ನಾಸಿ ಹಿಂಸೆಯ ಮಧ್ಯೆ ಅವರು ದೃಢರಾಗಿ ನಿಂತರು
ನಾಸಿ ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ನಿರ್ಭೀತ ಸಮಗ್ರತೆಯು, ಕ್ರೈಸ್ತಪ್ರಪಂಚದ ಚರ್ಚುಗಳು ತೆಗೆದುಕೊಂಡಿದ್ದ ಸ್ಥಾನಕ್ಕೆ ಪೂರ್ತಿಯಾಗಿ ವ್ಯತಿರಿಕ್ತವಾಗಿದೆ. ಇದು, ಇತಿಹಾಸದ ಪ್ರೊಫೆಸರರಾದ ಜಾನ್ ವೈಸ್ ಇವರಿಂದ, ಮರಣದ ಭಾವನಾಶಾಸ್ತ್ರ (ಇಂಗ್ಲಿಷ್) ಎಂಬ ಅವರ ಪುಸ್ತಕದಲ್ಲಿ ತಿಳಿಸಲ್ಪಟ್ಟಿದೆ. ಅವರು ಬರೆಯುವುದು:
“ನಾಸಿಗಳು, ‘ಲ್ಯೂತರನರಿಂದ ಸ್ವಾಗತಿಸಲ್ಪಡಬೇಕು,’ ಎಂದು 1934ರಲ್ಲಿ ಇವ್ಯಾಂಜಲಿಕಲ್ ಚರ್ಚು ಪಟ್ಟುಹಿಡಿಯಿತು, ಮತ್ತು ಜರ್ಮನರಿಗೆ ಒಬ್ಬ ‘ಶ್ರದ್ಧಾಭಕ್ತಿಯುಳ್ಳ ಮತ್ತು ಭರವಸಾರ್ಹ ಅಧಿಪತಿ’ಯನ್ನು ಕೊಟ್ಟದ್ದಕ್ಕಾಗಿ ಅದು ‘ಕರ್ತನಾದ ದೇವ’ರಿಗೆ ಉಪಕಾರ ಹೇಳಿತು. . . . ಒಬ್ಬ ಪ್ರಾಟೆಸ್ಟಂಟ್ ಬಿಷಪನು ತನ್ನ ವೈದಿಕರಿಗೆ ಬರೆದದ್ದು, ‘[ಹಿಟ್ಲರನು] ನಮಗೆ ದೇವರಿಂದ ಕಳುಹಿಸಲ್ಪಟ್ಟಿದ್ದಾನೆ.’” ವೈಸ್ ಮುಂದುವರಿಸುವುದು: “ಜರ್ಮನ್ ಮೆತೊಡಿಸ್ಟ್ ಚರ್ಚು, . . . ಹಿಟ್ಲರನು ಶಾಂತಿ ಮತ್ತು ಸ್ಥಿರತೆಯನ್ನು ತರುತ್ತಾ, ಒಂದು ಸನ್ನಿಹಿತ ಬಾಳ್ಶಿವಿಕ್ ಕ್ರಾಂತಿಯಿಂದ ಜರ್ಮನಿಯನ್ನು ರಕ್ಷಿಸಿದ್ದಾನೆ . . . ಎಂಬ ವಿಷಯದಲ್ಲಿ ಬಿಷಪ್ ಡೀಬೇಲ್ಯುಸ್ನೊಂದಿಗೆ ಸಮ್ಮತಿಸಿತು . . . ಮಾರ್ಮನ್ ಚರ್ಚು ತನ್ನ ಸದಸ್ಯರಿಗೆ ಬುದ್ಧಿಹೇಳಿದ್ದೇನೆಂದರೆ, ಹಿಟ್ಲರನನ್ನು ವಿರೋಧಿಸುವುದು, ಮಾರ್ಮನ್ ನಿಯಮದ ಉಲ್ಲಂಘನೆಯಾಗಿದೆ.” ಮತ್ತು ಅವರು ಕೂಡಿಸುವುದು: “ಹೊಸ ಸರಕಾರಕ್ಕೆ ವಿಧೇಯರಾಗುವುದು ಒಂದು ಪವಿತ್ರ ಕರ್ತವ್ಯ—ಪ್ರಾಚ್ಯದಲ್ಲಿನ ಘೋರ ಕೃತ್ಯಗಳ ಕುರಿತಾಗಿ ವೈದಿಕರಿಗೆ ತಿಳಿದುಬಂದ ಅನಂತರವೂ ಎಂದೂ ಹಿಂದೆಗೆಯಲ್ಪಟ್ಟಿರದ ಒಂದು ಕರ್ತವ್ಯ—ಎಂದು ಕ್ಯಾಥೊಲಿಕರಿಗೆ ಹೇಳಲಾಯಿತು.”
ಆದರೆ ಯೆಹೋವನ ಸಾಕ್ಷಿಗಳ ಕುರಿತಾಗಿ ಏನು? “ಒಂದು ಗುಂಪಿನೋಪಾದಿ, ಯೆಹೋವನ ಸಾಕ್ಷಿಗಳು ಮಾತ್ರ ನಾಸಿಗಳನ್ನು ಪ್ರತಿರೋಧಿಸಿದರು” ಎಂಬ ವಿಷಯಕ್ಕೆ ಪ್ರೊಫೆಸರ್ ವೈಸ್ ನಿರ್ದೇಶಿಸಿದರು. ಅವರಲ್ಲಿ ಸಾವಿರಾರು ಮಂದಿ ಸೆರೆಮನೆಯಲ್ಲಿಡಲ್ಪಟ್ಟರು, “ಆದರೂ ಒಂದು ಕೂಟ ಶಿಬಿರಕ್ಕೆ ಕಳುಹಿಸಲ್ಪಟ್ಟ ಯಾವ ಸಾಕ್ಷಿಯೂ, ಅವನ ಅಥವಾ ಅವಳ ನಂಬಿಕೆಯನ್ನು ತೊರೆಯುವ ಒಂದು ಕಾಗದಕ್ಕೆ ಕೇವಲ ಸಹಿಯನ್ನು ಹಾಕುವ ಮೂಲಕ ಬಿಡುಗಡೆಗೊಳಿಸಲ್ಪಡಸಾಧ್ಯವಿತ್ತು” ಎಂದು ಹೇಳುತ್ತಾ ಪ್ರೊಫೆಸರ್ ವೈಸ್ ಮುಂದುವರಿಸುತ್ತಾರೆ.
ಯೆಹೋವನ ಸಾಕ್ಷಿಗಳ ಸಮಗ್ರತೆಯ ಕುರಿತಾಗಿ ಪ್ರೊಫೆಸರ್ ವೈಸ್ ಹೇಳಿಕೆಯನ್ನೀಯುವುದು: “ರಾಜಿಮಾಡಿಕೊಳ್ಳದ ಒಂದು ಜೀವನವನ್ನು ನಡೆಸುವ ಅಪೇಕ್ಷೆಯನ್ನು, ಸಂಸ್ಥೀಕರಣ ಮತ್ತು ಸಾಮಾಜಿಕ ವ್ಯವಸ್ಥೆಯ ಕಡೆಗಿನ ಬದ್ಧತೆಗಳು ಮುಳುಗಿಸುವ ಮುಂಚೆ, ಆದಿ ಕ್ರೈಸ್ತತ್ವಕ್ಕೆ ಇದ್ದಂತಹ ಅಪೂರ್ವವಾದ ಪಟ್ಟುಬಿಡದ ಮತ್ತು ವೀರ ಶಕ್ತಿಯನ್ನು ಅವರ ಮಾದರಿಯು ದೃಷ್ಟಾಂತಿಸುತ್ತದೆ. ಒಬ್ಬ ಪ್ರಾಟೆಸ್ಟಂಟ್ ಪಾದ್ರಿಯು ಅವರ ಕುರಿತಾಗಿ ಬರೆದಂತೆ, ‘ನಾಸಿ ದೆವ್ವದ ಕೋಪದ ವಿರುದ್ಧ ಪ್ರಥಮವಾಗಿ ಎದ್ದುನಿಂತವರು ಮತ್ತು ತಮ್ಮ ನಂಬಿಕೆಗನುಸಾರವಾಗಿ ವಿರೋಧಿಸಲು ಧೈರ್ಯಮಾಡಿದವರು, ಮಹಾ ಚರ್ಚುಗಳಲ್ಲ ಬದಲಾಗಿ ಈ ನಿಂದಿಸಲ್ಪಟ್ಟ ಮತ್ತು ಅಪಹಾಸ್ಯಮಾಡಲ್ಪಟ್ಟ ಜನರಾಗಿದ್ದರು.’”