ನ್ಯಾಯಯುತವಾದ ಒಂದು ಲೋಕಕ್ಕಾಗಿ ನೀವು ಹಾತೊರೆಯುತ್ತೀರೊ?
ಇಂದು ಅಮೆರಿಕದಲ್ಲಿ ಯಾವುದು ಮ್ಯಾಸಚೂಸೆಟ್ಸ್ನ ಕೇಪ್ ಕಾಡ್ ಆಗಿದೆಯೊ ಅದರ ತೀರಗಳ ಕಡೆಗೆ, ಮೂರು ಪಟಸ್ತಂಭ ಮತ್ತು ಎರಡು ಅಟ್ಟಗಳುಳ್ಳ, ಮರದ ನೌಕಾ ಹಡಗೊಂದು ಸಮೀಪಿಸುತ್ತದೆ. ಆ ವಿಮಾನ ತಂಡ ಮತ್ತು ಅದರಲ್ಲಿರುವ 101 ಪ್ರಯಾಣಿಕರು, 66 ದಿನಗಳ ವರೆಗೆ ಸಮುದ್ರದಲ್ಲಿ ಇದ್ದುದರಿಂದ ದಣಿದಿದ್ದಾರೆ. ಧಾರ್ಮಿಕ ಹಿಂಸೆ ಮತ್ತು ಆರ್ಥಿಕ ಕಷ್ಟದಿಂದ ಪಾರಾಗಲು ಪ್ರಯತ್ನಿಸುತ್ತಾ, ಅವರು ಅಟ್ಲಾಂಟಿಕ್ ಸಾಗರದಾಚೆ ಒಂದು ಪ್ರಯಾಸಕರ ಪ್ರಯಾಣವನ್ನು ಮಾಡಿದ್ದಾರೆ.
ಮೇಫ್ಲವರ್ ಎಂಬ ಹೆಸರಿನ ಈ ಹಡಗಿನ ಪ್ರಯಾಣಿಕರು, ನವೆಂಬರ್ 11, 1620ರಂದು ಭೂಪ್ರದೇಶವನ್ನು ನೋಡಿದಾಗ, ಅವರ ಕಣ್ಣುಗಳು ಒಂದು ನವೀನ ಆರಂಭದ ನಿರೀಕ್ಷೆಯೊಂದಿಗೆ ಹೊಳೆಯುತ್ತವೆ. ಒಂದು ಉತ್ತಮ ಲೋಕಕ್ಕಾಗಿ ತಳಪಾಯವನ್ನು ಇಡಲು ಅಪೇಕ್ಷಿಸುತ್ತಾ, ಹಡಗಿನ ವಯಸ್ಕ ಪುರುಷ ಪ್ರಯಾಣಿಕರಲ್ಲಿ ಅಧಿಕಾಂಶ ಮಂದಿ, ಮೇಫ್ಲವರ್ ಕರಾರಿಗೆ ಸಹಿಹಾಕುತ್ತಾರೆ. ಅದರಲ್ಲಿ ಅವರು, “ವಸಾಹತಿನ ಸಾಮಾನ್ಯ ಒಳಿತಿ”ಗಾಗಿ “ನ್ಯಾಯಯುತ ಮತ್ತು ನಿಷ್ಪಕ್ಷಪಾತದ ನಿಯಮಗಳನ್ನು” ವಿಧಿಸಲು ಒಪ್ಪಿಕೊಳ್ಳುತ್ತಾರೆ. ನೈತಿಕವಾಗಿ ಯಥಾರ್ಥವೂ, ಎಲ್ಲರಿಗೂ ನ್ಯಾಯವನ್ನು ಕೊಡುವ ನ್ಯಾಯಯುತವಾದ ಲೋಕವೊಂದರ ಅವರ ಕನಸು ವಾಸ್ತವಿಕತೆಯಾಗಿ ಪರಿಣಮಿಸಿದೆಯೊ?
ಮೇಫ್ಲವರ್ ಹಡಗಿನಲ್ಲಿ ಸಹಿಹಾಕಲ್ಪಟ್ಟ ಕರಾರು, ಅಮೆರಿಕದ ಸರಕಾರದ ವ್ಯವಸ್ಥೆಯ ಒಂದು ಮೂಲೆಗಲ್ಲಾಗಿ ಪರಿಗಣಿಸಲ್ಪಡುತ್ತದೆಯಾದರೂ, ಲೋಕದಾದ್ಯಂತವಾಗಿ ಅದು ಇರುವಂತೆಯೇ, ಅಮೆರಿಕದಲ್ಲಿಯೂ ಅನ್ಯಾಯವು ಒಂದು ಸಾಮಾನ್ಯವಾದ ವಿಷಯವಾಗಿದೆ. ಉದಾಹರಣೆಗಾಗಿ, ಒಬ್ಬ ಅಂಗಡಿ ಮಾಲಕನ ಕಳವು ಮಾಡಿ ಅವನಿಗೆ ಗುಂಡು ಹಾರಿಸಿದ ಬಳಿಕ ಓಡಿಹೋಗಲು ಪ್ರಯತ್ನಿಸುತ್ತಿದ್ದಾಗ, ಪೊಲೀಸರಿಂದ ಅವನ ಬೆನ್ನಿಗೆ ಗುಂಡೇಟು ತಗುಲಿದ ಮನುಷ್ಯನನ್ನು ಪರಿಗಣಿಸಿರಿ. ಅವನು, ಪೊಲೀಸ್ ಮತ್ತು ನ್ಯೂ ಯಾರ್ಕ್ ನಗರದ ವಿರುದ್ಧ ಮೊಕದ್ದಮೆ ಹೂಡಿ, ಪರಿಹಾರಧನವಾಗಿ ಲಕ್ಷಾಂತರ ಡಾಲರುಗಳನ್ನು ಪಡೆದುಕೊಂಡನು.
ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಕ್ಯಾಲಿಫೋರ್ನಿಯದ ಪ್ಯಾಸೆಡೀನಾದಲ್ಲಿ ಕಾನೂನು ಶಾಲೆಯ ವಿದ್ಯಾರ್ಥಿಗಳು, ನ್ಯಾಯಾಲಯ ವ್ಯವಸ್ಥೆಯ ಪರೀಕ್ಷೆಯನ್ನು ಕೊಡುತ್ತಿದ್ದಾಗ, ಅವರಲ್ಲಿ ಒಬ್ಬನು ರೋಗ ಆಘಾತವನ್ನು ಪಡೆದು, ಕುಸಿದುಬಿದ್ದನು. ಹತ್ತಿರದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಇಷ್ಟಪೂರ್ವಕವಾಗಿ, ಪ್ಯಾರಮೆಡಿಕ್ಗಳು ಆಗಮಿಸುವ ತನಕ ಹೃದಯ ಮತ್ತು ಶ್ವಾಸಕೋಶಗಳನ್ನು ಪುನರುಜ್ಜೀವಿಸುವ ಕಾರ್ಯವನ್ನು ಮಾಡಿದರು. ಆ ಮನುಷ್ಯನಿಗೆ ಸಹಾಯ ಮಾಡುತ್ತಾ ಅವರು 40 ನಿಮಿಷಗಳನ್ನು ಕಳೆದರು. ಆದರೆ ಪರೀಕ್ಷೆಯನ್ನು ಪೂರ್ಣಗೊಳಿಸಲು ಅವರು ಹೆಚ್ಚಿನ 40 ನಿಮಿಷಗಳನ್ನು ವಿನಂತಿಸಿದಾಗ, ನ್ಯಾಯಾಲಯ ವ್ಯವಸ್ಥೆಯ ಅಧಿಕಾರಿಯು ಅದನ್ನು ಕೊಡಲು ನಿರಾಕರಿಸಿದನು.
ಪಾತಕೀಯ ಚಟುವಟಿಕೆಗಾಗಿರುವ ಶಿಕ್ಷೆಯ ವಿಷಯವೂ ಇದೆ. ಆರ್ಥಿಕ ವಿಶ್ಲೇಷಕ ಎಡ್ ರೂಬನ್ಸ್ಟೈನ್ ಸೂಚಿಸುವುದು: “ಹೆಚ್ಚಿನ ಪಾತಕಗಳು ಎಂದೂ ದಸ್ತಗಿರಿಯಲ್ಲಿ ಫಲಿಸುವುದಿಲ್ಲ. ದಸ್ತಗಿರಿಮಾಡಲ್ಪಟ್ಟವರಲ್ಲಿ ಅನೇಕರು ಆಪಾದಿಸಲ್ಪಡುವುದಿಲ್ಲ. ಅನೇಕ ಅಪರಾಧಿಗಳು ಬಿಡುಗಡೆಗೊಳಿಸಲ್ಪಡುತ್ತಾರೆ. ಪಾತಕಿಯ ದೃಷ್ಟಿಕೋನದಿಂದ, ನಿರೀಕ್ಷಿತ ಶಿಕ್ಷೆಯು ಒಂದು ನಿಶ್ಚಿತತೆಯಲ್ಲ, ಬದಲಾಗಿ ಒಂದು ಸಂಭವನೀಯತೆಯಾಗಿದೆ.” ಒಬ್ಬ ಸಂಭಾವ್ಯ ಕಳ್ಳನು “98 ಪ್ರತಿಶತಕ್ಕಿಂತಲೂ ಹೆಚ್ಚು ಸಮಯ ಸೆರೆಮನೆವಾಸವನ್ನು ತಪ್ಪಿಸಿಕೊಳ್ಳುವನು” ಎಂದು ಕಳ್ಳತನಕ್ಕಾಗಿರುವ ದತ್ತಾಂಶವನ್ನು ಉಪಯೋಗಿಸುತ್ತಾ, ಅವರು ಸಮಾಪ್ತಿಗೊಳಿಸುತ್ತಾರೆ. ಶಿಕ್ಷೆಯನ್ನು ಪಡೆಯುವುದರ ಕಡಿಮೆ ಗಂಡಾಂತರವು, ಹೆಚ್ಚಿನ ಪಾತಕ ಮತ್ತು ಪಾತಕ ಬಲಿಗಳಿಗೆ ನಡಿಸುತ್ತದೆ.—ಪ್ರಸಂಗಿ 8:11.
ಹೆಚ್ಚಿನ ದೇಶಗಳಲ್ಲಿ ಶ್ರೀಮಂತ ಅಲ್ಪಸಂಖ್ಯಾತರು ಹೆಚ್ಚು ಶ್ರೀಮಂತರಾಗುತ್ತಾರೆ. ಆದರೆ ಬಡ ಜನಸಮೂಹಗಳು ಆರ್ಥಿಕ ಅನ್ಯಾಯವನ್ನು ಎದುರಿಸುತ್ತವೆ. ಜನರಿಗೆ ತಮ್ಮ ಚರ್ಮದ ಬಣ್ಣ, ಕುಲಸಂಬಂಧಿತ ಹಿನ್ನೆಲೆ, ಭಾಷೆ, ಲಿಂಗ, ಅಥವಾ ಧರ್ಮದ ಕಾರಣ ತಮ್ಮ ಸ್ಥಿತಿಯನ್ನು ಉತ್ತಮಗೊಳಿಸಲು ಅಥವಾ ತಮ್ಮನ್ನು ಪೋಷಿಸಿಕೊಳ್ಳಲೂ ಯಾವ ಅವಕಾಶವಿಲ್ಲದಿರುವಾಗ ಅಂತಹ ಅನ್ಯಾಯವು ಚಾಲ್ತಿಯಲ್ಲಿರುತ್ತದೆ. ಉದಾಹರಣೆಗಾಗಿ, ದ ನ್ಯೂ ಯಾರ್ಕ್ ಟೈಮ್ಸ್ಗನುಸಾರ, “ಹಿಂದೂ ಪ್ರಧಾನ್ಯತೆಯಿರುವ ದಕ್ಷಿಣ ಏಷಿಯಾದಲ್ಲಿ—ಹೆಚ್ಚಿನವರು ಭಾರತ ಮತ್ತು ನೇಪಾಲದಲ್ಲಿ—ಸುಮಾರು 25 ಕೋಟಿ ಮಾನವ ಜೀವಿಗಳು, ಅಸ್ಪೃಶ್ಯರಾಗಿ ಹುಟ್ಟಿ ಸಾಯುತ್ತಾರೆ.” ಫಲಿತಾಂಶವೇನೆಂದರೆ, ಕೋಟಿಗಟ್ಟಲೆ ಮಂದಿ ಬಡತನ, ಹಸಿವೆ ಮತ್ತು ರೋಗದಿಂದ ಧ್ವಂಸಗೊಳಿಸಲ್ಪಡುತ್ತಾರೆ. ಅವರ ಜೀವನದಲ್ಲಿ ಅನ್ಯಾಯವು ತೊಟ್ಟಿಲಿನಿಂದ ಹಿಡಿದು ಮಸಣದ ವರೆಗೆ ವ್ಯಾಪಿಸುತ್ತದೆ.
ಮಾನವ ನಿಯಂತ್ರಣವನ್ನು ಮೀರಿರುವ, ಅನ್ಯಾಯಗಳೆಂದು ತೋರುವವುಗಳ ಕುರಿತೇನು? ಕುರುಡು, ಬುದ್ಧಿಮಾಂದ್ಯ, ಅಥವಾ ವಿರೂಪಗೊಂಡಿರುವ, ಜನ್ಮಜಾತ ದೋಷಗಳೊಂದಿಗೆ ಹುಟ್ಟಿರುವ ಶಿಶುಗಳ ಕುರಿತಾಗಿ ಯೋಚಿಸಿರಿ. ಹತ್ತಿರದಲ್ಲಿರುವ ಸ್ತ್ರೀಯರು ಆರೋಗ್ಯವಂತ ಶಿಶುಗಳನ್ನು ಮುದ್ದಾಡಿಸುತ್ತಿರುವಾಗ, ತನ್ನ ಮಗುವು ಕುಂಟಿತ ಅಥವಾ ಮೃತಪಟ್ಟದ್ದಾಗಿ ಜನಿಸುವಾಗ, ಒಬ್ಬ ಸ್ತ್ರೀಗೆ ಅನ್ಯಾಯದ ಅನಿಸಿಕೆಯಾಗದೊ?
ವಿಷಾದಕರವಾಗಿ, ಅನ್ಯಾಯ ಮತ್ತು ಅದರ ಫಲಿತಾಂಶಗಳೂ—ಭಾರಿ ಕಷ್ಟಾನುಭವ ಮತ್ತು ಶಾಂತಿ, ಆನಂದ ಹಾಗೂ ಸಂತೃಪ್ತಿಯ ಕೊರತೆ—ಯಥೇಚ್ಛವಾಗುತ್ತಿವೆ. ಅವರು ನೋಡುವಂತಹ ಇಲ್ಲವೆ ಅನುಭವಿಸುವ ಅನ್ಯಾಯದಿಂದ ಕುಪಿತರಾಗಿ, ಅನೇಕರು ಹಿಂಸಾಚಾರಕ್ಕೆ ಮೊರೆ ಹೋಗಿದ್ದಾರೆ. ಇದು ಮಾನವ ಕಷ್ಟಾನುಭವಕ್ಕೆ ಕೇವಲ ಹೆಚ್ಚನ್ನು ಕೂಡಿಸಿದೆ. ಹೆಚ್ಚಿನ ಯುದ್ಧಗಳು, ಗ್ರಹಿಸಲ್ಪಟ್ಟಿರುವ ಅನ್ಯಾಯದ ಕಾರಣದಿಂದ ಹೋರಾಡಲ್ಪಟ್ಟಿವೆ.
ಮನುಷ್ಯನು ನ್ಯಾಯಯುತವಾದ ಲೋಕವೊಂದನ್ನು ತರುವುದರಲ್ಲಿ ವಿಫಲನಾಗಿರುವುದೇಕೆ? ಅಂತಹ ಒಂದು ಲೋಕವು ಕೇವಲ ಒಂದು ಕನಸೊ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Corbis-Bettmann
[ಪುಟ 4 ರಲ್ಲಿರುವ ಚಿತ್ರ]
ಮೇಫ್ಲವರ್ ಕರಾರಿಗೆ ಸಹಿಹಾಕುತ್ತಿರುವುದು
[ಕೃಪೆ]
Corbis-Bettmann