ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 9/1 ಪು. 3
  • ವೃದ್ಧರಿಗೆ ಕಷ್ಟಕಾಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವೃದ್ಧರಿಗೆ ಕಷ್ಟಕಾಲ
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ಕ್ರೈಸ್ತ ಕುಟುಂಬವು ವೃದ್ಧರಿಗೆ ಸಹಾಯ ಮಾಡುತ್ತದೆ
    ಕಾವಲಿನಬುರುಜು—1993
  • ವಯಸ್ಸಾದವರನ್ನು ಪರಾಮರಿಸುವುದು—ವರ್ಧಿಸುತ್ತಿರುವ ಒಂದು ಸಮಸ್ಯೆ
    ಎಚ್ಚರ!—1992
  • ವಯೋವೃದ್ಧರ ಪರಾಮರಿಕೆ —ಒಂದು ಕ್ರೈಸ್ತ ಜವಾಬ್ದಾರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ಕಾವಲಿನಬುರುಜು—1997
w97 9/1 ಪು. 3

ವೃದ್ಧರಿಗೆ ಕಷ್ಟಕಾಲ

ತಾಯಿ ಓನೀಯನ್‌, 68 ವರ್ಷ ಪ್ರಾಯದವಳಾಗಿದ್ದು, ಪಶ್ಚಿಮ ಆಫ್ರಿಕದ ಒಂದು ದೊಡ್ಡ ನಗರದಲ್ಲಿ ಜೀವಿಸುತ್ತಿದ್ದಾಳೆ. ಅವಳು ಚಿಕ್ಕ ಪ್ರಾಯದವಳಾಗಿದ್ದಾಗ, ತನ್ನ ವೃದ್ಧಾಪ್ಯದ ವರ್ಷಗಳನ್ನು, ತನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ಸುತ್ತುವರಿದವಳಾಗಿ ಪ್ರಶಾಂತವಾದ ನಿವೃತ್ತಿಯಲ್ಲಿ ಆನಂದಿಸುವುದರ ಕನಸುಕಂಡಿದ್ದಳು. ಅದಕ್ಕೆ ಬದಲಾಗಿ, ಉಷ್ಣವಲಯದ ಬಿಸಿಲಿನಲ್ಲಿ ತಂಪು ಪಾನೀಯವನ್ನು ಮಾರುತ್ತಾ ಅವಳು ತನ್ನ ದಿನಗಳನ್ನು ಕಳೆಯುತ್ತಾಳೆ. ಅವಳು ಸಂಪಾದಿಸುವ ಸ್ವಲ್ಪ ಹಣವು, ಬದುಕಿಕೊಳ್ಳಲು ಅವಳಿಗೆ ಸಹಾಯ ಮಾಡುತ್ತದೆ. ಅವಳ ಇಬ್ಬರು ಗಂಡುಮಕ್ಕಳು ಬಹುದೂರ ಇರುವ ಇನ್ನೊಂದು ದೇಶದಲ್ಲಿ ಜೀವಿಸುತ್ತಾರೆ. ಅವರು ಅವಳಿಗೆ ಹಣವನ್ನು ಕಳುಹಿಸಿ ಬಹಳ ಸಮಯವೇ ಸಂದಿದೆ.

ಗತ ಸಮಯಗಳಲ್ಲಿ, ಆಫ್ರಿಕದಲ್ಲಿನ ವೃದ್ಧರನ್ನು ಬಹಳ ಮಾನ್ಯತೆಯಿಂದ ಕಾಣಲಾಗುತ್ತಿತ್ತು. ಅವರ ಅನುಭವ ಮತ್ತು ಜ್ಞಾನ ಹಾಗೂ ಅನೇಕವೇಳೆ ಇವು ತರುವ ವಿವೇಕ ಮತ್ತು ವಿವೇಚನೆಗಾಗಿ ಅವರನ್ನು ಗೌರವದಿಂದ ನೋಡಲಾಗುತ್ತಿತ್ತು. ಮೊಮ್ಮಕ್ಕಳನ್ನು ಬೆಳೆಸುವುದರಲ್ಲಿ ಅವರು ಸಹಾಯ ಮಾಡಿದರು. ಕಿರಿಯರು ಅವರ ಬುದ್ಧಿವಾದವನ್ನೂ ಅವರ ಸಮ್ಮತಿಯನ್ನೂ ಕೋರಿದರು. ಬೈಬಲ್‌ ಸಂಬಂಧಿತ ಸಲಹೆಗನುಸಾರ ಜನರು ಜೀವಿಸಿದರು: “ತಲೆನರೆತ ವೃದ್ಧರ ಮುಂದೆ ಎದ್ದುನಿಂತು, ವೃದ್ಧ ಪುರುಷನಿಗೆ [ಅಥವಾ ಸ್ತ್ರೀಗೆ] ನೀವು ಪರಿಗಣನೆಯನ್ನು ತೋರಿಸಬೇಕು.”—ಯಾಜಕಕಾಂಡ 19:32, NW.

ಕಾಲಗಳು ಬದಲಾಗಿವೆ. ಬಡತನ, ಹಣದುಬ್ಬರ, ನಿರುದ್ಯೋಗ, ಮತ್ತು ನಗರಗಳಿಗೆ ಅಧಿಕ ಸಂಖ್ಯೆಯ ವಲಸೆಹೋಗುವಿಕೆ, ಅನೇಕ ವೃದ್ಧರು ತಮ್ಮನ್ನು ತಾವೇ ಪೋಷಿಸಿಕೊಳ್ಳುವಂತೆ ಮಾಡಿಬಿಟ್ಟಿವೆ. ಹೆಲ್ಪ್‌ಏಜ್‌ ಕೆನ್ಯದ ನಿರ್ದೇಶಕರಾದ ಕಾಮಿಲಸ್‌ ವರ್‌ ಹೇಳುವುದು: “ವೃದ್ಧರಿಗೆ ಬೆಂಬಲ ನೀಡಿ, ಅವರ ಆರೈಕೆಮಾಡುವ ಸಂಪ್ರದಾಯವು ಹೆಚ್ಚೆಚ್ಚು ದುರ್ಬಲಗೊಂಡಿದೆ.”

ಕುಟುಂಬ ಬಂಧಗಳು ದುರ್ಬಲಗೊಳ್ಳುತ್ತಿರುವುದು ಕೇವಲ ಆಫ್ರಿಕದ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ನಿಶ್ಚಯ. ಜಪಾನಿನ ಕುರಿತಾಗಿ ಮಾತಾಡುತ್ತಾ, ಗಾರ್ಡಿಯನ್‌ ವೀಕ್ಲಿ ವರದಿಸುವುದು: “ಪುತ್ರಧರ್ಮದ ಧರ್ಮನಿಷ್ಠೆಯು, ಕನ್‌ಫ್ಯೂಷಿಯಸ್‌ ಮತದಿಂದ ಅನುಸರಣೆಗೆ ಬಿಟ್ಟುಹೋಗಲ್ಪಟ್ಟ ಜಪಾನೀ ಮೌಲ್ಯ ವ್ಯವಸ್ಥೆಯ ಒಂದು ಕೇಂದ್ರ ತತ್ವವಾಗಿತ್ತು, ಆದರೆ ನಾಗರಿಕತನ ಹಾಗೂ ಕುಟುಂಬ ಬಂಧಗಳ ಅದೃಢತೆಯನ್ನು ಅದು ಪಾರಾಗಿಲ್ಲ: ಇಂದು, ಜಪಾನೀಯರಲ್ಲಿ 85 ಪ್ರತಿಶತ ಮಂದಿ, ಆಸ್ಪತ್ರೆಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಸಾಯುತ್ತಾರೆ.”

ಸನ್ನಿವೇಶವು ಏನೇ ಆಗಿರಲಿ, ನಿಷ್ಕಪಟವಾಗಿ ದೇವರನ್ನು ಮೆಚ್ಚಿಸಲು ಬಯಸುವವರು, ತಮ್ಮ ಹೆತ್ತವರನ್ನು ಸನ್ಮಾನಿಸಲು ಪ್ರಯತ್ನಿಸಬೇಕು. “ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ” ಎಂಬ ಬೈಬಲಿನ ಸಲಹೆಗೆ ಅವರು ಲಕ್ಷ್ಯಕೊಡುತ್ತಾರೆ. (ಎಫೆಸ 6:2, 3) ವೃದ್ಧ ಹೆತ್ತವರನ್ನು ಸನ್ಮಾನಿಸುವುದು ಹಾಗೂ ಅವರ ಆರೈಕೆಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲವಾದರೂ, ಅದು ಯಥೇಷ್ಟ ಪ್ರತಿಫಲಗಳನ್ನು ತರಬಲ್ಲದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ