“ಸತ್ಯರತ್ನಗಳು”
“ಸತ್ಯರತ್ನಗಳು.” ಯೆಹೋವನ ಸಾಕ್ಷಿಗಳ ನೈಜೀರಿಯ ಬ್ರಾಂಚಿಗೆ ಬಂದ ಪತ್ರವೊಂದು ಎರಡು ವಿಶೇಷ ಪತ್ರಿಕೆಗಳನ್ನು ಹಾಗೆ ವರ್ಣಿಸುತ್ತದೆ. ಅದನ್ನು ಬರೆದವನಾದ ಒಬ್ಬ ಯುವ ವ್ಯಕ್ತಿಯು ಹೀಗೆ ವಿವರಿಸುತ್ತಾನೆ:
“ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಮೂಲಕ ದೈನಂದಿನ ಜೀವನದ ಕಾರ್ಯತಃ ಸಕಲ ಭಾಗಗಳ ಕುರಿತು ಹೇಳುವ ನಿಮ್ಮ ಪ್ರಯತ್ನಗಳಿಗೆ ನನ್ನ ಯಥಾರ್ಥ ಕೃತಜ್ಞತೆಯನ್ನು ವ್ಯಕ್ತಪಡಿಸಲಿಕ್ಕಾಗಿ ನಾನು ಇದನ್ನು ಬರೆಯುತ್ತಿದ್ದೇನೆ.
“ನನಗೆ 17 ವರ್ಷ ಪ್ರಾಯ. ಕಳೆದ ವರ್ಷ ಒಂದು ಸ್ಥಳಿಕ ರೇಡಿಯೊ ಸ್ಟೇಷನ್, ‘ಪ್ರೀತಿಯು ಲೈಂಗಿಕ ಸಂಬಂಧಗಳಿಗಿಂತ ಹೆಚ್ಚಿನದ್ದನ್ನು ಆವರಿಸುತ್ತದೆ—ಏಡ್ಸ್ ವಾಸ್ತವ’ ಎಂಬ ವಿಷಯದ ಮೇಲೆ ಒಂದು ಪ್ರಬಂಧ ಸ್ಪರ್ಧೆಯನ್ನು ಪ್ರಾಯೋಜಿಸಿತು. ಪ್ರಬಂಧವು ನಾನ್ನೂರು ಪದಗಳಿಗಿಂತ ಚಿಕ್ಕದಾಗಿರಬಾರದಿತ್ತು. ಅತ್ಯುತ್ತಮ ಪ್ರಬಂಧಕ್ಕೆ 1,000 ನೈರ [12.50 ಅಮೆರಿಕನ್ ಡಾಲರುಗಳು] ಬಹುಮಾನವಿತ್ತು. ನಿಶ್ಚಯವಾಗಿಯೂ, ಜನರು ಬಹುಮಾನ ಜಯಿಸುವ ಕಾರಣದಿಂದ ಮಾತ್ರ ಬರೆಯಬಾರದು, ಏನನ್ನಾದರೂ ಕಲಿಯುವ ಕಾರಣದಿಂದ ಬರೆಯಬೇಕೆಂದು ಅವರು ಹೇಳಿದರು. . . .
“ನಾನು ಏಡ್ಸ್‌ನ ಕುರಿತ ಮಾಹಿತಿಯನ್ನು ಎರಡು ಪತ್ರಿಕೆಗಳಲ್ಲಿಯೂ ಕಂಡುಕೊಂಡೆ. ಪ್ರೀತಿಯ ಕುರಿತಾದ ಲೇಖನಗಳ ಅಕ್ಷಯವಾದ ಸಂಗ್ರಹವಿತ್ತು. ನಾನು ಅವೇಕ್!ನ ಆಗಸ್ಟ್ 8, 1978ರ ಪತ್ರಿಕೆಯಲ್ಲಿದ್ದ ವಿಷಯಗಳನ್ನು ಉಪಯೋಗಿಸಿದೆ.
“ನನ್ನ ಪ್ರಬಂಧವನ್ನು ಕಳುಹಿಸಿದ ಬಳಿಕ, ಬರಿಯ ಎರಡು ತಿಂಗಳುಗಳಲ್ಲಿ ಫಲಿತಾಂಶಗಳು ಪ್ರಕಟಗೊಂಡವು. ನನ್ನ ಆಶ್ಚರ್ಯಕ್ಕೆ, ಕ್ರಾಸ್ ರಿವರ್ ಮತ್ತು ಅಕ್ವ ಇಬೊಮ್ ರಾಜ್ಯಗಳಲ್ಲಿ ನಾನು ಪ್ರಥಮ ಶ್ರೇಣಿ ಪಡೆದೆ!
“ನಾನು ಉಪಯೋಗಿಸಿದ ಸಕಲ ಮಾಹಿತಿ ಪತ್ರಿಕೆಗಳಿಂದ ಬಂದಿತ್ತು. ಈ ಕಳವಳ ತುಂಬಿದ ಮತ್ತು ವ್ಯಾಧಿಗ್ರಸ್ತ ಲೋಕದಲ್ಲಿ, ಯೆಹೋವನು ಸಮಯೋಚಿತವಾದ ಮಾಹಿತಿಯನ್ನು ನಮಗೆ ಒದಗಿಸುವುದು ನಿಜವಾಗಿಯೂ ಅದ್ಭುತಕರ. ಸತ್ಯ ಕ್ರೈಸ್ತರಾದ ನಮಗೆ, ಪ್ರೀತಿಯಲ್ಲಿ ಲೈಂಗಿಕ ಸಂಬಂಧಕ್ಕಿಂತ ಎಷ್ಟೋ ಹೆಚ್ಚು ವಿಷಯವು ಒಳಗೂಡಿದೆಯೆಂಬುದು ಗೊತ್ತು. ಮತ್ತು ನಿಶ್ಚಯವಾಗಿ ಶುದ್ಧವಾದ, ನೈತಿಕ ಜೀವನವನ್ನು ನಡೆಸುವುದು ಏಡ್ಸ್‌ನಂತಹ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.
“ನೀವು ಬೇಸರಪಡದೆ ತಯಾರಿಸುವ ಈ ಸತ್ಯರತ್ನಗಳಿಗಾಗಿ ಕೃತಜ್ಞತೆ ಹೇಳುವಂತೆ ನಾನು ನಿರ್ಬಂಧಿತನಾಗುತ್ತೇನೆ. ಈ ಅಮೂಲ್ಯ ಪತ್ರಿಕೆಗಳನ್ನು ನೀವು ಒದಗಿಸುತ್ತ ಹೋಗುವಾಗ, ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸುತ್ತ ಹೋಗುವಂತಾಗಲಿ.”