರುವ ಮೂಲಕ, ಅತ್ಯಧಿಕ ಜನರಿಂದ ಬೇರೆ ಯಾವುದೇ ಭಾಷೆಗಿಂತಲೂ ಹೆಚ್ಚಾಗಿ ಮಾತಾಡಲ್ಪಡುವ ಚೈನೀಸ್‌ ಭಾಷೆಯಲ್ಲಿ ದೇವರ ವಾಕ್ಯವನ್ನು ಸುಲಭವಾಗಿ ಅರ್ಥವಾಗುವಂತೆ ಮಾಡುವುದರಲ್ಲಿ ಅವನು ಪಾಲಿಗನಾದನು.

[ಪುಟ 11 ರಲ್ಲಿರುವ ಚಿತ್ರ ಕೃಪೆ]

ಎರಡೂ ಚಿತ್ರಗಳು: Courtesy of American Bible Society Archives

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ