ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 2/15 ಪು. 32
  • ದೇವರು ಲೋಕವನ್ನು ನಾಶಮಾಡುವನೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರು ಲೋಕವನ್ನು ನಾಶಮಾಡುವನೋ?
  • ಕಾವಲಿನಬುರುಜು—1998
ಕಾವಲಿನಬುರುಜು—1998
w98 2/15 ಪು. 32

ದೇವರು ಲೋಕವನ್ನು ನಾಶಮಾಡುವನೋ?

ಪೋಪ್‌ ಜಾನ್‌ ಪಾಲ್‌ II ಅವರಿಗನುಸಾರ, ಮಾನವರು ಭವಿಷ್ಯತ್ತಿನೆಡೆಗೆ ಭರವಸೆಯಿಂದ ಮುನ್ನೋಡಸಾಧ್ಯವಿದೆ. ಇತಿಹಾಸದಾದ್ಯಂತ, “ಮನುಷ್ಯರು ಪಾಪಗಳನ್ನು ಮಾಡುವುದನ್ನು ಮುಂದುವರಿಸಿದ್ದಾರೆ, ಪ್ರಾಯಶಃ ಜಲಪ್ರಳಯಕ್ಕೆ ಮುಂಚೆ ವರ್ಣಿಸಲ್ಪಟ್ಟ ಪಾಪಗಳಿಗಿಂತಲೂ ಅತ್ಯಂತ ಹೆಚ್ಚು” ಎಂಬುದಾಗಿ ಅವರು ಗಮನಿಸಿದರು. ಆದರೂ, ಪೋಪ್‌ ವಿವರಿಸಿದ್ದು, “ದೇವರು ನೋಹನೊಂದಿಗೆ ಮಾಡಿದ ಒಡಂಬಡಿಕೆಯ ಮಾತುಗಳಿಂದ ನಾವು ಗ್ರಹಿಸುವುದೇನೆಂದರೆ, ದೇವರು ತಾನೇ ಸೃಷ್ಟಿಸಿದಂಥ ಲೋಕವನ್ನು ನಾಶಮಾಡುವಂತೆ ಮಾಡುವ ಯಾವುದೇ ಪಾಪವು ಈಗ ಇಲ್ಲ.”

ದೇವರು ಲೋಕವನ್ನು ಎಂದೂ ನಾಶಮಾಡಲಾರನು ಎಂಬುದು ನಿಜವಾಗಿದೆಯೋ? ಜಲಪ್ರಳಯದ ನಂತರ ದೇವರು ನೋಹನಿಗೆ ಹೀಗೆ ಹೇಳಿದನೆಂದು ಬೈಬಲು ತಿಳಿಸುತ್ತದೆ: “ಇನ್ನು ಮೇಲೆ ಎಲ್ಲಾ ಪ್ರಾಣಿಗಳು ಪ್ರಳಯದಿಂದ ನಾಶವಾಗುವದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವದೇ ಇಲ್ಲ.” (ಆದಿಕಾಂಡ 9:11) ಈ ಮಾತುಗಳಿಂದ, ದೇವರು “ನಾಶನದಿಂದ [ಈ ಭೂಮಿ]ಯನ್ನು ಕಾಪಾಡುವ ವಿಷಯಕ್ಕೆ ತನ್ನನ್ನು ತಾನೇ ಕಟ್ಟುಪಡಿಸಿಕೊಂಡನು” ಎಂದು ಪೋಪ್‌ ಹೇಳುತ್ತಾರೆ.

ಸೃಷ್ಟಿಕರ್ತನು ನಮ್ಮ ಗ್ರಹವನ್ನು ನಾಶಪಡಿಸಲು ಅನುಮತಿಸಲಾರನು ಎಂಬುದನ್ನು ಬೈಬಲು ಸ್ಪಷ್ಟಪಡಿಸುತ್ತದೆ. “ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು” ಎಂದು ಬೈಬಲು ಹೇಳುತ್ತದೆ. (ಪ್ರಸಂಗಿ 1:4) ಆದರೆ ಜಲಪ್ರಳಯದಿಂದ ಕಲಿಯಬೇಕಾಗಿರುವ—ಪೋಪರು ಹೇಳಿಕೆ ನೀಡದಿದ್ದ ಇನ್ನೂ ಹೆಚ್ಚಿನ ವಿಷಯವಿದೆ.

ಯೇಸು ತನ್ನ ಭಾವಿ ಉಪಸ್ಥಿತಿಯ ಸಮಯದಲ್ಲಿ ಭೂಮಿಯಲ್ಲಿನ ಪರಿಸ್ಥಿತಿಗಳು, ಜನರು “ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೆ” ಇದ್ದಂತಹ ಆ ‘ನೋಹನ ದಿವಸಗಳಂತೆ’ ಇರುವುದೆಂದು ಹೇಳಿದನು. (ಮತ್ತಾಯ 24:37-39) ತದ್ರೀತಿಯಲ್ಲಿ, ಅಪೊಸ್ತಲ ಪೇತ್ರನು ಬರೆದುದು, “ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶ”ಗೊಂಡಂತೆಯೇ, “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ” ಈಗಿರುವ ಲೋಕದ ಮೇಲೆ ಅಪಾಯಕಾರಿಯಾಗಿ ತೂಗಾಡುತ್ತಿದೆ.—2 ಪೇತ್ರ 3:5-7.

ದೇವರು ನೋಹನೊಂದಿಗೆ ಮಾಡಿದಂಥ ಒಡಂಬಡಿಕೆಯನ್ನು ಯೇಸು ಮತ್ತು ಪೇತ್ರರು ಮರೆತುಬಿಟ್ಟರೋ? ಇಲ್ಲವೇ ಇಲ್ಲ! ದೇವರು ನೋಹನೊಂದಿಗೆ ಮಾಡಿದಂಥ ಒಡಂಬಡಿಕೆಯಲ್ಲಿ ಹೇಳಿದ ಪ್ರಕಾರವೇ, ಆತನು ವಿಷಯಗಳ ಈ ದುಷ್ಟ ವ್ಯವಸ್ಥೆಯನ್ನು ಅಂತ್ಯಗೊಳಿಸಲು ಜಲಪ್ರಳಯದ ನೀರನ್ನು ಉಪಯೋಗಿಸುವುದಿಲ್ಲ. ಅದಕ್ಕೆ ಬದಲಾಗಿ, “ರಾಜಾಧಿರಾಜನೂ ಕರ್ತರ ಕರ್ತನೂ” ಆದ ಯೇಸು ಕ್ರಿಸ್ತನ ಶಕ್ತಿಯನ್ನು ಉಪಯೋಗಿಸುವನು. (ಪ್ರಕಟನೆ [ಅಪಾಕಲಿಪ್ಸ್‌] 19:11-21) ಹೀಗೆ, ಬೈಬಲಿಗನುಸಾರ, ಭೂಮಿಯು ನಾಶಗೊಳ್ಳುವುದಿಲ್ಲ, ಬದಲಾಗಿ ದುಷ್ಟ ಮಾನವಕುಲದ “ಲೋಕ”ವು ಅಂತ್ಯವಾಗುವುದು ಖಂಡಿತ. (ಜ್ಞಾನೋಕ್ತಿ 2:21, 22; ಪ್ರಕಟನೆ 11:18) ಅನಂತರ, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ