ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 1/1 ಪು. 32
  • ಒಂದು ಪ್ರಚೋದಕ ಉತ್ತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ಪ್ರಚೋದಕ ಉತ್ತರ
  • ಕಾವಲಿನಬುರುಜು—1998
ಕಾವಲಿನಬುರುಜು—1998
w98 1/1 ಪು. 32

ಒಂದು ಪ್ರಚೋದಕ ಉತ್ತರ

ಬ್ರಿಟಿಷ್‌ ರೋಮನ್‌ ಕ್ಯಾತೊಲಿಕ್‌ ವಾರ್ತಾಪತ್ರಿಕೆಯಾದ ಕ್ಯಾತೊಲಿಕ್‌ ಹೆರಾಲ್ಡ್‌, ವೇಲ್ಸ್‌ನಲ್ಲಿರುವ ಒಬ್ಬ ವಾಚಕನಿಂದ ಬಂದ ಈ ಮುಂದಿನ ಪತ್ರವನ್ನು ಇತ್ತೀಚೆಗೆ ಪ್ರಕಟಿಸಿತು: “ಒಂದು ರಾತ್ರಿ, ಇಬ್ಬರು ಯೆಹೋವನ ಸಾಕ್ಷಿಗಳು ನನ್ನ ಮನೆಬಾಗಿಲಿಗೆ ಬಂದರು. ಅವರು ಉದ್ಧರಿಸಿದ ಹೊಸ ಒಡಂಬಡಿಕೆಯ ಪ್ರಾಮಾಣ್ಯವನ್ನು ಖಾತ್ರಿಪಡಿಸಿದ್ದು ಕ್ಯಾತೊಲಿಕ್‌ ಚರ್ಚಾಗಿತ್ತೆಂಬುದನ್ನು ಹೇಳಲು ನಾನು ಶಕ್ತನಾದೆ. ನನಗೆ ಆಶ್ಚರ್ಯವಾಗುವಂತೆ, ಅವರಲ್ಲಿ ಒಬ್ಬನು ಸಮ್ಮತಿಸಿದನು. ಅವನು ಹೇಳಿದ್ದು, ‘ಹೌದು, ನೀವು ಖಾತ್ರಿನೀಡುತ್ತೀರಿ ಆದರೆ ಅದನ್ನು ಅನುಸರಿಸುವುದಿಲ್ಲ. “ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದು ಯೇಸು ಹೇಳಿದನು, ಆದರೆ ನೀವು ಒಬ್ಬರನ್ನೊಬ್ಬರು ಕೊಲ್ಲುತ್ತೀರಿ. ಕಳೆದ ಯುದ್ಧದಲ್ಲಿ, ಕ್ಯಾತೊಲಿಕರು ಕ್ಯಾತೊಲಿಕರನ್ನು ಕೊಂದರು ಆದರೆ ಯಾವನೇ ಒಬ್ಬ ಯೆಹೋವನ ಸಾಕ್ಷಿಯು ಒಬ್ಬ [ಜೊತೆ] ಸಾಕ್ಷಿಯನ್ನು ಕೊಲ್ಲಲಿಲ್ಲ.’ ನಾನು ಆ ವಿಷಯವನ್ನು ಒಪ್ಪದೇ ಇನ್ನೇನು ಮಾಡಸಾಧ್ಯವಿತ್ತು? ನಮ್ಮಲ್ಲಿಯೇ ನಿಜವಾದ ಐಕ್ಯವಿಲ್ಲದಿರುವಾಗ, ‘ರೋಮನ್‌ ಕ್ಯಾತೊಲಿಕರಲ್ಲದ ಸಹೋದರ’ರೊಂದಿಗಿನ ಐಕ್ಯಕ್ಕಾಗಿ ನಾವು ಹೇಗೆ ಪ್ರಾರ್ಥಿಸಸಾಧ್ಯವಿದೆ? ನಾವು ಮೊದಲು ಈ ಕಳಂಕವನ್ನು ಸರಿಪಡಿಸಬೇಕಲ್ಲವೋ?”—ಯೋಹಾನ 15:12.

ಈ 20ನೆಯ ಶತಮಾನದ ಎರಡು ಲೋಕ ಯುದ್ಧಗಳೂ ಕ್ರೈಸ್ತಪ್ರಪಂಚದಲ್ಲಿ ಆರಂಭಗೊಂಡವು ಹಾಗೂ ಸುಮಾರು ಐದು ಕೋಟಿ ಜೀವಗಳಿಂದ ಹಿಡಿದು ಆರು ಕೋಟಿ ಜೀವಗಳನ್ನು ಅವು ಬಲಿತೆಗೆದುಕೊಂಡವು. ಆದರೆ ಆ ಯುದ್ಧಗಳಲ್ಲಿ ಯೆಹೋವನ ಸಾಕ್ಷಿಗಳು ಭಾಗವಹಿಸಲಿಲ್ಲ, ಇಲ್ಲವೇ ಸದ್ಯದಲ್ಲಿ ನಡೆಯುತ್ತಿರುವ ಯಾವುದೇ ಸಂಘರ್ಷಗಳಲ್ಲಿ ಅವರು ಒಳಗೂಡಿಲ್ಲವೆಂಬುದನ್ನು ಸತ್ಯಪೂರ್ಣವಾಗಿ ಹೇಳಸಾಧ್ಯವಿದೆ. ಇದು ಹೇಗೆ ಸಾಧ್ಯ? ಲೋಕವ್ಯಾಪಕವಾಗಿ 50 ಲಕ್ಷಕ್ಕಿಂತಲೂ ಹೆಚ್ಚಿನ ಯೆಹೋವನ ಸಾಕ್ಷಿಗಳ ಮಧ್ಯದಲ್ಲಿರುವ ಕ್ರೈಸ್ತ ಪ್ರೀತಿ ಹಾಗೂ ಐಕ್ಯದ ಶಕ್ತಿಶಾಲಿ ಬಂಧಗಳ ಕುರಿತಾಗಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವುದು ನಿಮ್ಮ ಒಳಿತಿಗಾಗಿರುವುದು.—ಯೆಶಾಯ 2:4ನ್ನು ಹೋಲಿಸಿರಿ.

[ಪುಟ 32 ರಲ್ಲಿರುವ ಚಿತ್ರ]

U.S. National Archives photo

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ