ಪುಸ್ತಕಗಳು, ಪುಸ್ತಕಗಳು, ಪುಸ್ತಕಗಳು!
“ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ,” ಎಂದು ಬರೆದನು ಪುರಾತನದ ವಿವೇಕಿ ಅರಸನಾದ ಸೊಲೊಮೋನನು. (ಪ್ರಸಂಗಿ 12:12) ಬ್ರಿಟನಿನಲ್ಲಿ, 1995ರಲ್ಲಿ ಜನಸಂಖ್ಯೆಯ ಪ್ರತಿ 580 ಮಂದಿಗೆ ಸರಾಸರಿ ಸುಮಾರು ಒಂದು ಹೊಸ ಪುಸ್ತಕವು ಪ್ರಕಟಗೊಂಡು, ಹೊಸ ಪುಸ್ತಕಗಳನ್ನು ಪ್ರಕಾಶಿಸುವುದರಲ್ಲಿ ಆ ದೇಶವನ್ನು ಲೋಕನಾಯಕನನ್ನಾಗಿ ಮಾಡಿತು. ಲೋಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಚೈನ, ಬ್ರಿಟನಿನ 95,015 ಪುಸ್ತಕಗಳಿಗೆ ಹೋಲಿಸುವಾಗ, 92,972 ಪುಸ್ತಕಗಳನ್ನು ಪ್ರಕಟಗೊಳಿಸಿ, ದ್ವಿತೀಯ ಸ್ಥಾನವನ್ನು ಪಡೆಯಿತು. ಅದರ ಹಿಂದಿನಿಂದ ಜರ್ಮನಿ (67,206 ಹೊಸ ಪುಸ್ತಕಗಳು)ಯೂ, ಬಳಿಕ ಅಮೆರಿಕ (49,276)ವೂ, ತದನಂತರ ಫ್ರಾನ್ಸ್ ದೇಶ (41,234)ವೂ ಬಂದವು. “ಬ್ರಿಟನ್ ಲೋಕನಾಯಕನಾಗಿರುವುದಕ್ಕೆ ಹೆಚ್ಚಿನ ಕಾರಣವು ಕೇವಲ ಇಂಗ್ಲಿಷ್ ಭಾಷೆಯೇ” ಎಂದು ಲಂಡನ್ನ ವಾರ್ತಾಪತ್ರವಾದ ದ ಡೇಲಿ ಟೆಲಿಗ್ರಾಫ್ ಗಮನಿಸುತ್ತದೆ.
ಅನೇಕ ವರ್ಷಗಳಿಂದ ಪುಸ್ತಕ ಮಾರುಕಟ್ಟೆಯು ಅವನತಿ ಹೊಂದುತ್ತಿದೆಯೆಂದು ವರದಿಗಳು ಸೂಚಿಸುತ್ತವೆ, ಮತ್ತು ಬ್ರಿಟನಿನಲ್ಲಿ ವಯಸ್ಕರಲ್ಲಿ ಕೇವಲ 80 ಪ್ರತಿಶತ ಮಂದಿ ವರ್ಷಕ್ಕೆ ಒಂದು ಅಥವಾ ಹೆಚ್ಚು ಪುಸ್ತಕಗಳನ್ನು ಖರೀದಿಸುತ್ತಾರೆ. ಆದರೆ ತಾವು ಕೊಳ್ಳುವ ಎಲ್ಲ ಪುಸ್ತಕಗಳನ್ನು ಜನರು ಓದುತ್ತಾರೊ?
ವ್ಯಾಪಕವಾಗಿ ವಿತರಿಸಲ್ಪಟ್ಟು ಓದಲ್ಪಡುತ್ತಿರುವ ಒಂದು ಗ್ರಂಥವು, ಈಗ ಆಂಶಿಕವಾಗಿ ಅಥವಾ ಪೂರ್ತಿಯಾಗಿ 2,120ಕ್ಕೂ ಹೆಚ್ಚು ಭಾಷೆಗಳಲ್ಲಿ ದೊರೆಯುವ ಬೈಬಲಾಗಿದೆ. ನಿಮಗೆ ಸ್ವಂತ ಪ್ರತಿಯು ಇನ್ನೂ ಇಲ್ಲದಿರುವಲ್ಲಿ, ನಿಮಗೆ ಅತಿ ಹತ್ತಿರವಿರುವ ವಾಚ್ ಟವರ್ ಸೊಸೈಟಿಯ ಆಫೀಸಿನಿಂದ ಒಂದು ಬೈಬಲನ್ನು ಪಡೆಯಿರಿ. ನಿಮ್ಮಲ್ಲಿ ಒಂದು ಬೈಬಲು ಇರುವಲ್ಲಿ, ಅದನ್ನು ಹೊರತೆಗೆದು, ಈ ಪತ್ರಿಕೆಯ ಲೇಖನಗಳಲ್ಲಿ ತೋರಿಬರುವ ಶಾಸ್ತ್ರೀಯ ಉಲ್ಲೇಖಗಳನ್ನು ಪರೀಕ್ಷಿಸಿ ನೋಡಿರಿ. ಹಾಗೆ ಮಾಡುವುದರಿಂದ, ನೀವು ಬೈಬಲಿನ ಜೀವದಾಯಕ ಜ್ಞಾನವನ್ನು ಕಂಡುಹಿಡಿಯುವಿರಿ.