ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 2/15 ಪು. 32
  • ನರಕದ ಕುರಿತಾದ ಸತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನರಕದ ಕುರಿತಾದ ಸತ್ಯ
  • ಕಾವಲಿನಬುರುಜು—1997
ಕಾವಲಿನಬುರುಜು—1997
w97 2/15 ಪು. 32

ನರಕದ ಕುರಿತಾದ ಸತ್ಯ

ಚರ್ಚ್‌ ಆಫ್‌ ಇಂಗ್ಲೆಂಡಿನ ಸಿದ್ಧಾಂತ ಮಂಡಳಿಯ ಒಂದು ವರದಿಯು ತಿಳಿಸುವುದೇನೆಂದರೆ, ನರಕವು (ಹೆಲ್‌) ಒಂದು ಅಗ್ನಿಮಯ ಕುಲುಮೆಯಲ್ಲ; ಬದಲಾಗಿ, ಅದು ಒಂದು ಶೂನ್ಯತೆಯ ಭಾವನಾರೂಪದ ಸ್ಥಳವಾಗಿದೆ. ಆ ವರದಿ ವಿವರಿಸುವುದು: “ಈ ಬದಲಾವಣೆಗೆ ಅನೇಕ ಕಾರಣಗಳಿವೆ. ಆದರೆ ಕ್ರೈಸ್ತ ನಂಬಿಕೆಯ ಒಳಗೂ ಹೊರಗೂ, ಭಯದ ಒಂದು ಧರ್ಮದ ವಿರುದ್ಧ ನೈತಿಕ ಪ್ರತಿಭಟನೆ ಹಾಗೂ ಕೋಟ್ಯಂತರ ಜನರನ್ನು ನಿತ್ಯ ಯಾತನೆಗೆ ಒಪ್ಪಿಸಿದ ದೇವರ ಕಲ್ಪನೆಯು, ಕ್ರಿಸ್ತನಲ್ಲಿ ದೇವರ ಪ್ರೀತಿಯ ಪ್ರಕಟನೆಗೆ ವಿರುದ್ಧವಾಗಿದೆ ಎಂಬ ಬೆಳೆಯುತ್ತಿರುವ ಪ್ರಜ್ಞೆಯು ಅವುಗಳಲ್ಲಿ ಕೆಲವಾಗಿವೆ.”

ನರಕದ ಸಾಂಪ್ರದಾಯಿಕ ವೀಕ್ಷಣೆಯೊಂದಿಗಿನ ಈ ಅಹಿತಾನುಭವವು, ಕೇವಲ ಚರ್ಚ್‌ ಆಫ್‌ ಇಂಗ್ಲೆಂಡಿಗೆ ಮೀಸಲಾಗಿಡಲ್ಪಟ್ಟದ್ದಲ್ಲ. ವಿವಿಧ ಪಂಗಡಗಳ ಜನರು, ಪಾಪಿಗಳನ್ನು ಸುಡುವ ಪ್ರತೀಕಾರದ ದೇವರನ್ನು ಆರಾಧಿಸುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. “ಜನರಿಗೆ, ಸಹಾನುಭೂತಿಯುಳ್ಳ ಹಾಗೂ ಮುದ್ದಾಡುವ ಒಬ್ಬ ದೇವರು ಬೇಕು,” ಎಂಬುದಾಗಿ ಡ್ಯೂಕ್‌ ವಿಶ್ವವಿದ್ಯಾನಿಲಯದ ಡಿವಿನಿಟಿ ಶಾಲೆಯ ಪ್ರೊಫೆಸರರಾದ, ಜ್ಯಾಕ್‌ಸನ್‌ ಕ್ಯಾರಲ್‌ ಹೇಳುತ್ತಾರೆ. “ಪಾಪ ಮತ್ತು ದೋಷಿಮನೋಭಾವದ ಕುರಿತು ಮಾತನಾಡುವುದು, ಆಧುನಿಕ ಸಂಸ್ಕೃತಿಗೆ ವಿರುದ್ಧವಾಗಿದೆ.”

ಬೈಬಲು ಕಲಿಸುವಂತೆ, ನರಕವು ಸತ್ತ ಮಾನವಕುಲದ ಸಾಮಾನ್ಯ ಸಮಾಧಿಯಾಗಿದೆ, ಒಂದು ಅಗ್ನಿಮಯ ಯಾತನಾ ಸ್ಥಳವಲ್ಲ ಎಂದು ಯೆಹೋವನ ಸಾಕ್ಷಿಗಳು ಬಹಳ ಸಮಯದಿಂದ ನಂಬಿದ್ದಾರೆ. ಈ ನಂಬಿಕೆಯನ್ನು ಅವರು ಹಿಡಿದಿರುವುದು, ಅದು ಜನಪ್ರಿಯವಾಗಿದೆ ಎಂಬುದಕ್ಕಲ್ಲ, ಬದಲಾಗಿ “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನೀನು ಸೇರಬೇಕಾದ ಪಾತಾಳದಲ್ಲಿ [“ಷೀಓಲ್‌,” NW; “ನರಕ,” ಕ್ಯಾಥೊಲಿಕ್‌ ಡೂಯೆ ವರ್ಷನ್‌] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ,” ಎಂದು ಬೈಬಲ್‌ ಹೇಳುವ ಕಾರಣದಿಂದಲೇ.—ಪ್ರಸಂಗಿ 9:5, 10.

ಸತ್ತವರ ಸ್ಥಿತಿಯ ಕುರಿತಾದ ಈ ಸ್ಪಷ್ಟವಾದ ತಿಳುವಳಿಕೆಯಿಂದ, ವಾಚ್‌ ಟವರ್‌ ಸೊಸೈಟಿಯ ಮೊದಲ ಅಧ್ಯಕ್ಷರಾದ ಚಾರ್ಲ್ಸ್‌ ಟೇಸ್‌ ರಸಲ್‌, ಹಿಂದೆ 1896ರಲ್ಲಿ ಬರೆದುದು: “ಸೂತ್ರಗಳು ಹಾಗೂ ಸ್ತೋತ್ರಪಾಠ ಪುಸ್ತಕಗಳು, ಮತ್ತು ಅನೇಕ ಮತ ಬೋಧಕರು ತಪ್ಪಾಗಿ ಕಲಿಸುವಂತೆ, ನಿತ್ಯ ಚಿತ್ರಹಿಂಸೆಯಂತಹ ಸ್ಥಳವನ್ನು ನಾವು [ಬೈಬಲಿನಲ್ಲಿ] ಕಂಡುಕೊಳ್ಳುವುದಿಲ್ಲ. ಆದರೂ ಆದಾಮನ ಪಾಪದ ಕಾರಣ ಯಾವುದಕ್ಕೆ ನಮ್ಮ ಕುಲದವರೆಲ್ಲಾ ಹೋಗುವಂತೆ ಖಂಡಿಸಲ್ಪಟ್ಟಿದ್ದಾರೋ, ಮತ್ತು ನಮ್ಮ ಕರ್ತನ ಮರಣದ ಕಾರಣ ಯಾವುದರಿಂದ ಎಲ್ಲರೂ ಬಿಡುಗಡೆಹೊಂದುತ್ತಾರೋ, ಆ ‘ನರಕ’ವನ್ನು, ಷೀಓಲ್‌, ಹೇಡೀಸ್‌ಅನ್ನು ನಾವು ಬೈಬಲಿನಲ್ಲಿ ಕಂಡುಕೊಂಡಿದ್ದೇವೆ; ಮತ್ತು ಆ ‘ನರಕ’ವು ಸಮಾಧಿಯಾಗಿದೆ—ಮರಣ ಸ್ಥಿತಿ.”

ಹೀಗೆ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ, ಯೆಹೋವನ ಸಾಕ್ಷಿಗಳು ನರಕದ ಕುರಿತಾದ ಬೈಬಲ್‌ ಸಂಬಂಧಿತ ಸತ್ಯವನ್ನು ಕಲಿಸಿದ್ದಾರೆ.

[ಪುಟ 32 ರಲ್ಲಿರುವ ಚಿತ್ರ]

ಚಾರ್ಲ್ಸ್‌ ಟಿ. ರಸಲ್‌

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ